ಈ 8 ವಿಧಾನ ಮೂಲಕ ಸುಲಭವಾಗಿ ಹಣ ಸಂಪಾದನೆ ಮಾಡಬಹುದು!

ನಾವು ಹೇಳುವ ಮಾರ್ಗವೂ ಕೂಡಾ ತುಂಬಾ ಸುಲಭವಾದ ದಾರಿಯಾಗಿದೆ ಹಣ ಮಾಡಲು. ಅವು ಯಾವುವು ಎಂದು ಇಲ್ಲಿದೆ ಓದಿ.

By Kavya

ನೀವು ಈಗಾಗಲೇ ಯಾವುದಾದ್ರೂ ಜಾಬ್ ನಲ್ಲಿ ಇರಬಹುದು ಇಲ್ಲ ಇನ್ನೂ ಜಾಬ್ ನ ಹುಡುಕಾಟದಲ್ಲಿ ಇದ್ದಿರಬಹುದು. ಅದೇನೇ ಇದ್ದರೂ ಪ್ರತಿಯೊಬ್ಬರಿಗೂ ಹಣ ಬೇಕೆ ಬೇಕು. ನೀವು ಕೂಡಾ ಇದನ್ನ ಒಪ್ಪಿಕೊಳ್ಳುವುದಾದ್ರೆ ಸುಲಭ ವಿಧಾನ ಮೂಲಕ ಹೇಗೆ ಹಣ ಗಳಿಸಬಹುದು ಎಂದು ಇಲ್ಲಿ ತಿಳಿಸಲಾಗಿದೆ ಮುಂದಕ್ಕೆ ಓದಿ.

ಈ  8 ವಿಧಾನ ಮೂಲಕ ಸುಲಭವಾಗಿ ಹಣ ಸಂಪಾದನೆ ಮಾಡಬಹುದು!

ನಾವಿಂದು ನಿಮಗೆ ತಿಳಿಸುವ ಈ ಟಿಪ್ಸ್ ಓದಿದ್ರೆ ಖಂಡಿತ ನಿಮಗೆ ಆಶ್ಚರ್ಯವಾಗಬಹುದು. ಹೀಗೆಲ್ಲಾ ಹಣ ಸಂಪಾದಿಸಬಹುದೇ ಎಂದು ನೀವು ಖಂಡಿತ ಕಣ್ಣರಳಿಸಿ ಓದುತ್ತೀರಾ. ಯಾಕೆಂದ್ರೆ ನಾವು ಹೇಳುವ ಮಾರ್ಗವೂ ಕೂಡಾ ತುಂಬಾ ಸುಲಭವಾದ ದಾರಿಯಾಗಿದೆ ಹಣ ಮಾಡಲು. ಅವು ಯಾವುವು ಎಂದು ಇಲ್ಲಿದೆ ಓದಿ.

<strong>Most Read : ವಿಜ್ಞಾನ, ವಾಣಿಜ್ಯ, ಕಲೆ ಯಾವುದೇ ಪದವಿಯಾದ್ರೂ ಫ್ರೆಶರ್ಸ್ ಗೆ ಬೆಸ್ಟ್ ಜಾಬ್ ಯಾವುದು ಗೊತ್ತಾ?</strong>Most Read : ವಿಜ್ಞಾನ, ವಾಣಿಜ್ಯ, ಕಲೆ ಯಾವುದೇ ಪದವಿಯಾದ್ರೂ ಫ್ರೆಶರ್ಸ್ ಗೆ ಬೆಸ್ಟ್ ಜಾಬ್ ಯಾವುದು ಗೊತ್ತಾ?

1. ಕ್ರೆಡಿಟ್ ಕಾರ್ಡ್ ಪಾಯಿಂಟ್ಸ್

1. ಕ್ರೆಡಿಟ್ ಕಾರ್ಡ್ ಪಾಯಿಂಟ್ಸ್

ಇದೀಗ ಪ್ರತಿಯೊಂದು ಬ್ಯಾಂಕ್ ನೀವು ಬಳಸುವ ಕ್ರೆಡಿಟ್ ಕಾರ್ಡ್ ಮೇಲೆ ನಿಮಗೆ ಕೆಲವೊಂದು ಪಾಯಿಂಟ್ ಗಳನ್ನ ನೀಡಿತ್ತದೆ. ಈ ಪಾಯಿಂಟ್ ಗಳಿಂದ ನೀವು ಮತ್ತೊಮ್ಮೆ ಖರೀದಿಸುವಾಗ ನೀವು ಉಚಿತವಾಗಿ ಖರೀದಿಸಬಹುದು ಇಲ್ಲ, ರಿಯಾಯಿತಿ ದರದಲ್ಲಿ ವಸ್ತುಗಳನ್ನ ಖರೀದಿಸಬಹುದು. ಹಾಗಾಗಿ ಸ್ಮಾರ್ಟ್ ಆಗಿ ಕ್ರೆಡಿಟ್ ಕಾರ್ಡ್ ಬಳಸಿ ಸರಿಯಾದ ಸಮಯಕ್ಕೆ ಬಿಲ್ ಪಾವತಿಸಿ, ಪಾಯಿಂಟ್ ಗಳಿಸಿ.

2. ಶಾಪಿಂಗ್ ನಲ್ಲೂ ಲಾಭ ಗಳಿಸಿ

2. ಶಾಪಿಂಗ್ ನಲ್ಲೂ ಲಾಭ ಗಳಿಸಿ

ಅದೆಷ್ಟೋ ವೆಬ್‌ಸೈಟ್ ಗಳು ನಿಮಗೆ ಶಾಪಿಂಗ್ ವೇಳೆ ಗಿಫ್ಟ್ ವಾಚರ್ ಹಾಗೂ ರಿಯಾಯಿತಿಗಳನ್ನ ನೀಡುತ್ತದೆ. ಅದಕ್ಕಾಗಿ ಸ್ಪೇಶಲ್ ಆಗಿ ನೀವೇನು ಮಾಡಬೇಕೆಂದಿಲ್ಲ, ಸಿಂಪಲ್ ಆಗಿ ವೆಬ್‌ಸೈಟ್ ಗೆ ಲಾಗಿನ್ ಆಗಿ, ಉಚಿತ ಗಿಫ್ಟ್ ವಾಚರ್ ಜತೆ ರಿಯಾಯಿತಿ ದರದಲ್ಲಿ ಶಾಪಿಂಗ್ ಮಾಡಿ.

3. ಬಡ್ಡಿ ಹಣ
 

3. ಬಡ್ಡಿ ಹಣ

ಇತರ ಬ್ಯಾಂಕ್ ಗಳಿಗಿಂತ ಕೆಲವು ಬ್ಯಾಂಕ್ ಗಳು ಹೆಚ್ಚಿನ ಬಡ್ಡಿ ನೀಡುತ್ತದೆ. ನಿಮ್ಮ ಉಳಿತಾಯ ಖಾತೆಯಲ್ಲಿ ಹಣ ಇದ್ದರೆ, ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತೋ ಆ ಬ್ಯಾಂಕಿನಲ್ಲಿ ಹೊಸದೊಂದು ಖಾತೆ ತೆರೆಯಿರಿ. ಇದರಿಂದ ನಿಮ್ಮ ಹಣ ಉಳಿತಾಯದ ಜತೆ ಬಡ್ಡಿಯೂ ಸಿಗುತ್ತದೆ ಹಾಗೂ ಹೆಚ್ಚು ಹಣ ಕೂಡಾ ಗಳಿಸಬಹುದು.

4. ಬ್ರೌಸಿಂಗ್ ನಿಂದ ಹಣ ಗಳಿಸಿ

4. ಬ್ರೌಸಿಂಗ್ ನಿಂದ ಹಣ ಗಳಿಸಿ

ಹಣ ಗಳಿಸಲು ಇದು ಇತ್ತೀಚೆಗೆ ಪರಿಚಿತವಾದ ಹೊಸ ಉಪಾಯವಾಗಿದೆ. ಸುಮ್ಮನೆ ಫೇಸ್‌ಬುಕ್ ನಲ್ಲಿ ಕಾಲಕಳೆದು, ಸಮಯ ವ್ಯರ್ಥ ಮಾಡುವುದಕ್ಕಿಂತ, ಕೆಲವೊಂದು ವೆಬ್‌ಸೈಟ್ ಗಳನ್ನ ಗುರುತಿಸಿ, ಬ್ರೌಸಿಂಗ್ ಮಾಡಿ ಹಣ ಗಳಿಸಿ

5. ನಿಮ್ಮ ಪ್ರಾಪರ್ಟಿಯಿಂದ ಹಣ ಗಳಿಸಿ

5. ನಿಮ್ಮ ಪ್ರಾಪರ್ಟಿಯಿಂದ ಹಣ ಗಳಿಸಿ

ಹೌದು ನಿಮ್ಮ ಬಳಿ ಕಾರು, ಬೈಕು ಏನೇ ಇರಬಹುದು, ಅದನ್ನ ಹೆಚ್ಚಾಗಿ ಬಳಸುತ್ತಿಲ್ಲ ಎಂದಾದ್ರೆ ಅದನ್ನ ಸುಮ್ಮನೆ ಮನೆಯಲ್ಲಿ ಇಟ್ಟುಕೊಂಡು ಕೂರುವುದಕ್ಕಿಂತ ಅದರಿಂದಲೂ ಹಣ ಸಂಪಾದಿಸಬಹುದು. ನಿಮಗೆ ಅದರ ಬಳಕೆ ಇಲ್ಲದೇ ಇದ್ದಾಗ ಅದನ್ನ ಇತರರಿಗೆ ಬಾಡಿಗೆಗೆ ನೀಡಿ ಹಣ ಸಂಪಾದಿಸಿಕೊಳ್ಳಬಹುದು.

Most Read: ಸಚಿನ್, ಧೋನಿ ವಿರಾಟ್, ಮಿಥಾಲಿ ತರಹ ಕ್ರಿಕೆಟರ್ ಆಗೋ ಕನಸು ಕಾಣೋರಿಗೆ ಇಲ್ಲಿದೆ ಸಲಹೆ

 

6. ಗಿಡಗಳನ್ನ ಮಾರಾಟಮಾಡಿ

6. ಗಿಡಗಳನ್ನ ಮಾರಾಟಮಾಡಿ

ಹೌದು ನಿಮಗೆ ಹಳ್ಳಿಯಲ್ಲಿ ಎಕರೆ ಗಟ್ಟಲೆ ಜಾಗ ಇದೆ ಎಂದಾದ್ರೆ ನೀವು ಗಿಡಗಳನ್ನ ನೆಡುವ ಕೆಲಸ ಮಾಡಿ, ಬಳಿಕ ಅದನ್ನ ಸಿಟಿ ಗೆ ತಂದು ಮಾರಾಟ ಮಾಡಿ. ಇನ್ನು ಈ ಬಗ್ಗೆ ನೀವು ಆನ್‌ಲೈನ್ ನಲ್ಲೂ ಬ್ಯುಸಿನೆಸ್ ಪ್ರಾರಂಭಿಸಬಹುದು. ಇದರಿಂದ ನೀವು ಕೈ ತುಂಬಾ ಹಣ ಸಂಪಾದಿಸಬಹುದು ಕೂಡಾ.

7. ನಿಮ್ಮ ಕಾರನ್ನ ಜಾಹೀರಾತಿಗೆ ಬಳಸಿ

7. ನಿಮ್ಮ ಕಾರನ್ನ ಜಾಹೀರಾತಿಗೆ ಬಳಸಿ

ನಿಮ್ಮಬಳಿ ಕಾರು ಇದೆ ಎಂದಾದ್ರೆ ಅದಕ್ಕೆ ಬೆಳಕಿನ ವ್ಯವಸ್ಥೆ ಮಾಡಿ, ಕೆಲವೊಂದು ಜಾಹೀರಾತುಗಳನ್ನ ಪ್ರಕಟಿಸುವುದರ ಮೂಲಕ ಕೂಡಾ ನೀವು ಹಣ ಗಳಿಸಬಹುದು. ಇನ್ನು ಜಾಹೀರಾತು ನೀಡಲು ಅದೆಷ್ಟೋ ಕಂಪನಿಗಳು ಮುಂದೆ ಬರುತ್ತದೆ. ನೀವು ಈ ಮೂಲಕ ಆರಾಮವಾಗಿ ಸಂಪಾದನೆ ಮಾಡಬಹುದು.

8. ಹೊಸ ಪ್ರಾಪರ್ಟಿ

8. ಹೊಸ ಪ್ರಾಪರ್ಟಿ

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇದೆ ಎಂದಾದ್ರೆ ಅದನ್ನ ಅಲ್ಲೇ ಇಡುವುದಕ್ಕಿಂತ ಯಾವುದಾದ್ರೂ ಹೊಸ ಉದ್ಯಮಕ್ಕೆ ಬಂಡವಾಳ ಹೂಡಿ. ಇದರಿಂದ ಕೂಡಾ ನೀವು ಹೆಚ್ಚು ಹಣ ಸಂಪಾದಿಸಬಹುದು.

<strong>Most Read: ಹೊಸ ಬ್ಯುಸಿನೆಸ್ ಗೆ ಕೈ ಹಾಕುವ ಮುನ್ನ ಈ 4 ಅಂಶಗಳ ಬಗ್ಗೆ ಗಮನವಿರಲಿ!</strong>Most Read: ಹೊಸ ಬ್ಯುಸಿನೆಸ್ ಗೆ ಕೈ ಹಾಕುವ ಮುನ್ನ ಈ 4 ಅಂಶಗಳ ಬಗ್ಗೆ ಗಮನವಿರಲಿ!

For Quick Alerts
ALLOW NOTIFICATIONS  
For Daily Alerts

English summary
Are you thinking how to make money.you are employed or maybe job hunter but still you need to make money well. if yes, then we are here to help you to make money. here we giving some easiest ways for making money.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X