World Suicide Prevention Day 2020: ಆತ್ಮಹತ್ಯೆ ತಡೆಗಟ್ಟುವಿಕೆಯಲ್ಲಿ ಶಿಕ್ಷಣದ ಜವಾಬ್ದಾರಿ ಏನು ?

ಪ್ರತಿ ವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನಾಗಿ ಆಚರಿಸಲಾಗುತ್ತದೆ. ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ 8 ಲಕ್ಷಕ್ಕೂ ಅಧಿಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ಆತ್ಮಹತ್ಯೆ ತಡೆಗಟ್ಟುವ ದಿನದ ಥೀಮ್ ಏನು ?

 

ಒಂದು ವರ್ಷಕ್ಕೆ ಒಂದು ಮಿಲಿಯನ್ ಜನರುಅಥವಾ 10 ಸಾವಿರ ಜನರಲ್ಲಿ ಒಬ್ಬ ವ್ಯಕ್ತಿ ಅಥವಾ ಪ್ರತಿ 40 ಸೆಕೆಂಡಿಗೆ ಒಂದು ಸಾವು ಅಥವಾ ಪ್ರತಿದಿನ 3 ಸಾವಿರ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದರೂ ಸಹ ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ಚರ್ಚೆ ನಡೆಸುತ್ತಿವೆ.

ಆತ್ಮಹತ್ಯೆ ತಡೆಗಟ್ಟುವ ದಿನದ ಥೀಮ್ ಏನು ?

ಆದರೆ ಈ ವರ್ಷ ಕೊರೋನಾ ಸಮಸ್ಯೆ ಇರುವ ಕಾರಣ ಜನರು ಮನೆಯೊಳಗೇ ವಾಸಿಸಲು ಸೀಮಿತರಾಗಿದ್ದಾರೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದಾರೆ. ಅದಾಗ್ಯೂ ದೇಶದೆಲ್ಲೆಡೆ ಕೆಲವು ಆತ್ಮಹತ್ಯೆ ಪ್ರಕರಣಗಳು ಕಂಡುಬಂದಿವೆ.

ಆತ್ಮಹತ್ಯೆ ತಡೆಗಟ್ಟುವ ದಿನದ ಥೀಮ್ ಏನು ?

 

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಇತಿಹಾಸ ಏನು ?:

ಇಂಟರ್ನ್ಯಾಷನಲ್ ಅಸೋಸಿಯೇಶನ್ ಫಾರ್ ಸುಸೈಡ್ ಪ್ರಿವೆನ್ಷನ್ (ಐಎಎಸ್ಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಸೆಪ್ಟೆಂಬರ್ 10, 2003 ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಜಾರಿಗೆ ತಂದವು. ಮೊದಲ ಬಾರಿ ವಿಶ್ವ ಆತ್ಮಹತ್ಯೆ ವರದಿಯನ್ನು 2014 ರಲ್ಲಿ ವಿಶ್ವ ಸಂಸ್ಥೆ ಬಿಡುಗಡೆ ಮಾಡಿತು. ಆತ್ಮಹತ್ಯೆ ತಡೆಗಟ್ಟುವ ಹಿನ್ನೆಲೆಯಲ್ಲಿ ಈ ದಿನವನ್ನು ಜಾರಿಗೆ ತರಲಾಗಿದೆ.

ಆತ್ಮಹತ್ಯೆ ತಡೆಗಟ್ಟುವ ದಿನದ ಥೀಮ್ ಏನು ?

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ 2020 ಥೀಮ್ ಏನು:

ವಿಶ್ವ ಆತ್ಮಹತ್ಯೆ ದಿನದ ಥೀಮ್ "ಆತ್ಮಹತ್ಯೆಯನ್ನು ತಡೆಗಟ್ಟಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ". ದೇಶದೆಲ್ಲೆಡೆ ಆತ್ಮ ಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದೆ.

ಆತ್ಮಹತ್ಯೆ ತಡೆಗಟ್ಟುವ ದಿನದ ಥೀಮ್ ಏನು ?

ಶಿಕ್ಷಣದ ಕ್ಷೇತ್ರದ ಜವಾಬ್ದಾರಿ ಏನು?:

ಶಿಕ್ಷಣ ವ್ಯವಸ್ಥೆಯಲ್ಲಿ ರ್ಯಾಂಕ್, ಟಾಪರ್, ಬೆಸ್ಟ್ ಗಳ ರೇಸಿಗೆ ಮಕ್ಕಳನ್ನು ನಿಲ್ಲಿಸುತ್ತಿದ್ದೇವೆ. ಅವರಲ್ಲಿ ಒತ್ತಡ ಹೆಚ್ಚಿ ಅನಾಹುತಕ್ಕೆ ಕಾರಣವಾಗುತ್ತಿವೆ ಹಾಗಾಗಿ ಕೂಡ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಮೌಲ್ಯಯುತವಾದ ಶಿಕ್ಷಣಕ್ಕೆ ಕೆಲ ಶಿಕ್ಷಕರು ಒತ್ತುಕೊಟ್ಟರೂ ವ್ಯವಸ್ಥೆಯ ಒತ್ತಡ ಬೇರೆಯದೇ ದಿಕ್ಕಿನಲ್ಲಿ ಇರುವುದು ಅವರ ನಿರಾಸೆಗೂ ಕಾರಣವಾಗುತ್ತದೆ. ಹಾಗಾಗಿ ನಮ್ಮ ಶಿಕ್ಷಣ ಮಕ್ಕಳನ್ನು ಸರಿ ದಾರಿಯಲ್ಲಿ ಸಾಗುವಂತೆ, ಬದುಕನ್ನು ಎಲ್ಲ ಹಂತದಲ್ಲೂ ಎದುರಿಸುವ ಸಾರ್ಮರ್ಥ್ಯವನ್ನು ನಮ್ಮಲ್ಲಿ ತುಂಬುವಂತದ್ದಾಗಿರಬೇಕು.

For Quick Alerts
ALLOW NOTIFICATIONS  
For Daily Alerts

English summary
Today is world suicide prevention day 2020: We are giving information about history, theme and education responsibilities.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X