ಆಫೀಸ್‌ನಲ್ಲಿ ರಜೆ ಕೇಳಲು ಭಯವಾ... ಹಾಗಿದ್ರೆ ಈ ಟ್ರಿಕ್ಸ್ ಟ್ರೈ ಮಾಡಿ

ಇತ್ತೀಚಿಗಿನ ದಿನಗಳಲ್ಲಿ ಕೆಲಸ ಸಿಗುವುದು ತುಂಬಾ ಕಷ್ಟ. ನಮ್ಮ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗಬೇಕಾದ್ರೆ ಅದೆಷ್ಟೋ ಕಂಪನಿಗಳಿಗೆ ಅಲೆದು ನಮ್ಮ ಚಪ್ಪಲು ಸವೆಸಿರಬೇಕಾಗುತ್ತದೆ.

ಇತ್ತೀಚಿಗಿನ ದಿನಗಳಲ್ಲಿ ಕೆಲಸ ಸಿಗುವುದು ತುಂಬಾ ಕಷ್ಟ. ನಮ್ಮ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗಬೇಕಾದ್ರೆ ಅದೆಷ್ಟೋ ಕಂಪನಿಗಳಿಗೆ ಅಲೆದು ನಮ್ಮ ಚಪ್ಪಲು ಸವೆಸಿರಬೇಕಾಗುತ್ತದೆ. ಹಾಗೂ ಹೀಗೂ ಹೇಗೋ ಕಷ್ಟಪಟ್ಟ ಮೇಲೆ ಒಂದು ಕೆಲಸ ಎಂಬುವುದು ಸಿಕ್ಕುತ್ತದೆ. ಆದ್ರೆ ಕೆಲಸ ಸಿಕ್ಕ ಮೇಲೆ ಮತ್ತೆ ಬೇರೆಯಾ ರೀತಿಯ ಸಮಸ್ಯೆಗಳು ಉದ್ಭವಿಸುತ್ತದೆ . ಅವುಗಳಲ್ಲಿ ಮುಖ್ಯವಾದುದು ರಜೆ ಸಮಸ್ಯೆ.

ಆಫೀಸ್‌ನಲ್ಲಿ ರಜೆ ಕೇಳಲು ಭಯವಾ... ಹಾಗಿದ್ರೆ ಈ ಟ್ರಿಕ್ಸ್ ಟ್ರೈ ಮಾಡಿ

ಹೌದು ವಾರಕ್ಕೆ ಒಂದು ದಿನ ರಜೆ ಇರುತ್ತದೆ. ಆದ್ರೆ ಆ ರಜೆ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಬಂದು ಹೋಗುತ್ತೆ. ಮತ್ತೆ ಸೋಮವಾರ ಬಂತೆಂದ್ರೆ ಚಿಂತೆಯಿಂದ ದಿನ ಕಳೆಯಬೇಕಾಗುತ್ತದೆ. ಇನ್ನು ಹೆಚ್ಚುವರಿ ರಜೆ ಬೇಕು ಅಂದ್ರೆ ಬಾಸ್ ಹತ್ರ ಕೇಳೋದೆ ಒಂದು ದೊಡ್ಡ ತಲೆ ನೋವು. ಬನ್ನಿ ಇವತ್ತು ಕೆರಿಯರ್ ಇಂಡಿಯಾ ಆಫೀಸ್‌ನಲ್ಲಿ ಏನೆಲ್ಲಾ ಕಾರಣ ಹೇಳಿ ರಜೆ ಮಾಡಬಹುದು ಎಂಬ ಟಿಪ್ಸ್ ನೀಡುತ್ತಿದೆ ಚೆಕ್ ಮಾಡಿಕೊಳ್ಳಿ.

ಶೀತ, ಜ್ಚರ:

ಆಫೀಸ್ ಹೋಗಲು ಮನಸ್ಸಿಲ್ಲದ ದಿನ ಬಾಸ್‌ಗೆ ಫೋನ್ ಮಾಡಿ ಆರೋಗ್ಯ ಸರಿಯಿಲ್ಲ ಎಂಬ ರೀಸನ್ ಕೊಡಬಹುದು. ಆರೋಗ್ಯ ಸರಿಯಿಲ್ಲ ಎಂದು ಹೇಳಿದಾಗ ಬಾಸ್ ನವರು ಕೂಡಲೇ ಆಯಿತು ಎಂದು ಗ್ರೀನ್ ಸಿಗ್ನಲ್ ಕೊಡುತ್ತಾರೆ. ಆ ಮೇಲೆ ನಿಮಗೆ ಸ್ನೇಹಿತರ ಜತೆ ಎಂಜಾಯ್ ಮಾಡಬಹುದು. ಹಾಗಾಗಿ ರಜೆ ಕೇಳಲು ಇದು ಬೆಸ್ಟ್ ಐಡಿಯಾ

ಹೊಟ್ಟೆ ಸರಿಯಿಲ್ಲ:

ರಜೆ ಬೇಕೆಂದಾಗ ಹೊಟ್ಟೆ ಸರಿಯಿಲ್ಲ ಎನ್ನೋ ಕಾರಣ ಕೂಡಾ ಕೊಡಬಹುದು. ನಿನ್ನೆ ರಾತ್ರಿ ಫ್ರೆಂಡ್ಸ್ ಜತೆ ಪಾರ್ಟಿ ಮಾಡಿದ್ದೆ. ಹಾಗಾಗಿ ಸಿಕ್ಕಾಪಟ್ಟೆ ತಿಂದುಬಿಟ್ಟು, ಇದೀಗ ಹೊಟ್ಟೆ ಸರಿಯಿಲ್ಲ ಎಂದು ಹೇಳಿ ನೋಡಿ ಅವರೇ ಕೂಡಲೇ ರಜೆ ಸಾಂಕ್ಷನ್ ಮಾಡಿ ಬಿಡುತ್ತಾರೆ

ಯಾರಾದಾದ್ರೂ ಸಾವಿನ ಸುದ್ದಿ:

ಇನ್ನು ಮೇಲಿನ ಕಾರಣಗಳನ್ನ ಒಂದು ದಿನದ ರಜೆ ಬೇಕಾದಾಗ ಹೇಳಬಹುದು ಆದ್ರೆ ಮೂರು, ನಾಲ್ಕು ದಿನದ ರಜೆ ಬೇಕೆಂದಾಗ ದೂರದ ಸಂಬಂಧಿಕರೊಬ್ಬರು ತೀರಿಕೊಂಡಿದ್ದಾರೆ ಎಂದು ರಜೆ ಕೇಳಿ. ಹಿಂದೆ ಮುಂದೆ ನೋಡದೇ ನಿಮಗೆ ರಜೆ ಸಿಗುತ್ತೆ

ಮನೆಗೆ ಅತಿಥಿಗಳ ಆಗಮನ:

ಇನ್ನು ಕೆಲವೊಮ್ಮೆ ರಜೆ ಪಡೆಯಲು ಫ್ಯಾಮಿಲಿ ಡ್ರಾಮ ಹೇಳಬೇಕಾಗುತ್ತದೆ. ಮನೆಗೆ ಅತಿಥಿಗಳು ಬಂದಿದ್ದಾರೆ, ದೂರದ ಊರಿನಿಂದ ಅಪ್ಪ - ಅಮ್ಮ ಬಂದಿದ್ದಾರೆ, ಅವರಿಗೆ ಈ ಊರು ಹೊಸತು, ಅವರನ್ನ ತಿರುಗಾಡಿಸಬೇಕು ಎಂದು ಹೇಳಿ ರಜೆ ಕೇಳಿ ನೋಡಿ. ರಜೆ ಗ್ಯಾರಂಟಿ ಸಿಗುತ್ತೆ.

ರಸ್ತೆ ಮಧ್ಯೆ ಗಾಡಿ ಹಾಳಾಗಿದೆ:

ಆಫೀಸ್‌ಗೆ ಯಾವಾಗಲೂ ಯಾರು ತಮ್ಮ ಸ್ವಂತ ಗಾಡಿಯಲ್ಲಿ ಬರುತ್ತಿರೋ ಅವರು ಈ ಕಾರಣ ಕೊಡಬಹುದು. ಬಾಸ್ ಗೆ ಫೋನ್ ಮಾಡಿ, ದಾರಿ ಮಧ್ಯೆ ಗಾಡಿ ಕೆಟ್ಟು ನಿಂತಿದೆ. ಇದನ್ನ ಇದೀಗ ಸರ್ವೀಸ್ ಸ್ಟೇಶನ್‌ ಗೆ ಕೊಂಡೋಯ್ದು ರಿಪೇರಿ ಮಾಡಬೇಕು. ಇಷ್ಟೆಲ್ಲಾ ಆಗುವಾಗ ತುಂಬಾ ಟೈಂ ಆಗುತ್ತೆ ಹಾಗಾಗಿ ಇಂದು ರಜೆ ಕೊಡಿ ಎಂದು ರಿಕ್ವೇಸ್ಟ್ ಮಾಡಿಕೊಳ್ಳಿ. ರಜೆ ಕೊಟ್ಟೇ ಕೊಡುತ್ತಾರೆ.

More News  

For Quick Alerts
ALLOW NOTIFICATIONS  
For Daily Alerts

English summary
At Some point in your career, you are going to need to leave work early. After all, employees are human beings with obligation that cant always be controlled or delegated to weekends and non working hours. However,here's a guide to how to leave work early without your request impacting your standing as an employee
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+