ಚಾರ್ಟೆಡ್ ಅಕೌಂಟೆಂಟ್ ಆಗಬೇಕಾ? ಹಾಗಿದ್ರೆ ಏನು ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ

ಕೈತುಂಬಾ ಸಂಬಳ ಪಡೆಯುವ ಉದ್ಯೋಗ ಬೇಕು ಅಂತ ಎಲ್ಲಾ ಆಸೆ ಪಡ್ತಾರೆ ಆದರೆ ಯಾವ ಉದ್ಯೋಗಕ್ಕೆ ಸೇರಿದರೆ ಕೈತುಂಬಾ ಸಂಬಳ ಪಡೆಯಬಹುದು ಅನ್ನೋದೆ ಎಷ್ಟೋ ಮಂದಿಗೆ ಗೊತ್ತಿರಲ್ಲ. ಹಲವರು ಕನಸು ಕಾಣೋದು ವೃತ್ತಿ ಜೀವನ ಅಂದರೆ ಉತ್ತಮ ಪ್ರೊಫೆಷನ್ ಆಗಿರಬೇಕು ಮತ್ತು ಕೈತುಂಬಾ ಸಂಬಳ ಬೇಕು ಅಂತ. ಈ ರೀತಿ ಆಸೆ ಪಡೋರಿಗೆ ಇರೋ ಪರ್ಫೆಕ್ಟ್ ಜಾಬ್ ಅಂದರೆ ಚಾರ್ಟೆಡ್ ಅಕೌಂಟೆಂಟ್‌.

 ಈ ಅರ್ಹತೆಗಳಿದ್ದರೆ ನೀವೂ ಚಾರ್ಟೆಡ್ ಅಕೌಂಟೆಂಟ್ ಆಗುವುದು ಸುಲಭ

ಚಾರ್ಟೆಡ್ ಅಕೌಂಟೆಂಟ್ ಅಂದರೆ ಇಂದಿಗೂ ಎಂದಿಗೂ ಬಹು ಬೇಡಿಕೆ ಇರುವಂತಹ ಉದ್ಯೋಗ ಹಾಗೆ ಚಾರ್ಟೆಡ್ ಅಕೌಂಟೆಂಟ್ ಆದವರಿಗೆ ಉದ್ಯೋಗದ ಕೊರತೆ ಎದುರಾಗುವುದು ತುಂಬಾ ವಿರಳ ಅನ್ನುವ ಮಾತಿದೆ. ಹಾಗಿದ್ದರೆ ನೀವೂ ಯಾಕೆ ಚಾರ್ಟೆಡ್ ಅಕೌಂಟೆಂಟ್ ಆಗಬಾರದು? ಅನ್ನುವ ಯೋಚನೆ ನಿಮ್ಮ ತಲೆಯಲ್ಲಿದೆಯಾ? ಹಾಗಿದ್ರೆ ಮತ್ಯಾಕೆ ತಡ ಈ ಅರ್ಹತೆಗಳು ನಿಮ್ಮಲ್ಲಿದ್ದರೆ ಚಾರ್ಟೆಡ್ ಅಕೌಂಟೆನ್ಸಿ ಕಲಿಕೆಯನ್ನು ಮಾಡಬಹುದು. ಯಾವೆಲ್ಲಾ ಅರ್ಹತೆಗಳು ಪ್ರಮುಖ ಅಂತೀರಾ ಮುಂದೆ ಓದಿ.

ಶೈಕ್ಷಣಿಕ ವಿದ್ಯಾರ್ಹತೆ ಏನಿರಬೇಕು?

10+2 ಅನ್ನು ಯಾವುದೇ ವಿಭಾಗದಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾದ ಅಭ್ಯರ್ಥಿಗಳು ಚಾರ್ಟೆಡ್ ಅಕೌಂಟೆನ್ಸಿ ಕೋರ್ಸ್‌ ಅನ್ನು ಮಾಡಬಹುದು. ಅಷ್ಟೇ ಅಲ್ಲದೇ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಕೂಡ ಈ ಕಲಿಕೆಯನ್ನು ಮಾಡಬಹುದು.

ಸಾಮಾನ್ಯವಾಗಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನದ ಮಾಡಿದ ಅಭ್ಯರ್ಥಿಗಳು ಸಿಎ ಅಧ್ಯಯನ ಮಾಡಲು ಹೆಚ್ಚು ಆಸಕ್ತಿ ತೋರುತ್ತಾರೆ ಏಕೆಂದರೆ ವಾಣಿಜ್ಯ ವಿಭಾಗದಲ್ಲಿ ಅಕೌಂಟೆನ್ಸಿ ಮತ್ತು ಫಿನಾನ್ಸ್ ವಿಷಯಗಳನ್ನು ಅಭ್ಯಸಿಸಿರುವುದರಿಂದ ಅವರಿಗೆ ಈ ಕಲಿಕೆ ಹೆಚ್ಚು ಸೂಕ್ತ ಮತ್ತು ಸುಲವಾಗಿ ಅರ್ಥವಾಗುವಂತದ್ದೂ ಆಗಿರುತ್ತದೆ.

<strong>ಸಂದರ್ಶನಕ್ಕೆ ಹೋಗುವಾಗ ಯಾವ ವಸ್ತುಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು !</strong>ಸಂದರ್ಶನಕ್ಕೆ ಹೋಗುವಾಗ ಯಾವ ವಸ್ತುಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು !

ಸಿಎ ಕೋರ್ಸ್‌ ಕಲಿಕೆ ಹೇಗಿರುತ್ತೆ?

ಸಿಎ ಕೋರ್ಸ್‌ ಕಲಿಕೆ ಮೂರು ಹಂತದ್ದಾಗಿರುತ್ತೆ. ಅವುಗಳನ್ನ ಪಾಸ್ ಮಾಡಿದ್ರೆ ನೀವು ಚಾರ್ಟೆಡ್ ಅಕೌಂಟೆಂಟ್ ಆಗಬಹುದು. ಅವು ಯಾವುವೆಂದರೆ:

1. ಸಿಪಿಟಿ (ಕಾಮನ್ ಎಫಿಷಿಯನ್ಸಿ ಟೆಸ್ಟ್)
2. ಐಪಿಸಿಸಿ ( ಇಂಟೀಗ್ರೇಟೆಡ್ ಪ್ರೊಫೆಷನಲ್ ಕಾಂಪಿಟೆನ್ಸ್ ಕೋರ್ಸ್)
3. ಸಿಎ ಫೈನಲ್ ಕೋರ್ಸ್‌

ಸಿಎ ಕೋರ್ಸ್‌ ಮಾಡಿದ ಮೇಲೆ ಯಾವೆಲ್ಲಾ ಕೋರ್ಸ್‌ ಮಾಡಬಹುದು?

ಸಿಎ ಕೋರ್ಸ್ ಮಾಡಿದ ನಂತರ ಅಭ್ಯರ್ಥಿಗಳು ಅಡ್ವಾನ್ಸ್ಡ್ ಕೋರ್ಸ್‌ ಮತ್ತು ಲಾ, ಫಿನಾನ್ಸ್ ಮ್ಯಾನೇಜ್ಮೆಂಟ್ ಮತ್ತು ಟ್ಯಾಕ್ಸೇಶನ್‌ನಲ್ಲಿ ಸ್ಟೆಷಲೈಸೇಶನ್ ಕೂಡ ಮಾಡಬಹುದು.

ಸಿಎ ಮುಗಿದ ಬಳಿಕ ಉದ್ಯೋಗಾವಕಾಶಗಳು ಹೇಗಿವೆ?

ಸಿಎ ಕೋರ್ಸ್‌ ಮಾಡಿದ ಅಭ್ಯರ್ಥಿಗಳಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ವಿಫುಲವಾಗಿದೆ. ಹಾಗಾಗಿ ಸಿಎ ಮುಗಿಸಿದ ಬಳಿಕ ಎಲ್ಲಿ ಉದ್ಯೋಗವನ್ನು ಅರಸಬಹುದು ಎನ್ನುವುದಕ್ಕೆ ಪುಟ್ಟ ಮಾಹಿತಿ ಇಲ್ಲಿದೆ.

* ಬ್ಯಾಂಕಿಂಗ್ ಮತ್ತು ವಿಮೆ ಸೆಕ್ಟರ್ (ಸರ್ಕಾರಿ ಮತ್ತು ಖಾಸಗಿ)
* ತೆರಿಗೆ ಇಲಾಖೆ
* ಟ್ಯಾಕ್ಸ್ ಅಡ್ವೈಸರಿ ಸಂಸ್ಥೆಗಳು
* ಆಡಿಟಿಂಗ್ ಸಂಸ್ಥೆಗಳು
* ಸ್ಟಾಕ್ ಬ್ರೋಕಿಂಗ್ ಸಂಸ್ಥೆಗಳು
* ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಸಂಸ್ಥೆಗಳು
* ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು
* ಲಾ ಸಂಸ್ಥೆಗಳು
* ಹಣಕಾಸು ಸಂಸ್ಥೆಗಳು
* ಸಿಎ ಸಂಸ್ಥೆಗಳು
* ಕಾರ್ಪೋರೇಟ್ ಹೌಸಸ್ (ಪ್ಲಾನಿಂಗ್ ಮತ್ತು ಬಡ್ಜೆಟ್)

<strong>ಪಿಯುಸಿ ನಂತರ ವಿದೇಶದಲ್ಲಿ ನೀವು ಅಧ್ಯಯನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? ನಾವು ಹೇಳ್ತೀವಿ ನೋಡಿ</strong>ಪಿಯುಸಿ ನಂತರ ವಿದೇಶದಲ್ಲಿ ನೀವು ಅಧ್ಯಯನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? ನಾವು ಹೇಳ್ತೀವಿ ನೋಡಿ

ಈ ಎಲ್ಲಾ ಸಂಸ್ಥೆಗಳು ಹಣಕಾಸಿನ ವ್ಯವಹಾರದಡಿ ಕಾರ್ಯನಿರ್ವಹಿಸುವುದರಿಂದ ಅಲ್ಲಿ ತೆರಿಗೆ ಇನ್ನಿತರೆ ಹಣಕಾಸಿನ ವಿಚಾರಗಳ ಕಾರ್ಯನಿರ್ವಹಿಸಲು ಸಿಎ ಮಾಡಿದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಸಂಸ್ಥೆಗಳಲ್ಲಿ ಉದ್ಯೋಗ ಮಾಡುವುದಲ್ಲದೇ ಅಭ್ಯರ್ಥಿಗಳು ಸ್ವಂತ ಉದ್ಯೋಗವನ್ನಾಗಿ ಕೂಡ ಮಾಡಿಕೊಳ್ಳಬಹುದು. ಆದರೆ ಯಾವುದೇ ಅಭ್ಯರ್ಥಿಗಳು ಸ್ವಂತ ಉದ್ಯೋಗ ಪ್ರಾರಂಭಿಸುವ ಮುನ್ನ ಕೆಲವು ವರ್ಷಗಳು ಸಂಸ್ಥೆಗಳಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸಿದ್ದಲ್ಲಿ ಸ್ವಂತ ಉದ್ಯೋಗ ಸಕ್ಸಸ್ ಆಗುವುದು ಸುಲಭ. ಸ್ವಂತ ಉದ್ಯೋಗ ಮಾಡೋಕೆ ಯಾವೆಲ್ಲಾ ಜಾಬ್ ಪ್ರೊಫೈಲ್‌ಗಳಿವೆ ಮುಂದೆ ನೋಡಿ.

* ಆಡಿಟರ್
* ಕಾಸ್ಟ್ ಅಕೌಂಟೆಂಟ್
* ಟ್ಯಾಕ್ಸ್ ಸ್ಪೆಷಲಿಸ್ಟ್
* ಇನ್ವೆಸ್ಟ್‌ಮೆಂಟ್ ಬ್ಯಾಂಕರ್
* ಅಸೆಟ್ ಮ್ಯಾನೇಜರ್
* ಮ್ಯಾನೇಜರ್ / ಅಸಿಸ್ಟೆಂಟ್ ಮ್ಯಾನೇಜರ್
* ಕನ್ಸಲ್ಟೆಂಟ್

ಸಿಎ ಕಲಿಕೆಯ ಬಗೆಗೆ ಆಸಕ್ತಿದಾಯಕ ಮಾಹಿತಿಯನ್ನು ಕರಿಯರ್ ಇಂಡಿಯಾ ನಿಮಗಾಗಿ ನೀಡಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ಅಂತರ್ಜಾಲದಲ್ಲಿ ಪಡೆಯಬಹುದು.

<strong>ಪಿಯುಸಿ ನಂತರ ಯಾವೆಲ್ಲಾ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಬಹುದು ಗೊತ್ತಾ ?</strong>ಪಿಯುಸಿ ನಂತರ ಯಾವೆಲ್ಲಾ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಬಹುದು ಗೊತ್ತಾ ?

For Quick Alerts
ALLOW NOTIFICATIONS  
For Daily Alerts

English summary
Here we are giving brief information about Chartered Accountancy and its courses and job opportunities.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X