ಯುಪಿಎಸ್‌ಸಿ 2019 ನಾಗರೀಕ ಸೇವಾ ಹುದ್ದೆಗಳ ಪ್ರಮುಖ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಯ ಪ್ರಮುಖ ಪರೀಕ್ಷೆಯ ದಿನಾಂಕವನ್ನು ಘೋಷಿಸಿದೆ. ಪರೀಕ್ಷಾ ವೇಳಾಪಟ್ಟಿ ತಿಳಿಯಲು ಮತ್ತು ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ ಅನ್ನು ಚೆಕ್ ಮಾಡಬಹುದು.

ಯುಪಿಎಸ್‌ಸಿ ಪ್ರಮುಖ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಯುಪಿಎಸ್‌ಸಿ ಪರೀಕ್ಷೆಗಳು ಸೆಪ್ಟೆಂಬರ್ 20,2019ರಂದು ನಡೆಯಲಿದ್ದು, ಯುಪಿಎಸ್‌ಸಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರಮುಖ ಪರೀಕ್ಷೆಗೆ ಆಗಸ್ಟ್ 16ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಯುಪಿಎಸ್‌ಸಿ ಪ್ರಮುಖ ಪರೀಕ್ಷೆಯ ವೇಳಾಪಟ್ಟಿಯನ್ನು ಇಲ್ಲಿ ತಿಳಿಸಲಾಗಿದೆ.

ಯುಪಿಎಸ್‌ಸಿ ನಾಗರಿಕ ಸೇವಾ ಹುದ್ದೆಗಳ ಪ್ರಮುಖ ಪರೀಕ್ಷಾ ವೇಳಾಪಟ್ಟಿ:

ದಿನಾಂಕಬೆಳಗ್ಗೆ 9:00 ರಿಂದ ಮಧ್ಯಾಹ್ನ 12:00 ಗಂಟೆ
20.9.2019ಪೇಪರ್ -1
21.9.2019ಪೇಪರ್-II
ಸಾಮಾನ್ಯ ಜ್ಞಾನ-1
22.9.2019ಪೇಪರ್-IV
ಸಾಮಾನ್ಯ ಜ್ಞಾನ-111
28.9.2019ಪೇಪರ್-A
ಭಾಷಾ ಪತ್ರಿಕೆ
29.9.2019ಪೇಪರ್-6
ಆಯ್ಕೆ ಪತ್ರಿಕೆ-1

ಯುಪಿಎಸ್‌ಸಿ ನಾಗರಿಕ ಸೇವಾ ಹುದ್ದೆಗಳ ಪ್ರಮುಖ ಪರೀಕ್ಷೆ 2019:

ಯುಪಿಎಸ್‌ಸಿ ಐಎಎಸ್ ಹುದ್ದೆಗಳ ಪ್ರಮುಖ ಪರೀಕ್ಷೆಯು ಸೆಪ್ಟೆಂಬರ್ 20,2019ರಂದು ನಡೆಯಲಿದೆ. ಪರೀಕ್ಷೆಗೆ ಇನ್ನೂ ಒಂದು ತಿಂಗಳು ಸಮಯವಿದ್ದು ಅಭ್ಯರ್ಥಿಗಳು ಪರೀಕ್ಷಾ ಸಿದ್ಧತೆಗಳನ್ನು ಅತ್ಯಂತ ಶ್ರಮವಹಿಸಿ ಮಾಡಿದರೆ ಯಶಸ್ಸು ಖಚಿತ.

ಯುಪಿಎಸ್‌ಸಿ ನಾಗರಿಕ ಸೇವಾ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷೆ 2019:

ಕೇಂದ್ರ ಲೋಕ ಸೇವಾ ಆಯೋಗ 2019ರ ಪ್ರಿಲಿಮಿನರಿ ಪರೀಕ್ಷೆಯನ್ನು ಜೂನ್ 2,2019ರಂದು ನಡೆಸಿತ್ತು. ಈಗಾಗಲೇ ಫಲಿತಾಂಶವು ಪ್ರಕಟವಾಗಿರುತ್ತದೆ.

ಯುಪಿಎಸ್‌ಸಿ ಪ್ರತಿ ವರ್ಷವೂ ಐಎಎಸ್‌ ಪರೀಕ್ಷೆಯನ್ನು ಐಎಎಸ್,ಐಎಫ್‌ಎಸ್,ಐಪಿಎಸ್,ಐಆರ್‌ಎಸ್ ಮತ್ತು ಇತರೆ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತದೆ. ಈ ಹುದ್ದೆಗಳಿಗೆ ಪ್ರಿಲಿಮಿನರಿ ಪರೀಕ್ಷೆ,ಪ್ರಮುಖ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು.

ಪ್ರಮುಖ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ https://upsc.gov.in/ ಗೆ ಭೇಟಿ ಕೊಡಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ "Civil Services (Main) Examination,2019" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ DAF ಮುಂದಿರುವ Click Here ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ನಂತರ "Civil Services (Main) Examination,2019" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಅಭ್ಯರ್ಥಿಗಳು ನಿಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ
ಸ್ಟೆಪ್ 6: ಕೇಳಲಾಗಿರುವ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 7: ನಂತರ ಎಲ್ಲವೂ ಪೂರ್ಣಗೊಂಡ ನಂತರ Submit ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
UPSC civil services main exam time table released in official website. Candidates can apply through online
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X