ಸ್ಟಾರ್ ಗಿರಿ ಸಿಗೋ ಮುನ್ನ ಈ ಸ್ಟಾರ್‌ಗಳ ಜಾಬ್ ಹೇಗಿತ್ತು ನೋಡಿ!

ಸ್ಟಾರ್ ಪಟ್ಟ ತೊಟ್ಟು ಇದೀಗ ಲೈಫ್ ಎಂಜಾಯ್ ಮಾಡುತ್ತಿರುವ ನಟರು ಒಂದು ಕಾಲದಲ್ಲಿ ಏನೆಲ್ಲಾ ಜಾಬ್ ಮಾಡಿ, ಇಂದು ಈ ಸ್ಥಾನಕ್ಕೆ ತಲುಪಿದ್ದಾರೆ ಎಂಬ ಮಾಹಿತಿ ಇದೀಗ ನಿಮ್ಮ ಮುಂದೆ

ಜಗತ್ತಿನಲ್ಲಿ ಹಾಯಾಗಿ ಲೈಫ್ ಎಂಜಾಯ್ ಮಾಡುತ್ತಿರುವವರು ಯಾರು ಎಂದಾಗ ನಾವು ಥಟ್ಟನೆ ಹೇಳುವುದು ಸಿನಿಮಾ ತಾರೆಯರು ಎಂದು. ಕೈ ತುಂಬಾ ಸಂಭಾವನೆ ಪಡೆಯುವ ಈ ತಾರೆಯರು ತಮಗೆ ಬೇಕಾದ ರೀತಿಯಲ್ಲಿ ಲೈಫ್ ರೂಪಿಸಿಕೊಳ್ಳುತ್ತಾರೆ ಜತೆ ಸಖತ್ ಎಂಜಾಯ್ ಮಾಡುತ್ತಾರೆ. ಹೀಗಂತ ನಾವು ಅಂದುಕೊಳ್ಳಬಹುದು.ನಮ್ಮ ಅನಿಸಿಕೆ ನಿಜ ಇರಬಹುದು ಇಲ್ಲ ಇಲ್ಲದೆನೇ ಇರಬಹುದು.

ಬಾಲಿವುಡ್ ಸ್ಟಾರ್ ಗಳ ಮೊದಲ ಜಾಬ್ ಹೀಗಿತ್ತು!

ಆದ್ರೆ ಈ ತಾರೆಯರು ಇಂದು ಎಷ್ಟೇ ಫೇಮಸ್ ಆಗಿದ್ದರೂ, ಇವರು ಕೂಡಾ ಆ ಕಷ್ಟದ ದಿನಗಳನ್ನ ಮೆಟ್ಟಿ ನಿಂತವರು ಎಂದ್ರೆ ತಪ್ಪಾಗಲಾರದು. ಹೌದು ಇದೀಗ ಕೋಟ್ಯಾಂತರ ರೂ ಸಂಭಾವನೆ ಪಡೆಯುವ ಇವರು ಒಂದು ಕಾಲದಲ್ಲಿ ಹಣಕ್ಕಾಗಿ ಎದ್ದುಬಿದ್ದು ದುಡಿದದ್ದು ಇದೆ. ಬನ್ನಿ ಸ್ಟಾರ್ ಪಟ್ಟ ಪಡೆದುಕೊಂಡಿರುವ ಈ ತಾರೆಯರು ಸಿನಿಮಾ ರಂಗಕ್ಕೆ ಬರುವ ಮುನ್ನ ಇವರ ಮೊದಲ ವೃತ್ತಿ ಏನಾಗಿತ್ತು ಎಂದು ಇದೀಗ ಕೆರಿಯರ್ ಇಂಡಿಯಾ ನಿಮಗೆ ಮಾಹಿತಿ ನೀಡುತ್ತಿದೆ ಮುಂದಕ್ಕೆ ಓದಿ.

1. ಅಮಿತಾಬಚ್ಚನ್

1. ಅಮಿತಾಬಚ್ಚನ್

ಬಾಲಿವುಡ್‌ನ ಗಣ್ಯ ಹಾಗೂ ಹಿರಿಯ ನಟ ಅಮಿತಾಬಚ್ಚನ್. ಇಂದಿಗೂ ಸೂಪರ್ ಹಿಟ್ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತರುವ ಅಮಿತಾಬ್ ತಮ್ಮ ಕೆರಿಯರ್ ಪ್ರಾರಂಭಿಸಿದ್ದು, ಶಿಪ್ಪಿಂಗ್ ಫರ್ಮ್ ನಲ್ಲಿ.

2. ಶಾರೂಖ್ ಖಾನ್

2. ಶಾರೂಖ್ ಖಾನ್

ಕಳೆದ ಹಲವಾರು ವರ್ಷಗಳಿಂದ ಬಾಲಿವುಡ್ ನ್ನ ಆಳುತ್ತಿರುವ ನಟ ಶಾರೂಖ್ ಖಾನ್, ಬಾಲಿವುಡ್‌ನ ಕಿಂಗ್ ಖಾನ್ ಎಂದೇ ಫೇಮಸ್ ಆಗಿದ್ದಾರೆ. ೫೦ ರೂ ಸ್ಯಾಲರಿಯಿಂದ ನಿಂದ ಶಾರೂಖ್ ತಮ್ಮ ಕೆರಿಯರ್ ಪ್ರಾರಂಭಿಸಿದ್ದರು. ಆದ್ರೆ ಇದೀಗ ವರ್ಷಕ್ಕೊಂದು ಸೂಪರ್ ಹಿಟ್ ಸಿನಿಮಾ ನೀಡಿ ಬಾಲಿವುಡ್ ಬಾದ್ ಷಾ ಎನಿಸಿಕೊಂಡಿದ್ದಾರೆ ಇವರು. ಇಂಡಿಯಾ ಪೂಚೆಗಾ ಸಬ್ಸೇ ಶಾನ್ ಕೌನ್ ? ಕಾರ್ಯಕ್ರಮದಲ್ಲಿ ತಮ್ಮ ಮೊದಲ ವೃತ್ತಿ ಜೀವನದ ಬಗ್ಗೆ ಮಾತನಾಡಿದ ಶಾರೂಖ್ ತಾವು ಸಿನಿಮಾ ಮಂದಿರಗಳಲ್ಲಿ ಟಿಕೆಟ್ ಸೇಲ್ ಮಾಡುತ್ತಿರುವುದಾಗಿ ಸ್ಟೇಟ್ ಮೆಂಟ್ ನೀಡಿದ್ದರು

3. ಹೃತಿಕ್ ರೋಶನ್

3. ಹೃತಿಕ್ ರೋಶನ್

ಗ್ರೀಕ್ ಗಾಡ್ ಎಂದು ಫೇಮಸ್ ಆಗಿರುವ ಹೃತಿಕ್ ರೋಶನ್ ಸ್ಟಾರ್ ನಟ ಎನಿಸಿಕೊಳ್ಳುವ ಮುನ್ನ ಬಾಲ ನಟರಾಗಿ ಮಿಂಚಿದ್ದರು. ಇನ್ನು ಹೃತಿಕ್ ಮೊದಲ ಸಿನಿಮಾಕ್ಕೆ ೧೦೦೦ ರೂ ಕ್ಕಿಂತಲೂ ಕಡಿಮೆ ಸಂಭಾವನೆ ಪಡೆದಿದ್ದರು.

4. ಅಕ್ಷಯ್ ಕುಮಾರ್

4. ಅಕ್ಷಯ್ ಕುಮಾರ್

ಸಾಮಾಜಿಕ ಕಾಳಜಿಯನ್ನೊಳಗೊಂಡಂತೆ ಪಕ್ಕಾ ಎಂಟರ್‌ಟೈನ್ ಮೆಂಟ್ ಸಿನಿಮಾ ನೀಡುವ ಅಕ್ಷಯ್ ಕುಮಾರ್ ವೃತ್ತಿ ಜೀವನ ಆರಂಭಿಸಿದ್ದು, ಬ್ಯಾಂಕಾಂಕ್ ನ ರೆಸ್ಟೋರೆಂಟ್ ವೊಂದರಲ್ಲಿ ಶೆಫ್ ಹಾಗೂ ವೈಟರ್ ಆಗಿ. ಆ ಟೈಂನಲ್ಲಿ ತಿಂಗಳಿಗೆ ೧೫೦೦ ರೂ ಸಂಪಾದಿಸುತ್ತಿದ್ದ ಅಕ್ಷಯ್ ಇದೀಗ ಪ್ರತೀ ಸಿನಿಮಾಕ್ಕೆ ೪೦ ರಿಂದ ೪೫ ಕೋಟಿ ಚಾರ್ಜ್ ಮಾಡುತ್ತಾರಂತೆ

5. ರಣ್ ವೀರ್ ಸಿಂಗ್

5. ರಣ್ ವೀರ್ ಸಿಂಗ್

ಬಾಜಿರಾವ್ ಮಸ್ತಾನಿ, ಪದ್ಮಾವತ್ ಸಿನಿಮಾಗಳಿಂದ ಸಖತ್ ಫೇಮಸ್ ಆಗಿರುವ ಅಷ್ಟೇ ಅಲ್ಲ ಹುಡುಗಿಯರ ಹಾರ್ಟ್ ಥ್ರೋಬ್ ಆಗಿರುವ ರಣ್ ವೀರ್ ಸಿಂಗ್. ಅಷ್ಟು ಅಚ್ಚುಕಟ್ಟಾಗಿ ತನ್ನ ಪಾತ್ರ ನಿಭಾಯಿಸುವ ಸಿಂಗ್ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಜಾಹೀರಾತು ಸಂಸ್ಥೆಗಳಲ್ಲಿ ಕಾಪಿ ರೈಟರ್ ಆಗಿ ಕೆರಿಯರ್ ಪ್ರಾರಂಭಿಸಿದ್ದರು. ಅಷ್ಟೇ ಅಲ್ಲ ವಿದೇಶದಲ್ಲಿ ಸ್ಟಡಿ ಮಾಡುವ ವೇಳೆ ಸ್ಟಾರ್ ಬಕ್ ನಲ್ಲಿ ಸರ್ವರ್ ಆಗಿಯೂ ದುಡಿದಿದ್ದರು.

6. ಅಮೀರ್ ಖಾನ್

6. ಅಮೀರ್ ಖಾನ್

ಹೌದು ವರ್ಷಕ್ಕೆ ಒಂದು ಸೂಪರ್ ಹಿಟ್ ಸಿನಿಮಾ ನೀಡುವ ನಟ ಅಮೀರ್ ಖಾನ್. ಆ ಒಂದು ಸಿನಿಮಾ ಕೂಡಾ ವರ್ಷವಿಡೀ ಪ್ರೇಕ್ಷಕರು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತಾರೆ ಅಮೀರ್. ಇನ್ನು ಅಮೀರ್ ನಟನಾಗಿ ಮಿಂಚೋ ಮೊದಲು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರಂತೆ. ಆ ಟೈಂನಲ್ಲಿ ಬರೀ ೧೦೦೦ ರೂ ವೇತನ ಪಡೆಯುತ್ತಿದ್ದರಂತೆ.

7. ನವಾಜುದ್ದೀನ್

7. ನವಾಜುದ್ದೀನ್

ತನ್ನದೇ ಪರಿಶ್ರಮದಿಂದ ಬೆಳೆಯುತ್ತಿರುವ ನಟ ನವಾಜುದ್ದೀನ್. ಮೊದ ಮೊದಲು ಪೋಷಿತ ಪಾತ್ರಗಳಲ್ಲಿ ನಟಿಸುತ್ತಿದ್ದ ನವಾಜುದ್ದೀನ್ ಇದೀಗ ಬೇಡಿಕೆಯ ನಟರಲ್ಲಿ ಕೂಡಾ ಒಬ್ಬರಾಗಿದ್ದಾರೆ. ಇನ್ನು ಇವರು ನಟನಾಗಿ ಕೆರಿಯರ್ ಪ್ರಾರಂಭಿಸೋ ಮುನ್ನ ಕೆಮಿಸ್ಟ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ದೆಹಲಿ ಶಿಫ್ಟ್ ಆದ ಬಳಿಕ ಹೊಟ್ಟೆಪಾಡಿಗಾಗಿ ವಾಚ್ ಮ್ಯಾನ್ ವೃತ್ತಿ ಕೂಡಾ ಮಾಡಿದ್ದರು.

8. ರಣದೀಪ್ ಹೂಡಾ

8. ರಣದೀಪ್ ಹೂಡಾ

ತನಗೆ ಕೊಟ್ಟಿರುವ ಪಾತ್ರವನ್ನ ಪರ್ಫೆಕ್ಟ್ ಆಗಿ, ಅಚ್ಚುಕಟ್ಟಾಗಿ ನಿಭಾಯಿಸುವ ನಟ ರಣದೀಪ್ ಹೂಡಾ ಕೂಡಾ ಒಬ್ಬ ಅದ್ಭುತ ಕಲಾವಿದ. ಇನ್ನು ಇವರು ನಟನಾಗುವ ಮುನ್ನ ವೈಟರ್, ಕಾರ್ ವಾಶರ್ ಹಾಗೂ ಟಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದ್ದರು.

9. ಬೊಮಾನ್ ಇರಾನಿ

9. ಬೊಮಾನ್ ಇರಾನಿ

ಇಂದಿಗೂ ಹೆಚ್ಚಿನ ಸಿನಿಮಾಗಲ್ಲಿ ಪೋಷಕ ಪಾತ್ರ, ಪಕ್ಕಾ ಕಾಮಿಡಿ ಪಾತ್ರ ಅಷ್ಟೇ ಯಾಕೆ ವಿಲನ್ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿರುವ ನಟ ಬೊಮಾನ್ ಇರಾನಿ ಬಣ್ಣದ ಜಗತ್ತಿಗೆ ಕಾಲಿಡುವ ಮುನ್ನ ಮುಂಬಯಿಯ ತಾಜ್‌ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ವೈಟರ್ ಹಾಗೂ ರೂಂ ಸರ್ವೀಸ್ ಬಾಯ್ ಆಗಿ ಕೆಲಸ ಮಾಡಿದ್ದರಂತೆ

10. ಸಿದ್ಧಾರ್ಥ ಮಲ್ಹೋತ್ರ

10. ಸಿದ್ಧಾರ್ಥ ಮಲ್ಹೋತ್ರ

ಹೌದು ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ಮೂಲಕ ಹೀರೋ ಆಗಿ ಪಾದಾರ್ಪಣೆ ಮಾಡಿದ ಸಿದ್ಧಾರ್ಥ್ ಅದಕ್ಕೂ ಮುನ್ನ ಕರಣ್ ಜೋಹರ್ ಸಿನಿಮಾ ಮೈ ನೇಮ್ ಈಸ್ ಖಾನ್ ಸಿನಿಮಾದ ಅಸಿಸ್ಟೆಂಟ್ ಡೈರೆಕ್ಟರ್ ಅಗಿ ಕೆರಿಯರ್ ಆರಂಭಿಸಿದ್ದರು

11. ಜಾನ್ ಅಬ್ರಾಹಂ

11. ಜಾನ್ ಅಬ್ರಾಹಂ

ಕಟ್ಟು ಮಸ್ತಾದ ಮೈ ಕಟ್ಟಿನ ಮೂಲಕ ಫೇಮಸ್ ಆದ ನಟ ಜಾನ್‌ ಅಬ್ರಾಹಂ ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಮೀಡಿಯಾ ಪ್ಲ್ಯಾನರ್ ಆಗಿ ಕೆಲಸ ಮಾಡಿದ್ದರು

 

 

More News  

For Quick Alerts
ALLOW NOTIFICATIONS  
For Daily Alerts

English summary
Bollywood stars enjoy a huge fan following in this society. And apart from the love, their fans, gossip, crush, they also earn huge amount of money. But Before they coming to film industry they also sufferd lot. the also worked in small small jobs. Here is What is the Bollywood stars first job list.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+