ವಿಟಿಯು: ಹೆಚ್ಚು ಶುಲ್ಕ ಪಡೆಯುವ ಇಂಜಿನಿಯರಿಂಗ್ ಕಾಲೇಜುಗಳ ಮಾನ್ಯತೆ ರದ್ದು

ವಿಟಿಯುಗೆ ಒಳಪಡುವ ಇಂಜಿನಿಯರಿಂಗ್ ಕಾಲೇಜುಗಳು ಇನ್ನು ಮುಂದೆ ವಿದ್ಯಾರ್ಥಿಗಳಿಂದ ಹೆಚ್ಚು ಶುಲ್ಕವನ್ನು ಪಡೆಯುವಂತಿಲ್ಲ. ಕೋರ್ಸುಗಳ ಪ್ರವೇಶ ಮತ್ತು ಅಂಕಪಟ್ಟಿಗೆ ಹೆಚ್ಚು ಶುಲ್ಕ ಪಡೆದರೆ ಅಂತಹ ಕಾಲೇಜುಗಳ ಮಾನ್ಯತೆ ರದ್ದು ಪಡಿಸುವುದಾಗಿ ವಿಟಿಯು ತಿಳಿಸಿದೆ.

 

ವಿದ್ಯಾರ್ಥಿಗಳ ಪ್ರವೇಶಕ್ಕೆ ಮತ್ತು ಅಂಕಪಟ್ಟಿ ನೀಡಲು ಹೆಚ್ಚುವರಿ ಶುಲ್ಕ ಪಡೆದಿರುವ ಬಗ್ಗೆ ಹಲವು ದೂರುಗಳು ಬಂದಿದೆ. ಹೀಗಾಗಿ ಇವುಗಳನ್ನು ಪರಿಶೀಲಿಸಿ ಮಾನ್ಯತೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ ತಿಳಿಸಿದ್ದಾರೆ.

ಹೆಚ್ಚು ಶುಲ್ಕ ಪಡೆಯುವ ಇಂಜಿನಿಯರಿಂಗ್ ಕಾಲೇಜುಗಳ ಮಾನ್ಯತೆ ರದ್ದು

2017- 18ನೇ ಸಾಲಿನಲ್ಲಿ ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 77,500 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ರಾಜ್ಯ ಸರ್ಕಾರ 2017-18ನೇ ಸಾಲಿಗೆ ಖಾಸಗಿ ಕಾಲೇಜಿನ ಸರ್ಕಾರಿ ಕೋಟಾ ಸೀಟುಗಳಿಗೆ 50,500 ರೂ. ಹಾಗೂ 56,000 ರೂ.ನಿಗದಿ ಪಡಿಸಿದೆ. ಇದೇ ರೀತಿ ಕಾಮೆಡ್​ಕೆ- ಕೋಟಾದ ಸೀಟುಗಳು 1.7 ಲಕ್ಷ ರೂ. ಮತ್ತು 1.21 ಲಕ್ಷ ರೂ. ಇದೆ.

 

ಈ ಶುಲ್ಕ ಹೊರತಾಗಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಸಂದರ್ಭದಲ್ಲಿ ಕಾಲೇಜಿನ ಗ್ರಂಥಾಲಯ, ಸಮವಸ್ತ್ರ, ಮೂಲ ಸೌಕರ್ಯ, ಇಂಟರ್​ನೆಟ್, ಪುಸ್ತಕ ಸೇರಿ ವಿವಿಧ ಹೆಸರಿನಲ್ಲಿ ವಿದ್ಯಾರ್ಥಿ ಗಳಿಂದ ಕನಿಷ್ಠ 20 ಸಾವಿರದಿಂದ 1 ಲಕ್ಷ ರೂ.ವರೆಗೆ ಶುಲ್ಕ ಪಡೆಯುತ್ತಿವೆ.

ವಿಟಿಯು ವ್ಯಾಪ್ತಿಯಲ್ಲಿರುವ ರಾಜ್ಯದ 252 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ಪಡೆದಿರುವ ಬಗ್ಗೆ ಸರ್ಕಾರ ನೇಮಿಸಿದ್ದ ಪ್ರವೇಶ ಮೇಲ್ವಿಚರಣಾ ಸಮಿತಿ ಶೇ.18 ಬಡ್ಡಿ ಸೇರಿಸಿ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಶಿಫಾರಸು ಕೂಡ ಮಾಡಿತ್ತು. ಇದಕ್ಕೂ ಕಾಲೇಜುಗಳ ಆಡಳಿತ ಮಂಡಳಿಗಳು ಬೆಲೆ ನೀಡಿರಲಿಲ್ಲ. ಹೀಗಾಗಿ ವಿಟಿಯು ಮಾನ್ಯತೆ ರದ್ದು ಮಾಡುವ ನಿರ್ಧಾರ ಮಾಡಿದೆ.

ಈ ಕುರಿತು ಶೀಘ್ರದಲ್ಲೇ ವಿಟಿಯು ಸುತ್ತೋಲೆ ಹೊರಡಿಸಿ ಎಲ್ಲ ಕಾಲೇಜುಗಳಿಗೆ ಕಳುಹಿಕೊಡಲು ತೀರ್ಮಾನಿಸಿದೆ.

ವಿದ್ಯಾರ್ಥಿಗಳಿಂದ ದೂರು

ಆರ್ಥಿಕವಾಗಿ ಸಶಕ್ತರಾಗಿರುವ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಪ್ರವೇಶ ಪಡೆದಿದ್ದರೆ, ಮತ್ತೆ ಕೆಲವು ವಿದ್ಯಾರ್ಥಿಗಳು ಶುಲ್ಕ ನೀಡಲು ಸಾಧ್ಯವಿಲ್ಲದೆ ಪ್ರವೇಶವನ್ನು ರದ್ದು ಮಾಡಿಕೊಂಡಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ದಾಖಲೆ ಸಹಿತ ದೂರು ನೀಡಿದ್ದಾರೆ. ಹೀಗಾಗಿ ವಿಟಿಯು ಇದರ ಮಾಹಿತಿಯನ್ನು ಬಳಸಿಕೊಳ್ಳಲಿದೆ. ಇದರೊಟ್ಟಿಗೆ ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಬೆಂಗಳೂರಿನಲ್ಲಿರುವ ವಿಟಿಯು ಪ್ರಾದೇಶಿಕ ಕಚೇರಿಗಳಲ್ಲಿ ನಿರ್ವಿುಸಿರುವ ದೂರು ಸ್ವೀಕಾರ ಕೇಂದ್ರಕ್ಕೆ ಬಂದಿರುವ ದೂರುಗಳನ್ನು ಪರಿಗಣಿಸಲಿದೆ.

ವಿದ್ಯಾರ್ಥಿಗಳು ನೀಡಿರುವ ದೂರುಗಳ ಆಧಾರದ ಮೇಲೆ ಕಾಲೇಜಿನ ಆಡಳಿತ ಮಂಡಳಿಯ ಮಾಹಿತಿ ಪಡೆದು ಮಾನ್ಯತೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಿದೆ. ಅಲ್ಲದೆ ವಿಟಿಯು ಸ್ಥಳೀಯ ವಿಚಾರಣಾ ಸಮಿತಿ (ಎಲ್​ಐಸಿ) ಸದಸ್ಯರು ಪ್ರತಿವರ್ಷ ನವೆಂಬರ್ ಮತ್ತು ಡಿಸೆಂಬರ್ ವೇಳೆಗೆ ಕಾಲೇಜುಗಳ ಮಾನ್ಯತೆ ನವೀಕರಣಕ್ಕಾಗಿ ಪರೀಶಿಲನೆಗೆ ತೆರಳಲಿದ್ದಾರೆ. ಈ ಸದಸ್ಯರಿಗೆ ಹೆಚ್ಚುವರಿ ಶುಲ್ಕ ಪಡೆದಿರುವ ಕಾಲೇಜುಗಳ ಪಟ್ಟಿಯನ್ನು ನೀಡಲಿದ್ದು, ಕಾಲೇಜುಗಳ ಆಡಳಿತ ಮಂಡಳಿಯ ವಾದವನ್ನು ಆಲಿಸಿ ಮಾನ್ಯತೆ ರದ್ದುಗೊಳಿಸುವ ಬಗ್ಗೆ ಶಿಫಾರಸು ಮಾಡಲಿದೆ.

For Quick Alerts
ALLOW NOTIFICATIONS  
For Daily Alerts

English summary
VITU Engineering Colleges can no longer receive more fees from students. VTU said it would cancel the college's approval if they collect more fee for courses and marks cards.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X