ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್‌ಸಿ) ಕಂಬೈನ್ಡ್ ಜಿಯೋ ಸೈಂಟಿಸ್ಟ್ ಹುದ್ದೆಗಳ ನೇಮಕಾತಿಗಾಗಿ ನಡೆಸಲಾದ ಪ್ರಮುಖ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.
ಯುಪಿಎಸ್ಸಿ ಕಂಬೈನ್ಡ್ ಜಿಯೋ ಸೈಂಟಿಸ್ಟ್ ಹುದ್ದೆಗಳ ಮುಖ್ಯ ಪರೀಕ್ಷೆಯು ಅಕ್ಟೋಬರ್ 17 ಮತ್ತು 18 ರಂದು ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಯುಪಿಎಸ್ಸಿ ಕಂಬೈನ್ಡ್ ಜಿಯೋ-ಸೈಂಟಿಸ್ಟ್ ಹುದ್ದೆಗಳ ಮುಖ್ಯ ಪರೀಕ್ಷಾ ಫಲಿತಾಂಶ ವೀಕ್ಷಿಸಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ:
ಸ್ಟೆಪ್ 1: ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ https://upsc.gov.in/ ಗೆ ಹೋಗಿ
ಸ್ಟೆಪ್ 2: ನಂತರ ಹೋಂ ಪೇಜ್‌ನಲ್ಲಿ ಲಭ್ಯವಿರುವ "Combined Geo Scientist (Main) Examination 2020 Result" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ Documents ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ನಂತರ ಮತ್ತೊಂದು ಪುಟ ತೆರೆಯುತ್ತದೆ ಅಲ್ಲಿ ನಿಮ್ಮ ರೋಲ್ ನಂಬರ್ ಚೆಕ್ ಮಾಡಿಕೊಳ್ಳುವ ಮೂಲಕ ಫಲಿತಾಂಶ ವೀಕ್ಷಿಸಬಹುದು.
ಅಭ್ಯರ್ಥಿಗಳು ನೇರವಾಗಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











