ಗಣಿತ ವಿಷಯದಲ್ಲಿ ಆಸಕ್ತಿ ಇಲ್ಲಾ ಅಂದ್ರೆ ಈ ಸುಲಭ ಕೋರ್ಸ್‌ಗಳನ್ನು ಮಾಡಿ

ಗಣಿತ ವಿಷಯ ಅಂದ್ರೆ ಅನೇಕರಿಗೆ ಕಬ್ಬಿಣದ ಕಡಲೆ. ಅನೇಕರು ಗಣಿತ ವಿಷಯ ಅಂದಾಕ್ಷಣ ಮೂಗು ಮುರಿಯುವುದುಂಟು ಕಾರಣ ಎಷ್ಟೋ ಜನರಿಗೆ ಬಹು ಬೇಗ ಗಣಿತದ ಲೆಕ್ಕಗಳು ಅರ್ಥವಾಗುವುದಿಲ್ಲ ಮತ್ತು ಪರೀಕ್ಷೆಯಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಉತ್ತಮ ಅಂಕಗಳು ಸಿಗುವುದಿಲ್ಲ. ಈ ಕಾರಣಕ್ಕಾಗಿ ನೀವೂ ಗಣಿತವನ್ನು ದ್ವೇಷಿಸುತ್ತೀರಾ? ಗಣಿತದಿಂದಲೇ ಎಲ್ಲವನ್ನೂ ಕಲಿಯಬೇಕೆಂದು ಏನೂ ಇಲ್ಲ, ಗಣಿತವಿಲ್ಲದೆಯೇ ನಾವು ಅನೇಕ ಕೋರ್ಸ್‌ಗಳನ್ನು ಮಾಡಿ ಉದ್ಯೋಗ ಸೃಷ್ಟಿಸಿಕೊಳ್ಳಬಹುದು.

ಹಾಗಾದ್ರೆ ಗಣಿತ ವಿಷಯವಿಲ್ಲದೇ ಯಾವೆಲ್ಲಾ ಕೋರ್ಸ್‌ಗಳನ್ನು ಮಾಡಬಹುದು ಮತ್ತು ಉದ್ಯೋಗ ಪಡೆಯಬಹುದು ಅಂತೀರಾ! ನಾವಿಲ್ಲಿ ನಿಮಗಾಗಿ ಕೆಲವು ಕೋರ್ಸ್‌ಗಳ ಮಾಹಿತಿಯನ್ನು ನೀಡಲಿದ್ದೇವೆ. ಆ ಕೋರ್ಸ್‌ಗಳನ್ನು ಪಿಯುಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಮಾತ್ರ ಮಾಡಬಹುದು ಅಲ್ಲದೇ ಈ ಕೋರ್ಸ್‌ಗಳಲ್ಲಿ ಗಣಿತ ವಿಷಯದ ಪಾತ್ರ ಹೆಚ್ಚಾಗಿ ಇರುವುದಿಲ್ಲ.ಹಾಗಾಗಿ ಗಣಿತ ವಿಷಯ ಹೊರತುಪಡಿಸಿದ ಯಾವೆಲ್ಲಾ ಕೋರ್ಸ್‌ಗಳನ್ನು ನೀವು ಮಾಡಬಹುದು ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಗಣಿತ ವಿಷಯದಲ್ಲಿ ಆಸಕ್ತಿ ಇಲ್ವಾ?  ಹಾಗಿದ್ರೆ ಈ ಕೋರ್ಸ್‌ಗಳನ್ನು ಮಾಡಿ

1.ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ):
 

1.ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ):

ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) 3 ವರ್ಷದ ಪದವಿ ಕೋರ್ಸ್‌ ಇದಾಗಿದೆ. 10+2 ವಿದ್ಯಾರ್ಹತೆಯನ್ನು ಯಾವುದೇ ವಿಭಾಗದಲ್ಲಿ ಓದಿದ ಅಭ್ಯರ್ಥಿಗಳು ಈ ಕೋರ್ಸ್‌ ಅನ್ನು ಮಾಡಲು ಅರ್ಹರು ಆದರೆ ಅಭ್ಯರ್ಥಿಗಳು ಕನಿಷ್ಟ 50% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಹಾಗೂ ಇಂಗ್ಲೀಷ್ ಅನ್ನು ಪ್ರಮುಖ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು. ಈ ಕೋರ್ಸ್‌ ನಲ್ಲಿ ನೀವು ಬ್ಯುಸಿನೆಸ್ ಲಾ, ಆಪರೇಷನ್ಸ್ ಮ್ಯಾನೇಜ್ಮೆಂಟ್, ಬ್ಯುಸಿನೆಸ್ ಇಂಗ್ಲೀಷ್ ಮತ್ತು ಕಾಸ್ಟ್ ಮತ್ತು ಮ್ಯಾನೇಜ್ಮೆಂಟ್ ಅಕೌಂಟಿಂಗ್‌ ವಿಷಯಗಳ ಬಗೆಗೆ ಅಧ್ಯಯನವನ್ನು ಮಾಡಬಹುದು.

ಬಿಬಿಎ ಕೋರ್ಸ್‌ ಮಾಡಲು ಟಾಪ್ 3 ಕಾಲೇಜುಗಳ ಪಟ್ಟಿ:

* ಕ್ರಿಸ್ಟ್ ಯೂನಿವರ್ಸಿಟಿ, ಬೆಂಗಳೂರು

* ಸಿಂಬಯೋಸಿಸ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್, ಮಹಾರಾಷ್ಟ್ರ

* ಮದ್ರಾಸ್ ಕ್ರಿಸ್ಚಿಯನ್ ಕಾಲೇಜು, ಚೆನ್ನೈ

2. ಇಂಟೀರಿಯರ್ ಡಿಸೈನಿಂಗ್:

2. ಇಂಟೀರಿಯರ್ ಡಿಸೈನಿಂಗ್:

ಒಂದು ಸಾಮಾನ್ಯ ಕೊಠಡಿಯನ್ನು ಡೆಕೋರೇಟಿವ್‌ ಆಗಿ ನಿರ್ಮಿಸಲು ಬಲ್ಲ ಕ್ರಿಯಾಶೀಲತೆ ನಿಮ್ಮಲ್ಲಿ ಇದ್ದರೆ ನೀವು ಈ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು.10+2 ವಿದ್ಯಾರ್ಹತೆನ್ನು ಶೇ 55 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರುವುದರ ಜೊತೆಗೆ ಇಂಗ್ಲೀಷ್‌ ಅನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಈ ಕೊರ್ಸ್‌ ಅನ್ನು ಮಾಡಬಹುದು. ಈ ಕೋರ್ಸ್‌ ಮಾಡಿದ ನಂತರ ಅಭ್ಯರ್ಥಿಗಳು ಕೆಲವು ಸವಾಲುಗಳನ್ನು ಎದುರಿಸಲು ಸಿದ್ಧರಿರಬೇಕು ಕಾರಣ ಜನರ ಬೇಡಿಕೆ ಮತ್ತು ಅವರ ಅಗತ್ಯಗನುಗುಣವಾಗಿ ನೀವು ಅವರ ಮನೆಯ ಇಂಟೀರಿಯರ್ ಅನ್ನು ಡಿಸೈನ್‌ ಮಾಡಬೇಕಿರುತ್ತದೆ ಹಾಗಾಗಿ ಹೊಸ ಹೊಸ ಐಡಿಯಾಗಳು ಮತ್ತು ಅನ್ವೇಷಣೆಗಳು ಇದ್ದಲ್ಲಿ ಹೆಚ್ಚು ಸಹಾಯಕ.

ಇಂಟೀರಿಯರ್ ಡಿಸೈನಿಂಗ್ ಕೋರ್ಸ್‌ ಮಾಡಲು ಇರುವ ಟಾಪ್ 3 ಕಾಲೇಜುಗಳ ಪಟ್ಟಿ:

* ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ) , ಅಹಮದಾಬಾದ್

* ಅಪೀಜೆ ಸ್ಟೇಟ್ ಯೂನಿವರ್ಸಿಟಿ, ಹರಿಯಾಣ

* ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನಿಂಗ್,ಪುಣೆ

4. ಸಮೂಹ ಸಂವಹನ:
 

4. ಸಮೂಹ ಸಂವಹನ:

ಸಮೂಹ ಸಂವಹನ ಕೋರ್ಸ್‌ ಇದೊಂದು ಸಾಗರವಿದ್ದಂತೆ ಇಲ್ಲಿ ವಿಫುಲ ಅವಕಾಶಗಳಿವೆ. ಈ ಕೋರ್ಸ್‌ ನಲ್ಲಿ ನೀವು ರಿಪೋರ್ಟಿಂಗ್, ಆಂಕರಿಂಗ್, ವೀಡಿಯೋ ಜಾಕಿ , ಡಿಸ್ಕ್ ಜಾಕಿ ಮತ್ತು ಸಿನಿಮಾಟೋಗ್ರಫಿ ಇತ್ಯಾದಿ ವಿಚಾರಗಳನ್ನು ಅಧ್ಯಯನ ಮಾಡುತ್ತೀರಿ. ಕೋರ್ಸ್‌ ಮುಗಿದ ಬಳಿಕ ನಿಮಗೆ ಒಂದಲ್ಲಾ ಒಂದು ಉದ್ಯೋಗ ಸಿಗುತ್ತದೆ. ಈ ಕೋರ್ಸ್‌ ಅನ್ನು 10+2 ವಿದ್ಯಾರ್ಹತೆಯನ್ನು ಹೊಂದಿರುವ ಹಾಗೂ ಇಂಗ್ಲೀಷ್ ಅನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಅಧ್ಯಯನ ಮಾಡಬಹುದು. ಈ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದ್ದಲ್ಲಿ ಖಂಡಿತವಾಗಿಯೂ ನೀವು ಈ ಕೋರ್ಸ್‌ ಅನ್ನು ಮಾಡಬಹುದು.

ಸಮೂಹ ಸಂವಹನ ಕೋರ್ಸ್‌ ಮಾಡಲು ಟಾಟ್‌ 3 ಕಾಲೇಜುಗಳ ಪಟ್ಟಿ:

* ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಮತ್ತು ಕಮ್ಯುನಿಕೇಷನ್,ಪುಣೆ

* ಲೇಡಿ ಶ್ರೀರಾಮ್ ಕಾಲೇಜ್ ಫಾರ್ ವುಮೆನ್ ,ದೆಹಲಿ

* ಕ್ರಿಸ್ಟ್ ಯೂನಿವರ್ಸಿಟಿ,ಬೆಂಗಳೂರು

4. ಹೋಟೆಲ್ ಮ್ಯಾನೇಜ್ಮೆಂಟ್‌:

4. ಹೋಟೆಲ್ ಮ್ಯಾನೇಜ್ಮೆಂಟ್‌:

ತಿಂಡಿ ತಿನಿಸುಗಳ ಬಗೆಗೆ ಒಂದಷ್ಟು ಆಸಕ್ತಿ ಜೊತೆಗೆ ಹೋಟೆಲ್ ಮ್ಯಾನೇಜ್ಮೆಂಟ್‌ ಕ್ಷೇತ್ರದಲ್ಲಿ ಏನಾದರು ಸಾಧಿಸಬೇಕೆಂಬ ಹಂಬಲವುಳ್ಳವರು ಈ ಕೋರ್ಸ್‌ ಮಾಡಬಹುದು. ಹೋಟೆಲ್ ಮ್ಯಾನೇಜ್ಮೆಂಟ್‌ ಕೋರ್ಸ್‌ ಮಾಡಿದ ಅಭ್ಯರ್ಥಿಗಳಿಗೆ ಭಾರೀ ಬೇಡಿಕೆ ಇದೆ. ಹೋಟೆಲ್ ಮ್ಯಾನೇಜ್ಮೆಂಟ್‌ ಕೋರ್ಸ್‌ ನಲ್ಲಿ ಕ್ಯಾಟರಿಂಗ್, ಹೌಸ್‌ಕೀಪಿಂಗ್, ಮ್ಯಾನೇಜ್ಮೆಂಟ್, ಸೇಲ್ಸ್ ಮತ್ತು ಮಾರ್ಕೆಟಿಂಗ್ ಇತ್ಯಾದಿ ವಿಷಯಗಳನ್ನು ಕಲಿಯಬಹುದು. 10+2 ವಿದ್ಯಾರ್ಹತೆಯನ್ನು ಶೇ 45 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಕೋರ್ಸ್ ಅನ್ನು ಮಾಡಲು ಅರ್ಹರು.

ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಲು ಇರುವ ಟಾಪ್ ೩ ಕಾಲೇಜುಗಳ ಪಟ್ಟಿ:

* ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ಮುಂಬೈ

* ಓಬೇರೋ ಸೆಂಟರ್ ಫಾರ್ ಲರ್ನಿಂಗ್ ಮತ್ತು ಡೆವಲಪ್ಮೆಂಟ್, ದೆಹಲಿ

* ಕ್ರಿಸ್ಟ್ ಯೂನಿವರ್ಸಿಟಿ,ಬೆಂಗಳೂರು

5. ಅನಿಮೇಷನ್:

5. ಅನಿಮೇಷನ್:

ನೀವು ಕಲೆ ಮತ್ತು ಆಧುನಿಕ ಟೆಕ್ನಾಲಜಿಯನ್ನು ಇಷ್ಟ ಪಡುವಿರಾದಲ್ಲಿ ಅನಿಮೇಷನ್ ಕೋರ್ಸ್‌ ನಿಮಗೆ ಸೂಕ್ತ. ಇತ್ತೀಚೆಗೆ ಡಿಜಿಟಲ್ ಫೀಲ್ಡ್‌ಗಳಾದ ಟೆಲಿವಿಷನ್, ಜಾಹೀರಾತು ಇಂಡಸ್ಟ್ರಿ ಮತ್ತು ಫಿಲ್ಮ್ ಇಂಡಸ್ಟ್ರಿಗಳಲ್ಲಿ ಅನಿಮೇಷನ್‌ ಕೋರ್ಸ್‌ ಮಾಡಿದವರಿಗೆ ಭಾರೀ ಬೇಡಿಕೆ ಇದೆ. ಅನಿಮೇಷನ್ ಕ್ಷೇತ್ರಕ್ಕೆ ಹೋಗ ಬಯಸುವ ಅಭ್ಯರ್ಥಿಗಳು 10+2 ವಿದ್ಯಾರ್ಹತೆಯನ್ನು ಶೇ 50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರುವುದರ ಜೊತೆಗೆ ಸ್ಕೆಚ್ಚಿಂಗ್ / ಡ್ರಾಯಿಂಗ್‌ ಮಾಡಲು ಬಲ್ಲವರಾಗಿದ್ದಲ್ಲಿ ಈ ಕೋರ್ಸ್‌ ಅನ್ನು ಮಾಡಬಹುದು.

ಅನಿಮೇಷನ್ ಕೋರ್ಸ್‌ ಮಾಡಲು ಇರುವ ಟಾಪ್‌ 3 ಕಾಲೇಜುಗಳ ಪಟ್ಟಿ:

* ಅರೇನಾ ಅನಿಮೇಷನ್, ಬೆಂಗಳೂರು

* ವೆಬೆಲ್ ಅನಿಮ್ಯಾಟ್ರಿಕ್ಸ್ ಅಕಾಡೆಮಿ, ಕೊಲ್ಕತ್ತಾ

* ಏಷಿಯನ್ ಅಕಾಡೆಮಿ ಆಫ್ ಫಿಲ್ಮ್ ಮತ್ತು ಟೆಲಿವಿಷನ್, ನೋಯಿಡಾ

6. ಫ್ಯಾಷನ್ ಡಿಸೈನಿಂಗ್:

6. ಫ್ಯಾಷನ್ ಡಿಸೈನಿಂಗ್:

ನೀವು ಡ್ರೆಸ್ಸಿಂಗ್ ಮಾಡ್ಕೊಳ್ಳೋದ್ರಲ್ಲಿ ತುಂಬಾನೆ ಆಸಕ್ತಿಯತರಾಗಿದ್ರೆ? ಉಡುಪು ಧರಿಸುವಲ್ಲಿ ನಿಮ್ಮದೇ ಆದ ಕ್ರಿಯೇಟಿವಿಟಿಯನ್ನು ನೀವು ಹೋಂದಿದ್ರೆ ಖಂಡಿತವಾಗಿಯೂ ನೀವು ಫ್ಯಾಷನ್ ಡಿಸೈನಿಂಗ್‌ ಖಂಡಿತವಾಗಿಯೂ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ ಅನ್ನು ಮಾಡಬಹುದು. ಈ ಕೋರ್ಸ್‌ ಮಾಡುವುದರಿಂದ ನಿಮಗೆ ವಿಫುಲ ಅವಕಾಶಗಳು ಇವೆ. ಈ ಕೋರ್ಸ್‌ ಅನ್ನು 10+2 ವಿದ್ಯಾರ್ಹತೆಯಲ್ಲಿ ಶೇ 55 ರಷ್ಟು ಅಂಕಗಳೊಂದಿಗೆ ಉತ್ತೀರ್ಣ ಮತ್ತು ಇಂಗ್ಲೀಷ್ ಭಾಷೆಯನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಅಧ್ಯಯನ ಮಾಡಬಹುದು

ಭಾರತದಲ್ಲಿ ಇರುವ ಫ್ಯಾಷನ್‌ ಡಿಸೈನಿಂಗ್‌ ಇನ್‌ಸ್ಟಿಟ್ಯೂಗಳ ಪಟ್ಟಿ:

* ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ (ಎನ್‌ಐಡಿ)

* ಅಪೀಜೆ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್

* ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್‌ಐಎಫ್‌ಟಿ)

* ವಿಗನ್ ಮತ್ತು ಲೇಗ್ ಕಾಲೇಜು

* ಪರ್ಲ್ ಅಕಾಡೆಮಿ ಆಫ್ ಫ್ಯಾಷನ್

* ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್,ಪುಣೆ

For Quick Alerts
ALLOW NOTIFICATIONS  
For Daily Alerts

English summary
Here we are giving list of course for students who hate maths. Take a look.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X