World Book And Copyright Day 2022 : ಈ ದಿನದ ಇತಿಹಾಸ, ಥೀಮ್, ಆಚರಣೆ ಮತ್ತು ಮತ್ತಷ್ಟು ಮಾಹಿತಿ ಇಲ್ಲಿದೆ

ವಿಶ್ವ ಪುಸ್ತಕ ದಿನ ಮತ್ತು ಕೃತಿಸ್ವಾಮ್ಯ ದಿನದ ಬಗ್ಗೆ ನಿಮಗೆಷ್ಟು ಗೊತ್ತು ?

ಇಂದು ವಿಶ್ವ ಪುಸ್ತಕ ದಿನ, ಈ ದಿನವನ್ನು ಯುನೆಸ್ಕೋ ಪ್ರತಿ ವರ್ಷ ಏಪ್ರಿಲ್ 23 ರಂದು ಆಚರಿಸಲಾಗುತ್ತದೆ. ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು, ಮಾರ್ಗದರ್ಶಕರು ಮತ್ತು ದಾರ್ಶನಿಕರು ಹಾಗೂ ಬದುಕಿನ ಒಡನಾಡಿಗಳೂ ಹೌದು. ಆರಂಭದಲ್ಲಿ ವೆಲೆನ್ಸಿಯಾದ ಬರಹಗಾರ ವಿಸೆಂಟ್‌ ಕ್ಲವೆಲ್‌ ಆಂಡ್ರ್ಯೂ ಅವರ ಜನ್ಮದಿನವಾದ ಅಕ್ಟೋಬರ್‌ 7ರಂದು ಪುಸ್ತಕ ದಿನವನ್ನು ಆಚರಿಸಲಾಯಿತು. ಬಳಿಕ ಅವರು ಮರಣ ಹೊಂದಿದ ದಿನವಾದ ಏಪ್ರಿಲ್‌ 23 ಅನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಯ್ಕೆ ಮಾಡಲಾಯಿತು.

ವಿಶ್ವ ಪುಸ್ತಕ ದಿನ ಮತ್ತು ಕೃತಿಸ್ವಾಮ್ಯ ದಿನದ ಬಗ್ಗೆ ನಿಮಗೆಷ್ಟು ಗೊತ್ತು ?

ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆಯ ತಯಾರಿಯಲ್ಲಿ, ಯುನೆಸ್ಕೋ ಜನರು ತಮ್ಮಲ್ಲಿ ತಾವು ಸವಾಲು ಹಾಕಿಕೊಂಡರು ಅದೇನೆಂದರೆ ಹೊಸ ವಿಷಯಗಳು, ಸ್ವರೂಪಗಳು ಅಥವಾ ಪ್ರಕಾರಗಳನ್ನು ಅನ್ವೇಷಿಸಲು ಪ್ರೋತ್ಸಾಹಿಸಿಕೊಂಡರು. "ನಮ್ಮ ಗುರಿ ಜನರನ್ನು ಓದುವಲ್ಲಿ ತೊಡಗಿಸಿಕೊಳ್ಳುವುದು, ಮತ್ತು ಮೋಜು ನೀಡುವುದು" ಈ ವರ್ಷದ ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನದ ಆಚರಣೆಯಾಗಿ, ಯುನೆಸ್ಕೋ 'ಬುಕ್‌ಫೇಸ್' ಸವಾಲನ್ನು ಸೃಷ್ಟಿಸಿದೆ "ಎಂದು ಅದು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ವಿಶ್ವ ಪುಸ್ತಕ ದಿನ ಮತ್ತು ಕೃತಿಸ್ವಾಮ್ಯ ದಿನದ ಬಗ್ಗೆ ನಿಮಗೆಷ್ಟು ಗೊತ್ತು ?

ವಿಶ್ವ ಪುಸ್ತಕ ದಿನ 2022 : ಥೀಮ್

ಪ್ರತಿ ವರ್ಷ, ಪುಸ್ತಕ ಉದ್ಯಮದ ಮೂರು ಪ್ರಮುಖ ಕ್ಷೇತ್ರಗಳನ್ನು ಪ್ರತಿನಿಧಿಸುವ ಯುನೆಸ್ಕೋ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು - ಪ್ರಕಾಶಕರು, ಪುಸ್ತಕ ಮಾರಾಟಗಾರರು ಮತ್ತು ಗ್ರಂಥಾಲಯಗಳು - ಒಂದು ವರ್ಷದ ಅವಧಿಗೆ ವಿಶ್ವ ಪುಸ್ತಕ ರಾಜಧಾನಿಯನ್ನು ಆಯ್ಕೆ ಮಾಡಿಕೊಳ್ಳುತ್ತವೆ. ತನ್ನದೇ ಆದ ಉಪಕ್ರಮಗಳ ಮೂಲಕ, ದಿನದ ಆಚರಣೆಯ ಪ್ರಚೋದನೆಯಿಂದ ಪ್ರತಿ ವರ್ಷ ಏಪ್ರಿಲ್ 23ರಂದು ಜಾರಿಗೆ ಬರುತ್ತದೆ.

ಯುನೆಸ್ಕೋ ಪ್ರಕಾರ, ಜಾರ್ಜಿಯಾದ ಟಿಬಿಲಿಸಿ ನಗರವನ್ನು 2021 ಕ್ಕೆ ವಿಶ್ವ ಪುಸ್ತಕ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು.

ವಿಶ್ವ ಪುಸ್ತಕ ದಿನ ಮತ್ತು ಕೃತಿಸ್ವಾಮ್ಯ ದಿನದ ಬಗ್ಗೆ ನಿಮಗೆಷ್ಟು ಗೊತ್ತು ?

ವಿಶ್ವ ಪುಸ್ತಕ ದಿನ 2022 : ಇತಿಹಾಸ

1995ರಲ್ಲಿ ಯುನೆಸ್ಕೊ ಸಹ ಏಪ್ರಿಲ್‌ 23 ಅನ್ನು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನಾಗಿ ಆಯ್ಕೆ ಮಾಡಿತು. ಏಪ್ರಿಲ್‌ 23 ವಿಲಿಯಂ ಷೇಕ್ಸ್‌ಪಿಯರ ಮತ್ತು ಇಕಾಗಾಸಿಲಸ್ಕೊ ಡೆ ಲಾ ವೆಗಾ ಅವರು ಮರಣ ಹೊಂದಿದ ದಿನವಾಗಿದೆ. ಜೊತೆಗೆ, ಸಾಕಷ್ಟು ಬರಹಗಾರರ ಜನ್ಮದಿನವೂ ಹೌದು. ಹೀಗಾಗಿ ಯುನೆಸ್ಕೊ ಏಪ್ರಿಲ್‌ 23 ಅನ್ನು ಪುಸ್ತಕ ದಿನವನ್ನಾಗಿ ಆಯ್ಕೆ ಮಾಡಿತ್ತು.

ವಿಶ್ವ ಪುಸ್ತಕ ದಿನ ಮತ್ತು ಕೃತಿಸ್ವಾಮ್ಯ ದಿನದ ಬಗ್ಗೆ ನಿಮಗೆಷ್ಟು ಗೊತ್ತು ?

ವಿಶ್ವ ಪುಸ್ತಕ ದಿನ 2022 : ಆಚರಣೆ

ವಿಶ್ವ ಪುಸ್ತಕ ದಿನದಂದು ಪ್ರತಿ ವರ್ಷ ವಿವಿಧೆಡೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಆದರೆ ಈ ವರ್ಷ ಕೋವಿಡ್ -19 ವೈರಸ್‌ ನಿಂದ ಎಲ್ಲಾ ಕೆಲಸ ಮತ್ತು ಕಾರ್ಯಕ್ರಮಗಳಿಗೂ ಅಡ್ಡಿಯಾಗಿದೆ. ಹಾಗಾಗಿ ಎಲ್ಲಾ ಶಾಲಾ ಕಾಲೇಜುಗಳನ್ನು ವಿದ್ಯಾರ್ಥಿಗಳ, ಪೋಷಕರ, ಶಿಕ್ಷಕರ ಹಿತದೃಷ್ಟಿಯಿಂದ ಮುಚ್ಚಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Today is world book day and copyright day, here is the history, theme, significance details in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X