ನೀವು ಕೆರಿಯರ್ ಲೈಫ್ ಪ್ರಾರಂಭ ಮಾಡಿ ಜೀವನದ ಹೊಸ ಅಧ್ಯಾಯ ಪ್ರಾರಂಭ ಮಾಡುತ್ತಿದ್ದೀರಾ ಎಂದು ಖುಷಿಯಲ್ಲಿದ್ದಿರಾ ಅಥವಾ ಕಾಲೇಜಿನ ಹ್ಯಾಪಿ ಲೈಫ್ ಮುಗಿಯಿತು ಎಂದು ದುಖಃ ದಲ್ಲಿದ್ದೀರಾ? ಹೌದು ಟೆನ್ಶನ್ ಫ್ರೀಯಾಗಿದ್ದ ಕಾಲೇಜು ಲೈಫ್ ಮುಗಿದೊಡನೆ ಕೆಲಸ ಹುಡುಕುವ ಜಂಜಾಟ ಪ್ರಾರಂಭವಾಗುತ್ತದೆ. ಸಿಕ್ಕ ಸಿಕ್ಕ ಕಡೆ ರೆಸ್ಯೂಮ್ ಹಿಡಿದುಕೊಂಡು ಅಲೆದಾಡಬೇಕಾಗುತ್ತದೆ. ಹಾಗೆ ಅಲೆದಾಡೋ ಮುನ್ನ ಫ್ರೆಶರ್ಸ್ ಗೆ ಯಾವ ಜಾಬ್ ಬೆಸ್ಟ್ ಎಂಬ ಮಾಹಿತಿ ಇದೀಗ ಕೆರಿಯರ್ ಇಂಡಿಯಾ ನೀಡುತ್ತಿದೆ ಮುಂದಕ್ಕೆ ಓದಿ.

ರಿಸರ್ಚ್ ಟ್ರೈನೀ:
ವಿಜ್ಞಾನ ವಿಭಾಗಕ್ಕೆ ಸಂಬಂಧಪಟ್ಟಂತೆ ನೀವು ಪದವಿ ಪಡೆದಿದ್ದೀರಾ...? ಹಾಗಿದ್ರೆ ನೀವು ರಿಸರ್ಚ್ ಟ್ರೈನೀ ಹುದ್ದೆ ಗೆ ಅಪ್ಲೈ ಮಾಡಬಹುದು. ಈ ಕೆರಿಯರ್ ಬಯೋ ಟೆಕ್ನಾಲಾಜಿ ಹಾಗೂ ಬಯೋಮೆಡಿಕಲ್ ವಿದ್ಯಾರ್ಥಿಗಳು ಕೂಡಾ ಟ್ರೈ ಮಾಡಬಹುದು. ಇಂಡಸ್ಟ್ರಿಗಳಲ್ಲಿ ಈ ಕೋರ್ಸ್ ಮಾಡಿರುವವರಿಗೆ ಹೆಚ್ಚಿನ ಬೇಡಿಕೆ ಇದೆ.
ಅಕೌಂಟೆನ್ಸಿ:
ಉದ್ಯಮ ಚಿಕ್ಕದಿರಲಿ, ದೊಡ್ಡದಿರಲಿ ಚಾರ್ಟೆಡ್ ಅಕೌಂಟೆನ್ಸಿ ಜಾಬ್ ತುಂಬಾ ಚಾಲೆಂಜ್ ಇರುವ ಜಾಬ್ ಆಗಿದೆ. ಕಾಮರ್ಸ್ ಬ್ಯಾಂಕ್ ಗ್ರೌಂಡ್ ಇರುವ ವಿದ್ಯಾರ್ಥಿಗಳು ಈ ಫೀಲ್ಡ್‌ನಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು. ಈ ಹುದ್ದೆಗೆ ಕನಿಷ್ಟ ವಿದ್ಯಾರ್ಹತೆ ಅಂದ್ರೆ ಬಿಕಾಂ ಆಗಿರಬೇಕು.
ಆಡಿಟಿಂಗ್:
ಅಕೌಂಟಿಂಗ್, ಫೈನಾನ್ಸ್ ಅಥವಾ ಎಕಾನಾಮಿಕ್ಸ್ ಪ್ರಮುಖ ಸಬ್‌ಜೆಕ್ಟ್ ಗಳಲ್ಲಿ ನೀವು ಬಿಕಾಂ ಪದವಿ ಪಡೆದಿದ್ದರೆ, ನಾವು ಆಡಿಟಿಂಗ್‌ನಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು.
ಪ್ರಾಧ್ಯಾಪಕರು:
ಪ್ರಾಧ್ಯಾಪಕರು ವಿಚಾರ ಬಂದಾಗ ಪದವಿ ಮಾಡಿದವರಿಗಿಂತಲೂ ಸ್ನಾತಕೋತ್ತರ ಪದವಿ ಮಾಡಿದವರಿಗೆ ಹೆಚ್ಚು ಡಿಮಾಂಡ್ ಇದೆ. ಜತೆಗೆ ನೀವು ಬಿಎಡ್ ಕೋರ್ಸ್ ಮಾಡಿದ್ದಲ್ಲಿ ಇನ್ನೂ ಬೆಸ್ಟ್. ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ನೀವು ಒಂದು ಪ್ರಮುಖ ಸಬ್‌ಜೆಕ್ಟ್ ಆಯ್ಕೆ ಮಾಡಿಕೊಳ್ಳಿ. ಆ ಸಬ್‌ಜೆಕ್ಟ್ ಬಗ್ಗೆ ಟೀಚ್ ಮಾಡಿ ಚೀಚಿಂಗ್ ಫೀಲ್ಡ್‌ನಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು.


Click it and Unblock the Notifications











