ಕಾಲೇಜು ಲೈಫ್ ನಲ್ಲಿ ನೀವು ಮಾಡಲೇ ಬೇಕಾದ ಕ್ರೇಜಿ ಆಕ್ಟಿವಿಟೀಸ್!

ಕಾಲೇಜು ಲೈಫ್ ಗೆ ಶಾಲಾ ವಿದ್ಯಾರ್ಥಿಗಳು ಸಖತ್ ಆಕರ್ಷಿತರಾಗಿರುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳಲ್ಲಿ ಕಾಲೇಜು ಲೈಫ್ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಕೊನೆಗೆ ಕಾಲೇಜು ಮೆಟ್ಟಿಲು ಹತ್ತುವ ಸಮಯ ಬಂದೇ ಬಿಟ್ಟಾಗ ಕಾಲೇಜು ಲೈಫ್ ಹೇಗೆ ಎಂಜಾಯ್ ಮಾಡುವುದೆಂದು ವಿದ್ಯಾರ್ಥಿಗಳು ಕಂಪ್ಲೀಟ್ ಆಗಿ ಬ್ಲ್ಯಾಂಕ್ ಆಗುತ್ತಾರೆ.

ಕಾಲೇಜು ಲೈಫ್ ನಲ್ಲಿ ನೀವು ಮಾಡಲೇ ಬೇಕಾದ ಕ್ರೇಜಿ ಆಕ್ಟಿವಿಟೀಸ್!

 

ನೀವು ಯಾವ ಟೈಪ್ ಉದ್ಯೋಗಸ್ಥ...ಇಲ್ಲಿರುವ ಯಾವ ಕೆಟಗರಿಯಲ್ಲಿ ನೀವಿದ್ದೀರಾ ಚೆಕ್ ಮಾಡಿಕೊಳ್ಳಿ?

ಆದ್ರೂ ಕಾಲೆಜು ಮೆಟ್ಟಿಲು ಹತ್ತಿದ ಕೂಡಲೇ ಏನಾದ್ರೂ ಕ್ರೇಜಿ ಆಕ್ಟಿವಿಟೀಸ್ ನೀವು ಮಾಡಿಯೇ ಇರುತ್ತೀರಾ. ಕಾಲೇಜು ಬಿಟ್ಟಾಗ ಅವೆಲ್ಲ ನಿಮ್ಮ ನೆನಪಿನ ಬುತ್ತಿಯಲ್ಲಿ ಹಾಗೆಯೇ ಕೊನೆಯವರೆಗೆ ಉಳಿದುಕೊಳ್ಳುತ್ತದೆ.

ಇನ್ನು ಒಂದು ವಿಷಯ ನೆನಪಿಟ್ಟುಕೊಳ್ಳಿ. ಕಾಲೇಜು ಜೀವನ ಎಂದ್ರೆ ಅದು ಬರೀ ಓದು, ಬರಹ ಮತ್ತು ಫ್ಯಾಶನ್ ಮಾತ್ರವಲ್ಲ ಬದಲಿಗೆ, ನಿಮ್ಮ ಜೀವನದ ಅದ್ಭುತ ಕ್ಷಣ ಕೂಡಾ. ಹಾಗಾಗಿ ಕಾಲೇಜಿನ ಪ್ರತಿಯೊಂದು ಕ್ಷಣವನ್ನ ಕೂಡಾ ಎಂಜಾಯ್ ಮಾಡಿ. ಕ್ರೇಜಿ ಥಿಂಗ್ಸ್ ನಿಮ್ಮ ಜೀವನದಲ್ಲಿ ಏಳು- ಬೀಳು ಸೃಷ್ಟಿಸಬಹುದು ಆದರೆ ಕೊನೆಯಲ್ಲಿ ಇದರಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಯಾಗುವುದು.

ಶಾಲೆ ವರ್ಸಸ್ ಕಾಲೇಜು... ಯಾವುದು ಬೆಸ್ಟ್!

ಕಾಲೇಜಿನಲ್ಲಿ ಮಾಡುವ ಕ್ರೇಜಿ ಆಕ್ಟಿವಿಟೀಸ್:

ಸ್ನೇಹಿತರ ಗ್ಯಾಂಗ್ :

ಕಾಲೇಜು ಲೈಫ್ ಅಂದ್ರೆ ಅದೆಷ್ಟೋ ಸ್ನೇಹಿತರು. ವಿವಿಧ ತರಗತಿಯ ವಿವಿಧ ವಿದ್ಯಾರ್ಥಿಗಳ ಒಂದು ಗ್ಯಾಂಗ್. ಹೌದು ಕಾಲೇಜಿನಲ್ಲಿ ನಿಮಗೆ ವಿವಿಧ ತರಗತಿಯಲ್ಲಿ ೫ ಜನ ಸ್ನೇಹಿತರು ಇದ್ದರೆ ದಿನಕಳೆದಂತೆ ಅವರ ಸ್ನೇಹಿತರು ಕೂಡಾ ಮತ್ತೆ ನಿಮ್ಮ ಸ್ನೇಹಿತರೇ ಆಗುತ್ತಾರೆ. ಈ ಪ್ರಕ್ರಿಯೆ ಹಾಗೆಯೇ ಮುಂದುವರೆಯುತ್ತಾ ಇದ್ದು, ನಿಮ್ಮ ಸ್ನೇಹಿತರ ಪಟ್ಟಿಯೂ ಕೂಡಾ ಹೆಚ್ಚಾಗುತ್ತಾ ಹೋಗುತ್ತದೆ.

ಇನ್ನು ಗ್ಯಾಂಗ್ - ಗ್ಯಾಂಗ್ ಸ್ನೇಹಿತರು ಇರುವುದರಿಂದ ಯಾವ ಲಾಭವಿದೆಯಂದ್ರೆ, ನೀವು ಪ್ರತಿ ಕ್ಷಣವೂ ನಿಮ್ಮ ಸ್ನೇಹಿತರಿಂದ ಸೆಕ್ಯುರ್ ಆಗಿರುತ್ತೀರಾ. ಅಷ್ಟೇ ಅಲ್ಲ ಕಾಲೇಜು ಲೈಫ್ ನಿಮ್ಮನ್ನ ಸ್ವಲ್ಪ ರೂಡ್ ಆಗುವಂತೆಯೂ ಮಾಡುತ್ತದೆ. ಇದರಿಂದ ನೀವು ಕ್ರಮೇಣ ಕಾಲೇಜು ರೂಲ್ಸ್ ಮುರಿಯುದು ಎಲ್ಲಾ ಮಾಡುತ್ತೀರಾ. ಹೀಗೆಲ್ಲಾ ಆದಾಗ ಏನಾದ್ರೂ ಸಮಸ್ಯೆ ಮೂಡಿದ್ರೆ ನಿಮ್ಮ ಸ್ನೇಹಿತರು ನಿಮ್ಮ ಬೆಂಬಲಿತರಾಗಿ ನಿಂತಿರುತ್ತಾರೆ.

 

ನಿಮ್ಮನ್ನ ನೀವು ಡೆವಲಪ್ ಮಾಡಿಕೊಂಡು ಪ್ರಮೋಶನ್ ಪಡೆಯುವುದು ಹೇಗೆ?

ರೋಡ್ ಟ್ರಿಪ್:

ಕಾಲೇಜು ಜೀವನ ಅಂದ್ರೆ ಓದಿನ ಜತೆ ಜತೆ ಫುಲ್ ಟೈಂ ಎಂಜಾಯ್ ಮೆಂಟ್. ಹೌದು ವಿದ್ಯಾಭ್ಯಾಸ ಕೂಡಾ ಈ ಹಂತದಲ್ಲಿ ತುಂಬಾ ಪ್ರಮುಖ. ನಿಮಗೆ ಕಾಲೇಜುದಿನಗಳಲ್ಲಿ ಎಲ್ಲಿಯಾದ್ರೂ ಎರಡು ದಿನ ರಜೆ ಸಿಕ್ಕಿತ್ತಂದ್ರೆ ಮುಗಿಯಿತು, ಮ್ಯಾಪ್ ತೆಗೆದುಕೊಂಡು ಸ್ನೇಹಿತರ ಜತೆ ಚರ್ಚಿಸಿ. ಒಂದು ಬ್ಯಾಗ್ ನಲ್ಲಿ ಎರಡು ಜೀನ್ಸ್ಮ ಕೆಲವೊಂದು ಟೀ ಶರ್ಟ್ ಹಾಗೂ ಶೂಸ್ ತುಂಬಿಕೊಂಡು ಕಾರ್ ಇಲ್ಲ ಬೈಕ್ ಹತ್ತಿ. ರೋಡ್ ಟ್ರಿಪ್ ಮಾಡಿ ಎಂಜಾಯ್ ಮಾಡಿ.

ಪದವಿ ಇಲ್ಲಂದ್ರೂ ಪರವಾಗಿಲ್ಲ... ಈ ವೃತ್ತಿ ನಿಮ್ಮದಾಗಿಸಿದ್ರೆ ಕೈ ತುಂಬಾ ಹಣ!

ರೂಲ್ಸ್ ಬ್ರೇಕ್:

ಹೌದು ಈ ಮಾತನ್ನ ನೆನಪಿಟ್ಟುಕೊಳ್ಳಿ. ನೀವು ಕಾಲೇಜಲ್ಲಿ ಮಾಡಲೇ ಬೇಕಾದ ಕ್ರೇಜಿ ಆಕ್ಟಿವಿಟೀಸ್ ಗಳಲ್ಲಿ ರೂಲ್ಸ್ ಬ್ರೇಕ್ ಮಾಡುವುದು ಕೂಡಾ ಒಂದು. ಹಾಗಂತ ಇದರ ಬಗ್ಗೆ ನೀವು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಅದರಲ್ಲೂ ಮಜಾ ಇರುತ್ತೆ.

ಕಾಲೇಜಿನಲ್ಲಿ ಕೆಲವೊಂದು ರಿಸ್ಟ್ರಿಕ್ಟೆಡ್ ಸ್ಥಳಗಳು ಇರುತ್ತದೆ. ಅಲ್ಲಿಗೆ ಹೋಗದಂತೆ ಎಲ್ಲರಿಗೂ ಪ್ರವೇಶ ನಿಷೇಧಿಸಲಾಗಿರುತ್ತದೆ. ಅಂತಹ ಜಾಗಗಳಿಗೆ ನೀವು ಸ್ನೇಹಿತರ ಜತೆ ರಾತ್ರಿ ಟೈಂ ಹೋಗಿ ಮಜಾ ಮಾಡಿ. ಹಾಗೆಯೇ ಹೋಗುವಾಗ ಜತೆಯಲ್ಲಿ ಸ್ನಾಕ್ಸ್ ಕೊಂಡೊಯ್ಯಲು ಮರೆಯದಿರಿ.

ಪ್ರಶ್ನೆಗಳನ್ನ ಕೇಳಿ:

ಹೌದು ಇದು ಸಾಮಾನ್ಯ ವಿಚಾರ ಎಂದು ನಿಮಗೆ ಅನಿಸಬಹುದು. ಆದ್ರೆ ಇಲ್ಲಿರುವ ವಿಚಾರ ಬೇರೆಯೇ. ನಿಮಗೆ ಯಾವುದಾದ್ರೂ ಬೋರಿಂಗ್ ಕ್ಲಾಸ್ ಇದ್ದರೆ ಆ ಕ್ಲಾಸ್‌ನಲ್ಲಿ ನಿಮ್ಮ ಪ್ರೊಫೆಸರ್ ಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾ ಇರಿ. ಅದು ಕೂಡಾ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಿರದೇ ಇರುವುದು. ಕ್ಲಾಸ್ ಕೊನೆಯವರೆಗೂ ಹೀಗೆ ಪ್ರಶ್ನೆಗಳನ್ನ ಕೇಳುತ್ತಾ ಹೋಗಿ. ಈ ರೀತಿಯಾಗಿಯೂ ಕೂಡಾ ನೀವು ಕ್ರೇಜಿ ಆಕ್ಟಿವಿಟೀಸ್ ಮಾಡಬಹುದು.

ಈ ಮಾತುಗಳನ್ನ ಬಾಸ್ ಮುಂದೆ ಹೇಳಿದ್ರೆ ಸಾಕು... ಮುಂದೆ ನೀವು ಕೇಳಿದ್ದಕ್ಕೆಲ್ಲಾ ಗ್ರೀನ್ ಸಿಗ್ನಲ್!

For Quick Alerts
ALLOW NOTIFICATIONS  
For Daily Alerts

English summary
The school-going kids are highly attracted towards the college life. In fact, most of the youngsters prepare the list of crazy things to do in college well in advance. Finally, it’s time to step into the college of your choice. But, sometimes the youngsters go completely blank about how to enjoy life in college.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X