UPSC IFS: ಮುಖ್ಯ ಪರೀಕ್ಷೆಯ ಫಲಿತಾಂಶ ರಿಲೀಸ್

ಕೇಂದ್ರ ಲೋಕ ಸೇವಾ ಅಯೋಗ (ಯುಪಿಎಸ್‌ಸಿ) 2019-20ನೇ ಸಾಲಿನ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

ಯುಪಿಎಸ್‌ಸಿ ಐಎಫ್‌ಎಸ್ ಪರೀಕ್ಷೆ ಫಲಿತಾಂಶ ಪ್ರಕಟ

ಯುಪಿಎಸ್‌ಸಿ ಐಎಫ್‌ಎಸ್‌ ಮುಖ್ಯ ಪರೀಕ್ಷೆಯನ್ನು ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಡಿಸೆಂಬರ್ ತಿಂಗಳಲ್ಲಿ 1 ರಿಂದ 8,2019ರ ವರೆಗೆ ಐಎಫ್ಎಸ್ ಮುಖ್ಯ ಪರೀಕ್ಷೆಯು ನಡೆದಿದ್ದು, ತೇರ್ಗಡೆಯಾದವರ ಪಟ್ಟಿಯನ್ನು ಯುಪಿಎಸ್ಸಿ ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.

ಯುಪಿಎಸ್‌ಸಿ ಐಎಫ್‌ಎಸ್ ಫಲಿತಾಂಶ ಪಡೆಯುವ ವಿಧಾನ:

ಸ್ಟೆಪ್ 1: ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ https://www.upsc.gov.in/ ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ "Written Result: IFS (main) examination, 2019" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಹೊಸ ಪುಟಕ್ಕೆಹೋಗುವಿರಿ ಅಲ್ಲಿ ನೀಡಲಾಗಿರುವ ಪಿಡಿಎಫ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಭ್ಯರ್ಥಿಗಳು ಸ್ಕ್ರೀನ್ ಮೇಲೆ ಲಭ್ಯವಾಗುವ ಫಲಿತಾಂಶವನ್ನು ಚೆಕ್ ಮಾಡಬಹುದು.

ಪ್ರಸ್ತುತ ಬಿಡುಗಡೆ ಮಾಡಲಾಗಿರುವ ಅರ್ಹತಾ ಪಟ್ಟಿಯು ತಾತ್ಕಾಲಿಕವಾಗಿದ್ದು, ನಂತರ ಅಭ್ಯರ್ಥಿಗಳು ಫೆಬ್ರವರಿ 2020ರಲ್ಲಿ ನಡೆಯುವ ವ್ಯಕ್ತಿತ್ವ ಪರೀಕ್ಷೆಯನ್ನು ಎದುರಿಸಬೇಕಿರುತ್ತದೆ. ಕೇಂದ್ರ ಲೋಕಸೇವಾ ಆಯೋಗದ ಕೇಂದ್ರ ಕಛೇರಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಯುಪಿಎಸ್‌ಸಿ:

ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್‌ (IAS) ) ಎಂಬುದು ಭಾರತ ಗಣರಾಜ್ಯ ಸರ್ಕಾರದ ಕಾರ್ಯಕಾರಿ ವಿಭಾಗದ ಆಡಳಿತಾತ್ಮಕ ನಾಗರಿಕ ಸೇವೆಯಾಗಿದೆ.

ದೇಶಾದ್ಯಂತ ಐಎಎಸ್‌ ಅಧಿಕಾರಿಗಳು ನಿರ್ಣಾಯಕ ಹುದ್ದೆಗಳಲ್ಲಿರುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಧಿಕಾರಶಾಹಿಗಳನ್ನು ನಿರ್ವಹಿಸುವಲ್ಲಿ ಈ ಅಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ. ಮೂರು ಅಖಿಲ ಭಾರತ ಸೇವೆಗಳಲ್ಲಿ ಇದೂ ಒಂದು.

ಕೇಂದ್ರೀಯ ಲೋಕ ಸೇವಾ ಆಯೋಗವು (ಯುಪಿಎಸ್ಸಿ) ಈ ನಾಗರಿಕ ಸೇವಾ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ಮೂರು ಹಂತಗಳಿವೆ: ಪ್ರಾಥಮಿಕ ಪರೀಕ್ಷೆ, ಪ್ರಧಾನ ಪರೀಕ್ಷೆ ಹಾಗೂ ಸಂದರ್ಶನವಿದೆ. ಇವು ಬಹಳಷ್ಟು ಸ್ಪರ್ಧಾತ್ಮಕತೆಯುಳ್ಳವು ಎಂದು ಹೆಸರಾಗಿವೆ. ಇತ್ತೀಚೆಗೆ, ಪ್ರಾಥಮಿಕ ಪರೀಕ್ಷೆಯ ರೂಪರೇಖೆಯನ್ನು ಬದಲಾಯಿಸಲಾಗಿದೆ. ಸುಮಾರು 23 ಐಚ್ಛಿಕ ವಿಷಯಗಳಿದ್ದವು, ಜೊತೆಗೆ, ಸಾಮಾನ್ಯ ಅಧ್ಯಯನ ಪತ್ರಿಕೆಯೂ ಇತ್ತು. ಈಗ ಪ್ರಾಥಮಿಕ ಪರೀಕ್ಷೆಯಲ್ಲಿ ಯಾವುದೇ ಐಚ್ಛಿಕ ವಿಷಯಗಳಿರುವುದಿಲ್ಲ. ಬದಲಿಗೆ, ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಬರೆಯಲೇಬೇಕಾದ ಎರಡನೆಯ ಪರೀಕ್ಷೆಯುಂಟು. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಡಳಿತಾತ್ಮಕ ಕುಶಲತೆಯನ್ನು ಪರೀಕ್ಷಿಸುತ್ತದೆ. ಆದ್ದರಿಂದ ಈ ಪರೀಕ್ಷೆಗೆ ನಾಗರಿಕ ಸೇವಾ ಕುಶಲತಾ ಪರೀಕ್ಷೆ ಎನ್ನಲಾಗಿದೆ. ಸಿವಿಲ್ ಸರ್ವಿಸ್ ಆಪ್ಟಿಟ್ಯುಡ್ ಟೆಸ್ಟ್ [CSAT]ಎನ್ನುತ್ತಾರೆ. ಕುಶಲತೆ, ಸಾಮಾನ್ಯ ಗಣಿತ, ಸಮಗ್ರ ಇಂಗ್ಲಿಷ್‌ ಭಾಷೆ ಇತ್ಯಾದಿ ಸೇರಿದಂತೆ, ಇದರಲ್ಲಿ ಹಲವು ವಿಭಾಗಗಳಿವೆ.

ಹೆಚ್ಚಿನ ಮಾಹಿತಿಗಾಗಿ https://www.upsc.gov.in/ ಗಮನಿಸಿ.

ಅಭ್ಯರ್ಥಿಗಳು ಫಲಿತಾಂಶವನ್ನು ನೇರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
UPSC IFS main examination 2019-20 result released in official website. Candidates can check their results now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+