ಕೆಲಸ ಮಾಡುವಾಗ ಬೋರ್ ಆಗ್ತಿದೆಯಾ? ಕೆಲಸದ ಮೇಲೆ ಆಸಕ್ತಿ ಕಡಿಮೆಯಾಗಿದೆಯಾ? ಹಾಗಿದ್ರೆ ಹೀಗೆ ಮಾಡಿ

ದಿನನಿತ್ಯ ಮನೆಗೆಲಸ ಮತ್ತು ಆಫೀಸ್ ಕೆಲಸ ಅಂತೆಲ್ಲಾ ಬ್ಯುಸಿ ಆಗೋದ್ರಲ್ಲೆ ಕಾಲ ಕಳೆಯುತ್ತೇವೆ. ಆದರೆ ಅದೆಷ್ಟೋ ಸಮಯ ಈ ಕೆಲಸವೇ ಬೇಡ , ಬೇರೆ ಸ್ವಂತ ಉದ್ಯೋಗ ಮಾಡೋಣ ಅಥವಾ ಈ ಕೆಲಸದ ಗೋಳು ಬೇಡವೇ ಬೇಡ ಮನೆಯಲ್ಲೇ ಯಾವುದಾದರೂ ಕೆಲಸ ಹುಡುಕಿಕೊಳ್ಳೋಣ ಎಂದು ಅನಿಸಿಬಿಡುತ್ತದೆ. ಕಾರಣ ಆಫೀಸ್‌ನಲ್ಲಿ ಎದುರಾಗುವ ಸಮಸ್ಯೆಗಳು, ಒತ್ತಡಗಳು ಮತ್ತು ಯಾಂತ್ರಿಕ ಜೀವನ ಇದರಿಂದ ಬೇಸತ್ತು ಹೋದ ಮನಸ್ಸುಗಳು.

ಕೆಲಸದ ನಡುವೆ ಹೀಗೆಲ್ಲಾ ಮಾಡಿದ್ರೆ ಬೋರ್ ಆಗೊಲ್ಲಾ !

ಇಷ್ಟೆಲ್ಲಾ ಸಮಸ್ಯೆಗಳು ಎದುರಾಗಿ ವೃತ್ತಿಯಲ್ಲಿ ಸೋಲನ್ನು ಕಾಣುವ ಮೊದಲು ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವ ಮುನ್ನ ಹಾಗೂ ಕೆಲಸವು ಬೋರ್‌ ಆಗುವ ಮುನ್ನ ದಿನನಿತ್ಯ ಕೆಲಸದ ನಡುವೆ ಯಾವ ರೀತಿ ನಮ್ಮನ್ನು ನಾವು ಖುಷಿಯಾಗಿ,ನೆಮ್ಮದಿಯಾಗಿ ಮತ್ತು ಆರೋಗ್ಯದಾಯಕವಾಗಿ ಇಟ್ಟುಕೊಳ್ಳಬಹುದು ಎಂದು ಕರಿಯರ್ ಇಂಡಿಯಾ ನಿಮಗೆ ತಿಳಿಸುತ್ತಿದೆ.

1. ಕಿವಿ ಮಸಾಜ್

ಇಂತಹ ವಿಚಿತ್ರ ಕೆಲಸವನ್ನು ಆಫೀಸ್‌ನಲ್ಲಿ ಕಾಣೋಕೆ ಮಾತ್ರ ಸಾಧ್ಯ. ಇದ್ಯಾವ ವಿಷಯ ಅಂತ ನಗುತ್ತೀದ್ದೀರಾ? ಹಾಗಿದ್ರೆ ಕೇಳಿ ಆಫೀಸ್‌ನಲ್ಲಿ ಬೋರ್ ಆಗ್ತಿದೆ. ಕೆಲಸ ಮಾಡೋಕೆ ಇಂಟರೆಸ್ಟ್ ಇಲ್ಲ ಅಂದಾಗ ನಿಮ್ಮ ಕಿವಿಯ ಮೇಲಿನ ಮೂರನೇ ಭಾಗದ ಮಧ್ಯದಲ್ಲಿ ನಿಮ್ಮ ಕಿವಿಯನ್ನು ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ನಿಮ್ಮ ಒತ್ತಡವು ಕಡಿಮೆ ಆಗುತ್ತದೆ ಮತ್ತು ಮತ್ತು ಸ್ವಲ್ಪ ವಿಶ್ರಾಂತಿ ಸಿಕ್ಕಂತಾಗುತ್ತದೆ.

2. ಕೆಲಸ ಮಾಡುವ ಟೇಬಲ್‌ ಕ್ಲೀನ್ ಮಾಡಿ:

ನೀವು ಪ್ರತಿನಿತ್ಯ ಕೆಲಸ ನಿರ್ವಹಿಸುವ ಟೇಬಲ್ ಮೇಲಿನ ವಸ್ತುಗಳನ್ನು ಕ್ಲೀನ್ ಮಾಡಿ. ಅನಗತ್ಯ ವಸ್ತುಗಳನ್ನು ಡಸ್ಟ್‌ಬಿನ್ ಗೆ ಹಾಕಿ. ನಂತರ ನೀವು ಚೇರಿನಲ್ಲಿ ನೇರವಾಗಿ ಕುಳಿತು ಕೆಲಸ ಆರಂಭಿಸಿ. ಇದರಿಂದ ನೆಮ್ಮದಿ ಜೊತೆಗೆ ಕೆಲಸದ ಮೇಲಿನ ಉತ್ಸಾಹ ಇಮ್ಮಡಿಗೊಳ್ಳುತ್ತದೆ.

3. ಹ್ಯಾಂಡ್ ಟ್ರಿಕ್:

ನಿಮ್ಮ ಕೈಗಳಿಗೆ ವಿರಾಮ ನೀಡಲು ನೀವು ಬಯಸಿದರೆ (ನಿರಂತರ ಟೈಪಿಂಗ್‌ನಿಂದ ನೋಯುತ್ತಿರುವ ಮಣಿಕಟ್ಟುಗಳು ), ನಿಮ್ಮ ಹೆಬ್ಬೆರಳುಗಳಿಗೆ ಗಮನ ಕೊಡಿ.

ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ಸ್ನಾಯುವನ್ನು ಲಘುವಾಗಿ ಹಿಸುಕುವ ಮೂಲಕ ಮತ್ತು ಸಣ್ಣ ವಲಯಗಳಲ್ಲಿ ಮಸಾಜ್ ಮಾಡುವ ಮೂಲಕ ಪ್ರಾರಂಭಿಸಿ. ನಿಮ್ಮ ಕೈಗಳು, ಭುಜಗಳು ಮತ್ತು ಕುತ್ತಿಗೆ ವಿಶ್ರಾಂತಿ ಪಡೆಯಲು ಸಣ್ಣ ಎಕ್ಸಸೈಸ್ ಮಾಡಿ ಇದರಿಂದ ನೀವು ಮತ್ತೆ ಕೆಲಸ ಮಾಡಲು ಸಿದ್ಧರಾಗಿರುತ್ತೀರಿ.

4. ಉಸಿರಾಟದ ತಂತ್ರ :

ಕೆಲಸದಲ್ಲಿ ಆಸಕ್ತಿಯಿಲ್ಲ ಆದರೂ ಕೆಲಸ ಮಾಡುವುದು ಹೇಗೆ ಎನ್ನುವಾಗ, ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಆಳವಾದ ಉಸಿರನ್ನು ತೆಗೆದುಕೊಳ್ಳುವುದು ಪುಸ್ತಕದಲ್ಲಿನ ಅತ್ಯಂತ ಹಳೆಯ ಟ್ರಿಕ್ ಆಗಿದ್ದರೂ ಕೂಡ ಈ ಸರಳ ವಿಧಾನವನ್ನು ಪಾಲಿಸಿ.

ದೀರ್ಘವಾಗಿ ಉಸಿರು ತೆಗೆಡುಕೊಂಡು ಉಸಿರು ಬಿಡಿ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೆಮ್ಮದಿ ಹಾಗೂ ವಿಶ್ರಾಂತಿ ಕೂಡ ಸಿಗುವುದು. ಹೀಗೆ ೫ ನಿಮಿಷಗಳ ಕಾಲ ಮಾಡಿ ಆಗ ಖಂಡಿತವಾಗಿಯೂ ನಿಮಗೆ ಕೆಲಸದಲ್ಲಿ ಉತ್ಸಾಹ ಹೆಚ್ಚಾಗುವುದು.

5. ಧ್ಯಾನ ಮಾಡಿ:

ಧ್ಯಾನ ತಂತ್ರವು ಆತಂಕ ಮತ್ತು ಒತ್ತಡವನ್ನು ನಿವಾರಿಸಲು ಬಳಸಲಾಗುತ್ತದೆ ಮತ್ತು ಎಲ್ಲಿಯೂ ಹೋಗದೆ ನಿಮ್ಮ ದೇಹದೊಂದಿಗೆ ಮರುಸಂಪರ್ಕಿಸಲು ಇದು ಒಂದು ತ್ವರಿತ ಮಾರ್ಗವಾಗಿದೆ.

ಧ್ಯಾನದಿಂದ ಹೊಸ ಚೈತನ್ಯವನ್ನು ಕಾಣುವಿರಿ. ನಿಮ್ಮ ಕೆಲಸದಲ್ಲಿ ಉತ್ತಮ ಫಲವನ್ನು ಕಾಣುವಿರಿ. ಹಾಗಾಗಿ ಪ್ರತಿನಿತ್ಯ ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಧ್ಯಾನ ಮಾಡಿ ಇದರಿಂದ ದೇಹದ ಅರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದು.

6. ಆಫೀಸ್‌ನಿಂದ ಹೊರ ನಡೆದು ಒಂದೆರಡು ಹೆಜ್ಜೆ ಹಾಕಿ:

ಆಫೀಸ್‌ನಲ್ಲಿ ಅದೇ ಎ.ಸಿ ಅದೇ ಕಂಪ್ಯೂಟರ್ ಅದೇ ಟೇಬಲ್ ನೋಡಿ ಬೇಸರಿಸುವ ಬದಲು ಒಂದೈದು ನಿಮಿಷ ಬಿಡುವು ಮಾಡಿಕೊಂಡು ಆಫೀಸ್‌ನಿಂದ ಹೊರನಡೆದು ಒಂದೆರಡು ಹೆಜ್ಜೆ ಹಾಕಿ. ಇದರಿಂದ ಮನಸ್ಸಿಗೆ ರಿಲ್ಯಾಕ್ಸ್ ಆಗತ್ತೆ. ಜೊತೆಗೆ ಹೊರಗೆ ಉತ್ತಮ ಗಾಳಿ ಮತ್ತು ಬೆಳಕಿನಲ್ಲಿ ನಡೆದಾಡುವುದರಿಂದ ನಿಮ್ಮ ಮನಸ್ಸು ಕೂಡ ನಿಶ್ಚಿಂತೆಯಾಗುವಂತೆ ಮಾಡುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
Bored at work? Here are the best ways to handle boredom at work. Check it out.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+