ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ರಾಷ್ಟ್ರೀಯ ಭದ್ರತಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿಯ (ಎನ್ಡಿಎ ಮತ್ತು ಎನ್ಎ (I)) ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ತಮ್ಮ ಪರೀಕ್ಷಾ ಫಲಿತಾಂಶವನ್ನು ವೀಕ್ಷಿಸಬಹುದು.
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಮತ್ತು ನೌಕಾ ಅಕಾಡೆಮಿ (ಎನ್ಎ) (I) ಪರೀಕ್ಷೆಗಳು ಏಪ್ರಿಲ್ 10,2022ರಂದು ನಡೆದಿದ್ದವು. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಅದಿಕೃತ ವೆಬ್ಸೈಟ್ https://upsc.gov.in/ ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.

ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸುವುದು ಹೇಗೆ?:
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ https://www.upsc.gov.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ Written Exam Result-NDA Examination (I),2022 ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ಲಭ್ಯವಿರುವ ಪಿಡಿಎಫ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ನಿಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಿ
ಅಭ್ಯರ್ಥಿಗಳು ನೇರವಾಗಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

UPSC NDA 1 ಫಲಿತಾಂಶ 2022ರ ನಂತರ ಮುಂದೇನು? :
UPSC NDA NA ಪರೀಕ್ಷೆ 1ರ ಲಿಖಿತ ಪರೀಕ್ಷೆ 2022ರಲ್ಲಿ ಯಶಸ್ವಿಯಾಗಿ ಹೊರಹೊಮ್ಮಿದ ಅಭ್ಯರ್ಥಿಗಳು ಫಲಿತಾಂಶ ಪ್ರಕಟವಾದ ಎರಡು ವಾರಗಳಲ್ಲಿ ಭಾರತೀಯ ಸೇನಾ ನೇಮಕಾತಿ ಅಧಿಕೃತ ವೆಬ್ಸೈಟ್ joinindianarmy.nic.in ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ವಿನಂತಿಸಲಾಗಿದೆ.
ನಂತರ ಅಭ್ಯರ್ಥಿಗಳಿಗೆ ಎಸ್ಎಸ್ಬಿ ಸಂದರ್ಶನದ ಆಯ್ಕೆ ಕೇಂದ್ರಗಳು ಮತ್ತು ದಿನಾಂಕಗಳನ್ನು ನಿಗದಿಪಡಿಸಲಾಗುತ್ತದೆ. ಅದನ್ನು ನೋಂದಾಯಿತ ಇಮೇಲ್ ಐಡಿಯಲ್ಲಿ ತಿಳಿಸಲಾಗುತ್ತದೆ.
"ಯುಪಿಎಸ್ಸಿ ಎನ್ಡಿಎ 1 ಲಿಖಿತ ಪರೀಕ್ಷೆಯ ಫಲಿತಾಂಶಗಳು 2022ರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಎಸ್ಎಸ್ಬಿ ಸಂದರ್ಶನದ ಸಮಯದಲ್ಲಿ ಆಯಾ ಸೇವಾ ಆಯ್ಕೆ ಮಂಡಳಿಗಳಿಗೆ (ಎಸ್ಎಸ್ಬಿ) ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯ ಮೂಲ ಪ್ರಮಾಣಪತ್ರಗಳನ್ನು ಸಲ್ಲಿಸಲು ವಿನಂತಿಸಲಾಗಿದೆ" ಎಂದು ಯುಪಿಎಸ್ಸಿ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.