World Students Day 2022 : ಅಕ್ಟೋಬರ್ 15ರಂದು ವಿಶ್ವ ವಿದ್ಯಾರ್ಥಿ ದಿನವನ್ನಾಗಿ ಏಕೆ ಆಚರಿಸಲಾಗತ್ತೆ ಗೊತ್ತೇ?..

ವಿಶ್ವ ವಿದ್ಯಾರ್ಥಿ ದಿನಾಚರಣೆ 2022 : ಅ.15ರಂದು ಏಕೆ ಆಚರಿಸಲಾಗುತ್ತೆ? ಇಲ್ಲಿ ತಿಳಿಯಿರಿ

ಪ್ರತಿವರ್ಷದಂತೆ ವಿಶ್ವಸಂಸ್ಥೆಯು ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ವಿಶ್ವ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಿದೆ. ಕಲಾಂ ರವರಿಗಿದ್ದ ವಿದ್ಯಾರ್ಥಿಗಳ ಮೇಲಿನ ಪ್ರೀತಿ ಮತ್ತು ಶಿಕ್ಷಣದ ಬಗೆಗೆ ಅವರಿಗಿದ್ದ ಒಲವನ್ನು ಗೌರವಿಸಲು ವಿಶ್ವಸಂಸ್ಥೆಯು ಅವರ ಜನ್ಮ ದಿನವನ್ನು 2010ರ ಅಕ್ಟೋಬರ್ 15ರಂದು "ವಿಶ್ವ ವಿದ್ಯಾರ್ಥಿಗಳ ದಿನ" ವನ್ನಾಗಿ ಆಚರಿಸಲು ಘೋಷಿಸಿತು.

ಶಿಕ್ಷಕ ವೃತ್ತಿ:

ಶಿಕ್ಷಕ ವೃತ್ತಿ:

ಕಲಾಂ ಅವರು ಕ್ಷಿಪಣಿ ರಕ್ಷಣಾ ಕಾರ್ಯಕ್ರಮದಿಂದ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಂತಹವರು, ಆದರೆ ಅವರ ನೆಚ್ಚಿನ ಕೆಲಸವೆಂದರೆ ಶಿಕ್ಷಕ ವೃತ್ತಿಯಾಗಿತ್ತು. ಹಾಗಾಗಿ ಅವರಿಗೆ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಬಗೆಗೆ ಹೆಚ್ಚು ಆಸಕ್ತಿಯನ್ನು ಇತ್ತು. ಹಾಗೆಯೇ ಅವರ ದೊಡ್ಡ ಕನಸೆಂದರೆ ಜಗತ್ತು ಅವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದಾಗಿತ್ತು.

'ಕ್ಷಿಪಣಿ ಮನುಷ್ಯ' ಎಂಬ ಬಿರುದು:

'ಕ್ಷಿಪಣಿ ಮನುಷ್ಯ' ಎಂಬ ಬಿರುದು:

ಪ್ರಸಿದ್ಧ ವಿಜ್ಞಾನಿ, ಕಲಾಂ ಅವರು 1998 ರಲ್ಲಿ ಪೋಖ್ರಾನ್- II ಪರಮಾಣು ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಕಾರಣದಿಂದಾಗಿ ಅವರು 'ಕ್ಷಿಪಣಿ ಮನುಷ್ಯ' ಎಂಬ ಹೆಸರಿನಿಂದ ಕರೆಯಲ್ಪಟ್ಟರು. 2005 ರಲ್ಲಿ ಕಲಾಂ ಸ್ವಿಟ್ಜರ್ಲೆಂಡ್‌ಗೆ ಭೇಟಿ ನೀಡಿದ್ದರು, ನಂತರ ಆ ದೇಶವು ಕಲಾಂರವರಿಗೆ ಗೌರವದ ಸಂಕೇತವಾಗಿ ಮತ್ತು ಅವರ ಭೇಟಿಯ ಗೌರವಾರ್ಥವಾಗಿ ಮೇ 26 ಅನ್ನು 'ವಿಜ್ಞಾನ ದಿನ' ವನ್ನಾಗಿ ಆಚರಿಸಲು ಘೋಷಿಸಿತು.

ಪ್ರಶಸ್ತಿಗಳು ಅಪಾರ:

ಪ್ರಶಸ್ತಿಗಳು ಅಪಾರ:

ಕಲಾಂ ಅವರಿಗೆ ಸಂದಿರುವ ಪ್ರಶಸ್ತಿಗಳು ಅಪಾರ ಅವುಗಳಲ್ಲಿ ಪ್ರಮುಖ ಪ್ರಶಸ್ತಿಗಳೆಂದರೆ 1981ರಲ್ಲಿ ದೊರೆತ ಪದ್ಮಭೂಷಣ ಪ್ರಶಸ್ತಿ ಮತ್ತು 1990 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು. ಸಂಶೋಧನೆ, ವಿಜ್ಞಾನ ಕ್ಷೇತ್ರ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗಳಲ್ಲಿನ ಅವರ ಕೊಡುಗೆಗಳಿಗಾಗಿ ಭಾರತ ರತ್ನ ಪ್ರಶಸ್ತಿಗೆ ಭಾಜನರಾದರು.

ಲೇಖಕ ಕಲಾಂ:

ಲೇಖಕ ಕಲಾಂ:

ಕಲಾಂ ಅವರು ಲೇಖಕರಾಗಿದ್ದರು ಮತ್ತು ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ 'ವಿಂಗ್ಸ್ ಆಫ್ ಫೈರ್', 'ಮೈ ಜರ್ನಿ', 'ಇಗ್ನೈಟೆಡ್ ಮೈಂಡ್ಸ್ - ಅನ್ಲೀಶಿಂಗ್ ದಿ ಪವರ್ ಇನ್ ಇಂಡಿಯಾ' ಮತ್ತು 'ಇಂಡಿಯಾ 2020 - ಎ ವಿಷನ್ ಫಾರ್ ದಿ ನ್ಯೂ ಮಿಲೇನಿಯಮ್' ಪುಸ್ತಕಗಳು ಸೇರಿವೆ.

2015ರಲ್ಲಿ ನಿಧನ:

2015ರಲ್ಲಿ ನಿಧನ:

ಖ್ಯಾತ ವಿಜ್ಞಾನಿ ಮತ್ತು ಶಿಕ್ಷಕರಾದ ಕಲಾಂ ರವರು 2015 ರಲ್ಲಿ ಶಿಲ್ಲಾಂಗ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಲ್ಲಿ ಭಾಷಣ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದರು.

More News  

For Quick Alerts
ALLOW NOTIFICATIONS  
For Daily Alerts

English summary
To respect kalam, We are celebrating abdul kalam’s birthday as “world students day” on 15th october.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+