Types Of Job Interviews : ಸಂದರ್ಶನಕ್ಕೆ ಹೋಗುವ ಮುನ್ನ ಯಾವ ರೀತಿಯ ಸಂದರ್ಶನಗಳಿವೆ ತಿಳಿಯಿರಿ

ಉದ್ಯೋಗ ಹುಡುಕಾಟದಲ್ಲಿರುವ ಎಷ್ಟೋ ಮಂದಿಗೆ ಸಂದರ್ಶನ ಹೇಗಿರುತ್ತದೆ ಎನ್ನುವ ಮಾಹಿತಿಯೇ ಇರುವುದಿಲ್ಲ. ಹೀಗಾಗಿಯೇ ಅನೇಕ ಪ್ರಯತ್ನಗಳು ವಿಫಲವಾಗುತ್ತವೆ. ಯಾವುದೇ ಅಭ್ಯರ್ಥಿಗಳು ಸಂದರ್ಶನಕ್ಕೆ ಹೋಗುವ ಮೊದಲು ಯಾವೆಲ್ಲಾ ರೀತಿಯಲ್ಲಿ ಸಂದರ್ಶನಗಳು ನಡೆಯುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ನೀವು ಯಾವ ರೀತಿಯ ಉದ್ಯೋಗ ಸಂದರ್ಶನಕ್ಕೆ ಹಾಜರಾಗುತ್ತಿದ್ದೀರಿ ಮತ್ತು ಅದಕ್ಕೆ ಯಾವ ರೀತಿಯ ತಯಾರಿ ನಡೆಸಬೇಕಿದೆ ಎನ್ನುವುದು ಅರಿತುಕೊಳ್ಳಬೇಕಿರುತ್ತದೆ. ಹಾಗಾಗಿ ಈ ಲೇಖನದಲ್ಲಿ ಯಾವೆಲ್ಲಾ ರೀತಿಯ ಸಂದರ್ಶನಗಳಿವೆ ಎನ್ನುವ ಮಾಹಿತಿಯನ್ನು ನೀಡಲಿದ್ದೇವೆ. ಇದನ್ನು ತಪ್ಪದೇ ಓದಿ ಬಳಿಕ ನಿಮ್ಮ ಸಂದರ್ಶನ ತಯಾರಿ ನಡೆಸಿ.

 

1. ಸಾಂಪ್ರದಾಯಿಕ ಉದ್ಯೋಗ ಸಂದರ್ಶನ:

1. ಸಾಂಪ್ರದಾಯಿಕ ಉದ್ಯೋಗ ಸಂದರ್ಶನ:

ಒಂದು ಸಂದರ್ಶನವು ಸಾಂಪ್ರದಾಯಿಕವಾದದ್ದು ಎಂದರೆ ಕಂಪನಿಯ ಒಬ್ಬ ಪ್ರತಿನಿಧಿಯು ನಿಮ್ಮನ್ನು ಸಂದರ್ಶಿಸುತ್ತಾರೆ. ಸಾಮಾನ್ಯವಾಗಿ ನೀವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ವ್ಯವಸ್ಥಾಪಕರು ನಿಮ್ಮನ್ನು ಸಂದರ್ಶಿಸುತ್ತಾರೆ. ಏಕೆಂದರೆ ನೀವು ಉದ್ಯೋಗವನ್ನು ಪಡೆದರೆ ನೀವು ಈ ವ್ಯಕ್ತಿಯೊಂದಿಗೆ ನೇರವಾಗಿ ಕೆಲಸ ಮಾಡುತ್ತೀರಿ ಹಾಗಾಗಿ ಅವರು ನಿಮ್ಮನ್ನು ಸಂದರ್ಶಿಸಲು ಬಯಸುತ್ತಾರೆ ಮತ್ತು ನಿಮ್ಮ ಕೌಶಲ್ಯಗಳು ಕೆಲಸದ ಅವಶ್ಯಕತೆಗಳಿಗೆ ಹೊಂದಿಕೆಯಾಗಲಿವೆಯೇ ಎಂದು ತಿಳಿಯಲು ಮುಂದಾಗುತ್ತಾರೆ.

ಸಂದರ್ಶಕರು ನಿಮ್ಮ ರೆಸ್ಯೂಂನಲ್ಲಿ ನಮೂದಿಸಿರುವ ಅಂಶಗಳ ಬಗ್ಗೆ ಕೇಳಬಹುದು, ನೀವು ಕಂಪನಿ ಅಥವಾ ನಿಮ್ಮ ಸ್ಥಾನಕ್ಕೆ ಹೇಗೆ ಸಮರ್ಥರಿದ್ದೀರಿ. ಅನೇಕ ಸಲ ಸಂದರ್ಶಕರು "ನಿಮ್ಮನ್ನು ಈ ಕೆಲಸಕ್ಕೆ ಏಕೆ ತೆಗೆದುಕೊಳ್ಳಬೇಕು?", ಅಥವಾ "ನಿಮ್ಮ ಬಗ್ಗೆ ಹೇಳಿ" ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಇದು ಸಾಮಾನ್ಯ ರೀತಿಯ ಉದ್ಯೋಗ ಸಂದರ್ಶನಗಳಲ್ಲಿ ಒಂದಾಗಿದೆ.

2. ಪ್ಯಾನಲ್/ಸಮಿತಿ ಸಂದರ್ಶನ:

2. ಪ್ಯಾನಲ್/ಸಮಿತಿ ಸಂದರ್ಶನ:

ಪ್ಯಾನಲ್ ಸಂದರ್ಶನದಲ್ಲಿ ಸಂದರ್ಶಕರ ಸಮಿತಿಯು ನಿಮ್ಮನ್ನು ಸಂದರ್ಶಿಸುತ್ತದೆ. ಈ ಸಮಿತಿ ಸಂದರ್ಶನದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಉದ್ಯೋಗಿಗಳಂತಹ ಕಂಪನಿಯ ವಿವಿಧ ಪ್ರತಿನಿಧಿಗಳನ್ನು ಒಳಗೊಂಡಿರಬಹುದು. ಕೆಲವು ಕಂಪನಿಗಳು ಪ್ಯಾನಲ್ ಸಂದರ್ಶನಗಳನ್ನು ನಡೆಸುವುದಕ್ಕೆ ಕಾರಣವೆಂದರೆ ಸಮಯವನ್ನು ಉಳಿಸುವುದು ಅಥವಾ ಅಭ್ಯರ್ಥಿಗೆ ಸಂಬಂಧಿಸಿದಂತೆ ಸಮಿತಿಯ ಸಾಮೂಹಿಕ ಅಭಿಪ್ರಾಯವನ್ನು ಪಡೆಯುವುದು. ಸಮಿತಿಯ ಪ್ರತಿಯೊಬ್ಬ ಸದಸ್ಯರು ತಮ್ಮ ಸ್ಥಾನದಿಂದ ಪ್ರಸ್ತುತತೆಯನ್ನು ಪ್ರತಿನಿಧಿಸುವ ಪ್ರಶ್ನೆಗಳನ್ನು ಕೇಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

3. ವರ್ತನೆ/ನಡವಳಿಕೆ ಸಂದರ್ಶನ :
 

3. ವರ್ತನೆ/ನಡವಳಿಕೆ ಸಂದರ್ಶನ :

ವರ್ತನೆ/ನಡವಳಿಕೆಯ ಸಂದರ್ಶನದಲ್ಲಿ ಸಂದರ್ಶಕರು ನೀವು ಅರ್ಜಿ ಸಲ್ಲಿಸುತ್ತಿರುವ ಉದ್ಯೋಗದ ಸಾಮಾನ್ಯ ಸನ್ನಿವೇಶಗಳನ್ನು ಆಧರಿಸಿ ಪ್ರಶ್ನೆಗಳನ್ನು ಕೇಳುತ್ತಾರೆ. ವರ್ತನೆಯ ಸಂದರ್ಶನದ ಹಿಂದಿನ ತರ್ಕವೆಂದರೆ ನಿಮ್ಮ ಭವಿಷ್ಯದ ಕಾರ್ಯಕ್ಷಮತೆಯು ಇದೇ ರೀತಿಯ ಸನ್ನಿವೇಶದ ಹಿಂದಿನ ಕಾರ್ಯಕ್ಷಮತೆಯನ್ನು ಆಧರಿಸಿರುತ್ತದೆ. ನೀವು ಈ ಉದ್ಯೋಗಕ್ಕೆ ಸೇರಿದಾಗ ಏನು ಮಾಡಿದ್ದೀರಿ ಮತ್ತು ನೀವು ಅದನ್ನು ಹೇಗೆ ನಿಭಾಯಿಸುತ್ತೀರಿ ಎಂದು ವಿಚಾರಿಸುವ ಪ್ರಶ್ನೆಗಳನ್ನು ನೀವು ನಿರೀಕ್ಷಿಸಬಹುದು. ನಡವಳಿಕೆಯ ಸಂದರ್ಶನಗಳಲ್ಲಿ ಸಂದರ್ಶಕರು ನೀವು ಕೆಲವು ಸಮಸ್ಯೆಗಳನ್ನು ಹೇಗೆ ಎದುರಿಸುತ್ತೀರಿ ಮತ್ತು ಅವುಗಳನ್ನು ಪರಿಹರಿಸಲು ನೀವು ಏನು ಮಾಡುತ್ತೀರಿ ಎಂಬುದನ್ನು ತಿಳಿಯಲು ಬಯಸುತ್ತಾರೆ.

4. ಗುಂಪು ಸಂದರ್ಶನ:

4. ಗುಂಪು ಸಂದರ್ಶನ:

ಅನೇಕ ಸಲ ಕಂಪನಿಗಳು ಉದ್ಯೋಗ ಸಂದರ್ಶಕರಿಗೆ ಅಭ್ಯರ್ಥಿಗಳನ್ನು ಶೀಘ್ರವಾಗಿ ಪೂರ್ವಭಾವಿ ಸ್ಕ್ರೀನ್ ಮಾಡಲು ಗುಂಪು ಸಂದರ್ಶನವನ್ನು ನಡೆಸುತ್ತವೆ ಹಾಗೂ ಅಭ್ಯರ್ಥಿಗಳು ಅಲ್ಲಿ ಕೆಲಸ ಮಾಡಲು ಬಯಸುತ್ತಾರೆಯೇ ಎಂದು ನೋಡಲು ಕಂಪನಿಯ ಬಗ್ಗೆ ತ್ವರಿತವಾಗಿ ತಿಳಿದುಕೊಳ್ಳುವ ಅವಕಾಶವನ್ನು ನೀಡುತ್ತವೆ. ಅನೇಕ ಬಾರಿ ಒಂದು ಗುಂಪು ಸಂದರ್ಶನವು ಕಂಪನಿಯ ಬಗ್ಗೆ ಕಿರು ಪ್ರಸ್ತುತಿಯೊಂದಿಗೆ ಆರಂಭವಾಗುತ್ತದೆ. ಅದರ ನಂತರ ಅವರು ಪ್ರತಿ ಅಭ್ಯರ್ಥಿಯೊಂದಿಗೆ ಪ್ರತ್ಯೇಕವಾಗಿ ಮಾತನಾಡಬಹುದು ಮತ್ತು ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಬಹುದು.

ಗುಂಪಿನ ಸಂದರ್ಶನದಲ್ಲಿ ಉದ್ಯೋಗದಾತನು ಗಮನಿಸುತ್ತಿರುವ ಒಂದು ಪ್ರಮುಖ ವಿಷಯವೆಂದರೆ, ನೀವು ಇತರ ಅಭ್ಯರ್ಥಿಗಳೊಂದಿಗೆ ಹೇಗೆ ಸಂವಹನ ನಡೆಸುತ್ತೀರಿ ಎಂಬುದು. ನೀವು ನಾಯಕರಾಗಿ ಹೊರಹೊಮ್ಮುತ್ತಿದ್ದೀರಾ ಅಥವಾ ಹೇಳಿದ ಕೆಲಸಗಳನ್ನು ನೀವು ಪೂರ್ಣಗೊಳಿಸುವ ಸಾಧ್ಯತೆಯಿದೆಯೇ? ಇತರರಿಗಿಂತ ನೀವು ಹೇಗೆ ಉತ್ತಮ ? ಮತ್ತು ನಿಮ್ಮ ವ್ಯಕ್ತಿತ್ವವು ಭರ್ತಿ ಮಾಡಬೇಕಾದ ಸ್ಥಾನಕ್ಕೆ ಉತ್ತಮವಾಗಿದೆಯೇ ಎಂಬುದರ ಮೇಲೆ ಕೇಂದ್ರೀಕರಿಸಲಾಗುತ್ತದೆ.

5. ಫೋನ್ ಸಂದರ್ಶನ:

5. ಫೋನ್ ಸಂದರ್ಶನ:

ಫೋನ್ ಸಂದರ್ಶನವನ್ನು ಅಭ್ಯರ್ಥಿಗಳನ್ನು ನೇರವಾಗಿ ಅಥವಾ ವೈಯಕ್ತಿಕ ಸಂದರ್ಶನಕ್ಕಾಗಿ ಆಹ್ವಾನಿಸುವ ನಿಟ್ಟಿನಲ್ಲಿ ಆರಂಭಿಕ ಪ್ರಿಸ್ಕ್ರೀನಿಂಗ್ ಮಾಡಲು ನಡೆಸಲಾಗುತ್ತದೆ. ಈ ಸಮಯದಲ್ಲಿ ನಿಮಗೆ ವಿಶಿಷ್ಟ ಪ್ರಶ್ನೆಗಳ್ನು ಅಥವಾ ನಡವಳಿಕೆಯ ಪ್ರಶ್ನೆಗಳನ್ನು ಕೇಳಬಹುದು.

ಹೆಚ್ಚಿನ ಸಂದರ್ಭದಲ್ಲಿ ನೀವು ಫೋನ್ ಸಂದರ್ಶನಕ್ಕಾಗಿ ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸಿಕೊಳ್ಳುತ್ತೀರಿ. ಸಂದರ್ಶಕರು ಅನಿರೀಕ್ಷಿತವಾಗಿ ಕರೆ ಮಾಡಿದರೆ ಅಪಾಯಿಂಟ್ಮೆಂಟ್ ವೇಳಾಪಟ್ಟಿ ಮಾಡಲು ವಿನಯದಿಂದ ಅವರನ್ನು ಕೇಳುವುದು ಒಳಿತು. ಫೋನ್ ಸಂದರ್ಶನದಲ್ಲಿ ನಿಮ್ಮ ಕರೆ ಕಾಯುವಿಕೆ ಆಫ್ ಆಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನೀವು ಶಾಂತ ಕೊಠಡಿಯಲ್ಲಿದ್ದೀರಿಯೇ ಮತ್ತು ನೀವು ಆ ಸಂದರ್ಭದಲ್ಲಿ ತಿನ್ನುವು, ಕುಡಿಯುವುದು ಅಥವಾ ಚೂಯಿಂಗ್ ಗಮ್ ತಿನ್ನುವು ಒಳಿತಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

6. ಊಟದ ಸಂದರ್ಶನ

6. ಊಟದ ಸಂದರ್ಶನ

ಅನೇಕ ಸಲ ಊಟದ ಸಂದರ್ಶನಗಳನ್ನು ಎರಡನೇ ಸಂದರ್ಶನದಂತೆ ನಡೆಸಲಾಗುತ್ತದೆ. ನಿಮ್ಮನ್ನು ತಿಳಿದುಕೊಳ್ಳಲು ಮತ್ತು ನೀವು ಹೇಗೆ ಹೊಂದಿಕೊಳ್ಳುತ್ತೀರಿ ಎಂಬುದನ್ನು ನೋಡಲು ತಂಡದ ಹೆಚ್ಚುವರಿ ಸದಸ್ಯರೊಂದಿಗೆ ಊಟಕ್ಕೆ ಕಂಪನಿಯು ನಿಮ್ಮನ್ನು ಆಹ್ವಾನಿಸುತ್ತದೆ. ಕಂಪನಿ ಅಥವಾ ಹುದ್ದೆಯ ಬಗ್ಗೆ ನಿಮ್ಮಲ್ಲಿರುವ ಯಾವುದೇ ಪ್ರಶ್ನೆಗಳನ್ನು ಕೇಳಲು ಇದು ಉತ್ತಮ ಸಮಯ. ಆದ್ದರಿಂದ ನೀವು ನಿಮ್ಮ ಸಂಶಯಗಳನ್ನು ಬಗೆಹರಿಸಿಕೊಳ್ಳಲು ನಿಮ್ಮ ಪ್ರಶ್ನೆಗಳನ್ನು ಮುಂಚಿತವಾಗಿ ತಯಾರಿಸಿಕೊಳ್ಳಿ.

ನಿಮ್ಮನ್ನು ಊಟದ ಸಂದರ್ಶನಕ್ಕೆ ಆಹ್ವಾನಿಸಿದ್ದರೂ ಕೂಡ ಸಂದರ್ಶನವು ಆಹಾರದ ಕುರಿತಾಗಿರುವುದಿಲ್ಲ. ಊಟದ ಸಂದರ್ಶನ ಸಮಯದಲ್ಲಿ ತಿನ್ನಲು ತುಂಬಾ ದುಬಾರಿ ಅಥವಾ ಗಲೀಜು ಇರುವ ಯಾವುದನ್ನೂ ಆರ್ಡರ್ ಮಾಡಬೇಡಿ. ನೀವು ತಿಂದು ಉಳಿದಿದ್ದನ್ನು ಮನೆಗೆ ತೆಗೆದುಕೊಂಡು ಹೋಗಬೇಡಿ. ನೀವು ಊಟಕ್ಕೆ ಕುಳಿತಾಗ ಟೇಬಲ್ ಮುಂದಿನ ನಿಮ್ಮ ನಡವಳಿಕೆ ಉತ್ತಮವಾಗಿರಲಿ ಮತ್ತು ಸಾಧ್ಯವಾದಷ್ಟು ಅಚ್ಚುಕಟ್ಟಾಗಿರಬೇಕು. ನೀವು ಊಟದ ಹಣವನ್ನು ಪಾವತಿಸುವ ಅಗತ್ಯವಿಲ್ಲ, ಊಟದ ಸಂದರ್ಶನದಲ್ಲಿ ಅಭ್ಯರ್ಥಿಯು ಪಾವತಿಸಬೇಕೆಂದು ಸಂಸ್ಥೆಯು ಎಂದಿಗೂ ನಿರೀಕ್ಷಿಸುವುದಿಲ್ಲ. ಊಟ ಮಾಡುವಾಗ ಸಮಾಧನವಾಗಿ ಮತ್ತು ನಿಧಾನವಾಗಿ ಆಹಾರ ಸೇವಿಸಿ. ಒಂದು ವೇಳೆ ನೇಮಕಾತಿ ಮಾಡುವವರು ನಿಮಗೆ ಪ್ರಶ್ನೆಯನ್ನು ಕೇಳಿದಾಗ ನಿಮ್ಮ ಬಾಯಲ್ಲಿರುವ ಆಹಾರದೊಂದಿಗೆ ತೊಡಕಾಗದಂತೆ ಉತ್ತರಿಸಲು ಪ್ರಯತ್ನಿಸಿ.

ಈ ಎಲ್ಲಾ ಸಾಮಾನ್ಯ ರೀತಿಯ ಉದ್ಯೋಗ ಸಂದರ್ಶನಗಳ ಕಲ್ಪನೆಯನ್ನು ನೀವೀಗ ಹೊಂದಿದ್ದೀರಿ. ಇನ್ನು ಮುಂದೆ ನೀವು ಯಾವ ರೀತಿಯ ಉದ್ಯೋಗ ಸಂದರ್ಶನಕ್ಕೆ ಹೋದರೂ ಅದಕ್ಕಾಗಿ ನೀವು ಅತ್ಯುತ್ತಮವಾಗಿ ತಯಾರಿ ನಡೆಸಲು ಪ್ರಯತ್ನ ಮಾಡಬಹುದು ಮತ್ತು ಸಂದರ್ಶನಗಳಲ್ಲಿ ನೀವು ಯಾರೆಂಬುದನ್ನು ಸಂದರ್ಶಕರಿಗೆ ಅತ್ಯುತ್ತಮವಾಗಿ ತೋರಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
If you are attending interview ? Here are the list of different types of job interviews candidate must know. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X