ಕಾಮರ್ಸ್ ಕೋರ್ಸ್ ಆಯ್ಕೆಯಿಂದ ಬೇಗ ಕೆಲಸ ಪಡೆಯಬಹುದು

Posted By:

ಯಾವ ಕೋರ್ಸ್ ಮಾಡಿದರೆ ಕೆಲಸ ಬೇಗ ಸಿಗುತ್ತದೆ, ಯಾವ ಕೋರ್ಸಿಗೆ ಹೆಚ್ಚಿನ ಬೇಡಿಕೆ ಇದೆ. ಎಂದು ಲೆಕ್ಕ ಹಾಕುವ ಇಂದಿನ ದಿನಗಳಲ್ಲಿ ವಿದ್ಯೆಗಿಂತ ಕೆಲಸದ ಅನಿವಾರ್ಯತೆಯೇ ಹೆಚ್ಚಿದೆ.

ಕೆಲಸದ ಬಗ್ಗೆ ಗಮನ ನೀಡುವವರಿಗೆ ಬ್ಯಾಂಕಿಂಗ್ ಕ್ಷೇತ್ರ ವಿಸ್ತಾರವಾಗಿದೆ. ಪ್ರತಿ ವರ್ಷ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾವಿರಾರು ನೇಮಕಾತಿಗಳು ನಡೆಯುತ್ತಲೇ ಇರುತ್ತವೆ. ಇದರ ಜೊತೆಗೆ ಸರ್ಕಾರಿ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕ್ ಗಳಲ್ಲಿ ಸಾಕಷ್ಟು ಅವಕಾಶಗಳಿವೆ.

ಭವಿಷ್ಯದಲ್ಲಿ ಬ್ಯಾಂಕ್ ನೌಕರಿ ಸೇರ ಬಯಸುವವರು ಪಿಯುಸಿಯಲ್ಲಿ ವಾಣಿಜ್ಯ ವಿಷಯನ್ನು ಮತ್ತು ಪದವಿಯಲ್ಲಿ ವಾಣಿಜ್ಯ ವಿಷಯವನ್ನು ತೆಗೆದುಕೊಂಡು ಮುಂದುವರೆಯುವುದು ಉತ್ತಮ. ಪದವಿ ಮುಗಿಯುದ ನಂತರ ಬ್ಯಾಂಕ್ ಪರೀಕ್ಷೆ ತೆಗೆದುಕೊಳ್ಳಲು ಅರ್ಹ ರಾಗಿರುತ್ತಾರೆ. ಬೇರೆ ಕೆಲಸಗಳಲ್ಲಿ ಸಿಲುಕಿ ಓದದೇ ಒದ್ದಾಡುವ ಬದಲು ಪದವಿ ಮುಗಿದ ನಂತರ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೆಲ ಕಾಲ ಸಿದ್ದತೆ ನಡೆಸಿ ಬ್ಯಾಂಕ್ ಪರೀಕ್ಷೆ ಪೂರೈಸಿದರೆ ನೀವು ಗೆದ್ದಂತೆ.

ಕಾಮರ್ಸ್ ಕೋರ್ಸ್ ಗೆ ಹೆಚ್ಚಿನ ಬೇಡಿಕೆ

ತೆರಿಗೆಗೆ, ವ್ಯವಹಾರಕ್ಕೆ, ಬ್ಯಾಂಕಿಂಗ್, ಹೂಡಿಕೆ ಹಾಗೂ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಹಾಗೂ ಬಹು ವಿಧದ ಮ್ಯಾನೇಜ್​ವೆುಂಟ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶವಿದೆ. ಹಾಗಾಗಿ ವಾಣಿಜ್ಯದ ಕೋರ್ಸ್ ಬಹು ಬೇಡಿಕೆಯ ಕೋರ್ಸ್ ಆಗಿದೆ. ಅವಕಾಶದ ರೀತಿಯೇ ಕೈತುಂಬ ಸಂಬಳವು ಸಿಗುತ್ತದೆ.

ಇಂದು ಬ್ಯಾಂಕಿಂಗ್ ಕ್ಷೇತ್ರ ಹೇಗೆಲ್ಲ ತನ್ನ ವ್ಯಾಪ್ತಿಯನ್ನು ಬೆಳಸಿಕೊಂಡಿದೆ ಎಂದರೆ ಇಂಜಿನಿಯರಿಂಗ್ ಪದವಿ ಮುಗಿಸಿದ ಅಭ್ಯರ್ಥಿಗಳು ಕೂಡ ಬ್ಯಾಂಕಿಂಗ್ ಕಡೆಗೆ ವಾಲುತ್ತಿದ್ದಾರೆ. ಚಿಕ್ಕ ವಯಸ್ಸಿಗೆ ನೌಕರಿ ಬೇಕು ಅನ್ನುವವರು ಮತ್ತು ಹೆಣ್ಣು ಮಕ್ಕಳಿಗೆ ಸೂಕ್ತವಾದ ಕ್ಷೇತ್ರವಾಗಿ ಬ್ಯಾಂಕಿಂಗ್ ಗುರುತಿಸಿಕೊಂಡಿದೆ.

ಪಾಲಕರು ತಮ್ಮ ಪ್ರತಿಷ್ಠೆಗಾಗಿ ಒತ್ತಡ ಹೇರದೆ ತಮ್ಮ ಮಕ್ಕಳು ಇದುವರೆಗೆ ಓದಿನಲ್ಲಿ ತೋರಿದ ಆಸ್ಥೆ ಹಾಗೂ ಸಾಧನೆಗಳನ್ನು ಗಮನಿಸಿ ಅದಕ್ಕೆ ಪೂರಕವಾದ ಉನ್ನತ ವಿದ್ಯಾಭ್ಯಾಸ ಕೈಗೊಳ್ಳಲು ಮಾರ್ಗದರ್ಶನ ಮಾಡಬೇಕು.

ಓದಿನ ವಿಚಾರದಲ್ಲಿ ಸಾಕಷ್ಟು ತಲೆಕಡಿಸಿಕೊಂಡ ತಂದೆ ತಾಯಿಗಳು ತಮ್ಮ ಮಕ್ಕಳ ಮನಸ್ಸಿನಲ್ಲಿ ಏನಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳದೇ ಅವರಿಗೆ ಇಷ್ಟವಿಲ್ಲದ ಕೋರ್ಸುಗಳಿಗೆ ಸೇರಿಸಿ ಮುಂದೆ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಇಷ್ಟವಿಲ್ಲದ ಕೋರ್ಸಿಗೆ ಸೇರಿದ ವಿದ್ಯಾರ್ಥಿಗಳು ಮುಂದೆ ಅವರ ಭವಿಷ್ಯವನ್ನು ಸರಿಯಾಗಿ ಕಟ್ಟಿಕೊಳ್ಳದೇ ದಾರಿ ತಪ್ಪುವುದೇ ಹೆಚ್ಚು. ಹಾಗಾಗಿ ಮಕ್ಕಳ ಮನಸ್ಸಿನಲ್ಲಿ ಏನಿದೆ, ಏನಿಲ್ಲ ಎಂಬುದನ್ನು ಅರಿತು ಶಿಕ್ಷಣ ನೀಡುವುದು ಉತ್ತಮ.

English summary
In recent years, commerce has become one stream that has become popular among students.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia