ಕಾಲೇಜು ಕ್ಯಾಂಟೀನ್ ಅಲ್ಲಿ ನೀವು ಇದನ್ನೆಲ್ಲಾ ಮಾಡಿದ್ದೀರಾ?

ಕಾಲೇಜು ಲೈಫ್ ಎಂಬುವುದು ಜೀವನದ ಕೊನೆಯವರೆಗೂ ನೆನಪಿಟ್ಟುಕೊಳ್ಳುವಂತಹ ಕ್ಷಣ. ಕಾಲೇಜಿನ ಪ್ರತಿಯೊಂದು ಕ್ಷಣವೂ ಕೂಡಾ ಮಧುರವಾದುದು.

ಕಾಲೇಜು ಲೈಫ್ ಎಂಬುವುದು ಜೀವನದ ಕೊನೆಯವರೆಗೂ ನೆನಪಿಟ್ಟುಕೊಳ್ಳುವಂತಹ ಕ್ಷಣ. ಕಾಲೇಜಿನ ಪ್ರತಿಯೊಂದು ಕ್ಷಣವೂ ಕೂಡಾ ಮಧುರವಾದುದು. ಇನ್ನು ಅದಕ್ಕೆ ಕಾಲೇಜು ಕ್ಯಾಂಟೀನ್ ಹೊರತಲ್ಲ.

ಕಾಲೇಜು ಕ್ಯಾಂಟೀನ್ ಅಲ್ಲಿ ನೀವು ಇದನ್ನೆಲ್ಲಾ ಮಾಡಿದ್ದೀರಾ?

ನಾವು ಕಾಲೇಜು ಹೋಗುತ್ತಿದ್ದಾಗ, ಹಸಿವಾದ್ರೆ ಸಾಕು ಸೀದಾ ಕ್ಯಾಂಟೀನ್ ಹೋಗಿ ಕೂರುತ್ತಿದ್ದೇವು. ಇನ್ನು ಕೆಲವರು ಕ್ಲಾಸ್ ಬಂಕ್ ಮಾಡಿ ಕ್ಯಾಂಟೀನ್ ಅಲ್ಲಿ ಕಾಲಕಳೆಯುತ್ತಿದ್ದರು. ಫ್ರೆಂಡ್ಸ್ ಜತೆ ಕ್ಯಾಂಟೀನ್ ಅಲ್ಲಿ ಹ್ಯಾಂಗೌಟ್ ಆಗುವುದು ಸಾಮಾನ್ಯವಾಗಿತ್ತು.

ಕಾಲೇಜಿನಲ್ಲಿ ಕ್ಯಾಂಟೀನ್ ಎಲ್ಲರ ನೆಚ್ಚಿನ ತಾಣವಾಗಿರುತ್ತೆ. ಹಸಿದವರಿಗೆ ಅನ್ನ ನೀಡುವ ಕೇಂದ್ರವಾಗಿದ್ದರೆ, ಇನ್ನು ಕೆಲವರಿಗೆ ಫ್ರೆಂಡ್ಸ್ ಜತೆ ಹ್ಯಾಂಗೌಟ್ ಆಗುವ ಸ್ಥಳ. ಮತ್ತು ಕೆಲವರಿಗೆ ಅಸೈನ್ ಮೆಂಟ್, ಕಂಬೈನ್ಡ್ ಸ್ಟಡಿ ಮಾಡುವ ಸ್ಟಡಿ ರೂಂ ಕೂಡಾ. ವಿದ್ಯಾರ್ಥಿಗಳು ಕಾಲೇಜು ಕ್ಯಾಂಟೀನ್ ನಲ್ಲಿ ಮಾಡಿರುವ ಮೋಜು ಮಸ್ತಿಗಳನ್ನ ಇದೀಗ ಕೆರಿಯರ್ ಇಂಡಿಯಾ ನಿಮ್ಮ ಮುಂದೆ ಇಡುತ್ತಿದೆ. ಓದಿ ನಿಮ್ಮ ಆ ದಿನಗಳನ್ನ ಮೆಲುಕು ಹಾಕಿ

ಬಂಕ್:

ಕ್ಯಾಂಟೀನ್ ಎಂದಾಗ ಮೊದಲು ನೆನಪಿಗೆ ಬರುವುದು ಕ್ಲಾಸ್ ಬಂಕ್. ಕ್ಲಾಸ್‌ ನಲ್ಲಿ ಪ್ರಾಧ್ಯಾಪಕರ ಕ್ಲಾಸ್ ಬೋರ್ ಆಗುವುದರಿಂದ ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡಿ, ಕ್ಯಾಂಟೀನ್ ಅಲ್ಲಿ ಕಾಲ ಕಳೆಯುತ್ತಾರೆ.

ಕಡಿಮೆ ಬಜೆಟ್ ಪಾರ್ಟಿ:

ಕಡಿಮೆ ಖರ್ಚಿನಲ್ಲಿ ಬರ್ತ್ ಡೇ ಪಾರ್ಟಿ ಮಾಡಬೇಕು ಎಂದು ನೀವು ಅಂದುಕೊಂಡಿದ್ದೀರಾ...? ಹಾಗಿದ್ರೆ ಕಾಲೇಜು ಕ್ಯಾಂಟೀನ್ ಇದೆಯಲ್ಲ. ಹೌದು ಪಾರ್ಟಿ ಎಂದಾಗ ಥಟ್ಟನೇ ಸೆಲೆಕ್ಟ್ ಮಾಡುವುದು ಕಾಲೇಜು ಕ್ಯಾಂಟೀನ್. ಕಡಿಮೆ ಖರ್ಚಿನಲ್ಲಿ ಹಲವಾರು ಐಟಂಗಳನ್ನ ಸವಿಯಬಹುದು. ನಿಮಗೂ ಕಾಲೇಜು ಕ್ಯಾಂಟೀನ್ ಅಲ್ಲಿ ಪಾರ್ಟಿ ಮಾಡಿರುವ ನೆನಪಿದ್ಯಾ.

ಕ್ರಶ್ ಗಾಗಿ ಕಾಯುವುದು:

ಕಾಲೇಜಿನಲ್ಲಿ ಹೆಚ್ಚಿನ ಮಂದಿಗೆ ಕ್ರಶ್ ಎಂಬುವುದ ಆಗುತ್ತದೆ. ಸೀನಿಯರ್ಸ್ ಜ್ಯೂನಿಯರ್ಸ್ ಮಧ್ಯೆ ಕ್ರಶ್, ಬೇರೆ ಬೇರೆ ಕ್ಲಾಸ್ ವಿದ್ಯಾರ್ಥಿಗಳ ಮಧ್ಯೆ ಕ್ರಶ್. ಹಾಗಾಗಿ ಕಾಲೇಜಿಗೆ ಬಂದವರು ಕ್ಯಾಂಟೀನ್ ಗೆ ಬರದೇ ಇರುವುದಿಲ್ಲ. ಇನ್ನು ಕೆಲವರಿಗೆ ಕ್ಯಾಂಟೀನ್ ಅಲ್ಲಿಯೇ ಸರಿಯಾಗಿ ಇತರರ ಪರಿಚಯವಾಗುವುದು. ಒಮ್ಮೆ ಮೀಟ್ ಮಾಡಿದ ಬಳಿಕ ಅವರು ಇಷ್ಟವಾದ್ರೆ ಮತ್ತೆ ಪ್ರತೀ ದಿನ ಅದೇ ಸಮಯಕ್ಕೆ ಕ್ಯಾಂಟೀನ್ ಗೆ ಹಾಜರು ನಮ್ಮ ಸ್ಟುಡೆಂಟ್ಸ್

ಅಸೈನ್ ಮೆಂಟ್ ಮಾಡಿದ ನೆನಪು:

ಹೌದು ಅಸೈನ್ ಮೆಂಟ್ ಇಲ್ಲ ಯಾವುದೇ ಪ್ರಾಜೆಕ್ಟ್ ವರ್ಕ್ ಗೆ ಡೆಡ್ ಲೈನ್ ಕೊಟ್ಟಾಗ ಅಸೈನ್ ಮೆಂಟ್ ಮಾಡಿ ಮುಗಿಸಲು ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡುತ್ತಾರೆ. ಈ ಟೈಂನಲ್ಲಿ ಕಾಲೇಜು ಕ್ಯಾಂಟೀನ್ ಅಲ್ಲಿ ಕುಳಿತು ತಮ್ಮ ಎಲ್ಲಾ ಕೆಲಸಗಳನ್ನ ಆರಾಮವಾಗಿ, ಹಾಯಾಗಿ ಮಾಡಿ ಮುಗಿಸುತ್ತಾರೆ.

More News  

For Quick Alerts
ALLOW NOTIFICATIONS  
For Daily Alerts

English summary
There are a number of reason you miss college life, once of them being your college canteen. After I graduated i realized that it is not a place you seek only when you are hungry, but for many others reasons. here few
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+