ಕಾಲೇಜಿ ಶಿಕ್ಷಣ ಮುಗಿಸಿ, ಕಾಲೇಜು ಲೈಫ್ ನಿಂದ ಒಮ್ಮೆ ಹೊರಬಂದಾಗ ವಿಚಿತ್ರ ಭಾವನೆ ಉಂಟಾಗಬಹುದು. ಕಾಲೇಜು ನಂತರದ ಜೀವನದ ತುಂಬಾ ಕಷ್ಟಕರ ಎನಿಸಬಹುದು. ಕಾಲೇಜಿನಲ್ಲಿ ಯಾವುದೇ ಚಿಂತೆಯಿಲ್ಲದೇ ಹಕ್ಕಿ ತರಹ ಹಾರಾಡುತ್ತಾ ಇದ್ದ ನಮಗೆ ಕಾಲೇಜಿನಿಂದ ಒಮ್ಮೆ ಕಾಲು ಹೊರಗೆ ಇಟ್ಟ ಕೂಡಲೇ ಜೀವನ ಅಂದ್ರೆ ಏನು ಎಂದು ತಿಳಿಯಲು ಪ್ರಾರಂಭವಾಗುತ್ತದೆ.

ಕಾಲೇಜು ಜೀವನದ ಪ್ರಾರಂಭದಲ್ಲಿ ಎಷ್ಟು ಖುಷಿ ಖುಷಿಯಾಗಿ ಇರುತ್ತೀರೋ ಅದೇ ರೀತಿ ಕಾಲೇಜು ಶಿಕ್ಷಣದ ಕೊನೆಯ ಹಂತದಲ್ಲಿ ಏನೋ ಕಳೆದುಕೊಳ್ಳುತ್ತೇವೆ ಅನ್ನೋ ಫೀಲಿಂಗ್ ಪ್ರಾರಂಭವಾಗುತ್ತದೆ. ಅದಕ್ಕೆ ಹೇಳುವುದು ಕಾಲೇಜು ಲೈಫ್ ಈಸ್ ಗೋಲ್ಡನ್ ಲೈಫ್. ಕಾಲೇಜಿನಿಂದ ಹೊರಗೆ ಬಂದೊಡನೆ ಕೆಲಸದ ಹುಡುಕಾಟ ಪ್ರಾರಂಭವಾಗುತ್ತದೆ.
ನೀವು ಯಾವ ಫೀಲ್ಡ್ ಎಂಬುವುದು ಮುಖ್ಯವಲ್ಲ. ಬದಲಿಗೆ ಕಾಲೇಜು ಶಿಕ್ಷಣ ಮುಗಿದೊಡನೆ ಎಷ್ಟು ಬೇಗ ಕೆಲಸಗಿಟ್ಟಿಸಿಕೊಳ್ಳುತ್ತೀರಾ ಎಂಬುವುದು ಮುಖ್ಯ. ಈ ಬಾರಿ ವಿಜ್ಞಾನ, ಕಲೆ, ವಾಣಿಜ್ಯ ಕ್ಷೇತ್ರದಲ್ಲಿ ಅಧ್ಯಯನ ಮಾಡಿದವರು ಕಾಲೇಜು ಶಿಕ್ಷಣ ಮುಗಿದೊಡನೆ ಯಾವ ಕ್ಷೇತ್ರದಲ್ಲಿ ಜಾಬ್ ನಿಮ್ಮದಾಗಿಸಿಕೊಳ್ಳಬಹುದು ಎಂಬ ಸಲಹೆ ಇದೀಗ ನಿಮಗೆ ನೀಡಲಾಗುತ್ತದೆ. ಮುಂದಕ್ಕೆ ಓದಿ.
ವಿಜ್ಞಾನ ವಿಭಾಗ: ರಿಸರ್ಚ್ ಟ್ರೈನೀ
ರಿಸರ್ಚ್ ಫೀಲ್ಡ್ ಗೆ ಸಂಬಂಧಪಟ್ಟಂತೆ ನೀವು ವಿಜ್ಞಾನ ವಿಭಾಗದಲ್ಲಿ ಯಾವುದೇ ಸಬ್‌ಜೆಕ್ಟ್ ಮೇಲೆ ಪದವಿ ಗಳಿಸಿದ್ದರೂ, ನಿಮಗೆ ರಿಸರ್ಚ್ ಟ್ರೈನೀ ಹುದ್ದೆಯಿಂದ ಕೆರಿಯರ್ ಪ್ರಾರಂಭಿಸಿಬಹುದು. ಅಗ್ರಿಕಲ್ಚರ್, ಬಯಾಲಾಜಿಕಲ್ ಉತ್ಪನ್ನಕ್ಕೆ ಸಂಬಂಧಪಟ್ಟಂತಹ ಇಂಡಸ್ಟ್ರಿಗಳಲ್ಲಿ ನೀವು ಕೆರಿಯರ್ ರೂಪಿಸಿಕೊಳ್ಳಬಹುದು.
ಡಯಾಟಿಶನ್ ಮತ್ತು ನ್ಯೂಟ್ರಿಶನಿಸ್ಟ್:
ಬಿಎಸ್ಸಿ ಯಲ್ಲಿ ಹೋಮ್ ಸೈನ್ಸ್ ಸಬ್‌ಜೆಕ್ಟ್ ನಲ್ಲಿ ನೀವು ಪದವಿ ಗಳಿಸಿದ್ದರೆ, ಡಯಾಟಿಶನ್ ಮತ್ತು ನ್ಯೂಟ್ರಿಶನಿಸ್ಟ್ ಫೀಲ್ಡ್ ನಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು. ಫ್ರೆಶರ್ಸ್ ಆಗಿ ವೃತ್ತಿ ಆರಂಭಿಸಬಹುದು. ಹಾಸ್ಪಿಟಲ್ ಅಥವಾ ಇನ್ನಿತ್ತರ ಸಂಸ್ಥೆಗಳಲ್ಲಿ ಹುದ್ದೆಗೆ ಸಂಬಂಧಪಟ್ಟಂತೆ 10,000 ರೂ ದಿಂದ 40,000 ರೂ ವರೆಗೆ ಸಂಪಾದನೆ ಮಾಡಬಹುದು.
ವಾಣಿಜ್ಯ ವಿಭಾಗ: ಅಕೌಂಟೆಂಸಿ
ಸಣ್ಣ ಅಥವಾ ದೊಡ್ಡ ಉದ್ಯಮವೇ ಇರಲಿ, ಚಾರ್ಟೆಡ್ ಅಕೌಂಟೆಂಸಿ ಎಂಬುವುದು ಚ್ಯಾಲೇಂಜಿಂಗ್ ಜಾಬ್ ಆಗಿದೆ. ವಾಣಿಜ್ಯ ವಿಭಾಗದಲ್ಲಿ ಸ್ಟಡಿ ಮಾಡಿದ ವಿದ್ಯಾರ್ಥಿಗಳಿಗೆ ಬಹಳ ಕೆರಿಯರ್ ಆಯ್ಕೆಗಳಿರುತ್ತದೆ. ಅಕೌಂಟೆಂಟ್ ಆಗಬೇಕೆಂದಿದ್ದರೆ ಬಿಕಾಂ ಪದವಿಯಾದ್ರೂ ಕಂಪ್ಲೀಟ್ ಮಾಡಿರಬೇಕು.
ಟ್ಯಾಕ್ಸೇಶನ್
ಬಿಕಾಂ ಡಿಗ್ರಿ ಒಂದಿದ್ದರೆ ಸಾಕು ಕೆರಿಯರ್ ಆಯ್ಕೆಗಳು ನಿಮ್ಮನ್ನ ಹುಡುಕಿಕೊಂಡು ಬರುತ್ತದೆ. ಆದ್ರೆ ಬರುವ ಎಲ್ಲಾ ಹುದ್ದೆಗಳಿಂದ ಚೆನ್ನಾಗಿ ಸಂಪಾದಿಸಬಹುದು ಎಂದು ಹೇಳಲು ಆಗುವುದಿಲ್ಲ. ಅದು ನೀವು ಆಯ್ಕೆ ಮಾಡುವ ಕಂಪನಿಗೆ ಸಂಬಂಧಪಟ್ಟಿರುತ್ತದೆ. ಹಾಗಾಗಿ ನೀವು ಸರಿಯಾದ ಕಂಪನಿಯನ್ನ ಆಯ್ಕೆ ಮಾಡಿಕೊಳ್ಳುವುದು ಬೆಸ್ಟ್.
ಆಡಿಟಿಂಗ್
ನೀವು ಆಡಿಟಿಂಗ್ ಕ್ಷೇತ್ರದಲ್ಲಿ ಕೆರಿಯರ್ ರೂಪಿಸಿಕೊಳ್ಳಬೇಕು ಎಂದು ಅಂದು ಕೊಂಡಿದ್ದರೆ, ಅಕೌಂಟಿಂಗ್, ಫೈನಾನ್ಸ್ ಮತ್ತು ಎಕಾನಾಮಿಕ್ಸ್ ಸಬ್‌ಜೆಕ್ಟ್ ನಲ್ಲಿ ನೀವು ಬಿಕಾಂ ಪದವಿ ಗಳಿಸಿರಬೇಕು. ದೊಡ್ಡ ಲೆಕ್ಕಪರಿಶೋಧಕ ಸಂಸ್ಥೆಗಳು ಮತ್ತು ಆಂತರಿಕ ಆಡಿಟ್ ಇಲಾಖೆಗಳಲ್ಲಿ ಈ ಮೇಲೆ ಹೇಳಿರುವ ಸಬ್‌ಜೆಕ್ಟ್ ನಲ್ಲಿ ಬಿಕಾಂ ಪದವಿ ಗಳಿಸಿದ್ದರೆ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳಬಹುದು.
ಕಲೆ: ಲೆಕ್ಚರ್ ಶಿಪ್
ಲೆಕ್ಚರ್ ಶಿಪ್ ಎಂದಾಗ ಪದವಿ ಗಿಂತ ಸ್ನಾತಕೋತ್ತರ ಪದವಿ ಗಳಿಸಿದವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಪದವಿ ಮಾಡಿ, ಬಿಎಡ್ ಕೋರ್ಸ್ ಮಾಡಿದ್ದಲ್ಲಿ, ನೀವು ಆರಾಮವಾಗಿ ಟೀಚಿಂಗ್ ವೃತ್ತಿ ಆರಂಭಿಸಬಹುದು. ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ನೀವು ನಿಮಗೆ ಹತೋಟಿ ಇರುವಂತಹ ಪ್ರಮುಖ ಸಬ್‌ಜೆಕ್ಟ್ ನ್ನ ಆಯ್ಕೆ ಮಾಡಿಕೊಂಡು ಟೀಚಿಂಗ್ ಪ್ರಾರಂಭಿಸಬಹುದು.
ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್
ಸಣ್ಣ ಅಥವಾ ದೊಡ್ಡ ಕಂಪನಿಗಳಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ಫೀಲ್ಡ್ ನಲ್ಲಿ ಯಾವುದೇ ಎಂಟ್ರಿ ಲೆವೆಲ್ ಹುದ್ದೆಗಳಿಗೆ ಪದವಿ ಗಳಿಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ನಿಮ್ಮ ಸ್ಪೇಶಲೈಸೇಶನ್ ಗೆ ತಕ್ಕಂತೆ ಯಾವ ಇಲಾಖೆ ಬೆಸ್ಟ್ ಎಂದು ನೀವು ಆಯ್ಕೆ ಮಾಡಿಕೊಂಡು, ಅರ್ಜಿ ಸಲ್ಲಿಸಬಹುದಾಗಿದೆ.
ಮಾಧ್ಯಮ: ಜರ್ನಲಿಸಂ
ನೀವು ಜರ್ನಲಿಸಂ ಸಬ್‌ಜೆಕ್ಟ್ ನಲ್ಲಿ ಪದವಿ ಗಳಿಸಿದ್ದರೆ, ನೀವು ಜರ್ನಲಿಸ್ಟ್ ಆಗಿ ಅಥವಾ ಕರೆಸ್ಪಂಡೆಂಟ್ ಆಗಿ ಕೆರಿಯರ್ ಪ್ರಾರಂಭಿಸಬಹುದು. ಹಲವಾರು ನ್ಯೂಸ್ ಪೇಪರ್ ಹಾಗೂ ನ್ಯೂಸ್ ಚ್ಯಾನೆಲ್ ಗಳಲ್ಲಿ ಹಲವಾರು ಹುದ್ದೆ ಅವಕಾಶಗಳು ಇದೀಗ ಇವೆ.
ಬರವಣಿಗೆ ಅಥವಾ ಕಂಟೆಂಟ್ ಎಡಿಟಿಂಗ್
ನೀವು ಜರ್ನಲಿಸಂ ಪದವಿ ಗಳಿಸಿದ್ರೆ ಹಾಗೂ ನಿಮ್ಮ ಬರವಣಿಗೆ ಕೌಶಲ್ಯ ಚೆನ್ನಾಗಿದ್ರೆ ನೀವು ಬರಹಗಾರರಾಗಿ ಅಥವಾ ನ್ಯೂಸ್ ಮೀಡಿಯಾಗಳ್ಲಲಿ ಕಂಟೆಂಟ್ ಎಡಿಟಿಂಗ್ ಆಗಿ ಕೆಲಸ ಪ್ರಾರಂಭಿಸಬಹುದು.


Click it and Unblock the Notifications











