EID Mubarak: Bakrid Wishes: ಬಕ್ರೀದ್ ಹಬ್ಬದ ಶುಭಾಶಯ, ಉಲ್ಲೇಖ, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಜುಲೈ ೨೧ರಂದು ಆಚರಿಸುತ್ತಾರೆ. ಈ ದಿನಕ್ಕೆ ನಿಮ್ಮ ಆಪ್ತರಿಗೆ ಸಂದೇಶ ಕಳಿಸಲು, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್ ಹಾಕಲು ಇಲ್ಲಿ ಶುಭಾಶಯಗಳನ್ನು ನೀಡಲಾಗಿದೆ. ನೀವು ನಿಮ್ಮ ಆಪ್ತರು ಮತ್ತು ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಶುಭಾಶಯಗಳನ್ನು ಕೋರಿ.

ಬಕ್ರೀದ್ ಹಬ್ಬಕ್ಕೆ ಶುಭಾಶಯ ಮತ್ತು ಸಂದೇಶಗಳು

* ಈ ಸಂದರ್ಭದಲ್ಲಿ ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಲು ನಾನು ಬಯಸುತ್ತೇನೆ. ಈದ್ ಮುಬಾರಕ್

* ನಿಮ್ಮ ಎಲ್ಲಾ ಕಷ್ಟಗಳು ದೂರವಾಗಲಿ. ನಿಮ್ಮ ಬದುಕಿನ ಹಾದಿಗಿದ್ದ ಅಡೆತಡೆಗಳೆಲ್ಲಾ ನಿವಾರಣೆಯಾಗಲಿ. ನಿಮ್ಮ ಮನೆ, ಮನಗಳಲ್ಲಿ ಸದಾ ಶಾಂತಿ ನೆಮ್ಮದಿ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಈದ್ ಮುಬಾರಕ್ ಶುಭಾಶಯಗಳು

* ಅಲ್ಲಾಹ್‌ನ ಕೃಪೆ, ಮಹಮ್ಮದ್ ಪೈಗಂಬರ್ ಅವರ ಆಶೀರ್ವಾದ ನಿಮ್ಮ ಬದುಕಿನುದ್ದಕ್ಕೂ ಇರಲಿ. ನಿಮ್ಮ ಜೀವನದಲ್ಲಿ ಸದಾ ಖುಷಿ ತುಂಬಿರಲಿ. ಈದ್ ಮುಬಾರಕ್

* ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ, ನಿಮ್ಮ ಕನಸುಗಳನ್ನು ಅಲ್ಲಾಹ್ ಈಡೇರಿಸಲಿ ಎಂದು ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ. ಈದ್ ಮಿಲಾದ್ ಶುಭಾಶಯಗಳು

* ನಿಮಗೆ ಉತ್ತಮ ಆರೋಗ್ಯ ನೀಡಿ, ಬಾಳಿನಲ್ಲಿ ಸುಖ, ಶಾಂತಿ ನೆಮ್ಮದಿಯನ್ನು ದೇವರು ಕರುಣಿಸಲಿ. ಈದ್ ಮಿಲಾದ್ ಶುಭಾಶಯಗಳು

* ಅಲ್ಲಾ ತ್ಯಾಗ ಬಲಿದಾನವನ್ನು ಸ್ವೀಕರಿಸಿ ನಿಮ್ಮೆಲ್ಲಾ ಕೋರಿಕೆಗಳನ್ನು ಈಡೇರಿಸಲಿ. ಬದುಕಿನ ಆಸೆಗಳನ್ನು ಪೂರೈಸುವಂತಾಗಲಿ. ನೀವು ಮತ್ತು ನಿಮ್ಮ ಕುಟುಂಬ ಸದಾ ಸಂತೋಷದಿಂದಿರಲಿ. ಈದ್ ಮುಬಾರಕ್

* ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಶುಭಾಶಯಗಳು

* ನೀವು ಮತ್ತು ನಿಮ್ಮ ಕುಟುಂಬವು ತುಂಬಾ ಸಂತೋಷದಾಯಕ ಈದ್ ಅನ್ನು ಆಚರಿಸುವಂತೆ ಬಯಸುತ್ತೇನೆ. ಅಲ್ಲಾಹನು ನಿಮ್ಮ ಎಲ್ಲಾ ಪ್ರಾರ್ಥನೆಗಳನ್ನು ಸ್ವೀಕರಿಸಿ ನಿಮ್ಮ ಎಲ್ಲಾ ತಪ್ಪುಗಳನ್ನು ಕ್ಷಮಿಸಲಿ. ಈದ್ ಮುಬಾರಕ್

* ಜೀವನದ ಪ್ರತಿಯೊಂದು ಹಂತದಲ್ಲೂ ಅಲ್ಲಾಹನು ತನ್ನ ಆಶೀರ್ವಾದವನ್ನು ನಿಮ್ಮ ಮೇಲೆ ಸುರಿಸುತ್ತಾನೆ ಎಂದು ತಿಳಿಯಿರಿ. ಈದ್ ಮುಬಾರಕ್

* ನಿಮ್ಮ ಜೀವನದಲ್ಲಿ ಯಾವತ್ತೂ ಕತ್ತಲೆ ಕವಿಯದೇ ಇರಲಿ. ಬರೀ ಸಂತೋಷ ಮಾತ್ರ ನಿಮ್ಮ ಸುತ್ತ ತುಂಬಿರಲಿ, ಸದಾ ಕಾಲ ದೇವರ ದಯಾ ದೃಷ್ಟಿ ನಿಮ್ಮ ಮೇಲಿರಲಿ ಎಂಬ ಹಾರೈಕೆ ನನ್ನದು. ಈದ್ ಮುಬಾರಕ್

* ಜೀವನದ ಪ್ರತಿ ಸವಾಲುಗಳನ್ನು ಗೆಲ್ಲಲು ನಿಮಗೆ ಸಹಾಯ ಮಾಡುವ ಧೈರ್ಯ ಮತ್ತು ಶಕ್ತಿಯನ್ನು ಬಕ್ರೀದ್ ಕರುಣಿಸಲಿ ಎಂದು ನಾನು ಹಾರೈಸುತ್ತೇನೆ. ನಿಮಗೆ ಹಬ್ಬದ ಶುಭಾಶಯಗಳು

* ಅಲ್ಲಾಹನ ದಯೆ, ಪ್ರೀತಿ, ಆಶೀರ್ವಾದ ಎಲ್ಲರಿಗೂ ಸಿಗಲಿ. ಸರ್ವರಿಗೂ ಬಕ್ರೀದ್ ಶುಭಾಶಯಗಳು

For Quick Alerts
ALLOW NOTIFICATIONS  
For Daily Alerts

English summary
Eid-al-Adha Mubarak 2021: Bakrid is on july 21. here is the wishes, watsapp and facebook status in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X