ಕೆರಿಯರ್ ಯಶಸ್ಸಿಗೆ ಕಾಂಫಿಡೆನ್ಸ್ ರೂಪಿಸಿಕೊಳ್ಳಲು ಈ 4 ಸ್ಟೆಪ್ಸ್ ಫಾಲೋ ಮಾಡಿ

ಪ್ರತೀ ನಿಮಿಷದಿಂದ ನಿಮಿಷಕ್ಕೆ ಇದೀಗ ಜಾಬ್ ಜಗತ್ತಿನಲ್ಲಿ ಸ್ಪರ್ಧೆಗಳು ಹೆಚ್ಚುತ್ತಾ ಹೋಗುತ್ತಿದೆ. ಪ್ರತಿಯೊಬ್ಬರು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿಗಾಗಿ ಹೆಣಗಾಡುತ್ತಿರುತ್ತಾರೆ.

By Kavya

ಪ್ರತೀ ನಿಮಿಷದಿಂದ ನಿಮಿಷಕ್ಕೆ ಇದೀಗ ಜಾಬ್ ಜಗತ್ತಿನಲ್ಲಿ ಸ್ಪರ್ಧೆಗಳು ಹೆಚ್ಚುತ್ತಾ ಹೋಗುತ್ತಿದೆ. ಪ್ರತಿಯೊಬ್ಬರು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿಗಾಗಿ ಹೆಣಗಾಡುತ್ತಿರುತ್ತಾರೆ. ಇನ್ನು ಇತ್ತೀಚಿಗಿನ ದಿನಗಳಲ್ಲಿ ಒಂದು ಸರಿಗಟ್ಟಾದ ಜಾಬ್ ಪಡೆಯಬೇಕಾದ್ರೆ ನಿಮ್ಮ ವಿದ್ಯಾಭ್ಯಾಸದ ಜತೆ ಸರ್ಟಿಫಿಕೇಟ್‌ ಗಳು ಅಗತ್ಯವಿದೆ. ಯಾಕೆಂದ್ರೆ ಒಂದೇ ಜಾಬ್ ಗೆ ನೂರಾರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಇರುತ್ತಾರೆ. ಅಷ್ಟು ಜನರ ಮಧ್ಯೆ ನಿಮಗೆ ಜಾಬ್ ಸಿಗಬೇಕಾದ್ರೆ ನಿಮ್ಮ ಅಂಕ ಪರಿಶೀಲನೆಗೂ ಮುನ್ನ ನಿಮ್ಮ ಸಾಮರ್ಥ್ಯ ಹಾಗೂ ಯೋಚನಾ ಶಕ್ತಿಯನ್ನ ಮೊದಲು ಟೆಸ್ಟ್ ಮಾಡಿಕೊಳ್ಳುತ್ತಾರೆ.

ಕೆರಿಯರ್ ಯಶಸ್ಸಿಗೆ ಕಾಂಫಿಡೆನ್ಸ್ ರೂಪಿಸಿಕೊಳ್ಳಲು ಈ 4 ಸ್ಟೆಪ್ಸ್ ಫಾಲೋ ಮಾಡಿ

ಇನ್ನು ನೂರಾರು ಮಂದಿಯ ಮಧ್ಯೆ ಜಾಬ್ ನಿಮ್ಮದಾಗಿಸಿಕೊಳ್ಳಬೇಕಾದ್ರೆ ನಿಮ್ಮಲ್ಲಿ ಸೆಲ್ಫ್ ಕಾಂಫಿಡೆನ್ಸ್ ತುಂಬಾ ಅಗತ್ಯ. ಪ್ರತಿಯೊಬ್ಬರಿಗೂ ನ್ಯಾಚುರಲ್ ಆಗಿ ಈ ಸೆಲ್ಫ್ ಕಾಂಫಿಡೆನ್ಸ್ ಬಂದಿರುವುದಿಲ್ಲ. ಕೆಲವರಿಗೆ ಅವರ ಸಾಮರ್ಥ್ಯದ ಬಗ್ಗೆ ಅವರಿಗೆ ನಂಬಿಕೆ ಇಲ್ಲವಾದ್ದರಿಂದ ಸೆಲ್ಫ್ ಕಾಂಫಿಡೆಂಟ್ ಕಳೆದುಕೊಳ್ಳುತ್ತಾರೆ. ಹಾಗಿದ್ರೆ ಈ ಸೆಲ್ಫ್ ಕಾಂಫಿಡೆಂಟ್ ಗೆ ಏನು ಮಾಡಬೇಕು, ಹೇಗೆಲ್ಲಾ ಮಾಡಿದ್ರೆ ಸೆಲ್ಫ್ ಈ ಕಾಂಫಿಡೆಂಟ್ ರೂಪುಗೊಳ್ಳುತ್ತದೆ, ಸೆಲ್ಫ್ ಕಾಂಫಿಡೆಂಟ್ ನಿಂದ ಕೆರಿಯರ್ ಲೈಫ್ ನಲ್ಲಿ ಯಶಸ್ಸು ಗಳಿಸುವುದು ಹೇಗೆ ಎಂದು ಇದೀಗ ನಿಮಗೆ ಇಲ್ಲಿ ನಾಲ್ಕು ಸಲಹೆಗಳನ್ನ ನೀಡಲಾಗಿದೆ, ಮುಂದಕ್ಕೆ ಓದಿ

<strong>Most Read: ಫೆಶರ್ಸ್ ನೀವಾಗಿದ್ರೆ ಕಾರ್ಪೋರೇಟಿವ್ ಆಫೀಸ್‌ನಲ್ಲಿ ಹೇಗೆ ದುಡಿದ್ರೆ ನಿಮ್ಮ ಸೀಟು ಉಳಿಯುತ್ತೆ</strong>Most Read: ಫೆಶರ್ಸ್ ನೀವಾಗಿದ್ರೆ ಕಾರ್ಪೋರೇಟಿವ್ ಆಫೀಸ್‌ನಲ್ಲಿ ಹೇಗೆ ದುಡಿದ್ರೆ ನಿಮ್ಮ ಸೀಟು ಉಳಿಯುತ್ತೆ

ನಿಮ್ಮ ಬಾಡಿ ಲಾಂಗ್ವೇಜ್ ಬದಲಾಯಿಸಿಕೊಳ್ಳಿ

ನಿಮ್ಮ ಬಾಡಿ ಲಾಂಗ್ವೇಜ್ ಬದಲಾಯಿಸಿಕೊಳ್ಳಿ

ಜಗತ್ತಿನ ಮುಂದೆ ನೀವು ಹೇಗೆ ವರ್ತಿಸುತ್ತೀರಾ ಎಂಬುವುದರ ಮೇಲೆ ಮುಖ್ಯವಾಗಿ ನಿಮ್ಮ ಕಾಂಫಿಡೆನ್ಸ್ ಕಾಣುತ್ತದೆ. ನಿಮ್ಮ ಜತೆಗೆ ಯಾರಾದ್ರೂ ವ್ಯಕ್ತಿ ಮಾತನಾಡುತ್ತಿದ್ದಾಗ ಅವರ ಕಣ್ಣುಗಳನ್ನ ನೋಡುತ್ತಾ ಮಾತನಾಡಿ. ಇದರಿಂದ ನಿಮ್ಮ ಕಾಂಫಿಡೆನ್ಸ್ ಇಂಪ್ರೂವ್ ಆಗುವುದು. ಹಾಗೂ ನಿಮ್ಮ ಭುಜವನ್ನ ಹಿಂದಕ್ಕೆ ಎಳೆದು, ಎದೆಭಾಗ ಮುಂದಕ್ಕೆ ದೂಡಿ ಕತ್ತು ಎತ್ತಿ ಮಾತನಾಡಿ. ಇದರಿಂದ ನಿಮ್ಮ ಲ್ಲಿ ಕಾಂಫಿಡೆಂಟ್ ಇದೆ ಎಂದು ನಿಮ್ಮ ಮುಂದಿದ್ದ ವ್ಯಕ್ತಿಗೆ ತಿಳಿಯಲಿದೆ.

ಇಷ್ಟೇ ಅಲ್ಲದೆ ಚೆನ್ನಾಗಿ ಡ್ರೆಸ್ ಮಾಡಿ, ನೀಟ್ ಆಗಿ ತಲೆ ಬಾಚಿಕೊಳ್ಳಿ, ಕ್ಲೀನ್ ಶೇವ್ ಮಾಡಿಕೊಳ್ಳಿ ಇದರಿಂದೆಲ್ಲಾ ನಿಮ್ಮ ಕಾಂಪಿಡೆನ್ಸ್ ಹೆಚ್ಚುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ

 

ತಯಾರಾಗಿರಿ

ತಯಾರಾಗಿರಿ

ನಿಮ್ಮ ಕಾಂಫಿಡೆನ್ಸ್ ನಿಮ್ಮಲ್ಲಿ ಮೂಡಬೇಕಾದ್ರೆ ಬರೀ ಚೆನ್ನಾಗಿ ಡ್ರೆಸ್ ಮಾಡಿದ್ರೆ ಸಾಲದು, ಬದಲಿಗೆ ಚೆನ್ನಾಗಿ ತಯಾರಾಗಬೇಕು ಕೂಡಾ. ಉದಾಹರಣಗೆ ನಿಮಗೆ ಒಂದು ಮೀಟಿಂಗ್ ಇರುತ್ತದೆ. ಆದ್ರೆ ನಿಮಗೆ ಆ ಮೀಟಿಂಗ್ ನಲ್ಲಿ ಮಾತನಾಡಲು ಕಾಂಫಿಡೆಂಟ್ ಇರಲ್ಲ. ಹಾಗಾಗಿ ನೀವು ಮೀಟಿಂಗ್‌ಗೆ ಹೋಗುವ ಮುನ್ನ ತಯಾರಾಗುವುದು ತುಂಬಾ ಅಗತ್ಯ. ಸೆಲ್ಫ್ ಸ್ಟಡಿಗೆ ಹೆಚ್ಚಿನ ಸಮಯ ವ್ಯಯಿಸಿಕೊಳ್ಳಿ. ಇದರಿಂದ ನಿಮಗೆ ಕಾಂಫಿಡೆಂಟ್ ಮಾತ್ರ ಹೆಚ್ಚಾಗುವುದಲ್ಲ ಬದಲಿಗೆ, ನಿಮ್ಮ ಪ್ರೆಸೆಂಟೇಶನ್ ಕೂಡಾ ಇಂಪ್ರೂವ್ ಆಗಿ ಎಲ್ಲರಿಂದಲೂ ನೀವು ಸೈ ಎನಿಸಿಕೊಳ್ಳುವಿರಿ.

ಫೈಲ್ಯುಯರ್ ನ್ನ ಸ್ವೀಕರಿಸಕೊಳ್ಳಬೇಡಿ

ಫೈಲ್ಯುಯರ್ ನ್ನ ಸ್ವೀಕರಿಸಕೊಳ್ಳಬೇಡಿ

ನೀವು ಸೆಲ್ಫ್ ಕಾಂಫಿಡೆನ್ಸ್ ಗಾಗಿ ಸೋಲನ್ನ (ಫೈಲುಯರ್) ಒಪ್ಪಿಕೊಳ್ಳುತ್ತೀರಾ ಹಾಗೂ ನಿಮ್ಮಿಂದ ಬೆಟರ್ ಆಗಿ ಏನೂ ಮಾಡಲು ಸಾಧ್ಯವಿಲ್ಲ ಎಂದು ನೀವು ಅಂದುಕೊಳ್ಳುತ್ತೀರಾ. ಇಂತಹ ಆಟ್ಯಿಟ್ಯುಡ್ ನಿಮ್ಮ ನೆಗಟೀವ್ ಯೋಚನೆಗಳನ್ನ ಹುಟ್ಟಿ ಹಾಕುತ್ತದೆ. ಇದರಿಂದ ನೀವು ಸ್ಮಾರ್ಟ್ ಆಲ್ಲ ಎಂದು ಅಂದುಕೊಳ್ಳುತ್ತೀರಾ. ಇಂತಹ ಆಲೋಚನೆಗಳಿಂದ ನಿಮಗೆ ಬೆಟರ್ ಆಗಿ ಪರ್ಫೋಮ್ ಮಾಡಲು ಸಾಧ್ಯವಿರುವುದಿಲ್ಲ. ಹಾಗಾಗಿ ಸಮಸ್ಯೆಯಿಂದ ಹೊರಬರಬೇಕಾದ್ರೆ ನೀವು ಸೋಲನ್ನ ಯಾವತ್ತೂ ಒಪ್ಪಿಕೊಳ್ಳಬಾರದು. ಸೋಲಾದಲ್ಲಿ ಅದನ್ನ ವಿರೋಧಿಸಿ, ಅದರ ವಿರುದ್ಧನೇ ಹಾರ್ಡ್ ವರ್ಕ್ ಮಾಡಿ ಜಯಗಳಿಸಿ. ಇದರಿಂದ ನಿಮ್ಮ ಕಾಂಪಿಡೆನ್ಸ್ ಕೂಡಾ ಇಂಪ್ರೂವ್ ಆಗುತ್ತದೆ.

 ನೆಗಟಿವಿಟಿಯಿಂದ ದೂರವಿರಿ

ನೆಗಟಿವಿಟಿಯಿಂದ ದೂರವಿರಿ

ಕಾಂಫಿಡೆಂಟ್ ಇಲ್ಲದ ವ್ಯಕ್ತಿಗಳ ಜೀವನದಲ್ಲಿ ಹೆಚ್ಚು ನೆಗಟಿವಿಟಿ ಅಂಶವಿರುವುದು ನೀವು ಗಮನಿಸಬಹುದು. ಅದಕ್ಕೆ ಕಾರಣವೂ ಇದೆ. ಅವರಲ್ಲಿ ನೆಗಟಿವಿಟಿ ಪ್ರಭಾವ ಬೀರುವ ಕೆಲವು ವ್ಯಕ್ತಿಗಳು ಇರುತ್ತಾರೆ. ಇದರಿಂದ ಅವರಲ್ಲಿ ಕಾಂಫಿಡೆಂಟ್ ನ ಕೊರತೆ ಎದ್ದು ಕಾಣುತ್ತದೆ. ನಿಮ್ಮಲ್ಲಿ ಕಾಂಫಿಡೆನ್ಸ್ ರೂಪಿಸಿಕೊಳ್ಳಬೇಕಾದ್ರೆ ಮೊದಲಿಗೆ ನಿಮ್ಮ ಜೀವನಲ್ಲಿ ನಿಮ್ಮ ಮೇಲೆ ಯಾರು ನೆಗಟೀವ್ ಪ್ರಭಾವ ಬೀರುತ್ತಾರೋ ಅಂತಹ ವ್ಯಕ್ತಿಗಳನ್ನ ಇಲ್ಲ ಚಟುವಟಿಕೆಗಳನ್ನ ಗುರುತಿಸಿಕೊಳ್ಳಿ. ಬಳಿಕ ಅವರನ್ನ ನಿಮ್ಮ ಲೈಫ್ ನಿಂದ ದೂರವಿರಿಸಿ.

ನೆಗಟೀವ್ ಪ್ರಭಾವ ಬೀರುವವರು ನಿಮ್ಮ ಫ್ಯಾಮಿಲಿ ಸದಸ್ಯರು, ಸ್ನೇಹಿತರು, ಸಹದ್ಯೋಗಿಗಳು ಯಾರೇ ಇರಬಹುದು. ನೆಗಟೀವ್ ಪ್ರಭಾವ ಬೀರುವ ವ್ಯಕ್ತಿಗಳನ್ನ ನಿಮ್ಮ ಜೀವನದಿಂದ ದೂರವಿರಿಸಿ. ಮತ್ತು ನಿಮ್ಮ ಸಮಸ್ಯೆಗಳನ್ನ ಫೋಕಸ್ ಮಾಡುವುದರ ಬದಲಿಗೆ ಪರಿಹಾರವನ್ನ ಫೋಕಸ್ ಮಾಡಿಕೊಳ್ಳಿ. ಇದರಿಂದ ನಿಮ್ಮಲ್ಲಿ ಪಾಸಿಟೀವ್ ಅಟ್ಯಿಟ್ಯುಡ್ ರೂಪುಗೊಳ್ಳುತ್ತದೆ.ಇದರಿಂದ ನ್ಯಾಚುರಲ್ ಆಗಿಯೇ ಕಾಂಫಿಡೆನ್ಸ್ ಕೂಡಾ ಹೆಚ್ಚುತ್ತದೆ.

 

<strong>Most Read: ಬೆಸ್ಟ್ ಎಂಪ್ಲಾಯ್ ಅವಾರ್ಡ್ ಬಾಚಿಕೊಳ್ಳಲು ಇಲ್ಲಿದೆ ಟಿಪ್ಸ್</strong>Most Read: ಬೆಸ್ಟ್ ಎಂಪ್ಲಾಯ್ ಅವಾರ್ಡ್ ಬಾಚಿಕೊಳ್ಳಲು ಇಲ್ಲಿದೆ ಟಿಪ್ಸ್

For Quick Alerts
ALLOW NOTIFICATIONS  
For Daily Alerts

English summary
Indeed, competition in the job world is increasing by the minute. Now, the only way to survive is to ensure that you are above that of your peers. With education and certifications becoming all the way more accessible to people, for a particular post or position, there will be hundreds of applicants.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X