ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮಾಡುವ ಕಾಮನ್ ತಪ್ಪುಗಳು!

ಇತ್ತೀಚೆಗಷ್ಟೇ ಸಿವಿಲ್ ಸರ್ವೀಸ್ ಪರೀಕ್ಷೆ ೨೦೧೭ ರಿಸಲ್ಟ್ ಪ್ರಕಟವಾಗಿ ಅದೆಷ್ಟೋ ಸಕ್ಸಸ್ ಸ್ಟೋರಿ ನೀವು ಕೇಳಿರುತ್ತೀರಿ. ಈ ಪರೀಕ್ಷೆ ಪಾಸ್ ಮಾಡಿರುವ ವಿದ್ಯಾರ್ಥಿಗಳು ಇದೀಗ ಪರೀಕ್ಷೆಗೆ ಹೇಗೆ ತಯಾರು ಮಾಡಿಕೊಂಡಿದ್ದರು, ಯಾವ ರೀತಿ ಸ್ಟಡಿ ಮಾಡಿದ್

ಇತ್ತೀಚೆಗಷ್ಟೇ ಸಿವಿಲ್ ಸರ್ವೀಸ್ ಪರೀಕ್ಷೆ 2017 ರಿಸಲ್ಟ್ ಪ್ರಕಟವಾಗಿ ಅದೆಷ್ಟೋ ಸಕ್ಸಸ್ ಸ್ಟೋರಿ ನೀವು ಕೇಳಿರುತ್ತೀರಿ. ಈ ಪರೀಕ್ಷೆ ಪಾಸ್ ಮಾಡಿರುವ ವಿದ್ಯಾರ್ಥಿಗಳು ಇದೀಗ ಪರೀಕ್ಷೆಗೆ ಹೇಗೆ ತಯಾರು ಮಾಡಿಕೊಂಡಿದ್ದರು, ಯಾವ ರೀತಿ ಸ್ಟಡಿ ಮಾಡಿದ್ದರು ಯಾವ ರೀತಿ ಹಾರ್ಡ್ ವರ್ಕ್ ಮಾಡಿದ್ದರು ಎಂಬುವುದರ ಬಗ್ಗೆ ನೀವು ತಿಳಿಸಿದ್ದಾರೆ. ಇಂತಹ ಪ್ರವೇಶಾತಿ ಪರೀಕ್ಷೆಗಳಿಗೆ ಹಾರ್ಡ್ ವರ್ಕ್ ತುಂಬಾ ಮುಖ್ಯ ಅಷ್ಟೇ ಅಲ್ಲ ಇಂತಹ ಪರೀಕ್ಷೆ ತಯಾರಿಗೆ ಸ್ಮಾರ್ಟ್ ವರ್ಕ್ ಕೂಡಾ ಅಷ್ಟೇ ಮುಖ್ಯ.

ಐಎಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮಾಡುವ ಕಾಮನ್ ತಪ್ಪುಗಳು

ಪ್ರತಿಯೊಬ್ಬರು ಇಂತಹ ಪರೀಕ್ಷೆಗೆ ತಮ್ಮ ಸ್ಟ್ರೆಂತ್ ಹಾಗೂ ವೀಕ್‌ನೆಸ್ ಗೆ ಸಂಬಂಧಪಟ್ಟಂತೆ ತಮ್ಮದೇ ಸ್ಟಾಟಜಿ ಫಾಲೋ ಮಾಡುತ್ತಾರೆ. ಪ್ಲ್ಯಾನ್ ಮಾಡಿ ಸ್ಟಡಿ ಮಾಡುತ್ತಾರೆ. ಆದ್ರೆ ಇಂತಹ ಪರೀಕ್ಷೆಗೆ ಅಷ್ಟು ಮಾಡಿದ್ರೆ ಮಾತ್ರ ಸಾಲಾಗುವುದಿಲ್ಲ ಬದಲಿಗೆ, ಕಾಮನ್ ಮಿಸ್ಟೇಕ್ಸ್ ಗಳನ್ನ ಹೇಗೆ ಅವಾಯ್ಡ್ ಮಾಡುವುದು ಎಂದು ಕೂಡಾ ತಿಳಿದಿರಬೇಕು.

ಜೂನ್ 3ರಂದು ಪ್ರಿಲಿಮಿನರಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ಹಾಜರಾಗುವವರು ಯಾವೆಲ್ಲಾ ಕಾಮನ್ ಮಿಸ್ಟೇಕ್ಸ್ ಗಳನ್ನ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ಆಫೀಶಿಯಲ್ ಮಾಹಿತಿ ಓದದೇ ಇರುವುದು:

ಈ ಪರೀಕ್ಷೆಗೆ ಸಂಬಂಧಪಟ್ಟಂತೆ ಸೀನಿಯರ್ಸ್ ಅಥವಾ ಇನ್ನಿತ್ತರರು ಯಾವುದಾದ್ರೂ ರೂಮರ್ಸ್ ಸ್ಪ್ರೆಡ್ ಮಾಡಬಹುದು. ನೀವು ಅಂತಹ ರೂಮರ್ಸ್ ಗೆ ಕಿವಿಕೊಡದೇ ಏನೇ ಡೌಟ್ ಇದ್ರೂ ನೇರವಾಗಿ ಆಫೀಶಿಯಲ್ ಮೂಲಗಳನ್ನ ಸಂಪರ್ಕಿಸಿ ಪರಿಹರಿಸಿಕೊಳ್ಳಿ. ಇಲ್ಲ ಆಫೀಶಿಯಲ್ ಮಾಹಿತಿ ಪುಸ್ತಕ ಏನಾದ್ರೂ ಸಿಕ್ಕಾಗ ಕಂಪ್ಲೀಟ್ ಆಗಿ ಓದಲು ಮರೆಯದಿರಿ. ಅಷ್ಟೇ ಅಲ್ಲ ಓದಿದ ಬಳಿಕ ಕ್ರಾಸ್ ಚೆಕ್ ಕೂಡಾ ಮಾಡಿ.

ಎಲ್ಲಾ ಪುಸ್ತಕಗಳನ್ನ ಓದಿದ್ರೆ ಹೆಚ್ಚು ಮಾಹಿತಿ:

ಸಿವಿಲ್ ಎಕ್ಸಾಂ ಬರೆಯುವವರು ಎಲ್ಲಾ ಪುಸ್ತಕಗಳನ್ನ ಓದುವುದು ಬೆಸ್ಟ್ ಎಂಬ ನಂಬಿಕೆ ಇದೆ. ಸಾಧ್ಯವಾದಷ್ಟು ಎಲ್ಲಾ ಪುಸ್ತಕಗಳನ್ನ ಓದಿ ಎಂಬ ಮಾತಿದೆ. ಆದ್ರೆ ಮಾರ್ಕೆಟ್ ನಲ್ಲಿ ಈ ಪರೀಕ್ಷೆಗೆ ಹಾಗೂ ಒಂದೇ ಟಾಪಿಕ್ ಬಗ್ಗೆ ಅದೆಷ್ಟೋ ಪುಸ್ತಕಗಳು ಲಭ್ಯವಿರುತ್ತದೆ. ಹೆಚ್ಚು ಜ್ಞಾನವಿದ್ರೆ ಅದು ನಿಜಕ್ಕೂ ನಿಮಗೆ ಲಾಭವೇ.

ಆದ್ರೆ ಅದೆಷ್ಟೋ ಲೇಖಕರು ಒಂದೇ ಟಾಪಿಕ್ ನ್ನು ವಿಭಿನ್ನ ರೀತಿಯಲ್ಲಿ ವಿವರಿಸಿರುತ್ತಾರೆ. ಹಾಗಾಗಿ ಹಲವಾರು ಪುಸ್ತಕ ರೆಫರ್ ಮಾಡುವುದರಿಂದ ನಿಮ್ಮಲ್ಲಿ ಅದೆಷ್ಟೋ ಗೊಂದಲಗಳು ಸೃಷ್ಟಿಯಾಗಬಹುದು.

ಓದುತ್ತಿರುವಾಗ ನೋಟ್ ಮಾಡಿಕೊಳ್ಳದೇ ಇರುವುದು:

ಪ್ರತಿಯೊಬ್ಬರು ನೀವು ಪರೀಕ್ಷೆಯಲ್ಲಿ ಗಳಿಸಿದ ಅಂಕದ ಬಗ್ಗೆ ತಿಳಿದುಕೊಳ್ಳುತ್ತಾರೆ ವಿನಾಃ ನೀವೆಷ್ಟು ಹಾರ್ಡ್ ವರ್ಕ್ ಮಾಡಿದ್ದೀರಿ ಎಂದು ತಿಳಿದುಕೊಳ್ಳುವುದಿಲ್ಲ. ಅದೇ ರೀತಿ ನೀವೆಷ್ಟು ಓದಿದ್ದೀರಿ ಎಂಬುವುದು ಪ್ರಮುಖವಲ್ಲ ಬದಲಿಗೆ ನೀವೆಷ್ಟು ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದೀರಿ ಎಂಬುವುದು ಇಂಪೋರ್ಟೆಂಟ್. ಓದುವಾಗ ಪ್ರತಿಯೊಂದನ್ನ ಕೂಡಾ ನೆನಪಿಟ್ಟುಕೊಳ್ಳುವುದು ತುಂಬಾ ಕಷ್ಟ.

ಹಾಗಾಗಿ ಇನ್ನುಮುಂದೆ ಓದುವಾಗ ನಿಮ್ಮದೇ ನೋಟ್ಸ್ ಕೂಡಾ ತಯಾರು ಮಾಡಿಕೊಳ್ಳಿ. ಪ್ರಮುಖ ಟಾಪಿಕ್ ನ್ನ ಹೈಲೆಟ್ ಮಾಡಿಕೊಳ್ಳಿ. ಈ ಆಕ್ಟಿವಿಟಿಯಿಂದ ಓದಿರುವುದು ನಿಮಗೆ ಸದಾ ನೆನಪಿನಲ್ಲಿ ಇರುತ್ತದೆ.

ಸುದ್ದಿ ಪತ್ರಿಕೆಯಲ್ಲಿ ಏನು ಓದುತ್ತಿರಾ ಎಂಬುವುದ ಅರ್ಥವಾಗಲ್ಲ:

ಇಂತಹ ಪರೀಕ್ಷೆಯಲ್ಲಿ ಕರೆಂಟ್ ಅಫೇರ್ಸ್ ಸೆಕ್ಷನ್ ಎಂದೂ ಕೂಡಾ ಇದೆ. ಹಾಗಾಗಿ ಪ್ರತಿನಿತ್ಯ ಸಮಾಜದಲ್ಲಿ ಏನೆಲ್ಲಾ ವಿದ್ಯಾಮಾನಗಳು ನಡೆಯುತ್ತಿದೆ ಎಂಬುದು ತಿಲಿದುಕೊಳ್ಳುವುದು ಕೂಡಾ ಅಗತ್ಯ. ಈ ಸೆಕ್ಷನ್ ಕೂಡಾ ಓದಿದ್ರೆ ಬರೀ ಪರೀಕ್ಷೆ ವೇಳೆ ಮಾತ್ರವಲ್ಲ ಇಂಟರ್ ವ್ಯೂ ವೇಳೆಯೂ ಸಹಾಯಕ್ಕೆ ಬರುವುದು.

ಕರೆಂಟ್ ಅಫೇರ್ಸ್ ಎಂದಕ್ಷಣ ಸುದ್ದಿ ಪತ್ರಿಕೆ ಓದುವುದು ಫಸ್ಟ್ ಆಂಡ್ ಬೆಸ್ಟ್. ಆದ್ರೆ ಹಲವಾರು ವಿದ್ಯಾರ್ಥಿಗಳು ಪ್ರತಿ ದಿನ ಸುದ್ದಿ ಪತ್ರಿಕೆ ಓದಲು ಸುಮಾರು ೩ ಕ್ಕೂ ಹೆಚ್ಚು ಗಂಟೆ ವ್ಯಯಿಸುತ್ತಾರೆ. ಅದಕ್ಕಾಗಿ ಪತ್ರಿಕೆಯಲ್ಲಿಯೂ ಯಾವುದು ಇಂಪೋರ್ಟೆಂಟ್ ಎಂದು ತಿಳಿದು ಮತ್ತೆ ಓದಲು ಪ್ರಾರಂಭಿಸಿ.

For Quick Alerts
ALLOW NOTIFICATIONS  
For Daily Alerts

English summary
The release of the Civil Services 2017 results has paved way for hundreds of success stories. Almost all the candidates who have cleared the exam have spoken about the hard work and dedication required to ace the exam. The hard work is the most important factor to do well in any entrance examination. However, this hard work should be accompanied by smart work to be best prepared for the competition.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X