UPSC EPFO, Civil Services Examination 2021: ಯಪಿಎಸ್ಸಿ ನಾಗರಿಕ ಸೇವೆ ಹುದ್ದೆಗಳ ಸಂದರ್ಶನ ಪ್ರಕ್ರಿಯೆ ಮುಂದೂಡಿಕೆ

ಯುಪಿಎಸ್ಸಿ ನಾಗರಿಕ ಸೇವೆ ಹುದ್ದೆಗಳ ಸಂದರ್ಶನ ಪ್ರಕ್ರಿಯೆ ಮುಂದೂಡಿಕೆ

ದೇಶದೆಲ್ಲೆಡೆ ಹೆಚ್ಚುತ್ತಿರುವ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) 2021ನೇ ಸಾಲಿನ ನೌಕರರ ಭವಿಷ್ಯ ನಿಧಿ ಸಂಸ್ಥೆ ನೇಮಕಾತಿಗಾಗಿ ಮೇ 9,2021 ರಂದು ನಿಗದಿಪಡಿಸಲಾಗಿದ್ದ ಪರೀಕ್ಷೆಯನ್ನು ಹಾಗೂ ಏಪ್ರಿಲ್ 20,2021 ರಿಂದ ಏಪ್ರಿಲ್ 23,2021ರ ವರೆಗೆ ನಿಗದಿಯಾಗಿದ್ದ ನಾಗರಿಕ ಸೇವೆ ಹುದ್ದೆಗಳ ಸಂದರ್ಶನ ಪರೀಕ್ಷೆಯನ್ನು ಮುಂದೂಡಲಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಇಪಿಎಫ್‌ಓ ಪರೀಕ್ಷೆಯನ್ನು ಮತ್ತು ಸಂದರ್ಶನ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ಪರಿಸ್ಥಿತಿಯನ್ನು ಗಮನಿಸಿಕೊಂಡು ಪರೀಕ್ಷಾ ವೇಳಾಪಟ್ಟಿಯನ್ನು ಅತೀ ಶೀಘ್ರದಲ್ಲಿ ಪ್ರಕಟಿಸಲಿದೆ. ಪರೀಕ್ಷೆ ಮತ್ತು ಸಂದರ್ಶನದ ವೇಳಾಪಟ್ಟಿಯನ್ನು 15 ದಿನಗಳ ಮುಂಚಿತವಾಗಿ ಅಭ್ಯರ್ಥಿಗಳಿಗೆ ತಿಳಿಸಲಾಗುವುದು ಹಾಗಾಗಿ ಅಭ್ಯರ್ಥಿಗಳು ಆಗಾಗ್ಗೆ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುತ್ತಿರತಕ್ಕದ್ದು.

ಈ ಸಾಂಕ್ರಾಮಿಕ ಖಾಯಿಲೆಯಿಂದ ಈಗಾಗಲೇ ಅನೇಕ ಪರೀಕ್ಷೆಗಳು ರದ್ದುಗೊಂಡಿವೆ. ಇನ್ನೂ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಆತಂಕ ಪಡದೆ ಪರೀಕ್ಷೆಗೆ ಸಿದ್ದತೆಯನ್ನು ನಡೆಸುತ್ತಾ ಆಗಾಗ್ಗೆ ಅಧಿಕೃತ ವೆಬ್‌ಸೈಟ್ ನಿಂದ ಮಾಹಿತಿ ಪಡೆಯುತ್ತಿರತಕ್ಕದ್ದು.

More News  

For Quick Alerts
ALLOW NOTIFICATIONS  
For Daily Alerts

English summary
Amid the rising covid cases in the country, UPSC EPFO exam and Civil services interview postponed.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+