Corona Effect: ಮಕ್ಕಳ ಶಿಕ್ಷಣದ ಕಲಿಕೆಗೆ ಇಲ್ಲಿದೆ ಸಲಹೆ

ಪ್ರತಿ ವರ್ಷ ಮಾರ್ಚ್ ತಿಂಗಳ ಅಂತ್ಯದಲ್ಲಿ ವಾರ್ಷಿಕ ಪರೀಕ್ಷೆಯನ್ನು ಮುಗಿಸಿದ ಮಕ್ಕಳು ಬೇಸಿಗೆ ರಜೆಯನ್ನು ಆನಂದದಿಂದ ಕಳೆಯುತ್ತಿದ್ದರು. ಆದರೆ ಈ ಬಾರಿ ಆ ಅವಕಾಶವನ್ನು ಕೊರೋನಾ ಕಿತ್ತುಕೊಂಡಿದೆ. ಇತ್ತ ಪರೀಕ್ಷೆಯೂ ಇಲ್ಲ ಅತ್ತ ಬೇಸಿಗೆ ರಜೆಯ ಮಜವೂ ಇಲ್ಲ. ಇನ್ನೂ ಶಾಲೆ ಪ್ರಾರಂಭ ಆಗೋದ್ಯಾವಾಗ ಎನ್ನುವುದಕ್ಕೆ ಉತ್ತಕ ಸಿಕ್ಕಿಲ್ಲ. ಹಾಗಾದ್ರೆ ಮಕ್ಕಳ ಕಥೆ ಏನು? ಎಂದರೆ ಈಗಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ನೀಡುತ್ತಿರುವುದು., ಮಕ್ಕಳ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ದಿನಕ್ಕೆ ಇಷ್ಟು ಅವಧಿ ಎಂದು ನಿಗದಿಪಡಿಸಿ ಆನ್‌ಲೈನ್ ತರಗತಿಯನ್ನು ನೀಡಲಾಗುತ್ತಿದೆ. ಆದರೆ ಕೆಲವು ಗ್ರಾಮೀಣ ವಿದ್ಯಾರ್ಥಿಗಳು ಈ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ಕೊರೋನಾ ಸಮಯದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಟಿಪ್ಸ್

ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್ ತರಗತಿಗಳು ನಡೆಸುವುದಲ್ಲದೆ ದಾರಿ ಇಲ್ಲ ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಕರ. ಇದೆಲ್ಲದರ ನಡುವೆಯೂ ಮಕ್ಕಳನ್ನು ಮನೆಯಲ್ಲೇ ಕೂರಿಸುವುದು ಹೇಗೆ ? ಆನ್‌ಲೈನ್ ಕ್ಲಾಸ್ ಮುಗಿದ ಬಳಿಕ ಅವರನ್ನು ಮನೆಯಲ್ಲೇ ಎಂಗೇಜ್ ಮಾಡುವುದು ಹೇಗೆ ಎನ್ನುವುದಕ್ಕೆ ಕರಿಯರ್ ಇಂಡಿಯಾ ಸಲಹೆಯನ್ನು ನೀಡುತ್ತಿದೆ. ಈ ಸಲಹೆಗಳನ್ನು ತಪ್ಪದೇ ಪಾಲಿಸಿ ಇದರಿಂದ ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಕೊಂಚ ಸಮಾಧಾನ ಸಿಗಬಹುದು.

ಆನ್‌ಲೈನ್ ತರಗತಿಗೆ ಸಹಕರಿಸಿ:

ಆನ್‌ಲೈನ್ ತರಗತಿಗೆ ಸಹಕರಿಸಿ:

ಆನ್‌ಲೈನ್ ತರಗತಿ ಎಂಬುದು ಹೊಸತೇನಲ್ಲ ಆದರೆ ಶಾಲೆಗೆ ಹೊಗದೆಯೇ ಮನೆಯಲ್ಲೇ ಕಲಿಕೆ ಮಾಡುವುದು ಅಷ್ಟರ ಮಟ್ಟಿನ ಪ್ರಭಾವ ಬೀರಲು ಸಾಧ್ಯವಿಲ್ಲ. ಆದರೂ ಪೋಷಕರು ಆನ್‌ಲೈನ್ ತರಗತಿಗಳಿಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿ. ತರಗತಿಗಳನ್ನು ಸರಿಯಾಗಿ ಕೇಳಿಕೊಳ್ಳುವಂತೆ ಮತ್ತು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿ. ಆನ್‌ಲೈನ್ ತರಗತಿ ಬೋರ್ ಎನಿಸದಂತೆ ಅದು ಇಷ್ಟವಾಗುವಂತೆ ಅವರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿ. ಇನ್ನು ಆನ್‌ಲೈನ್ ಕ್ಲಾಸ್ ವೇಳೆ ಮಕ್ಕಳ ಗಮನವನ್ನು ಕೇಂದ್ರೀಕರಿಸುವಂತೆ ಮಾಡಲು ನಿಮ್ಮ ಸಹಕಾರ ಹೆಚ್ಚು ಅಗತ್ಯ.

ಹವ್ಯಾಸಗಳಿಗೆ ಪ್ರಾಮುಖ್ಯತೆ ನೀಡಿ:

ಹವ್ಯಾಸಗಳಿಗೆ ಪ್ರಾಮುಖ್ಯತೆ ನೀಡಿ:

ಮನೆಯಲ್ಲೆ ಕಾಲ ಕಳೆಯಬೇಕಿರುವಾಗ ಮಕ್ಕಳಿಗೆ ಏನಿಷ್ಟ ಎನ್ನುವುದನ್ನು ತಿಳಿದುಕೊಳ್ಳಿ ಚಿತ್ರಕಲೆ, ಹಾಡುಗಾರಿಕೆ ಅಥವಾ ಭರತನಾಟ್ಯ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿ. ಇದರಿಂದ ಮಕ್ಕಳಲ್ಲಿ ಕಲೆಯ ಬಗೆಗೆ ಅಭಿರುಚಿ ಹೆಚ್ಚಾಗುತ್ತದೆ ಜೊತೆಗೆ ಮಕ್ಕಳ ಮನಸ್ಸು ಇಂತಹ ಚಟುವಟಿಕೆಗಳಿಂದ ಚಿಗುರುತ್ತದೆ. ಈ ಹವ್ಯಾಸಗಳಿಂದಲೂ ಅವರ ಬದುಕಿನ ಉದ್ದೇಶ ಮತ್ತು ಗುರಿಗಳು ಇನ್ನಷ್ಟು ಧೃಡವಾಗುತ್ತವೆ. ಈಗೆಲ್ಲಾ ಡಿಜಿಟಲ್ ಯುಗ ಹಾಗಾಗಿ ಕಲಿಕೆಗೆ ಶಾಲೆಗೆ ಹೋಗಬೇಕೆಂದಿಲ್ಲ ಅಂತರ್ಜಾಲದ ಮೂಲಕವು ಇತರೆ ಚಟುವಟಿಕೆಗಳನ್ನು ಕಲಿಕೆ ಮಾಡಬಹುದು.

ಸಂಬಂಧಗಳ ಬಗೆಗೆ ಅರಿವು ಮೂಡಿಸಿ:
 

ಸಂಬಂಧಗಳ ಬಗೆಗೆ ಅರಿವು ಮೂಡಿಸಿ:

ಪ್ರತಿ ಬಾರಿ ಶಾಲೆಗೆ ರಜೆ ಕೊಟ್ಟಾಗ ಮಾತ್ರ ಊರು ಸೇರುತ್ತಿದ್ದ ಮಕ್ಕಳು ಈಗ ತುಂಬಾ ಕಾಲ ಮನೆಯವರೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿದೆ ಹಾಗಾಗಿ ಈ ಸಂದರ್ಭದಲ್ಲಿ ಮಕ್ಕಳಿಗೆ ಸಂಬಂಧಗಳ ಬಗೆಗೆ ಅರಿವು ಮೂಡಿಸಿ. ಈಗಿನ ದಿನಗಳಲ್ಲಿ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಜೊತೆಗೆ ಮಕ್ಕಳಲ್ಲಿ ಸಂಬಂಧಗಳ ಮೌಲ್ಯದ ಅರಿವು ಕುಂಠಿತಗೊಳ್ಳುತ್ತಿದೆ. ಹಾಗಾಗಿ ಈ ರಜೆಯ ಸಂದರ್ಭದಲ್ಲಿಯಾದರೂ ಮಕ್ಕಳನ್ನು ಕುಟುಂಬದ ಜೊತೆ ಬೆರೆಯಲು ಅವಕಾಶ ನೀಡಿ ಇದರಿಂದ ಮಕ್ಕಳ ಮನಸ್ಸು ಸಂತಸದಿಂದ ಇರುವುದಲ್ಲದೇ ಜೀವನದಲ್ಲಿ ಸಂಬಂಧಗಳು ಎಷ್ಟು ಮುಖ್ಯ ಎನ್ನುವುದೂ ಅರ್ಥವಾಗುತ್ತದೆ.

ಮನೆಪಾಠ ಹೇಳಿಕೊಡಿ:

ಮನೆಪಾಠ ಹೇಳಿಕೊಡಿ:

ಪೋಷಕರು ಮನೆಪಾಠ ಅಂದರೆ ಕೇವಲ ಓದಿನ ಬಗೆಗೆ ಎಂದು ಚಿಂತಿಸುತ್ತೀರಿ ಹೌದು ಆದರೆ ಮನೆ ಪಾಠ ಅಂದರೆ ಮಕ್ಕಳು ಹೇಗೆ ಇನ್ನೊಬರೊಡನೆ ಮಾತನಾಡಬೇಕು? ಯಾವ ರೀತಿಯಾಗಿ ಇನ್ನೊಬ್ಬರನ್ನ ಗೌರವಿಸಬೇಕು? ಹೊರಗಡೆ ಅಪರಿಚಿತರೊಡನೆ ಎಷ್ಟು ಸಂವಹನ ಮಾಡುವ ಅಗತ್ಯವಿದೆ? ಅವರ ಮಾನಸಿಕ ಸ್ಥಿತಿಗತಿಗಳು ಹೇಗಿರಬೇಕು ಎನ್ನುವುದರ ಬಗೆಗೆ ಮನೆಯಲ್ಲಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡಿ. ಪ್ರತಿನಿತ್ಯ ಅವರಲ್ಲಿ ಈ ಬಗ್ಗೆ ಚಿಂತನೆಗಳನ್ನು ಮೂಡಿಸಿ.

ಕಥೆ ಹೇಳುವ ಅಭ್ಯಾಸ ಮಾಡಿ:

ಕಥೆ ಹೇಳುವ ಅಭ್ಯಾಸ ಮಾಡಿ:

ಎಷ್ಟೋ ಮಕ್ಕಳು ರಜೆಯಲ್ಲಿ ಟಿವಿ, ಮೊಬೈಲ್ ಮುಂದೆ ಕುಳಿತೇ ರಜೆಯನ್ನ ಕಳೆಯುವುದುಂಟು ಆದರೆ ಇದರಿಂದ ಆರೋಗ್ಯ ಇನ್ನಷ್ಟು ಹಾಳಾಗುತ್ತದೆಯೇ ಹೊರತು ಮತ್ತೇನು ಸಿಗುವುದಿಲ್ಲ. ಮಕ್ಕಳಿಗೆ ಕಾರ್ಟೂನ್ ಗೊತ್ತಿರುತ್ತದೆ ಆದರೆ ಅಜ್ಜಿ ಹೇಳುವ ಕತೆಗಳ ಪರಿಚಯವೇ ಇರುವುದಿಲ್ಲ ಹಾಗಾಗಿ ಮನೆಯಲ್ಲಿ ಸಂಜೆ ಒಳ್ಳೆ ನೀತಿ ಕತೆಗಳನ್ನು ಹೇಳುವ ಮೂಲಕ ಅವರಿಗೆ ಬದುಕಿನ ನೀತಿಗಳನ್ನು ತಿಳಿಸಿಕೊಡಿ.

ವಿಭಿನ್ನ ಪುಸ್ತಕಗಳನ್ನು ಓದಲು ನೀಡಿ:

ವಿಭಿನ್ನ ಪುಸ್ತಕಗಳನ್ನು ಓದಲು ನೀಡಿ:

ಪ್ರತಿನಿತ್ಯ ಆನ್‌ಲೈನ್ ತರಗತಿ, ಪಾಠ ನಿದ್ದೆ ಮತ್ತು ಊಟ ಅಂತೆಲ್ಲಾ ಕಾಲ ಕಳೆಯುವ ಮಕ್ಕಳಿಗೆ ವಿಭಿನ್ನ ಪುಸ್ತಕಗಳನ್ನು ಓದಲು ನೀಡಿ. ಇದ್ರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚುತ್ತದೆ ಮತ್ತು ಸಾಮಾನ್ಯ ಜ್ಞಾನ ಬೆಳೆಯುತ್ತದೆ. ನಾಳಿನ ಬದುಕಿನ ಚಿತ್ರಣವನ್ನು ಅರಿಯಲು ಸಹಾಯಕವಾಗುತ್ತದೆ.

ಪರಿಸರದ ಕಾಳಜಿಯನ್ನು ಮಾಡುವ ಬಗೆಗೆ ಅರಿವು ಮೂಡಿಸಿ:

ಪರಿಸರದ ಕಾಳಜಿಯನ್ನು ಮಾಡುವ ಬಗೆಗೆ ಅರಿವು ಮೂಡಿಸಿ:

ಬೆಳೆಯುವ ಮಕ್ಕಳಲ್ಲಿ ಪರಿಸರದ ಕಾಳಜಿಯ ಅರಿವು ಮೂಡಿಸದಿದ್ದರೆ ನಾಳೆ ಪರಿಸರದ ಕಾಳಜಿ ಮಾಡೋರು ಯಾರು? ಹಾಗಾಗಿ ಮಕ್ಕಳಲ್ಲಿ ಪರಿಸರದ ಬಗೆಗೆ ಒಂದಷ್ಟು ಮಾಹಿತಿಯನ್ನು ನೀಡಿ. ಗಿಡ ನೆಡುವುದು ಹೇಗೆ ಪೋಷಿಸುವುದು ಹೇಗೆ ಮತ್ತು ಯಾಕೆ ನೆಡಬೇಕು ಇದರಿಂದ ಏನು ಲಾಭ ಎನ್ನುವುದರ ಮಾಹಿತಿಯ ಜೊತೆಗೆ ಆ ಚಟುವಟಿಕೆಗಳಲ್ಲಿ ತೊಡಗಿಸಿ ಇದರಿಂದ ನಾಳಿನ ದಿನಗಳನ್ನು ನಿಶ್ಚಿಂತೆಯಾಗಿ ಕಳೆಯಲು ಮಕ್ಕಳಿಗೂ ಸಹಾಯವಾದೀತು. ಆದರೆ ಇಲ್ಲೊಂದು ಮಾತು ಹೊರಗೆ ಹೋಗುವಂತಿಲ್ಲ ಆದರೆ ಅದ್ಹೇಗೆ ಪರಿಸರ ಕಾಳಜಿ ಮಾಡುವುದು ಅಂತೀರಾ? ಅದಕ್ಕೆ ಇಲ್ಲಿದೆ ಉತ್ತರ. ಪರಿಸರ ಕಾಳಜಿ ಅಂದ್ರೆ ಎಲ್ಲೋ ಹೋಗಿ ಗಿಡ ಮರ ನೆಡುವುದಲ್ಲ ನಮ್ಮ ಮನೆಯ ಸುತ್ತಮುತ್ತಲಲ್ಲಿ ಇರುವ ಜಾಗದಲ್ಲಿಯೂ ಸಹ ಪರಿಸರ ಕಾಳಜಿಯನ್ನು ಮಾಡಬಹುದು ಎಂಬುದನ್ನು ಮರೆಯದಿರಿ.

For Quick Alerts
ALLOW NOTIFICATIONS  
For Daily Alerts

English summary
Here are the tips how to engage childrens in activities at home during corona pandemic.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X