2022 ಬಂದಾಯ್ತು: ವಿದ್ಯಾರ್ಥಿಗಳೆ ನಿಮ್ಮ ನ್ಯೂ ಇಯರ್ ರೆಸೊಲ್ಯೂಷನ್ ಹೀಗಿರಲಿ

ಪರೀಕ್ಷಾ ವೇಳಾಪಟ್ಟಿಗಳು ಬಿಡುಗಡೆಯಾಗಿರುವುರಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ವರ್ಷಾಚರಣೆ ಸಾಕಷ್ಟು ಪ್ರಭಾವ ಬೀರುತ್ತದೆ.

2021 ಬಂದಾಯ್ತು, ಎಲ್ಲರಲ್ಲೂ ಹೊಸ ಹುರುಪನ್ನು ತಂದಿರುವ ಹೊಸ ವರ್ಷ ವಿದ್ಯಾರ್ಥಿಗಳ ಪಾಲಿಗೆ ವಿಶೇಷ ವರ್ಷ.

ಓದಿನ ವಿಚಾರವಾಗಿ ಹೊಸ ವರ್ಷ ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ. ನ್ಯೂ ಇಯರ್ ರೆಸಲ್ಯೂಶನ್ ತೆಗೆದುಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಲು ವರ್ಷಾಚರಣೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಮತ್ತಷ್ಟು ಯೋಜನೆಗಳನ್ನು ರೂಪಿಸಿಕೊಂಡು ಮುಂಬರುವ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬಹುದು.

ನ್ಯೂ ಇಯರ್ ರೆಸೊಲ್ಯೂಷನ್

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ವರ್ಷಾಚರಣೆ ಸಾಕಷ್ಟು ಪ್ರಭಾವ ಬೀರುತ್ತದೆ. ಪರೀಕ್ಷೆಗಳಿಗೆ ಸಿದ್ದವಾಗಲು ವಿದ್ಯಾರ್ಥಿಗಳು ಓದಿನ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿರಿಸಲು ಇದು ಸೂಕ್ತ ಸಮಯ.

ನ್ಯೂ ಇಯರ್ ರೆಸಲ್ಯೂಶನ್ ಹೀಗಿರಲಿ

ಇಷ್ಟು ದಿನ ಎಷ್ಟು ಓದಿರುವಿರಿ, ಇನ್ನು ಎಷ್ಟು ಓದಬೇಕು. ನಿಮ್ಮ ಪರೀಕ್ಷೆಗೆ ಇನ್ನು ಎಷ್ಟು ಸಮಯ ಸಿಗುತ್ತದೆ. ನಿಮ್ಮ ಓದಿನ ವೇಗ ಹೇಗಿದೆ. ಓದಿರುವುದೆಲ್ಲ ಅರ್ಥವಾಗಿದೆಯೇ? ಹೀಗಿ ಅನೇಕ ವಿಚಾರಗಳ ಬಗ್ಗೆ ಗಮನಿಸಿ, ನಿಮ್ಮ ಓದಿನ ಕ್ರಮ ಬದಲಾಯಿಸಿಕೊಳ್ಳಿ.

ಸಮಯದ ವಿಚಾರದಲ್ಲಿ ಇರಲಿ ಎಚ್ಚರ

ನಿಮ್ಮ ಸಮಯ ಎಲ್ಲಿ ವ್ಯರ್ಥವಾಗುತ್ತಿದೆ ಎನ್ನುವುದನ್ನು ಗಮನಿಸಿ, ಪರೀಕ್ಷೆ ವೇಳೆಗೆ ನಿಮ್ಮಿಂದ ಪೂರ್ತಿ ಪಠ್ಯಕ್ರಮವನ್ನು ಓದಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ಊಹಿಸಿಕೊಳ್ಳಿ. ಅದರಂತೆ ನಿಮ್ಮ ಓದಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.

ಮುಂದಿನ ಭವಿಷ್ಯದ ಬಗ್ಗೆ ಗಮನವಿಡಿ

ಓದಿನ ನಂತರ ನೀವು ಏನು ಮಾಡಬೇಕು ಎನ್ನುವುದನ್ನು ನೀವು ನಿರ್ಧರಿಸಿದ್ದರೆ, ಅದಕ್ಕಾಗಿ ನೀವು ಎಷ್ಟು ಅಂಕಗಳಿಸಬೇಕು ಅನ್ನುವುದು ಕೂಡ ನಿಮಗೆ ತಿಳಿದಿರಬೇಕು. ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಹೆಚ್ಚಿದೆ, ಯಾವ ವಿಷಯದಲ್ಲಿ ಆಸಕ್ತಿ ನೀಡಲಾಗುತ್ತಿಲ್ಲ ಎನ್ನುವುದನ್ನು ನಿಮ್ಮಲ್ಲೇ ವಿಶ್ಲೇಶಿಸಿ, ಅದಕ್ಕೆ ಸೂಕ್ತ ಪರಿಹಾರವನ್ನು ನಿಮ್ಮ ಪೋಷಕರಿಂದ, ಸಹಪಾಠಿಗಳಿಂದ ಅಥವಾ ನಿಮ್ಮ ಶಿಕ್ಷಕರಿಂದ ಪಡೆದುಕೊಳ್ಳಿ.

ನೀವು ಅಂದಕೊಂಡ ಹಾಗೆ ನಿಮ್ಮ ಉನ್ನತ ಶಿಕ್ಷಣ ಇರಬೇಕಾದರೆ, ನೀವು ಅದಕ್ಕಾಗಿ ಶ್ರಮವಹಿಸಬೇಕು. ಆದ್ದರಿಂದ ಈಗಿಂದಲೇ ಪರೀಕ್ಷೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ. ಹೊಸ ವರ್ಷವನ್ನು ಹೇಗೆ ಸಂಭ್ರಮದಿಂದ ಆಚರಿಸುತ್ತೀರೋ ಹಾಗೆಯೇ ಪರೀಕ್ಷೆಗೆ ಖುಷಿಯಿಂದಲೇ ಅಭ್ಯಾಸ ನಡೆಸಿ. ಯಶಸ್ಸು ನಿಮ್ಮದಾಗಿಸಿ. ಹೊಸ ವರ್ಷದ ಶುಭಾಶಯಗಳು.

For Quick Alerts
ALLOW NOTIFICATIONS  
For Daily Alerts

English summary
The New Year is a great time to reflect on the changes we want to or need to make. If you’re a student looking at ways to improve yourself and make the transition to exams easier.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X