ಕಾಮೆಡ್ ಕೆ ಪರೀಕ್ಷೆ ಸುಲಭವಾಗಿರಬೇಕೆ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಕರ್ನಾಟಕ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಶಿಕ್ಷಣ ತೆಗೆದುಕೊಳ್ಳುವವರಿಗಾಗಿ ನಡೆಸುವ ಕಾಮೆಡ್‌ ಕೆ ಪರೀಕ್ಷೆ ಜುಲೈ 25 ರಂದು ನಡೆಯಲಿದೆ. ಹಲವು ಕನಸುಗಳನ್ನು ಹೊತ್ತಿರುವ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಈ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಹೇಗೆ ಬರೆಯಬಹುದು ಮತ್ತು ಪರೀಕ್ಷೆಯನ್ನು ಹೇಗೆ ಸುಲಭವಾಗಿ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಇಲ್ಲಿ ಕೆಲವು ಟಿಪ್ಸ್ ಅನ್ನು ನೀಡಲಿದ್ದೇವೆ ತಪ್ಪದೇ ಓದಿ.

 

ಕಾಮೆಡ್ -ಕೆ ಪರೀಕ್ಷಾ ತಯಾರಿಗೆ ಇಲ್ಲಿದೆ ಟಿಪ್ಸ್

* ಪರೀಕ್ಷೆಗೆ ಕೆಲವೇ ದಿನಗಳಿರುವುದರಿಂದ ನಿಮ್ಮ ಸ್ಟಡಿ ಮೆಟೀರಿಯಲ್ ಗಳನ್ನು ಮೊದಲ ಪುಟದಿಂದ ಒಮ್ಮೆ ಮೆಲುಕು ಹಾಕುತ್ತಾ ಬನ್ನಿ. ಯಾವುದೇ ಗೊಂದಲಗಳನ್ನು ಸೃಷ್ಟಿಸಿಕೊಳ್ಳದೇ ವಿಷಯವನ್ನು ಸ್ಪಷ್ಟವಾಗಿ ಮನನ ಮಾಡಿಕೊಳ್ಳುತ್ತಾ ಹೋಗಿ.

* ವಿಷಯಗಳನ್ನು ಪುನರ್‌ ಮನನ ಮಾಡುವ ಸಂದರ್ಭದಲ್ಲಿ ಯಾವ ವಿಷಯ ನಿಮ್ಮನ್ನು ಹೆಚ್ಚು ಗೊಂದಲಕ್ಕೀಡು ಮಾಡುತ್ತಿದೆ ಮತ್ತು ನಿಮಗೆ ನೆನಪಿಡಲು ಕಷ್ಟಕರವಾಗಿದೆಯೋ ಆ ವಿಷಯವನ್ನು ಒಂದೆಡೆ ನೋಟ್ ಮಾಡಿ ಇಡಿ ಅದನ್ನು ಫ್ರೀ ಟೈಂ ನಲ್ಲಿ ಬರೆದು ಬರೆದು ಅಭ್ಯಾಸ ಮಾಡಿ ನಂತರ ಹೆಚ್ಚಿನ ಕಾಲ ನೆನಪಿನಲ್ಲುಳಿಯಲು ಸಹಾಯವಾಗುತ್ತದೆ.

* ವಿಜ್ಞಾನ ವಿಷಯಗಳಲ್ಲಿ ಬರುವ ಡೈಯಾಗ್ರಾಮ್ ಮತ್ತು ಫಾರ್ಮುಲಾಗಳು ಹೆಚ್ಚು ಪ್ರಮುಖವಾದವು ಹಾಗಾಗಿ ಅವುಗಳನ್ನು ಹೆಚ್ಚು ಅಭ್ಯಾಸ ಮಾಡಿ ನೆನಪಿಲ್ಲಿಟ್ಟುಕೊಳ್ಳಿ. ಬೇರೆ ವಿಷಯಗಳಿಗಿಂತ ಈ ವಿಷಯಗಳನ್ನು ನೆನಪಿನಲ್ಲಿಡುವುದು ತುಂಬಾನೆ ಸುಲಭ ಮತ್ತು ಲಾಭದಾಯಕರವೂ ಹೌದು.

* ಪ್ರತಿನಿತ್ಯವೂ ಓದಿದಷ್ಟೇ ಅಲ್ಲದೇ ಓದಿದ್ದೆಲ್ಲವನ್ನು ಪರೀಕ್ಷಿಸಿಕೊಳ್ಳಲು ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ತಿರುವು ಹಾಕಿ. ಆಗ ಯಾವ ಪ್ರಶ್ನೆಗಳು ಪುನರ್ ಕೇಳಲಾಗಿವೆ? ಮತ್ತೆ ಯಾವ ವಿಷಯಗಳನ್ನು ಹೇಗೆ ಕೇಳಲಾಗಿದೆ ಎಂಬ ಪ್ರಶ್ನೆ ಪತ್ರಿಕೆಯ ಫಾರ್ಮಾಟ್ ನಿಮಗೆ ತಿಳಿಯುತ್ತದೆ.

* ಇನ್ನೂ ಪರೀಕ್ಷೆಗೆ ಹೋಗುವ ಮುನ್ನು 3 ರಿಂದ 4 ಭಾರಿಯಾದರೂ ನಿಮ್ಮ ಸ್ಟಡಿ ಮೆಟೀರಿಯಲ್‌ಗಳನ್ನು ಗಮನಿಸಿಕೊಳ್ಳಿ ಕಾರಣ ಇದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ ಮತ್ತು ವಿಷಯವು ಹೆಚ್ಚು ನೆನಪಿನಲ್ಲಿಡಲು ಸಹಾಯವಾಗುತ್ತದೆ.

 

ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳುವುದರ ಜೊತೆಗೆ ಸ್ಮಾರ್ಟ್ ವರ್ಕ್ ಮಾಡಿದ್ದಲ್ಲಿ ಉತ್ತಮ ಫಲಿತಾಂಶ ಖಚಿತ ಹಾಗಾಗಿ ಯಾವುದೇ ಗೋಜಿಗೆ ಒಳಗಾಗದೆ ತಮಗೆ ಇರುವ ಅಲ್ಪ ಸಮಯದಲ್ಲಿ ಹೇಗೆ ಸಮಯವನ್ನು ಸದುಪಯೋಗಪಡಿಸಿಕೊಳ್ಳಲಿಕ್ಕೆ ಸಾಧ್ಯವೋ ಅಷ್ಟು ಉತ್ತಮ ರೀತಿಯಲ್ಲಿ ಅಭ್ಯಾಸವನ್ನು ಕೈಗೊಳ್ಳಿ. ಹಾಗಿದ್ದಾಗ ಮಾತ್ರ ಯಾವ ಪರೀಕ್ಷೆಯೂ ಕಷ್ಟವಲ್ಲ. ಇನ್ನೂ ಪರೀಕ್ಷೆ ಹತ್ತಿರವಿದೆ ಎಂಬ ಆತಂಕವೂ ನಿಮ್ಮ ನೆನಪಿನ ಸಮಸ್ಯೆಗೆ ಕುಂದು ತರುವ ಸಾಧ್ಯತೆ ಇರುತ್ತದೆ ಹಾಗಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗೆಗೂ ಕಾಳಜಿ ವಹಿಸುವುದು ಅಗತ್ಯ. ವಿದ್ಯಾರ್ಥಿಗಳು ಹೆಚ್ಚು ಶಾಂತ ಚಿತ್ತರಾಗಿದ್ದಲ್ಲಿ ಅವರಲ್ಲಿ ಜ್ಞಾನ ಮಟ್ಟ ಮತ್ತು ಬುದ್ದಿ ಮಟ್ಟ ಎರಡೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುವುದು ಹಾಗಾಗಿ ಪರೀಕ್ಷೆ ದಿನದವರೆಗೂ ಪ್ರತಿದಿನ ಬೆಳಗ್ಗೆ 1 ಗಂಟೆಯಾದರೂ ಧ್ಯಾನ ಮಾಡಿ ಉತ್ತಮ ರೀತಿಯ ಮನಸ್ಥಿಯನ್ನು ಕಾಪಾಡಿಕೊಳ್ಳಿ. ಇನ್ನೂ ಪರೀಕ್ಷೆಯ ಹಿಂದಿನ ದಿನ ಮತ್ತು ಪರೀಕ್ಷೆಯ ದಿನ ಯಾವುದೇ ನಿಶ್ಚಿಂತೆಯಿಂದ ತಿಳಿದಿರುವ ಎಲ್ಲಾ ವಿಷಯಗಳೊಂದಿಗೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶ ನಿಮ್ಮದಾಗಲಿ.

For Quick Alerts
ALLOW NOTIFICATIONS  
For Daily Alerts

English summary
Here we are giving COMDEK UGET 2020 exam preparation tips for students. Read on
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X