ಕನ್ನಡ ಪರೀಕ್ಷೆ ಪಾಸ್ ಆದರೆ ಮಾತ್ರ ಇಂಜಿನಿಯರಿಂಗ್ ಪದವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ನೀವು ಇಂಜಿನಿಯರಿಂಗ್ ಪದವಿ ಪಡೆಯಬೇಕೆಂದರೆ ನಿಮಗೆ ಕನ್ನಡ ಓದಲು ಮತ್ತು ಬರೆಯಲು ಬರಬೇಕು. ಅಷ್ಟೇ ಅಲ್ಲ ವಿಟಿಯು ನೀಡುವ ಕನ್ನಡ ಪರೀಕ್ಷೆಯಲ್ಲಿ ನೀವು ಕಡ್ಡಾಯವಾಗಿ ನೀವು ಪಾಸ್ ಆಗಬೇಕು.

 

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೊದಲ ಎಲ್ಲಾ ವರ್ಷದ ವಿದ್ಯಾರ್ಥಿಗಳಿಗೆ ಇನ್ನುಮುಂದೆ ಕನ್ನಡ ಕಡ್ಡಾಯ ಮಾಡಲಾಗಿದೆ. ಈ ನೂತನ ವ್ಯವಸ್ಥೆ ಪ್ರಸಕ್ತ ವರ್ಷದಿಂದಲೇ ಜಾರಿಯಾಗಲಿದ್ದು, ಎಲ್ಲಾ ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್ ಗೆ ಹೋಗಬೇಕಾದರೆ ಕನ್ನಡದಲ್ಲಿ ತೇರ್ಗಡೆಯಾಗಿರಲೇಬೇಕು ಎಂಬ ನಿಯಮವನ್ನು ಜಾರಿ ಮಾಡಲಾಗಿದೆ.

ಇಂಜಿನಿಯರಿಂಗ್ ಪದವಿಗೆ ಕನ್ನಡ ಕಡ್ಡಾಯ

ಹೊರ ರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ವಿಟಿಯು ನಲ್ಲಿ ಕನ್ನಡ ಐಚ್ಛಿಕ ವಿಷಯವಷ್ಟೇ ಆಗಿತ್ತು, ಅದೂ ಕೂಡಾ ಈ ವಿಷಯದಲ್ಲಿ ಪಾಸ್ ಆಗಲು ಅಟೆಂಡೆನ್ಸ್ ಗೆ ಮಾತ್ರಾ ಒತ್ತು ನೀಡಲಾಗಿತ್ತೇ ಹೊರತು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕೆಂದಿರಲಿಲ್ಲ. ಆದರೆ ಈಗ ಹೊರ ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಇಂಜಿಇನಿಯರಿಂಗ್ ವಿದ್ಯಾರ್ಥಿಗಳು ಕನ್ನಡ ಭಾಷೆಯ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಿದೆ.

 

ಇದನ್ನು ಗಮನಿಸಿ: ಆರ್ ಟಿ ಇ ಹೊಸ ನೀತಿ: ಫೇಲ್ ಆದವರು ಮುಂದಕ್ಕೆ ಹೋಗುವಂತಿಲ್ಲ

ವಿಟಿಯುಗೆ ಸುಮಾರು 220 ಕಾಲೇಜುಗಳು ಒಳಪಟ್ಟಿದ್ದು ಹೀಗಾಗಿ ಈ ಎಲ್ಲಾ ಕಾಲೇಜುಗಳು ಮುಂದಿನ ದಿನಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೇ ಬೇಕಾದ ಬೋಧಕ ವರ್ಗದ ನೇಮಕಾತಿ ಪ್ರಕ್ರಿಯೆ ಕೂಡಾ ಆರಂಭಮಾಡುವುದಾಗಿ ಉಪ ಕುಲಪತಿ ಕರಿಸಿದ್ದಪ್ಪ ತಿಳಿಸಿದ್ದಾರೆ.

ಈವರೆಗೆ ವಿಟಿಯುನಲ್ಲಿ ಎರಡು ರೀತಿಯಲ್ಲಿ ಕನ್ನಡ ಬೋಧಿಸಲಾಗುತ್ತಿತ್ತು, ಕನ್ನಡ ಅರಿಯದ ವಿದ್ಯಾರ್ಥಿಗಳಿಗೆ ಸಾಮಾನ್ಯ ಕನ್ನಡ ಜ್ಞಾನ ಹಾಗೂ ಕನ್ನಡ ತಿಳಿದವರಿಗೆ ಮುಂದುವರಿದ ಶಿಕ್ಷಣ ನೀಡುತ್ತಿದ್ದೆವು. ಇದೀಗ ಕನ್ನಡ ಮೊದಲ ವರ್ಷದ ವಿದ್ಯಾರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಓದಲೇ ಬೇಕು. ಹೀಗಾಗಿ ಎಲ್ಲರೂ ಕನ್ನಡವನ್ನು ಸಲೀಸಾಗಿ ಕಲಿತಂತೆ ಹಾಗೂ ಮಾತನಾಡಿದಂತೆ ಆಗುತ್ತದೆ ಎಂದು ಕರಿಸಿದ್ದಪ್ಪ ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Visvesvaraya Technological University (VTU) has decided to introduce Kannada as a compulsory subject for all the first-year students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X