ಬೆಂಗಳೂರಲ್ಲಿದ್ದೀರಾ ? ಫ್ರೀ ಟೈಂ ಇದ್ರೆ ಯಾವೆಲ್ಲಾ ಪಾರ್ಟ್ ಟೈಂ ಕೆಲಸ ಮಾಡಬಹುದು ಅಂತ ಗೊತ್ತಾ ?

By Kavya

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿದಂತೆ ಬೆಂಗಳೂರು ದೇಶದಲ್ಲಿಯೇ ಪ್ರೀಮಿಯರ್ ಎಜ್ಯುಕೇಶನಲ್ ಇನ್‌ಸ್ಟಿಟ್ಯೂಟ್ಸ್ ಗೆ ಮನೆ ಇದ್ದಂತೆ. ಇನ್ನು ಎಜ್ಯುಕೇಶನ್ ವಿಚಾರದಲ್ಲಿ ನಮ್ಮ ದೇಶ ಕೂಡಾ ಮುಂದಿದೆ. ಇನ್ನು ನಮ್ಮ ಬೆಂಗಳೂರು ಅಂದ್ರೆ ಕೋಸ್ಮೊಪೊಲಿಟಿನ್ ಸಿಟಿ ನೂರಕ್ಕೂ ಅಧಿಕ ಎಂಎನ್ ಸಿ ಕಂಪನಿಗಳ ಹಬ್ ಆಗಿದೆ. ಅದೇ ಕಾರಣಕ್ಕೆ ಎಲ್ಲಿಂದೆಲ್ಲಿನ ವಿದ್ಯಾರ್ಥಿಗಳು ಕರ್ನಾಟಕದ ಈ ರಾಜಧಾನಿಗೆ ಬಂದಿ ವಿದ್ಯಾಭ್ಯಾಸ ಕಂಪ್ಲೀಟ್ ಮಾಡುತ್ತಿದ್ದಾರೆ.

ಫ್ರೀ ಟೈಂ ಇದ್ರೆ ಏನೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಬಹುದು ಗೊತ್ತಾ ?

 

ಕಾಲೇಜು ಹೋಗುತ್ತಿರುವಾಗಲೇ ಇದೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಿದ್ರೆ ಕೆರಿಯರ್ ಸೂಪರ್ ಗುರು!

ಇನ್ನು ಇತ್ತೀಚಿಗಿನ ದಿನಗಳಲ್ಲಂತೂ ವಿದ್ಯಾಭ್ಯಾಸದ ಜತೆ ಜತೆ ಪಾರ್ಟ್ ಟೈಂ ಜಾಬ್ ಮಾಡುವುದು ಕೂಡಾ ಕಾಮನ್ ಆಗಿದೆ. ಹಾಗಾಗಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ಬೆಸ್ಟ್ ಪಾರ್ಟ್ ಟೈಂ ಜಾಬ್ ಬಗ್ಗೆ ಮಾಹಿತಿ ನೀಡುತ್ತಿದೆ. ಮುಂದಕ್ಕೆ ಓದಿ.

ನೀವು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಬೆಸ್ಟ್ ಪಾರ್ಟ್ ಟೈಂ ಜಾಬ್ ಗೆ ಹುಡುಕಾಟ ಮಾಡುತ್ತಿದ್ದರೆ ಖಂಡಿತ ಈ ಆರ್ಟಿಕಲ್ ನಿಮಗೆ ಹೆಲ್ಪ್ ಆಗುವುದು. ವಿದ್ಯಾಭ್ಯಾಸದ ಜತೆ ಜತೆ ಕೈ ತುಂಬಾ ಹಣ ಸಂಪಾದಿಸಬಹುದು.

ಮನೆ ಟ್ಯೂಟಷನ್:

ಮನೆ ಟ್ಯೂಟಷನ್:

ನೀವು ಬೆಂಗಳೂರಿನಲ್ಲಿ ಯಾವ ಪಾರ್ಟ್ ಟೈಂ ಜಾಬ್ ಮಾಡುವುದು ಬೆಸ್ಟ ಎಂದು ಕೇಳಿದ್ರೆ ನಮ್ಮ ಮೊದಲ ಸಲಹೆ ಮನೆಯಲ್ಲಿ ಟ್ಯೂಷನ್ ನೀಡುವುದು. ಯಾಕೆಂದ್ರೆ ಇದರಿಂದ ಹಲವಾರು ಬೆನಿಫಿಟ್ ಗಳಿವೆ. ಈ ಪಾರ್ಟ್ ಟೈಂ ಜಾಬ್ ನಿಂದ ನೀವು ಕೂಡಾ ಕಲಿತುಕೊಳ್ಳುತ್ತೀರಿ, ಅಷ್ಟೇ ಅಲ್ಲ ನಿಮ್ಮ ಕಮ್ಯುನಿಕೇಶನ್ ಸ್ಕಿಲ್, ಪಬ್ಲಿಕ್ ಸ್ಪೀಕಿಂಗ್ ಸ್ಕಿಲ್, ಅನಾಲಿಟಿಕಲ್ ಸ್ಕಿಲ್, ಲಾಜಿಕಲ್ ಥಿಂಕಿಂಗ್ ಸ್ಕಿಲ್ ಕೂಡಾ ಇಂಪ್ರೂವ್ ಆಗುವುದು.

1ನೇ ತರಗತಿಯಿಂದ ಪದವಿ ವರೆಗೆ ಮಕ್ಕಳಿಗೆ ಟ್ಯೂಷನ್ ನೀಡಿದ್ರೆ ಕ್ರಮೇಣ ನಿಮ್ಮ ಟೀಚಿಂಗ್ ಸ್ಕಿಲ್ ಹೆಚ್ಚಾದ್ರೆ ನೀವು ಹೋಮ್ ಟುಟೋರಿಯಲ್ ಕೂಡಾ ಸ್ಟಾರ್ಟ್ ಮಾಡಬಹುದು. ಇನ್ನು ಮಕ್ಕಳ ಫೀಸ್ ಅವರ ಕ್ಲಾಸ್‌ಗೆ ತಕ್ಕಂತೆ ಇರುತ್ತದೆ ಹಾಗಾಗಿ ಈ ಪಾರ್ಟ್ ಟೈಂ ಜಾಬ್ ನಿಂದ ನೀವು ತಿಂಗಳಿಗೆ 5,000/- ರೂ ಗಳಿಸಬಹುದು.

ಡಾಟಾ ಎಂಟ್ರಿ ಆಪರೇಟರ್:

ಡಾಟಾ ಎಂಟ್ರಿ ಆಪರೇಟರ್:

ಇನ್ನು ಬೆಂಗಳೂರಿನಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ತುಂಬಾ ಬೇಡಿಕೆ ಇದೆ. ಅದು ಫುಲ್‌ ಟೈಂ ಕೂಡಾ ಆಗಿರಬಹುದು ಇಲ್ಲ ಪಾರ್ಟ್ ಟೈಂ ಕೂಡಾ ಆಗಿರಬಹುದು. ನೀವು ಟಾರ್ಗೇಟ್ ರೀಚ್ ಆಗುವ ಪ್ರಕಾರ ಹಣ ಸಂಪಾದಿಸಬಹುದು. ಯಾರು ಟೈಪಿಂಗ್ ನಲ್ಲಿ ಗುಡ್ ಸ್ಕಿಲ್ ಹೊಂದಿದ್ದಾರೋ ಅವರು ಹೆಚ್ಚು ಹಣ ಸಂಪಾದಿಸಬಹುದು. ಪ್ರತೀ ದಿನ 3 ರಿಂದ 4 ಗಂಟೆ ವರೆಗೆ ದುಡಿದು, ತಿಂಗಳಿಗೆ 10,000/- ರೂ ಸಂಪಾದಿಸಬಹುದು.

ಹಾಸ್ಟಿಟಾಲಿಟಿ ಜಾಬ್:
 

ಹಾಸ್ಟಿಟಾಲಿಟಿ ಜಾಬ್:

ಹಾಸ್ಪಿಟಾಲಿಟಿ ಇಂಡಸ್ಟ್ರಿಯಲ್ಲಿ ಹೆಚ್ಚು ಉದ್ಯೋಗವಕಾಶವಿದೆ. ಆದ್ರೆ ಇಲ್ಲಿಯ ವೇತನ ಮಾತ್ರ ಅಷ್ಟೊಂದು ಸಮಾಧಾನಕರವಾಗಿರಲ್ಲ ಬದಲಿಗೆ ನೀವು ಇಲ್ಲಿ ಹೆಚ್ಚಿನದನ್ನ ಕಲಿಯಬಹುದು. ರೆಸ್ಟೋರೆಂಟ್ ವರ್ಕ್ ಸೇರಿದಂತೆ ಹಲವಾರು ಉದ್ಯೋಗಗಳು ಇಲ್ಲಿ ಇವೆ. ವಿದ್ಯಾರ್ಥಿಗಳು ತಿಂಗಳಿಗೆ 7,000/-ರೂ ಆರಾಮವಾಗಿ ಇಲ್ಲಿ ಪಡೆಯಬಹುದು.

ಡೆಲಿವರಿ ಬಾಯ್:

ಡೆಲಿವರಿ ಬಾಯ್:

ದೇಶದಲ್ಲೇ ಬೆಂಗಳೂರು ಈ-ಕಾಮರ್ಸ್ ಇಂಡಸ್ಟ್ರಿಯ ಹಬ್ ಆಗಿದೆ. ಫಿಲ್ಪ್ ಕಾರ್ಟ್ ನಿಂದ ಸ್ಟಾರ್ಟ್ ಆಗಿ ಅಮೇಜಾನ್ ವರೆಗೂ ಅನೇಕ ಶಾಪಿಂಗ್ ಇಲ್ಲಿ ಫುಡ ಸರ್ವೀಸ್ ಗಳಲ್ಲಿ ಡೆಲಿವರಿ ಬಾಯ್ ಅಗತ್ಯವಿರುತ್ತದೆ. ಸ್ವಿಗಿ, ಜೋಮಾಟೋ, ಫುಡ್ ಪಾಂಡಾ ಮುಂತಾದ ನೆಟ್ ವರ್ಕ ಗಳ ಜತೆ ಡೆಲಿವರಿ ಬಾಯ್ ಆಗಿ ದುಡಿಯಬಹುದು. ಇಲ್ಲಿ ನಿಮ್ಮ ಟ್ರಿಪ್ಸ್ ಆಧಾರದ ಮೇಲೆ ನಿಮಗೆ ವೇತನ ನಿರ್ಧಾರವಾಗುತ್ತದೆ. ಇಲ್ಲೂ ಕೂಡಾ ನೀವು ಪ್ರತಿ ತಿಂಗಳಿಗೆ 7000/- ರೂ ಸಂಪಾದಿಸಬಹುದು.

ಟಾಟ್ಯೂಸ್ಟ್:

ಟಾಟ್ಯೂಸ್ಟ್:

ಬೇರೆ ಇನ್ನಿತ್ತರ ಮೆಟ್ರೋ ಸಿಟೀಸ್ ಗೆ ಹೋಲಿಸಿದ್ರೆ ಬೆಂಗಳೂರು ಜನತೆ ಟ್ಯಾಟೂ ವಿಚಾರದಲ್ಲಿ ಹೆಚ್ಚು ಕ್ರೇಜಿ ಹೊಂದಿದ್ದಾರೆ. ಇನ್ನು ಬೆಂಗಳೂರಿನ ಪ್ರತಿಯೊಂದು ಕಾರ್ನರ್ ನಲ್ಲಿ ನೀವು ಟ್ಯಾಟೂ ಸ್ಟೋರ್ಸ್ ನೀವು ನೋಡಬಹುದು. ಇಂತಹ ಸ್ಟೋರ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಟೂ ಆರ್ಟಿಸ್ಟ್ ಅವರ ಅಸಿಸ್ಟೆಂಟ್ ಆಗಿ ಪಾರ್ಟ್ ಟೈಂ ಜಾಬ್ ಸಿಗುತ್ತದೆ. ಪ್ರತೀ ತಿಂಗಳಿಗೆ 20,000/- ರೂ ವೇತನ ಪಡೆಯಬಹುದು.

ಡಿಸ್ಕೋ ಜಾಕಿ:

ಡಿಸ್ಕೋ ಜಾಕಿ:

ಬೆಂಗಳೂರು ಸಿಟಿಯಲ್ಲಿ ಅತೀ ಹೆಚ್ಚು ಕಾಣ ಸಿಗುವುದೆಂದ್ರೆ ಪಬ್ ಹಾಗೂ ರೆಸ್ಟೋರೆಂಟ್. ನೀವು ಸಾಂಗ್ ಮಿಕ್ಸಿಂಗ್ ಕಲೆಯನ್ನ ಚೆನ್ನಾಗಿ ತಿಳಿದುಕೊಂಡಿದ್ರೆ ಡಿಜೆಯಾಗಿ ಪಾರ್ಟ್ ಟೈಂ ಜಾಬ್ ಮಾಡಬಹುದು. ಇನ್ನು ಈ ಜಾಬ್ ಸ್ಟಾರ್ಟ್ ಆಗುವುದೇ ಸಂಜೆ ಮೇಲೆ. ಹಾಗಾಗಿ ಬೆಳಗ್ಗೆ ಕಾಲೇಜಿಗೆ ಹೋಗಿ ಸಂಜೆ ನಂತ್ರ ಡಿಜೆಯಾಗಿ ಪಾರ್ಟ್ ಟೈಂ ಜಾಬ್ ಮಾಡಬಹುದು. ಇನ್ನು ಈ ಫೀಲ್ಡ್‌ನಲ್ಲಿ ಪ್ರತೀ ತಿಂಗಳಿಗೆ ರೂ 8000/- ಹಣ ಸಂಪಾದಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
Bangalore, which is home to premier educational institutes in the country such as Indian Institute of Science (IISc), is leading the country in terms of education. This cosmopolitan city is even a hub for hundreds of MNCs, which is the reason why many students aspire to pursue their studies in the capital of Karnataka.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X