ನಮ್ಮ ದೇಶದಲ್ಲಿ ಹೆಚ್ಚಾಗಿ ದೇಹದ ಲಕ್ಷಣಗಳನ್ನ ಅವರ ಭವಿಷ್ಯ, ವರ್ತನೆ, ಅದೃಷ್ಟಕ್ಕೆ ಹೋಲಿಸುತ್ತಾರೆ. ಉದಾಹರಣೆ ದೇಹದ ಮೇಲೆ ಮಚ್ಚೆ ಇದ್ದರೆ ಅವರ ಭವಿಷ್ಯ ಹೇಗಿರುತ್ತೆ, ತುಟಿ ಹಾಗೂ ಕಣ್ಣಿನ ಶೇಪ್ ನಿಂದ ಅವರ ಭವಿಷ್ಯ ತಿಳಿಯುದು ಅಷ್ಟೇ ಅಲ್ಲ ಹುಟ್ಟಿದ ದಿನಾಂಕ ತಿಳಿದು ಮುಂದೆ ಇವರು ಹೇಗೆ ಜೀವನ ನಡೆಸಬಹುದು ಎನ್ನುವಂತಹ ವಿಚಾರಗಳಿಗೆ ಹೆಚ್ಚಿನ ಗಮನಕೊಡುತ್ತಾರೆ.

ಅಂತಹದೇ ಒಂದು ಮಾಹಿತಿ ಇವತ್ತು ನಿಮಗೆ ಕೆರಿಯರ್ ಇಂಡಿಯಾ ನೀಡುತ್ತಿದೆ. ಮುಂದಿನ ಹಲ್ಲಿನ ಮಧ್ಯೆ ಗ್ಯಾಪ್ ಇದ್ದರೆ ಅವರ ಕೆರಿಯರ್ ಲೈಫ್ ಹೇಗಿರುತ್ತೆ ಎಂದು ಇದೀಗ ಕೆರಿಯರ್ ಇಂಡಿಯಾ ನಿಮಗೆ ಮಾಹಿತಿ ನೀಡುತ್ತಿದೆ.
ಇನ್ನು ಮೆಡಿಕಲ್ ಟರ್ಮ್ ಪ್ರಕಾರ ಹಲ್ಲಿನ ಮಧ್ಯೆ ಗ್ಯಾಪ್ ಇರೋದನ್ನ ಡೈಸ್ಟೇಮಾ ಎಂದು ಕರೆಯುತ್ತಾರೆ. ಇದು ಸಾಮಾನ್ಯ ಲಕ್ಷಣವಾಗಿದೆ. ಹಲ್ಲಿನ ಮಧ್ಯೆ ಹೆಚ್ಚು ಜಾಗವುಂಟಾದಾಗ ಈ ರೀತಿಯ ಗ್ಯಾಪ್ ಸೃಷ್ಟಿಯಾಗುತ್ತದೆಯಂತೆ. ಆದ್ರೆ ನಮ್ಮ ಜನರು ಈ ರೀತಿ ಹಲ್ಲುಗಳಿದ್ರೆ ಅದು ತುಂಬಾನೇ ಲಕ್ಕಿ ಅಂತ ಹೇಳುತ್ತಾರೆ. ಅವರ ವೈವಾಹಿಕ ಜೀವನ ಮಾತ್ರವಲ್ಲದೇ ಕೆರಿಯರ್ ಜೀವನವೂ ಸುಂದರವಾಗಿರುತ್ತದೆ ಅಂತಾರೆ.
ಆದ್ರೆ ಯಾರೂ ಕೂಡಾ ಹೆಚ್ಚಿನ ಮಂದಿ ಈ ಹಲ್ಲಿನ ಗ್ಯಾಪ್ ಇಷ್ಟಪಡುವುದಿಲ್ಲ. ಅದಕ್ಕಾಗಿ ಅವರು ಹೆಚ್ಚಿನ ಹಣ ವ್ಯಯಿಸಿ ಸರ್ಜರಿ ಮಾಡಿಕೊಳ್ಳುತ್ತಾರೆ. ಇನ್ನೂ ನಮ್ಮ ದೇಶದ ಜ್ಯೋತಿಷಿಗಳು, ಶಾಸ್ತ್ರಹೇಳುವವರು, ಅಂಗೈಶಾಸ್ತ್ರ ನೋಡುವವರು ಈ ತರಹ ಹಲ್ಲುಗಳಿದ್ದರೆ ಅದು ಲಕ್ಕಿ ಎನ್ನುತ್ತಾರೆ. ಹಾಗೂ ಈ ನಂಬಿಕೆ ಬರೀ ನಮ್ಮ ದೇಶದಲ್ಲಿ ಮಾತ್ರವಲ್ಲ ಬದಲಿಗೆ ಹೊರದೇಶದಲ್ಲೂ ನೀವು ಕಾಣಬಹುದು.
ಈ ರೀತಿ ಹಲ್ಲುಗಳಿದ್ರೆ ಯಾಕೆ ಲಕ್ಕಿ ಎಂದು ನಾವು ನಿಮಗೆ ಮಾಹಿತಿ ನೀಡುತ್ತೇವೆ ಮುಂದಕ್ಕೆ ಓದಿ:
ಇಂಟಲಿಜೆಂಟ್:
ಈ ರೀತಿ ಹಲ್ಲುಗಳಿದ್ದವರು ಹೆಚ್ಚು ಇಂಟಲಿಜೆಂಟ್ ಆಗಿರುತ್ತಾರೆ ಮಾತ್ರವಲ್ಲದೇ ಅವರು, ಕ್ರಿಯೇಟಿವ್ ಕೌಶಲ್ಯ ಕೂಡಾ ಹೊಂದಿರುತ್ತಾರೆ ಎನ್ನೋ ಮಾತಿದೆ.
ಕಾಂಫಿಡೆಂಟ್:
ಇತರರಿಗೆ ಹೋಲಿಸಿದ್ದಲ್ಲಿ ಈ ರೀತಿ ಹಲ್ಲುಗಳಿರುವವಲ್ಲಿ ಹೆಚ್ಚಿನ ಕಾಂಫಿಡೆಂನ್ಸ್ ನೀವು ನೋಡಬಹುದು. ಅಷ್ಟೇ ಅಲ್ಲ ಇವರು ಹೆಚ್ಚಿನ ಧೈರ್ಯವಂತರೂ ಹಾಗೂ ಯಾವುದೇ ಇಂಟರ್ವ್ಯೂ ಇದ್ದರೂ ಓಕೆ ಇವರಿ ಕಾಂಫಿಡೆಂಟ್ ಆಗಿ ಎದುರಿಸುತ್ತಾರೆ.
ಕೆರಿಯರ್:
ಈ ರೀತಿ ಹಲ್ಲಿನ ಮಧ್ಯೆ ಗ್ಯಾಪ್ ಇದ್ದವರ ಕೆರಿಯರ್ ಲೈಫ್ ನಿಜಕ್ಕೂ ಚೆನ್ನಾಗಿ ಸಾಗುತ್ತದೆ. ಇವರು ಸಕ್ಸಸ್ ಫುಲ್ ಆಗಿ ಆಫೀಸ್ ನಡೆಸಿಕೊಂಡು ಹೋಗುತ್ತಾರೆ. ಇವರು ಕೈ ಹಾಕುವ ಉದ್ಯಮವು ಕೂಡಾ ಸಕ್ಸಸ್ ಫುಲ್ ಹೊರಹೊಮ್ಮುತ್ತದೆ ಅನ್ನೋ ಮಾತಿದೆ.
ಹಣಕಾಸು ವಿಚಾರದಲ್ಲಿ ಶಾರ್ಪ್ :
ಹಣಕಾಸು ನಿರ್ವಹಣೆಯನ್ನ ಇವರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇವರು ಚೆನ್ನಾಗಿ ಹಣ ಉಳಿತಾಯ ಮಾಡಿಕೊಳ್ಳುವವರಾಗಿರುತ್ತಾರೆ. ಅಷ್ಟೇ ಅಲ್ಲ ಹಣ ಪೋಲಾಗುವುದನ್ನ ಕೂಡಾ ನಾಜೂಕಾಗಿಯೇ ಕಂಟ್ರೋಲ್ ಮಾಡುತ್ತಾರೆ


Click it and Unblock the Notifications











