ಕೆರಿಯರ್ ಟ್ರೆಂಡ್ಸ್ 2018: ಅನಿಮೇಷನ್ ಮಾಯಾಲೋಕದಲ್ಲಿ ಕೈತುಂಬಾ ಕೆಲಸ ಮತ್ತು ಹಣ

Posted By:

ಮಾಧ್ಯಮ ಲೋಕ ಅತಿ ವೇಗವಾಗಿ ಬದಲಾಗುತ್ತಿದೆ. ಯಾವುದೇ ತಂತ್ರಜ್ಞಾನ ಬಂದರು ಅದನ್ನು ಮಾಧ್ಯಮ ಸಮರ್ಪಕವಾಗಿ ಬಳಸಿಕೊಂಡು, ಜನರನ್ನು ತಲುಪುತ್ತದೆ. ಅದರಲ್ಲೂ ದೃಶ್ಯ ಮಾಧ್ಯಮ ಇನ್ನು ಒಂದು ಹೆಜ್ಜೆ ಮುಂದೆ ಸಾಗಿ ವಾಸ್ತವತೆ ಮೀರಿ ಕಾಲ್ಪನಿಕ ಜಗತ್ತನ್ನು ಸಹ ತೆರೆದಿಡುತ್ತದೆ.

ಕೆರಿಯರ್ ಟ್ರೆಂಡ್ಸ್ 2018: ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಡೇಟಾ ಅನಾಲಿಸ್ಟ್

ದೃಶ್ಯ ಮಾಧ್ಯಮ ಎಲ್ಲ ವಯೋಮಾನದವರ ಮೆಚ್ಚಿನ ಮಾಧ್ಯಮ, ಈಗೊಂತು ಎಲ್ಲ ಕ್ಷೇತ್ರಗಳಲ್ಲೂ ದೃಶ್ಯ ಮಾಧ್ಯಮದ ಬೆಳಕು ಚೆಲ್ಲಿದೆ.

ಅನಿಮೇಷನ್ ಮಾಯಾಲೋಕ

ಒಂದು ಕಾಲದಲ್ಲಿ ದೃಶ್ಯ ಮಾಧ್ಯಮವೆಂದರೆ ಕೇವಲ ಕ್ಯಾಮೆರಾ ಮತ್ತು ಪಾತ್ರವರ್ಗದವರು ಎಂದಷ್ಟೇ ಕರೆಯಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಅನಿಮೇಷನ್ ಎಂಬ ಮಾಯೆ ದೃಶ್ಯ ಮಾದ್ಯಮಕ್ಕೆ ಹೊಸ ರೂಪ ನೀಡಿದೆ.

ಕೆರಿಯರ್ ಟ್ರೆಂಡ್ಸ್ 2018: ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ಚಿಕ್ಕಪುಟ್ಟ ಜಾಹೀರಾತುಗಳಿಂದ ಹಿಡಿದು, ದೊಡ್ಡ ಸಿನಿಮಾದವರೆಗೂ ಅನಿಮೇಷನ್ ಅನಿವಾರ್ಯವಾಗಿದೆ. ಕಾಲ್ಪನಿಕ ಜಗತ್ತನ್ನೇ ಕಟ್ಟಿಕೊಡುವ ಈ ಅನಿಮೇಷನ್ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲೂ ಸಂಚಲನ ಸೃಷ್ಟಿಸಿದೆ. ಇಂದು ದೃಶ್ಯ ಮಾಧ್ಯಮದ ಬಹುಮುಖ್ಯವಾದ ಭಾಗವಾಗಿ ಮಾರ್ಪಟ್ಟಿದೆ.

ಅನಿಮೇಷನ್ ಕೈತುಂಬಾ ಕೆಲಸ ಮತ್ತು ಹಣ ನೀಡುವ ಕ್ಷೇತ್ರ. ಇಲ್ಲಿ ಕೆಲಸಕ್ಕೆ ದುಪ್ಪಟ್ಟು ಹಣವಿದೆ. ಪಿಯುಸಿ ಅನುತ್ತೀರ್ಣರಾದವರಿಂದ ಹಿಡಿದು ಪದವಿಯಲ್ಲಿ ರ್ಯಾಂಕ್ ಪಡೆದವರವರೆಗೆ ಎಲ್ಲರಿಗೂ ಕೋರ್ಸ್‌ ಪ್ರವೇಶಕ್ಕೆ ಅವಕಾಶ ಇದೆ. ಮನರಂಜನಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಈ ಕ್ಷೇತ್ರ, ಪ್ರಸಕ್ತ ಟಿವಿ ಜಾಹೀರಾತು, ಚಲನಚಿತ್ರ, ಗೇಮ್‌ ಮೊದಲಾದ ಕಡೆ ಅನಿವಾರ್ಯ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಅಪಾರ ಸಂಖ್ಯೆಯ ಮಾನವ ಸಂಪನ್ಮೂಲ ಬಯಸುತ್ತಿರುವ ಈ ಕ್ಷೇತ್ರ ಉತ್ತಮ ವೇತನವನ್ನೂ ಒದಗಿಸುವುದರಿಂದ ಯುವಕರ ಪಾಲಿಗೆ ಇದೊಂದು ಸೂಕ್ತ ಆಯ್ಕೆ ಎಂದೇ ಹೇಳಬಹುದು.

2018 ರಲ್ಲಿ ಬಿಎಸ್ಸಿಯ ಈ ಕೋರ್ಸ್ ಗಳಿಗೆ ಹೆಚ್ಚು ಬೇಡಿಕೆ

ಅನಿಮೇಷನ್ ಗೆ ಸಂಬಂಧಿಸಿದಂತೆ ಅನೇಕ ಸರ್ಟಿಫಿಕೇಟ್ ಕೋರ್ಸ್ , ಡಿಪ್ಲೋಮ ಮತ್ತು ಪದವಿ ಕೋರ್ಸ್ಗಳಿವೆ. ಅನಿಮೇಷನ್ ಅಂಡ್ ಗ್ರಾಫಿಕ್ಸ್, ಡಿಪ್ಲೋಮ ಇನ್ ಅನಿಮೇಷನ್, ಗೇಮಿಂಗ್, ಮಲ್ಟಿಮೀಡಿಯಾ ಹೀಗೇ ಅನೇಕ ಕೋರ್ಸ್ಗಳಿದ್ದು, ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಠಿಸುವಲ್ಲಿ ಸಫಲವಾಗಿದೆ.

ಅನಿಮೇಷನ್ ಶಿಕ್ಷಣವನ್ನುಕೆಲವೇ ಕೆಲವು ಕಾಲೇಜುಗಳನ್ನು ಹೊರತು ಪಡಿಸಿದರೆ ಖಾಸಗಿ ಸಂಸ್ಥೆಗಳೇ ಹೆಚ್ಚು ಒದಗಿಸುತ್ತಿವೆ.

ಸಿನಿಮಾ, ಧಾರಾವಾಹಿ, ಶಿಕ್ಷಣ, ಜಾಹಿರಾತು, ಇಂಜಿನಿಯರಿಂಗ್ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅನಿಮೇಷನ್ ಬಳಕೆಯಾಗುತ್ತಿದೆ.ಅನಿಮೇಷನ್ ಕಲಿತರೆ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಉತ್ತಮ ವೇತನ ಸಿಗುವುದಲ್ಲದೆ ಸ್ವಂತ ಉದ್ಯೋಗದ ಕೂಡ ಮಾಡಬಹುದು.

English summary
Films, television channels, web design companies & ad agencies are all looking for animation specialists with the right skills.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia