ಕಾಲೇಜು ಕ್ಯಾಂಪಸ್ ತುಂಬಾ ಹಾರಾಡೋ ರಾಣಿ ಜೇನುಗಳಿಗೆ ಬ್ಯೂಟಿ ಸಲಹೆ!

ಕಾಲೇಜು ಮೆಟ್ಟಿಲು ಹತ್ತಲಿರುವ ಹುಡುಗಿಯರಿಗೆ ಕೆರಿಯರ್ ಇಂಡಿಯಾ ಬ್ಯೂಟಿ ಸಲಹೆ ನೀಡುತ್ತಿದೆ. ಈ ಟಿಪ್ಸ್ ಬಳಸಿ ಕಾಲೇಜಿನ ಸೆಂಟರ್ ಆಫ್ ಅಟ್ರಾಕ್ಷನ್ ನೀವಾಗಿ.

ಕಾಲೇಜು ಮೆಟ್ಟಿಲು ಹತ್ತಲು ತಯಾರಾಗಿದ್ದೀರಾ.. ಹೌದು ಈ ಕಾಲೇಜು ದಿನಗಳಲ್ಲಿ ನೀವು ಅಮೇಜಿಂಗ್ ಟೈಂ ಕಳೆಯುತ್ತೀರಿ. ಅದಕ್ಕೆ ಕಾರಣ ಕಾಲೇಜು ಜೀವನದಲ್ಲಿ ನೀವು ವಿವಿಧ ಶೇಡ್ ನ ಜೀವನವನ್ನ ಅನುಭವಿಸುತ್ತೀರಿ. ಪ್ರತೀ ದಿನವೂ ಜಗತ್ತನ್ನ ಅರ್ಥ ಮಾಡಿಕೊಳ್ಳಲು ನಿಮಗೆ ಅವಕಾಶ ಸಿಗುವುದು.

ಕಾಲೇಜು ಕ್ಯಾಂಪಸ್ ತುಂಬಾ ಹಾರಾಡೋ ರಾಣಿ ಜೇನುಗಳಿಗೆ ಬ್ಯೂಟಿ ಸಲಹೆ!

ಕಾಲೇಜು ಮೆಟ್ಟಿಲು ಹತ್ತಲಿರುವ ಹುಡುಗಿಯರಿಗೆ ಕೆರಿಯರ್ ಇಂಡಿಯಾ ಬ್ಯೂಟಿ ಸಲಹೆ ನೀಡುತ್ತಿದೆ. ಈ ಟಿಪ್ಸ್ ಬಳಸಿ ಕಾಲೇಜಿನ ಸೆಂಟರ್ ಆಫ್ ಅಟ್ರಾಕ್ಷನ್ ನೀವಾಗಿ.

ಕಲೆ ರಹಿತ ತ್ವಜೆ:

ನಮ್ಮ ಬಗ್ಗೆ ನಾವು ಮಾತನಾಡುವುದಕ್ಕಿಂತ ಮೊದಲೇ ನಮ್ಮ ಮುಖ ಮಾತನಾಡುತ್ತದೆ. ಹಾಗಾಗಿ ಯಾವಾಗಲೂ ರೋಸ್ ವಾಟರ್ ಜತೆಗಿರಿಸಿ. ಮುಖಕ್ಕೆ ಆಗಾಗ ಸಿಂಪಡಿಸುತ್ತಾ ಇರಿ. ಇದರಿಂದ ನಿಮ್ಮ ತ್ವಜೆ ಫ್ರೆಶ್ ನೆಸ್ ಆಗಿರುತ್ತದೆ. ಪ್ರತೀ ದಿನ ರೋಸ್ ವಾಟರ್ ಮುಖಕ್ಕೆ ಸಿಂಪಡಿಸುವುದರಿಂದ ನಿಮ್ಮ ತ್ವಜೆ ತಾಜಾತನದಿಂದ ಕೂಡಿರುತ್ತದೆ.

ಡ್ರೆಸ್ ಸ್ಟೈಲೀಶ್:

ಟ್ರೆಂಡಿಂಗ್ ಉಡುಗೆ ಧರಿಸುವುದು ಮಾತ್ರ ಸ್ಟೈಲೀಶ್ ಅಲ್ಲ. ಸ್ಟೈಲೀಶ್ ಅಂದ್ರೆ ನಿಮಗೆ ಸ್ಯೂಟ್ ಆಗುವ ಉಡುಗೆ ಧರಿಸುವುದಾಗಿದೆ. ಕಾಲೇಜಿಗೆ ಹೊರಡೋ ಮುನ್ನ ಕಡಿಮೆ ಅಂದ್ರೂ ಎರಡು ಉಡುಗೆ ಟ್ರೈ ಮಾಡಿ ನೋಡಿ. ನಿಮ್ಮ ಸ್ಟೈಲ್ ಗೆ ಸಂಬಂಧಪಟ್ಟಂತೆ ಟ್ರೆಂಡಿಂಗ್ ಕಲರ್ ಉಡುಗೆ ಧರಿಸಿ. ಇದು ನಿಮ್ಮನ್ನ ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಫ್ಯಾಶನೇಬಲ್ ಬ್ಯಾಗ್:

ಬ್ಯಾಗ್ ಇಲ್ಲದೇ ಕಾಲೇಜಿಗೆ ಹೋಗುವುದು ಕೂಲ್ ಸಂಗತಿ ಅಲ್ಲ. ಟ್ರೆಂಡಿ ಹಾಗೂ ಸುಲಭವಾಗಿ ಹಿಡಿದಿಟ್ಟುಕೊಳ್ಳಬಲ್ಲ ಬ್ಯಾಗ್ ಖರೀದಿಸಿ. ಆ ಬ್ಯಾಗ್ ನಲ್ಲಿ ನೀವು ಎಲ್ಲವನ್ನು ಕೂಡಾ ತುಂಬಿಸಿಟ್ಟುಕೊಳ್ಳಬಹುದು. ನಿಮ್ಮ ಬುಕ್ಸ್ ಬ್ಯಾಗ್ ನಲ್ಲಿ ಇರಿಸುವುದು ಮಾತ್ರವಲ್ಲದೆ ಆ ಬ್ಯಾಗ್ ನಿಂದ ನಿಮ್ಮ ಲುಕ್ ಕೂಡಾ ಹೆಚ್ಚಾಗುತ್ತದೆ.

ಪಾರ್ಟಿ ರೆಡಿಯಾಗಿರಿ:

ಪಾರ್ಟಿ ರೆಡಿಯಾಗಿರಿ ಅಂದ್ರೆ ಯಾವುದಾದ್ರೂ ಪಾರ್ಟಿಗೆ ಹೋಗಿ ಎಂದರ್ಥವಲ್ಲ. ಬದಲಿಗೆ ಪಾರ್ಟಿಗೆ ಹೋಗೋ ತರಹ ರೆಡಿಯಾಗಲು ಬೇಕಾಗುವ ಎಲ್ಲಾ ವಸ್ತುಗಳನ್ನ ರೆಡಿಮಾಡಿಟ್ಟುಕೊಳ್ಳಿ ಎಂದರ್ಥ. ಉದಾಹರಣೆಗೆ ಲಿಪ್ ಸ್ಟಿಕ್, ಲಿಪ್ ಗ್ಲೋಸ್, ಐ ಲೈನರ್, ಬ್ಲಶರ್, ಪೌಡರ್ ಯಾವಾಗಲೂ ನಿಮ್ಮ ಬ್ಯಾಗ್‌ನಲ್ಲಿ ಇರಬೇಕು. ಜತೆಗೆ ನೀವು ಉದ್ದ ಕೂದಲಿನ ಸುಂದರಿಯಾಗಿದ್ದರೆ, ಬಾಚಣಿಗೆ, ಹೇರ್ ಬ್ಯಾಂಡ್, ಕ್ಲಚರ್ ಜತೆಗೆ ಇರಿಸಿಕೊಂಡಿರಿ

ಮ್ಯಾಚಿಂಗ್ ಚಪ್ಪಲು:

ಚಪ್ಪಲ್ ಹಾಗೂ ಶೂವಿನ ಕಲೆಕ್ಷನ್ ಮಾಡಿಟ್ಟುಕೊಂಡಿರಿ. ಸ್ಪೋರ್ಟ್ಸ್ ಶೂ, ಸ್ನೀಕರ್ಸ್ ಸೇರಿದಂತೆ ವಿವಿಧ ಬಗೆಯ ಶೂ ಗಳನ್ನ ಧರಿಸಿ. ಡ್ರೆಸ್ ಗೆ ತಕ್ಕಂತೆ ಹೈ ಹೀಲ್ಡ್ ನಿಂದ ಹಿಡಿದು ಪ್ಲ್ಯಾಟ್ ಆಗಿರುವ ಸ್ಯಾಂಡಲ್ಸ್ ಬಳಸಿ.

ನಿಮ್ಮ ನೆಚ್ಚಿನ ಕಲರ್ ಉಡುಗೆ ಧರಿಸಿ:

ಪ್ರತಿಯೊಬ್ಬರಿಗೂ ಅವರದ್ದೇ ಆದ ಫೇವರೆಟ್ ಕಲರ್ ಎಂಬುವುದು ಇರುತ್ತದೆ. ನಿಮ್ಮ ಫೇವರೆಟ್ ಕಲರ್ ಉಡುಗೆಯನ್ನ ಸ್ಟೈಲೀಶ್ ಆಗಿ ಧರಿಸಿ. ಜತೆಗೆ ನೇಲ್ ಪಾಲೀಶ್, ಚಪ್ಪಲ್ ಕೂಡಾ ಮ್ಯಾಚ್ ಆಗುವಂತೆ ಧರಿಸಿ. ಹೀಗೆ ಧರಿಸುವದರಿಂದ ನೀವು ಕೂಲ್ ಹಾಗೂ ಫಂಕಿಯಾಗಿ ಕಾಣಿಸಿಕೊಳ್ಳುತ್ತೀರಿ. ಅಷ್ಟೇ ಅಲ್ಲ ಕ್ಯಾಂಪಸ್ ನಲ್ಲಿ ಎಲ್ಲರ ಗಮನ ಕೂಡಾ ಸೆಳೆಯುತ್ತೀರಿ.

ಟ್ರೆಂಡಿಯಾಗಿ ಹೇರ್ ಕಟ್ ಮಾಡಿ:

ಕಾಲೇಜು ಮೆಟ್ಟಿಲು ಹತ್ತುವ ಮುನ್ನ ನೀವು ಟ್ರೆಂಡಿಯಾಗಿ ಹೇರ್ ಸ್ಟೈಲ್ ಮಾಡಿಕೊಳ್ಳಿ. ಒಮ್ಮೆ ಕರ್ಲಿ ಹೇರ್ ಮಾಡಿಕೊಳ್ಳಿ ಮತ್ತು ಸ್ಟ್ರೈಟ್ ನಿಂಗ್ ಮಾಡಿಕೊಳ್ಳಿ. ಬೇಕಾದ್ರೂ ಕೂದಲಿಗೆ ಬಣ್ಣ ಕೂಡಾ ಹಾಕಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
Are you getting ready to step in the college life, yes then you are going to enjoy the most amazing time. this is because college is one place where you get to know different shades life.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X