ಕಾಲೇಜು ಮುಗಿದ ಕೂಡಲೇ ಫ್ರೆಶರ್ಸ್ ಗೆ ಯಾವ ಜಾಬ್ ಬೆಸ್ಟ್ !

By Kavya

ಕೆರಿಯರ್ ಲೈಫ್ ಸ್ಟಾರ್ಟ್ ಆಯಿತು ಅನ್ನೋ ಖುಷಿ ನಿಮಗೆ ಒಂದೆಡೆ ಇದ್ರೆ ಮತ್ತೊಂದೆಡೆ ಅಯ್ಯೋ ಕಾಲೇಜು ಲೈಫ್ ಮುಗಿಯಿತು ಅನ್ನೋ ಬೇಜಾರು ಮತ್ತೊಂದೆಡೆ.

ಕಾಲೇಜು ಮುಗಿದ ಕೂಡಲೇ ಫ್ರೆಶರ್ಸ್ ಗೆ ಯಾವ ಜಾಬ್ ಬೆಸ್ಟ್ !

 

ನಂಬ್ತೀರೋ ಬಿಡ್ತಿರೋ, ಯಾವಾಗಲೂ ಹ್ಯಾಪಿ, ಟೆನ್ಶನ್ ಫ್ರೀ ದಿನಗಳು ಕಾಲೇಜಿನ ಕೊನೆಯ ದಿನಕ್ಕೆ ಮುಕ್ತಾಯವಾಗಿ, ಬಳಿಕ ಉದ್ಯೋಗಕ್ಕಾಗಿ ಅಲೆಯುವ ಜಂಜಾಟದ ಜೀವನ ಪ್ರಾರಂಭವಾಗುತ್ತದೆ.

ನೀವು ಯಾವ ಫೀಲ್ಡ್‌ ಎಂಬುವುದು ಪ್ರಮುಖವಲ್ಲ ಬದಲಿಗೆ ಕಾಲೇಜ್ ಜೀವನ ಮುಗಿದ ಕೂಡಲೇ ಕೆಲಸ ಸಿಗಬೇಕು. ಉದ್ಯೋಗಕ್ಕೆ ಪ್ರಮುಖ ಸ್ಥಾನ. ಹಾಗಾಗಿ ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ನೀವು ಕಾಮರ್ಸ್, ಸೈನ್ಸ್ ಹಾಗೂ ಆರ್ಟಸ್ ಬ್ಯಾಕ್‌ಗ್ರೌಂಡ್ ನವರಾಗಿದ್ದರೆ ಯಾವ ಕ್ಷೇತ್ರದ ಮೂಲಕ ಕೆರಿಯರ್ ಲೈಫ್ ಪ್ರಾರಂಭಿಸಬಹುದು ಎಂದು.

ವಿಜ್ಞಾನ ವಿಭಾಗ:

ರಿಸರ್ಚ್ ಟ್ರೈನೀ:

ನೀವು ಯಾವುದೇ ಸಬ್‌ಜೆಕ್ಟನ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದರೆ, ಪದವಿ ರಿಸರ್ಚ್ ಟ್ರೈನೀ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಬಯೋಟೆಕ್ನಾಲಾಜಿ ಹಾಗೂ ಬಯೋ ಮೆಡಿಕಲ್ ಕೋರ್ಸ್ ಮಾಡಿರುವ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದೆ. ಇಂಡಸ್ಟ್ರೀ, ಅಗ್ರಿಕಲ್ಚರ್ ಮತ್ತು ಬಯಾಲಾಜಿಕಲ್ ಪ್ರೊಡಕ್ಟ್ಸ್ ಫೀಲ್ಡ್‌ನಲ್ಲಿ ನೀವು ಕೆರಿಯರ್ ರೂಪಿಸಿಕೊಳ್ಳಬಹುದು.

ಡಯಾಟಿಷನ್ ಅಥವಾ ನ್ಯೂಟ್ರಿಶನಿಸ್ಟ್:

ಹೋಮ್ ಸೈನ್ಸ್ ವಿಷಯದಲ್ಲಿ ಬಿಎಸ್ ಸಿ ಪದವಿ ಪಡೆದಿದ್ದರೆ ನೀವು ಡಯಾಟಿಷನ್ ಅಥವಾ ನ್ಯೂಟ್ರಿಶನಿಸ್ಟ್ ಆಗಿ ಕೆರಿಯರ್ ಪ್ರಾರಂಭಿಸಬಹುದು. ಈ ಫೀಲ್ಡ್‌ನಲ್ಲಿ ನೀವು ಫ್ರೆಶರ್ ಆಗಿ ರೂ ೧೦,೦೦೦ ಕ್ಕೆ ಕೆರಿಯರ್ ಪ್ರಾರಂಭಿಸಿದ್ರೆ ಕ್ರಮೇಣ ೪೦,೦೦೦ ರೂ ವರೆಗೆ ದುಡಿಯಬಹುದು.

ವಾಣಿಜ್ಯ ವಿಭಾಗ:

ಅಕೌಂಟೆಂಸಿ:

ಚಿಕ್ಕ ಉದ್ಯಮ ಇಲ್ಲ ದೊಡ್ಡ ಉದ್ಯಮ ಯಾವುದೇ ಇರಲಿ, ಆದ್ರೆ ಚಾರ್ಟಡ್ ಅಕೌಂಟೆಂಸಿ ಹುದ್ದೆ ಚಾಲೆಂಜಿಂಗ್ ಜಾಬ್ ಆಗಿದೆ. ಯಾರು ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದೀರೋ, ನೀವು ಈ ಫೀಲ್ಡ್‌ನಲ್ಲಿ ಕೆರಿಯರ್ ಪ್ರಾರಂಭಿಸಬಹುದು. ಅಕೌಂಟೆಂಸಿ ಯಲ್ಲಿ ಕಾಮನ್ ಪ್ರೊಫಶಿಯಂಸಿ ಟೆಸ್ಟ್ ಗೆ ಕಡಿಮೆ ಅಂದ್ರೂ ಬಿಕಾಂ ಪದವಿ ಪಡೆದಿರಲೇಬೇಕು.

 

ಟಾಕ್ಸೇಶನ್:

ಬಿಕಾಂ ಪದವಿ ಪಡೆದಿದ್ದರೆ ನಿಮಗೆ ಬೇಗನೇ ಉದ್ಯೋಗದ ಬಾಗಿಲು ತೆರೆಯುತ್ತದೆ. ಆದ್ರೆ ಯಾವ ಕ್ಷೇತ್ರದ ಬಾಗಿಲು ತೆರೆಯುತ್ತದೆ ಎಂದು ಹೇಳುವುದು ಕಷ್ಟ. ನಿಮಗೆ ಪ್ರತಿಷ್ಟಿತ ಕಂಪನಿಗಳಲ್ಲಿ ಟಾಕ್ಸೇಶನ್ ಆಗಿ ಕೆಲಸ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಡಿಟಿಂಗ್:

ಆಡಿಟಿಂಗ್ ಕೆರಿಯರ್ ಗೆ ನೀವು ಎಂಟ್ರಿ ನೀಡಬೇಕಾದರೆ, ಅಕೌಂಟಿಂಗ್, ಫೈನಾನ್ಸ್, ಎಕಾನಾಮಿಕ್ಸ್ ಸೇರಿದಂತೆ ಎಬಿ.ಕಾಮ್ ಪದವಿ ಪಡೆದಿರಬೇಕು. ದೊಡ್ಡ್ ಲೆಕ್ಕ ಪರಿಶೋಧಕ ಸಂಸ್ಥೆಗಳು ಮತ್ತು ಆಂತರಿಕ ಆಡಿಟ್ ಇಲಾಖೆಗಳು ಈ ಮೇಲೆ ಹೇಳಿದ ಕೋರ್ಸ್ ಮಾಡಿರುವ ವಿದ್ಯಾರ್ಥಿಗಳಿಗೆ ಆಫರ್ ನೀಡುತ್ತದೆ.

ಕಲಾವಿಭಾಗ

ಲೆಕ್ಚರ್ ಶಿಪ್:

ಪ್ರಾಧ್ಯಾಪಕ ವೃತ್ತಿ ಬಗ್ಗೆ ಹೇಳುವುದಾದ್ರೆ ಇದಕ್ಕೆ ಬರೀ ಪದವಿ ಮಾತ್ರವಲ್ಲದೇ ಸ್ನಾತಕೋತ್ತರ ಪದವಿ ಕೂಡಾ ಪಡೆದಿರಬೇಕು. ಆದ್ರೆ ಪದವಿ ಜತೆ ಬಿಎಡ್ ಕೋರ್ಸ್ ಮಾಡಿದ್ದರೆ ಸಾಕು ನೀವು ಫೀಲ್ಡ್‌ಗೆ ನೇರವಾಗಿ ಎಂಟ್ರಿ ನೀಡಬಹುದು. ನೀವು ನಿಮ್ಮ ನೆಚ್ಚಿನ ಸಬ್‌ಜೆಕ್ಟ್ ಆನ್ನ ಆಯ್ಕೆ ಮಾಡಿಕೊಂಡು, ಆ ವಿಷಯವನ್ನ ಟೀಚಿಂಗ್ ಮಾಡುತ್ತಾ ಕೆರಿಯರ್ ಪ್ರಾರಂಭಿಸಬಹುದು.

ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್:

ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ವಿಷಯದಲ್ಲಿ ನೀವು ಪದವಿ ಪಡೆದಿದ್ದರೆ, ಸಣ್ಣ ಹಾಗೂ ಮಧ್ಯಮ ವರ್ಗದ ಕಂಪನಿಗಳಲ್ಲಿ ಅಸಿಸ್ಟೆಂಟ್ ಹಾಗೂ ಮ್ಯಾನೇಜರ್ ಆಗಿ ಕೆರಿಯರ್ ಪ್ರಾರಂಭಿಸಬಹುದು. ನಿಮ್ಮ ವಿಶೇಷ ಸಬ್‌ಜೆಕ್ಟ್ ಗೆ ಅನುಗುಣವಾಗಿ ನೀವು ಫೀಲ್ಡ್ ಆಯ್ಕೆ ಮಾಡಬಹುದು.

ಮಾಧ್ಯಮ

ಜರ್ನಲಿಸಂ:

ನೀವು ಜರ್ನಲಿಸಂ ವಿಷಯದಲ್ಲಿ ಪದವಿ ಪಡೆದಿದ್ದರೆ, ನೀವು ಜರ್ನಲಿಸ್ಟ್ ಇಲ್ಲ ಕರೆಸ್ಪಾಂಡೆಂಟ್ ಆಗಿ ಕೆರಿಯರ್ ಪ್ರಾರಮಭಿಸಬಹುದು. ಇದೀಗ ಹೊಸ ಹೊಸ ಚ್ಯಾನೆಲ್ ಗಳು ಹುಟ್ಟಿಕೊಳ್ಳುವುದರಿಂದ ನಿಮಗೆ ಈ ಕ್ಷೇತ್ರದಲ್ಲಿ ಹಲವಾರು ಉದ್ಯೋಗವಕಾಶಗಳಿವೆ

ಬರವಣಿಗೆ/ ಸಂಕಲನ:

ಬರವಣಿಗೆ ಸೇರಿದಂತೆ ಮಾಧ್ಯಮಕ್ಕೆ ಸಂಬಂಧಪಟ್ಟ ಅನೇಕ ಹುದ್ದೆಗಳಿಗೆ ಯಾವುದೇ ಮಾಧ್ಯಮ ಪದವಿಯ ಅವಶ್ಯಕತೆ ಇಲ್ಲ. ಆದ್ರೆ ಒಂದು ವೇಳೆ ಮಾಸ್ ಮೀಡಿಯಾ ಅಥವಾ ಜರ್ನಲಿಸಂ ವಿಷಯದಲ್ಲಿ ನೀವು ಪದವಿ ಪಡೆದಿದ್ದರೆ ನಿಮಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಡಿಜಿಟಲ್ ಮೀಡಿಯಾದಲ್ಲಿ ನಿಮಗೆ ವಿಫುಲ ಅವಕಾಶವಿದೆ.

For Quick Alerts
ALLOW NOTIFICATIONS  
For Daily Alerts

English summary
As a Fresh College graduates you need to concentrate very well on the type of job you want to work for. your first job effects your career to quite an extent. All you need to have is the right attitude and qualifications for your dream job,. These are the jobs for fresh college graduates.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more