ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ ) ನಾಗರಿಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಫಲಿತಾಂಶ ನೋಡಬಹುದಾಗಿದ್ದು, ವ್ಯಕ್ತಿತ್ವ ಪರೀಕ್ಷೆಯ 'ಇ-ಸಮನ್ಸ್' ಪತ್ರವನ್ನು ವೆಬ್‌ಸೈಟ್‌ನಲ್ಲಿ ಜ.18ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

980 ವಿವಿಧ ನಾಗರಿಕ ಸೇವೆಗಳ ಹುದ್ದೆಗೆ ಅರ್ಜಿ ಆಹ್ವಾನಿಸಿ, 2017 ರ ಅ.28ರಿಂದ ನ.3ರವರೆಗೆ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 13366 ಮಂದಿ ಮುಖ್ಯ ಪರೀಕ್ಷೆ ಬರೆದಿದ್ದು, ಅವರಲ್ಲಿ 2568 ಮಂದಿ ತೇರ್ಗಡೆ ಹೊಂದಿದ್ದಾರೆ.
ತೇರ್ಗಡೆಯಾದ 2568 ಮಂದಿ ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದು, ಫೆ.19 ರಂದು ವ್ಯಕ್ತಿತ್ವ ಪರೀಕ್ಷೆ ನಡೆಯಲಿದೆ.
ಫಲಿತಾಂಶ ಪಡೆಯುವ ವಿಧಾನ
- ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
- ರಿಸಲ್ಟ್ ಬಟನ್ ಕ್ಲಿಕ್ ಮಾಡಿ
- ಫಲಿತಾಂಶಕ್ಕೆ ಸಂಬಂಧಿಸಿದ ಪಿಡಿಎಫ್ ತೆರೆದುಕೊಳ್ಳುತ್ತದೆ.
- ಪಿಡಿಎಫ್ ಡೌನ್ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.
ಆಯ್ಕೆಯಾಗದ ಅಭ್ಯರ್ಥಿಗಳ ಅಂಕಪಟ್ಟಿಯನ್ನು ವ್ಯಕ್ತಿತ್ವ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ 15ದಿನಗಳಲ್ಲಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಇದು 60ದಿನಗಳವರೆಗೆ ವೆಬ್‌ಸೈಟ್‌ನಲ್ಲಿ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
For Quick Alerts
For Daily Alerts


Click it and Unblock the Notifications











