ಯುಪಿಎಸ್‌ಸಿ ಐಎಫ್‌ಎಸ್ ಪರೀಕ್ಷೆ ಫಲಿತಾಂಶ ಪ್ರಕಟ

ಕಳೆದ ನವೆಂಬರ್ (2016) ತಿಂಗಳಲ್ಲಿ ನಡೆದಿದ್ದ ಐಎಫ್ಎಸ್ ಪರೀಕ್ಷೆಯು ನಡೆದಿದ್ದು ತೇರ್ಗಡೆಯಾದವರ ಪಟ್ಟಿಯನ್ನು ಯುಪಿಎಸ್ಸಿ ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.

ಕೇಂದ್ರ ಲೋಕ ಸೇವಾ ಅಯೋಗ (ಯುಪಿಎಸ್‌ಸಿ) 2016 ನೇ ಸಾಲಿನ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

ಕಳೆದ ನವೆಂಬರ್ (2016) ತಿಂಗಳಲ್ಲಿ ನಡೆದಿದ್ದ ಐಎಫ್ಎಸ್ ಪರೀಕ್ಷೆಯು ನಡೆದಿದ್ದು ಅದರ ಸಂಬಂಧ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ವ್ಯಕ್ತಿತ್ವ ಪರೀಕ್ಷೆಗಳನ್ನು ನಡೆಸಲಾಗಿತ್ತು. ತೇರ್ಗಡೆಯಾದವರ ಪಟ್ಟಿಯನ್ನು ಯುಪಿಎಸ್ಸಿ ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.

ಐಎಫ್‌ಎಸ್ ಪರೀಕ್ಷೆ ಫಲಿತಾಂಶ ಪ್ರಕಟ

ಫಲಿತಾಂಶ ಪಡೆಯುವ ವಿಧಾನ

  • ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
  • ರಿಸಲ್ಟ್ ಬಟನ್ ಕ್ಲಿಕ್ ಮಾಡಿ
  • ಫಲಿತಾಂಶಕ್ಕೆ ಸಂಬಂಧಿಸಿದ ಪಿಡಿಎಫ್ ತೆರೆದುಕೊಳ್ಳುತ್ತದೆ.
  • ಪಿಡಿಎಫ್ ಡೌನ್ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.

ಅಧಿಕೃತವಾಗಿ ಪ್ರಕಟಿಸಲಾಗಿರುವ ಪಟ್ಟಿಯಲ್ಲಿ ಈ ಬಾರಿ ಒಟ್ಟು 110 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 48 ಸಾಮಾನ್ಯ, 37 ಒಬಿಸಿ , 17 ಎಸ್.ಸಿ ಮತ್ತು ಎಂಟು ಎಸ್.ಟಿ ವಿದ್ಯಾರ್ಥಿಗಳು ಸೇರಿದ್ದಾರೆ. ತೇರ್ಗಡೆಯಾಗಿರುವ ವಿದ್ಯಾರ್ಥಿಗಳ ಅಂಕಗಳನ್ನು ಫಲಿತಾಂಶ ಪ್ರಕಟವಾದ ಹದಿನೈದು ದಿನಗಳಲ್ಲಿ ಆಯೋಗದ ಅಧಿಕೃತ ವೆಬ್ಸೈಟ್ ವಿಳಾಸದಲ್ಲಿ ಪ್ರಕಟಿಸಲಾಗುತ್ತದೆ.

ಯುಪಿಎಸ್‌ಸಿ ವೆಬ್ಸೈಟ್ ವಿಳಾಸ www.upsc.gov.in

ಸೂಚನೆ

ಅಭ್ಯರ್ಥಿಗಳು ಫಲಿತಾಂಶಕ್ಕೆ ಸಂಬಂಧಪಟ್ಟ ಯಾವುದೇ ರೀತಿಯ ಗೊಂದಲಗಳನ್ನು ಆಯೋಗದ ಸಹಾಯವಾಣಿಗೆ ಕರೆಮಾಡಿ ಬಗೆಹರಿಸಿಕೊಳ್ಳಬಹುದಾಗಿದೆ.

ಸಹಾಯವಾಣಿ ಸಂಖ್ಯೆ: 011- 23385271, 23381125, 23098543

ಯುಪಿಎಸ್‌ಸಿ

ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್‌ (IAS) ) ಎಂಬುದು ಭಾರತ ಗಣರಾಜ್ಯ ಸರ್ಕಾರದ ಕಾರ್ಯಕಾರಿ ವಿಭಾಗದ ಆಡಳಿತಾತ್ಮಕ ನಾಗರಿಕ ಸೇವೆಯಾಗಿದೆ.

ದೇಶಾದ್ಯಂತ ಐಎಎಸ್‌ ಅಧಿಕಾರಿಗಳು ನಿರ್ಣಾಯಕ ಹುದ್ದೆಗಳಲ್ಲಿರುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಧಿಕಾರಶಾಹಿಗಳನ್ನು ನಿರ್ವಹಿಸುವಲ್ಲಿ ಈ ಅಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ. ಮೂರು ಅಖಿಲ ಭಾರತ ಸೇವೆಗಳಲ್ಲಿ ಇದೂ ಒಂದು.

ಕೇಂದ್ರೀಯ ಲೋಕ ಸೇವಾ ಆಯೋಗವು (ಯುಪಿಎಸ್ಸಿ)ಈ ನಾಗರಿಕ ಸೇವಾ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ಮೂರು ಹಂತಗಳಿವೆ: ಪ್ರಾಥಮಿಕ ಪರೀಕ್ಷೆ, ಪ್ರಧಾನ ಪರೀಕ್ಷೆ ಹಾಗೂ ಸಂದರ್ಶನವಿದೆ. ಇವು ಬಹಳಷ್ಟು ಸ್ಪರ್ಧಾತ್ಮಕತೆಯುಳ್ಳವು ಎಂದು ಹೆಸರಾಗಿವೆ. ಇತ್ತೀಚೆಗೆ, ಪ್ರಾಥಮಿಕ ಪರೀಕ್ಷೆಯ ರೂಪರೇಖೆಯನ್ನು ಬದಲಾಯಿಸಲಾಗಿದೆ. ಸುಮಾರು 23 ಐಚ್ಛಿಕ ವಿಷಯಗಳಿದ್ದವು, ಜೊತೆಗೆ, ಸಾಮಾನ್ಯ ಅಧ್ಯಯನ ಪತ್ರಿಕೆಯೂ ಇತ್ತು. ಈಗ ಪ್ರಾಥಮಿಕ ಪರೀಕ್ಷೆಯಲ್ಲಿ ಯಾವುದೇ ಐಚ್ಛಿಕ ವಿಷಯಗಳಿರುವುದಿಲ್ಲ. ಬದಲಿಗೆ, ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಬರೆಯಲೇಬೇಕಾದ ಎರಡನೆಯ ಪರೀಕ್ಷೆಯುಂಟು. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಡಳಿತಾತ್ಮಕ ಕುಶಲತೆಯನ್ನು ಪರೀಕ್ಷಿಸುತ್ತದೆ. ಆದ್ದರಿಂದ ಈ ಪರೀಕ್ಷೆಗೆ ನಾಗರಿಕ ಸೇವಾ ಕುಶಲತಾ ಪರೀಕ್ಷೆ ಎನ್ನಲಾಗಿದೆ. ಸಿವಿಲ್ ಸರ್ವಿಸ್ ಆಪ್ಟಿಟ್ಯುಡ್ ಟೆಸ್ಟ್ [CSAT]ಎನ್ನುತ್ತಾರೆ. ಕುಶಲತೆ, ಸಾಮಾನ್ಯ ಗಣಿತ, ಸಮಗ್ರ ಇಂಗ್ಲಿಷ್‌ ಭಾಷೆ ಇತ್ಯಾದಿ ಸೇರಿದಂತೆ, ಇದರಲ್ಲಿ ಹಲವು ವಿಭಾಗಗಳಿವೆ.

ಹೆಚ್ಚಿನ ಮಾಹಿತಿಗಾಗಿ www.upsc.gov.in ಗಮನಿಸಿ

More News  

For Quick Alerts
ALLOW NOTIFICATIONS  
For Daily Alerts

English summary
The Union Public Service Commission (UPSC) Indian Forest Service (IFS) 2016 examination results are declared on the official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+