UPSC IES ISS Exam Result 2021 : ಐಇಎಸ್ ಮತ್ತು ಐಎಸ್‌ಎಸ್‌ ಪರೀಕ್ಷೆಯ ಅಂತಿಮ ಫಲಿತಾಂಶ ರಿಲೀಸ್

ಕೇಂದ್ರ ಲೋಕಾ ಸೇವಾ ಆಯೋಗವು ಇಂಡಿಯನ್ ಎಕಾನಾಮಿಕ್ ಸರ್ವೀಸ್ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಪರೀಕ್ಷೆಗಳ ಅಂತಿಮ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಫಲಿತಾಂಶವನ್ನು ವೀಕ್ಷಿಸಬಹುದು.
ಪ್ರಸಕ್ತ ಫಲಿತಾಂಶದಲ್ಲಿ ಅಭಯ್ ಜೋಶಿ (ರೋಲ್ ಸಂಖ್ಯೆ. 0871266) ಭಾರತೀಯ ಆರ್ಥಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡಿದ್ದಾರೆ. ಅಮಿತ್ ಕುಮಾರ್ (ರೋಲ್ ಸಂಖ್ಯೆ. 880137) ಭಾರತೀಯ ಅಂಕಿಅಂಶ ಸೇವೆ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

 
ಯುಪಿಎಸ್‌ಸಿ ಐಇಎಸ್ ಮತ್ತು ಐಎಸ್‌ಎಸ್‌ ಪರೀಕ್ಷಾ ಅಂತಿಮ ಫಲಿತಾಂಶ ಪ್ರಕಟ

ಯುಪಿಎಸ್ಸಿ ಐಇಎಸ್ ಐಎಸ್‌ಎಸ್‌ ಅಂತಿಮ 2021 ಫಲಿತಾಂಶವು ಜುಲೈ 16 ರಿಂದ 18, 2021 ರವರೆಗೆ ನಡೆದ ಭಾರತೀಯ ಆರ್ಥಿಕ ಸೇವೆ / ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ 2021 ರ ಲಿಖಿತ ಪರೀಕ್ಷೆಯ ಆಧಾರದ ಮೇಲೆ ಮತ್ತು ನವೆಂಬರ್ 29 ರಿಂದ ಡಿಸೆಂಬರ್ 1, 2021 ರವರೆಗೆ ನಡೆದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೇಂದ್ರ ಲೋಕಸೇವಾ ಆಯೋಗದ ( UPSC) ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆಯಬಹುದು.

ಯುಪಿಎಸ್‌ಸಿ ಐಇಎಸ್ ಮತ್ತು ಐಎಸ್‌ಎಸ್‌ ಪರೀಕ್ಷಾ ಅಂತಿಮ ಫಲಿತಾಂಶ ಪ್ರಕಟ

ಯುಪಿಎಸ್ಸಿ ಐಇಎಸ್ ಐಎಸ್‌ಎಸ್ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಲಭ್ಯವಿರುವ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಭಾರತೀಯ ಆರ್ಥಿಕ ಸೇವೆ ಮತ್ತು ಭಾರತೀಯ ಅಂಕಿಅಂಶ ಸೇವೆಗಳಲ್ಲಿನ ಪೋಸ್ಟ್‌ಗಳಿಗೆ ನೇಮಕಾತಿಗಾಗಿ ಶಿಫಾರಸು ಮಾಡಲಾಗಿದೆ. ಸರ್ಕಾರವು ಭರ್ತಿ ಮಾಡಲು ವರದಿ ಮಾಡಿರುವ 26 ಹುದ್ದೆಗಳ ವಿರುದ್ಧ ಒಟ್ಟು 26 ಅಭ್ಯರ್ಥಿಗಳನ್ನು ಮೇಲೆ ತಿಳಿಸಿದ ಸೇವೆಗಳಲ್ಲಿ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಆದಾಗ್ಯೂ ಶಿಫಾರಸು ಮಾಡಿದ ಅಭ್ಯರ್ಥಿಗಳ ರೋಲ್ ಸಂಖ್ಯೆ 0570104 (IES) ಮತ್ತು 0580111 ಮತ್ತು 2680157 (ISS) UPSC IES ISS ಅಂತಿಮ 2021 ಫಲಿತಾಂಶವು ತಾತ್ಕಾಲಿಕವಾಗಿರುತ್ತದೆ.

ಆಯೋಗವು ಅಂತಹ ಅಭ್ಯರ್ಥಿಗಳಿಂದ ಕಾಯುತ್ತಿರುವ ಮೂಲ ದಾಖಲೆಗಳನ್ನು ಪರಿಶೀಲಿಸುವವರೆಗೆ ಫಲಿತಾಂಶವನ್ನು ತಾತ್ಕಾಲಿಕವಾಗಿ ಇರಿಸಲಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿಯ ಪ್ರಸ್ತಾಪವನ್ನು ನೀಡಲಾಗುವುದಿಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. ಈ ಅಭ್ಯರ್ಥಿಗಳ ತಾತ್ಕಾಲಿಕತೆಯು ಭಾರತೀಯ ಆರ್ಥಿಕ ಅಂಕಿಅಂಶಗಳ ಸೇವೆಯ ಅಂತಿಮ ಫಲಿತಾಂಶಗಳ ಘೋಷಣೆಯ ದಿನಾಂಕದಿಂದ ಮೂರು ತಿಂಗಳ ಅವಧಿಯವರೆಗೆ ಮಾತ್ರ ಮಾನ್ಯವಾಗಿರುತ್ತದೆ.

 
ಯುಪಿಎಸ್‌ಸಿ ಐಇಎಸ್ ಮತ್ತು ಐಎಸ್‌ಎಸ್‌ ಪರೀಕ್ಷಾ ಅಂತಿಮ ಫಲಿತಾಂಶ ಪ್ರಕಟ

ಯುಪಿಎಸ್ಸಿ ಐಇಎಸ್ ಐಎಸ್‌ಎಸ್‌ ಪರೀಕ್ಷೆಯ ಫಲಿತಾಂಶ ಚೆಕ್ ಮಾಡುವುದು ಹೇಗೆ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಕೇಂದ್ರ ಲೋಕ ಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ https://www.upsc.gov.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ "Written Result: Indian Economic Service and Indian Statistical Service Examination, 2021" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿಲ್ಲಿ ಅಲ್ಲಿ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ನಂತರ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
UPSC 2021 released IES ISS exam final result in official website. How to check results read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X