UPSC Exam: ಈ 6 ಟಿಪ್ಸ್ ನಿಂದ ಯುಪಿಎಸ್ ಸಿ ಪರೀಕ್ಷೆಯನ್ನ ಮೊದಲ ಪ್ರಯತ್ನದಲ್ಲೇ ಪಾಸು ಮಾಡಬಹುದು

By Kavya

ಪ್ರತೀ ವರ್ಷ ಐಎಎಸ್ ಪರೀಕ್ಷೆಯನ್ನ ಕೇಂದ್ರ ಲೋಕಾ ಸೇವಾ ಆಯೋಗ ಆಯೋಜಿಸುತ್ತದೆ. ಇನ್ನು ಈ ಪರೀಕ್ಷೆಯು ಭಾರತದ ಅತೀ ಕಷ್ಟಕರ ಪರೀಕ್ಷೆಗಳಲ್ಲಿ ಒಂದಾಗಿದೆ ಎಂದು ಎಲ್ಲರೂ ನಂಬುತ್ತಾರೆ. ಆದ್ರೆ ಸರಿಯಾದ ತಯಾರಿ ಹಾಗೂ ಹಾರ್ಡ್ ವರ್ಕ್ ನಿಂದ ನೀವು ಈ ಪರೀಕ್ಷೆಯನ್ನ ಸುಲಭವಾಗಿ ಪಾಸು ಮಾಡಬಹುದು. ಯುಪಿಎಸ್ ಸಿ ಪರೀಕ್ಷೆಯನ್ನ ಮೊದಲ ಪ್ರಯತ್ನದಲ್ಲೇ ಪಾಸು ಮಾಡುವುದು ಹೇಗೆ ಎಂದು ಇಲ್ಲಿ ನಿಮಗೆ ಕೆಲವೊಂದು ಸಲಹೆಗಳನ್ನ ನೀಡಲಾಗಿದೆ. ಮುಂದಕ್ಕೆ ಓದಿ

 

ಈ 6 ಟಿಪ್ಸ್ ನಿಂದ ಯುಪಿಎಸ್ ಸಿ ಪರೀಕ್ಷೆಯನ್ನ ಮೊದಲ ಪ್ರಯತ್ನದಲ್ಲೇ ಪಾಸು ಮಾಡಬಹುದು

Most Read: ಯಶಸ್ವೀ ವ್ಯಕ್ತಿಗಳ 8 ಯಶಸ್ಸಿನ ಮಂತ್ರ: ಫಾಲೋ ಮಾಡಿದ್ರೆ ಖಂಡಿತಾ ಅವರಂತೆಯೇ ಸಕ್ಸಸ್ ಆಗ್ತೀರಾ

ಯುಪಿಎಸ್ ಸಿ ಸಿಲೇಬಸ್ ನ್ನ ಶಾರ್ಟ್ ಸೆಕ್ಷನ್ ಆಗಿ ವಿಂಗಡಿಸಿ

ಯುಪಿಎಸ್ ಸಿ ಸಿಲೇಬಸ್ ನ್ನ ಶಾರ್ಟ್ ಸೆಕ್ಷನ್ ಆಗಿ ವಿಂಗಡಿಸಿ

ಯುಪಿಎಸ್ ಸಿ ಸಿಲೇಬಸ್ ತುಂಬಾ ಸಬ್‌ಜೆಕ್ಟ್ ನ ಒಳಗೊಂಡಿದ್ದು, ವಿದ್ಯಾರ್ಥಿಗಳು ಮೊದಲು ನೋಡಿದೊಡನೆ ಆತಂಕಕ್ಕೊಳಗಾಗುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಮೊದಲು ಸಿಲೇಬಸ್ ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯ. ಸಿಲೇಬಸ್ ಅರ್ಥ ಮಾಡಿಕೊಂಡ ಬಳಿಕ, ಶಾರ್ಟ್ ಆಗಿ ಬರೆದಿಟ್ಟುಕೊಳ್ಳಿ. ನಂತರ ಪ್ಲ್ಯಾನ್ ಮಾಡಿ. ಪ್ಲ್ಯಾನ್ ಅನುಸಾರ ಓದಿ ಮುಗಿಸಿದ್ರೆ ಯುಪಿಎಸ್ ಸಿ ಎಕ್ಸಾಂ ನೀವು ಸುಲಭವಾಗಿ ಪಾಸ್ ಮಾಡಬಹುದು

ಟೈಂ ಟೇಬಲ್ ಮಾಡಿಕೊಳ್ಳಿ

ಟೈಂ ಟೇಬಲ್ ಮಾಡಿಕೊಳ್ಳಿ

ಇನ್ನು ಈ ಪರೀಕ್ಷೆಗೆ ಟೈಂ ಟೇಬಲ್ ನ್ನ ಕೊನೆಯ ಗಳಿಗೆಯಲ್ಲಿ ರಚಿಸಬೇಡಿ. ಮೊದಲಿಗೆ ಸಿಲೇಬಸ್ ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ನಂತರ ಸಿಲೇಬಸ್ ಗೆ ತಕ್ಕಂತೆ ಟೈಂ ಟೇಬಲ್ ಮಾಡಿಕೊಳ್ಳಿ. ಹಾಗೂ ಟೈಂ ಟೇಬಲ್ ಮಾಡಿಕೊಂಡ ಬಳಿಕ ಅದನ್ನ ಸ್ಟ್ರಿಕ್ಟ್ ಆಗಿ ಫಾಲೋ ಕೂಡಾ ಮಾಡಿ.

ಚರ್ಚೆ ಹಾಗೂ ಡಿಬೇಟ್
 

ಚರ್ಚೆ ಹಾಗೂ ಡಿಬೇಟ್

ನೀವು ಓದಿರುವುದು ಹೆಚ್ಚು ನೆನಪಿನಲ್ಲಿ ಉಳಿಯಬೇಕಾದ್ರೆ ನಿಮ್ಮ ಸ್ನೇಹಿತರ ಜತೆ ಇಲ್ಲ ಇತರ ಅಭ್ಯರ್ಥಿಗಳ ಜತೆ ಟೈಂ ಟು ಟೈಂ ಚರ್ಚೆ ಹಾಗೂ ಡಿಬೇಟ್ ಮಾಡಿ. ಇದರಿಂದ ಒಂದೇ ಟಾಪಿಕ್ ಬಗ್ಗೆ ಹಲವಾರು ಮಜಲುಗಳಿಂದ ನಿಮಗೆ ಹಿಡಿತ ಸಿಗುವುದು

ಮಾಕ್ ಟೆಸ್ಟ್

ಮಾಕ್ ಟೆಸ್ಟ್

ಮಾಕ್ ಟೆಸ್ಟ್ ಹಾಗೂ ಕಳೆದ ವರ್ಷದ ಪ್ರಶ್ನೆ ಪತ್ರಿಕೆಗಳನ್ನ ಅಭ್ಯಸಿಸುವುದರಿಂದ ಕೂಡಾ ನೀವು ಯುಪಿಎಸ್ ಸಿ ಪರೀಕ್ಷೆ ಸುಲಭವಾಗಿ ಪಾಸು ಮಾಡಬಹುದು. ಮಾಕ್ ಟೆಸ್ಟ್ ಹಾಗೂ ಹಳೆಯ ಪ್ರಶ್ನೆ ಪತ್ರಿಕೆ ಸ್ಟಡಿ ಮಾಡುವುದರಿಂದ ನಿಮಗೆ ಪರೀಕ್ಷೆಗೆ ಸಂಬಂಧಪಟ್ಟಂತೆ ಹೆಚ್ಚಿನ ಐಡಿಯಾ ಸಿಗುವುದು. ಪ್ರಶ್ನಾ ಪತ್ರಿಕೆ ಹೇಗಿರಬಹುದು, ಯಾವ ಲೆವಲ್ ಕಷ್ಟ ಇರಬಹುದು ಹಾಗೂ ಟೈಂ ಮ್ಯಾನೇಜ್‌ ಮೆಂಟ್ ಮಾಡುವುದು ಹೇಗೆ ಎಂದು ಈ ತರಹದ ಸಮಸ್ಯೆಗೆ ನಿಮಗೆ ಸುಲಭ ಉಪಾಯ ಸಿಗಬಲ್ಲದು.

ಬರವಣಿಗೆ ಸ್ಕಿಲ್

ಬರವಣಿಗೆ ಸ್ಕಿಲ್

ಐಎಎಸ್ ಪರೀಕ್ಷೆಗೆ ನೀವು ಚೆನ್ನಾಗಿ ಬರೆಯಬೇಕಾದ್ರೆ ಬರೀ ಓದಿದ್ರೆ ಮಾತ್ರ ಸಾಲದು.ಯಾಕೆಂದ್ರೆ ನೀವು ಪರೀಕ್ಷೆಯಲ್ಲಿ ಬರೆಯಬೇಕಾಗುತ್ತದೆ. ಹಾಗಾಗಿ ಪರೀಕ್ಷೆಗೆ ತಯಾರಿ ಮಾಡುವ ವೇಳೆ ಬರೆಯುತ್ತಾ ಸ್ಟಡಿ ಮಾಡುವುದು ಬೆಸ್ಟ್

ಬರೀ ಪಠ್ಯ ಪುಸ್ತಕ ಓದಿದ್ರೆ ಸಾಲದು

ಬರೀ ಪಠ್ಯ ಪುಸ್ತಕ ಓದಿದ್ರೆ ಸಾಲದು

ಸುದ್ದಿ ಪತ್ರಿಕೆ ಹಾಗೂ ಮ್ಯಾಗಜಿನ್ ಓದುವುದನ್ನ ಯಾವತ್ತೂ ಕಡೆಗಣಿಸಬೇಡಿ. ಸುದ್ದಿ ಪತ್ರಿಕೆ ಹಾಗೂ ಮ್ಯಾಗಜಿನ್ ಓದುದರಿಂದ ಪ್ರಚಲಿತ ವಿದ್ಯಾಮಾನಕ್ಕೆ ಸಂಬಂಧಪಟ್ಟ ವಿಷಯಕ್ಕೆ ನೀವು ಅಪ್‌ಡೇಟ್ ಆಗಿರುತ್ತೀರ. ಇದರಿಂದ ನಿಮ್ಮ ಸಾಮಾನ್ಯ ಜ್ಞಾನ ಹೆಚ್ಚುವುದಲ್ಲದೇ ನಿಮ್ಮ ಬರವಣಿಗೆ ಹಾಗೂ ಓದುವ ಆಸಕ್ತಿಯೂ ಕೂಡಾ ಹೆಚ್ಚುವುದು

UPSC: ಯುಪಿಎಸ್‌ಸಿ ನೇಮಕಾತಿ ಅಧಿಸೂಚನೆ ಪ್ರಕಟ..ಮಾ.3ರೊಳಗೆ ಅರ್ಜಿ ಹಾಕಿ

For Quick Alerts
ALLOW NOTIFICATIONS  
For Daily Alerts

English summary
The Civil Services examination conducted by the UPSC is one of the toughest All India examinations in the country. The exam is conducted in 3 stages - the prelims, main and the interview. The following tips will help you in preparing yourself to face the Civil Services examination with confidence
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X