UPSC Civil Services Prelims Result : ನಾಗರಿಕ ಸೇವೆ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷೆ ಫಲಿತಾಂಶ ಪ್ರಕಟ

ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವಾ ಪರೀಕ್ಷೆ 2021ರ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಯುಪಿಎಸ್ಸಿ ನಾಗರಿಕ ಸೇವೆ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶ ಔಟ್

ಯುಪಿಎಸ್ಸಿ ನಾಗರಿಕ ಸೇವೆ ಪರೀಕ್ಷೆಯನ್ನು ಅಕ್ಟೋಬರ್ 10,2021ರಂದು ನಡೆಸಲಾಗಿತ್ತು. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಯುಪಿಎಸ್ಸಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಫಲಿತಾಂಶವನ್ನು ನೋಡಬಹುದು.

ಕೇಂದ್ರ ಲೋಕಸೇವಾ ಆಯೋಗ ವಿವಿಧ ಇಲಾಖೆಗಳ ಅಡಿಯಲ್ಲಿ ಒಟ್ಟು 712 ಹುದ್ದೆಗಳಿಗೆ ಪ್ರಿಲಿಮಿನರಿ ಪರೀಕ್ಷೆಯನ್ನು ಅಕ್ಟೋಬರ್ 10,2021ರಂದು ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಮತ್ತು ಸಂದರ್ಶನಕ್ಕೆ ಹಾಜರಾಗಲು ಅರ್ಹರಾಗಿರುತ್ತಾರೆ.

ಈ ಪರೀಕ್ಷೆಗೆ ಸುಮಾರು 10 ಲಕ್ಷ ಜನರು ನೋಂದಾಯಿಸಿಕೊಂಡಿದ್ದರು. ಇದೀಗ ಫಲಿತಾಂಶ ಬಿಡುಗಡೆಯಾಗಿದ್ದು, ಕಟ್‌ಆಫ್ ಅಂಕ ಮತ್ತು ಇತರೆ ಮಾಹಿತಿಯನ್ನು ತಿಳಿಯಲು ಯುಪಿಎಸ್ಸಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು. ಪ್ರಿಲಿಮಿನರಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವನ್ನು ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಯುಪಿಎಸ್ಸಿ ಪ್ರಿಲಿಮಿನರಿ ಫಲಿತಾಂಶ ವೀಕ್ಷಿಸುವುದು ಹೇಗೆ ? :

ಸ್ಟೆಪ್ 1: ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ https://www.upsc.gov.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ನೀಡಲಾಗಿರುವ "Written Exam Result -UPSC Civil Services (Preliminary) Examination, 2021" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಪಿಡಿಎಫ್ ತೆರೆಯಲಿದೆ ಅಲ್ಲಿ ನಿಮ್ಮ ರೋಲ್ ನಂಬರ್ ಚೆಕ್ ಮಾಡಿಕೊಳ್ಳಿ
ಸ್ಟೆಪ್ 4: ನಿಮ್ಮ ಫಲಿತಾಂಶ ವೀಕ್ಷಿಸಿದ ಬಳಿಕ ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.

ಅಭ್ಯರ್ಥಿಗಳು ಯುಪಿಎಸ್ಸಿ ಫಲಿತಾಂಶವನ್ನು ನೇರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
Union public service released civil services preliminary examination result. How to check read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+