ವಿಟಿಯು ಪರೀಕ್ಷೆ: ಕ್ಯಾರಿಓವರ್ ಸಿಸ್ಟಂ ಬದಲು ಎಕ್ಸಿಟ್ ಸಿಸ್ಟಂ

ಪರೀಕ್ಷಾ ಪದ್ಧತಿಯಲ್ಲಿ ವಿಟಿಯು ನೂತನ ಮಾದರಿ ಅನುಸರಿಸಲು ಮುಂದಾಗಿದೆ. ಈಗ ಇರುವ ಕ್ಯಾರಿಓವರ್ ಸ್ಕೀಂ ಕೈಬಿಟ್ಟು ಎಕ್ಸಿಟ್ ಸ್ಕೀಂ ತರಲು ನಿರ್ಧರಿಸಿದೆ. ಇದೇ ವೇಳೆ ಅಂಕಗಳ ಅನುಪಾತದಲ್ಲೂ ವಿಟಿಯು ಬದಲಾವಣೆ ತಂದಿದೆ.

ಕುಲಪತಿ ಕರಿಸಿದ್ದಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪರೀಕ್ಷಾ ಪದ್ಧತಿ ಬದಲಾದ ಹಿನ್ನೆಲೆ ರಾಜ್ಯದ 19,500 ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ವಿಟಿಯು ತಿಳಿಸಿದೆ.

ಕ್ಯಾರಿಓವರ್ ಸಿಸ್ಟಂ ಬದಲು ಎಕ್ಸಿಟ್ ಸಿಸ್ಟಂ

 

ಕೆಎಸ್ಒಯು ಮಾನ್ಯತೆ: ಕೇಂದ್ರಕ್ಕೆ ತೆರಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಎಕ್ಸಿಟ್‌ ಸ್ಕೀಂ

ಎಕ್ಸಿಟ್ ಸ್ಕೀಂ ಮೂಲಕ ಮೊದಲ ವರ್ಷದ ಎಲ್ಲ ವಿಷಯಗಳಲ್ಲೂ ಉತ್ತೀರ್ಣರಾಗಿ, 2ನೇ ವರ್ಷದಲ್ಲಿ ಮಾತ್ರ ನಾಲ್ಕು ವಿಷಯಗಳನ್ನು ಬಾಕಿ ಉಳಿಸಿಕೊಂಡವರು 5ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಬಹುದು. ಆದರೆ, ಬಾಕಿ ಉಳಿಸಿಕೊಂಡಿರುವ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾದ ನಂತರವೇ ಅವರಿಗೆ 5ನೇ ಸೆಮಿಸ್ಟರ್‌ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ.

ಮೊದಲ 2 ವರ್ಷದ ಎಲ್ಲ ವಿಷಯಗಳಲ್ಲೂ ಪಾಸಾಗಿ, 3ನೇ ವರ್ಷದ್ದು ಬಾಕಿ ಉಳಿಸಿಕೊಂಡಿದ್ದರೆ 7ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಬಹುದು. ಆದರೆ, ಬಾಕಿ ಉಳಿಸಿಕೊಂಡಿರುವ ವಿಷಯಗಳಲ್ಲಿ ಉತ್ತೀರ್ಣ ಆಗುವವರೆಗೂ 7ನೇ ಸೆಮಿಸ್ಟರ್‌ ಪರೀಕ್ಷೆಗೆ ಅವಕಾಶ ಇರುವುದಿಲ್ಲ.

ಬದಲಾದ ಅಂಕ ಅನುಪಾತ

ಹೊಸದಾಗಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ 60:40ರ ಅನುಪಾತದಲ್ಲಿ (ಪರೀಕ್ಷೆ ಮತ್ತು ಇಂಟರ್ನಲ್ಸ್‌) ಅಂಕ ನಿಗದಿಪಡಿಸಲಾಗಿದೆ. ಈ ಹಿಂದಿನ ಬ್ಯಾಚ್‌ ವಿದ್ಯಾರ್ಥಿಗಳಿಗೆ ಈ ಪ್ರಮಾಣ 80:20ರ ಅನುಪಾತದಲ್ಲಿ ಇತ್ತು.

ಕ್ಯಾರಿಓವರ್‌ಗೆ ಅವಕಾಶ ಕೊಡಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹವಾಗಿತ್ತು. ಆದರೆ, ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ. ಹೀಗಾಗಿ 'ಎಕ್ಸಿಟ್‌ ಸ್ಕೀಂ' ಮೂಲಕ ಅವರಿಗೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಎಚ್‌.ಎನ್‌. ಜಗನ್ನಾಥರೆಡ್ಡಿ ತಿಳಿಸಿದರು.

2015-16ರಿಂದ ಹೊಸ ಪಠ್ಯ ಕ್ರಮ (ಸಿಬಿಸಿಎಸ್) ಮತ್ತು ಪರೀಕ್ಷಾ ಪದ್ಧತಿ ಜಾರಿಗೆ ಬಂದಿದೆ. 2014-15 ಹಾಗೂ ಅದರ ಹಿಂದಿನ ಬ್ಯಾಚ್‌ ವಿದ್ಯಾರ್ಥಿಗಳು (2010ರ ಸ್ಕೀಮ್‌ನಲ್ಲಿ ಓದುತ್ತಿರುವ ಕೊನೆಯ ಸಾಲಿನವರು) ಯಾವುದೇ ವಿಷಯಗಳನ್ನು ಬಾಕಿ ಉಳಿಸಿಕೊಂಡಿದ್ದರೂ, ಮುಂದಿನ ಸೆಮಿಸ್ಟರ್‌ ತರಗತಿಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದರು.

For Quick Alerts
ALLOW NOTIFICATIONS  
For Daily Alerts

English summary
The Visvesvaraya Technological University has decided to modify the ‘critical year’ and ‘year back’ concepts, introduced in 2010, to help engineering students get their degrees. The decision was taken at a meeting held on Tuesday by the executive committee and it will be implemented from the 2017-18 academic year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more