ವಿಟಿಯ ಎಂಟನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಎಂಟನೇ ಸೆಮಿಸ್ಟರ್ ನ ಫಲಿತಾಂಶವು ಇಂದು ಪ್ರಕಟಗೊಂಡಿದೆ. ಬಿ.ಇ/ಬಿ.ಟೆಕ್ (ನಾನ್-ಸಿಬಿಸಿಎಸ್) ಸ್ಕೀಂನ ಫಲಿತಾಂಶವನ್ನು ವಿಟಿಯು ಪ್ರಕಟಿಸಿದ್ದು, ವಿದ್ಯಾರ್ಥಿಗಳು ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ.

 

ಫಲಿತಾಂಶದ ವಿಳಂಬದಿಂದ ಸಾಕಷ್ಟು ಸುದ್ದಿ ಮಾಡಿದ್ದ ವಿಟಿಯು ಬಗ್ಗೆ ಸಾಕಷ್ಟು ನಕಾರಾತ್ಮಕ ಮನೋಭಾವ ಹೊಂದಿದ್ದ ವಿದ್ಯಾರ್ಥಿಗಳು ಇಂದು ನಿಟ್ಟುಸಿರು ಬಿಟ್ಟಿದ್ದಾರೆ. ಜುಲೈ 22 ರಂದು ಸಿವಿಲ್ ಮತ್ತು ಮೆಕಾನಿಕಲ್ ವಿಭಾಗದ ಫಲಿತಾಂಶವನ್ನು ಮಾತ್ರ ಪ್ರಕಟಿಸಲಾಗಿತ್ತು. ಬಾಕಿ ಫಲಿತಾಂಶವನ್ನು ಜುಲೈ 31 ರಂದು ಪ್ರಕಟಿಸುವುದಾಗಿ ವಿಟಿಯು ತಿಳಿಸಿತ್ತು.

ವಿಟಿಯು ಫಲಿತಾಂಶ ಪ್ರಕಟ

ಮುಂದಿನ ವಿದ್ಯಾಭ್ಯಾಸಕ್ಕೆ, ಉನ್ನತ ವ್ಯಾಸಂಗಕ್ಕೆ ವಿದೇಶಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿತ್ತು. ಫಲಿತಾಂಶದ ವಿಳಂಬದ ಕುರಿತು ವಿದ್ಯಾರ್ಥಿಗಳು ಅನೇಕ ದೂರುಗಳನ್ನು ದಾಖಲಿಸಿದ್ದರು. 190 ಕಾಲೇಜುಗಳ 60000 ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್ನ ಪರೀಕ್ಷೆ ಬರೆದಿದ್ದಾರೆ.

 

ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಫಲಿತಾಂಶ ಪ್ರಕಟಿಸುವುದಾಗಿ ವಿಟಿಯು ನ ಪರೀಕ್ಷಾಂಗ ಕುಲಸಚಿವರಾದ ಸತೀಶ್ ಅಣ್ಣಿಗೇರಿ ಭರವಸೆ ನೀಡಿದ್ದರು. ಬಾಕಿ ಉಳಿದಿರುವ ಫಲಿತಾಂಶಗಳು ಆಗಸ್ಟ್ ಏಳನೇ ತಾರೀಖಿನೊಳಗೆ ಪ್ರಕಟಿಸುವುದಾಗಿ ತಿಳಿಸಲಾಗಿದೆ.

ಫಲಿತಾಂಶ ಪಡೆಯುವ ವಿಧಾನ

  • ವಿಟಿಯು ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ ರಿಸಲ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಯುಎಸ್ಎನ್ ಸಂಖ್ಯೆ ನಮೂದಿಸಿ
  • ರಿಸಲ್ಟ್ ಪ್ರಿಂಟ್ ಪಡೆಯಿರಿ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
The BE and BTech semester results for the exam that were conducted in the June and July months have been released by the Visvesvaraya Technological University (VTU)
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X