EAMCET ಪರೀಕ್ಷೆ... ಪರೀಕ್ಷೆಗೆ ಒಂದು ತಿಂಗಳು ಬಾಕಿ ಇರುವಾಗ ತಯಾರಿ ಹೀಗಿರಲಿ

Posted By:

ಆಂಧ್ರಪ್ರದೇಶ ಹಾಗೂ ತೆಲಂಗಾಣದ ಸ್ಟೇಟ್ ಲೆವೆಲ್ ಪ್ರವೇಶಾತಿ ಪರೀಕ್ಷೆ ಇಂಜಿನಿಯರಿಂಗ್ , ಅಗ್ರಿಕಲ್ಚರ್

ಆಂಡ್ ಮೆಡಿಕಲ್ ಕಾಮನ್ ಎಂಟ್ರೇಸ್ ಟೆಸ್ಟ್. ಈ ಪರೀಕ್ಷೆಯಲ್ಲಿ ಪಾಸಾದವರಿಗೆ ರಾಜ್ಯದಾದ್ಯಂತ

ವಿಶ್ವವಿದ್ಯಾನಿಲಯ ಹಾಗೂ ಟಾಪ್ ಪ್ರೈವೆಟ್ ಕಾಲೇಜುಗಳಲ್ಲಿ ಮೆರಿಟ್ ಸೀಟು ಪಡೆಯಬಹುದು

ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕ್ರಮವಾಗಿ ಎಪ್ರಿಲ್ 22 ರಿಂದ 25 ರವರೆಗೆ ಹಾಗೂ ಮೇ 2 ರಿಂದ 5

ರವರೆಗೆ ಈ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ಕಡಿಮೆ ಅಂದ್ರೂ 4 ತಿಂಗಳಿನಿಂದ ರಿವಿಜನ್ ಅಗತ್ಯವಿದೆ.

ಇನ್ನೂ ಓದಿ ಆಗಿಲ್ಲ ಎಂದಾದ್ರೆ ಟೆನ್ಶನ್ ಮಾಡಿಕೊಳ್ಳಬೇಡಿ. ನಾವು ನಿಮಗೆ ಸಹಾಯವಾಗಲೆಂದು ಇಲ್ಲಿ 9

ಪಾಯಿಂಟ್ ನೀಡಿದ್ದೇವೆ. ಅವುಗಳ ಸಹಾಯದಿಂದ ರಿವಿಜನ್ ಮಾಡಿ ಹೆಚ್ಚು ಅಂಕ ಸ್ಕೋರ್ ಮಾಡಿ

ಶೆಡ್ಯುಲ್ ತಯಾರು ಮಾಡಿಕೊಳ್ಳಿ:

ಓದುವ ಮೊದಲು ಶೆಡ್ಯುಲ್ ತಯಾರು ಮಾಡಿಕೊಳ್ಳಿ. ಟೈಂ ಸೆಟ್ ಮಾಡಿಕೊಂಡು ಸ್ಟಡಿ ಪ್ಲ್ಯಾನ್ ಮಾಡಿಕೊಳ್ಳಿ. ನಂತರ ಪ್ಲ್ಯಾನ್ ಗೆ ತಕ್ಕಂತೆ ಓದಿ ಮುಗಿಸಿ. ಮಲಗುವ ಮುನ್ನ ಸೆಟ್ ಮಾಡಿಕೊಂಡಂತಹ ಟೈಂ ಟಾರ್ಗೆಟ್ ರೀಚ್ ಆಗಿದ್ದೀರಾ ಎಂದು ಚೆಕ್ ಮಾಡಿಕೊಳ್ಳಿ.

 

ಪರೀಕ್ಷೆ ಬಗ್ಗೆ ಕಂಪ್ಲೀಟ್ ಮಾಹಿತಿ ತಿಳಿದುಕೊಳ್ಳಿ

ಪರೀಕ್ಷೆ ವೇಳೆ ಭಯದಿಂದಲೋ ಇಲ್ಲ, ಟೆನ್ಶನಿಂದಲೋ ಪ್ರಮುಖ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ಮರೆತು ಬಿಡುವ ಸಂಭವವಿರುತ್ತದೆ. ಪರೀಕ್ಷೆ ತಯಾರಿ ವೇಳೆ ಪ್ರಮುಖ ಮಾಹಿತಿ ಮಿಸ್ ಮಾಡಿಕೊಳ್ಳುವ ಸಂಭವವಿರುತ್ತದೆ. ಹಾಗಾಗಿ ಪರೀಕ್ಷೆ ಸಿಲೇಬಸ್, ವೇಳಾಪಟ್ಟಿ ಹಾಗೂ ಪ್ರಮುಖ ದಿನಾಂಕಗಳ ಬಗ್ಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳಲು ಮರೆಯದಿರಿ

 

ನೀವೆಲ್ಲಿ ಹಿಂದೆ ಬಿದ್ದಿದ್ದೀರಿ ಎಂದು ಪರೀಕ್ಷಿಸಿಕೊಳ್ಳಿ:

ಯಾವುದೇ ಕಾಂಪಿಟೇಟಿವ್ ಎಕ್ಸಾಂ ಇದ್ರೂ ಪರೀಕ್ಷೆ ತಯಾರಿ ವೇಳೆ ನೀವು ಯಾವ ವಿಷಯದಲ್ಲಿ ಹಿಂದೆ ಬಿದ್ದಿದ್ದೀರಿ ಎಂದು ಮೊದಲಿಗೆ ತಿಳಿದುಕೊಳ್ಳಿ. ಅದೇ ಟೈಂನಲ್ಲಿ ನಿಮ್ಮ ಫೇವರೇಟ್ ಸಬ್‌ಜೆಕ್ಟ್ ನಿಮ್ಮನ್ನ ಆಕರ್ಷಿಸಬಹುದು. ಆದ್ರೆ ನೀವು ನಿಮ್ಮನ್ನ ಕಂಟ್ರೋಲ್ ಆಗಿರಿಸಿಕೊಳ್ಳಿ. ಯಾವ ವಿಷಯದಲ್ಲಿ ಹಿಂದೆ ಬಿದ್ದಿದ್ದೀರೋ ಅದನ್ನ ಕಂಪ್ಲೀಟ್ ಮಾಡಿಯೇ ಮುಂದಕ್ಕೆ ಹೋಗಿ

 

ಹಳೆಯ ಪ್ರಶ್ನಾಪತ್ರಿಕೆ ಚೆಕ್ ಮಾಡಿಕೊಳ್ಳಿ:

ಹಳೆಯ ಪ್ರಶ್ನಾಪತ್ರಿಕೆಗೆ ನೀವು ಉತ್ತರಿಸಲು ಯತ್ನಿಸಿದ್ರೆ ನೀವು ಪರೀಕ್ಷೆ ಬಗ್ಗೆ ಮೈಂಡ್ ಸೆಟ್ ಮಾಡಿಕೊಳ್ಳಬಹುದು. ಇದರಿಂದ ನಿಮಗೆ ಟೈಂ ಮ್ಯಾನೇಜ್‌ಮೆಂಟ್ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು.ಅಷ್ಟೇ ಅಲ್ಲ ನೀವು ಏನನ್ನು ಇಂಪ್ರೂವ್ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಿ

 

ಕಾಂಫಿಡೆಂಟ್ ಆಗಿರುವ ಸಬ್‌ಜೆಕ್ಟ್ ನಿಂದ ಸ್ಟಡೀಸ್ ಪ್ರಾರಂಭಿಸಿ:

ಟೈಂ ಹೇಗೆ ಉಳಿಸಿಕೊಳ್ಳುವುದು ಎಂದು ವಿದ್ಯಾರ್ಥಿಗಳು ಮೊದಲು ತಿಳಿದುಕೊಳ್ಳಬೇಕು. ಹಾಗಾಗಿ ಸುಲಭ ಹಾಗೂ ನೀವು ಕಾಂಫಿಡೆಂಟ್ ಆಗಿರುವ ಸಬ್‌ಜೆಕ್ಟ್ ನಿಂದ ಓದಲು ಪ್ರಾರಂಭಿಸಿ. ಇದು ನಿಮ್ಮ ಸಮಯವನ್ನ ಸೇವ್ ಮಾಡುತ್ತೆ ಹಾಗೂ ಕಷ್ಟದ ಸಬ್‌ಜೆಕ್ಟ್ ಓದಲು ಹೆಚ್ಚಿನ ಸಮಯ ಕೂಡಾ ಸಿಗುತ್ತದೆ

 

ಕೆಮೆಸ್ಟ್ರಿ ವಿಷಯದ ಲಾಭ ಪಡೆದುಕೊಳ್ಳಿ:

ಕೆಮೆಸ್ಟ್ರಿಯ ಮೂಲ ವಿಷಯದಲ್ಲಿ ನೀವು ಕಾಂಫಿಡೆಂಟ್ ಆಗಿದ್ದರೆ ನೀವು ಈ ಸೆಕ್ಷನ್ ನಲ್ಲಿ ಹೆಚ್ಚಿನ ಅಂಕ ಪಡೆಯಬಹುದು. ಈ ಸೆಕ್ಷನ್ ನಿಂದ ನೀವು ಸಮಯ ಕೂಡಾ ಸೇವ್ ಮಾಡಿಕೊಳ್ಳಬಹುದು

ಮಾಕ್ ಟೆಸ್ಟ್ ಮಾಡಿಕೊಳ್ಳಿ:

ಪರೀಕ್ಷೆ ತಯಾರಿಗೆ ಬರೀ ಒಂದು ತಿಂಗಳು ಬಾಕಿ ಇದ್ರೆ ವಿದ್ಯಾರ್ಥಿಗಳು ಮೂರು ಫುಲ್‌ ಲೆಂತ್ ಇರುವ ಮಾಕ್ ಟೆಸ್ಟ್ ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತೇವೆ. ಇದು ನಿಮ್ಮ ಎಕ್ಸಾಂ ಟೆನ್ಶನ್ನ ದೂರ ಮಾಡುತ್ತೆ ಅಷ್ಟೇ ಅಲ್ಲ ಓದಿರುವುದು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ

ಕೊನೆಯ ವಾರ ಪರೀಕ್ಷೆ ತಯಾರಿ ಹೀಗಿರಲಿ:

ಓದಿ ಆಗಿದೆ ಎಂದು ಕೇರ್‌ಲೆಸ್ ಮಾಡಬೇಡಿ. ಪರೀಕ್ಷೆಗೆ ಇನ್ನೇನೋ ಒಂದು ವಾರ ಬಾಕಿರುವಾಗ ಚೆನ್ನಾಗಿ ರಿವಿಜನ್ ಮಾಡಿ. ನೀವು ಕಾಂಫಿಡೆಂಟ್ ಇರುವ ಸಬ್‌ಜೆಕ್ಟ್ ಬಗ್ಗೆ ಚೆನ್ನಾಗಿ ಓದಿಕೊಳ್ಳಿ. ಹೊಸ ಟಾಪಿಕ್ ನತ್ತ ಗಮನ ಬೇಡ

ಆರೋಗ್ಯದತ್ತನೂ ಗಮನವಿರಲಿ:

ಮುಂಬರುವ ಪರೀಕ್ಷೆಗಾಗಿ ಹಗಲು ರಾತ್ರಿ ಎನ್ನದೇ ಹಾರ್ಡ್ ವರ್ಕ್ ಮಾಡ್ತಾ ಇದ್ದೀರಾ. ಹಾಗಿದ್ರೆ ಈ ಪಾಯಿಂಟ್ ನೀವು ಓದಲೇ ಬೇಕು. ಸರಿಯಾದ ನಿದ್ರೆ ಹಾಗೂ ಡಯೆಟ್ ಇಲ್ಲದೇ ನೀವು ಕಂಟಿನ್ಯೂಸ್ ಓದಿದ್ರೆ ಪರೀಕ್ಷೆ ಟೈಂನಲ್ಲಿ ಆರೋಗ್ಯ ಹದಗೆಡುವ ಸಂಭವವಿರುತ್ತದೆ. ಆರೋಗ್ಯ ಹದಗೆಟ್ರೆ ಓದಿರುವುದು ಕೂಡಾ ಪ್ರಯೋಜನಕ್ಕೆ ಬಾರದೇ ಇರಬಹುದು. ಹಾಗಾಗಿ ಪರೀಕ್ಷೆ ತಯಾರಿ ಜತೆ ನಿಯಮಿತ ನಿದ್ರೆ ಹಾಗೂ ಉತ್ತಮ ಆಹಾರ ಕೂಡಾ ಸೇವಿಸಿ

 

English summary
Be it engineering or medicine, the state-level entrance examinations take the next place after the national-level entrance examinations. The Engineering, Agriculture and Medical Common Entrance Test (EAMCET) is conducted in Andhra Pradesh and Telangana for admission to various professional courses at private colleges or universities spread across the state.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia