ಮುಂಬರುವ ಪರೀಕ್ಷೆಯಲ್ಲಿ ನೀವು ಅತೀ ಹೆಚ್ಚು ಅಂಕ ಸ್ಕೋರ್ ಮಾಡಬೇಕು ಎಂದು ಬಯಸುತ್ತಿದ್ದೀರಾ? ನಿಮ್ಮ ಅಂಕವನ್ನ ಹೇಗೆ ಹೆಚ್ಚಿಸುವುದು ಎಂದು ಇದೀಗ ಚಿಂತಿಸುತ್ತಿದ್ದೀರಾ ನೋ ವರಿ. ಮುಂಬರುವ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ, ಎಲ್ಲರಿಂದಲೂ ಸೈ ಎನಿಸಿಕೊಳ್ಳುವುದು ಹೇಗೆ ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ.

ತರಗತಿಯಲ್ಲಿ ಗಮನವಿಟ್ಟು ಪಾಠ ಕೇಳಿ:
ತರಗತಿಯಲ್ಲಿ ಗಮನವಿಟ್ಟು ಕ್ಲಾಸ್ ಕೇಳಿ. ಕ್ಲಾಸ್‌ನಲ್ಲಿ ಕಲಿಸುವ ಪಾಠವನ್ನ ಗಮನವಿಟ್ಟು ಆಸಕ್ತಿಯಿಂದ ಅರ್ಥ ಮಾಡಿಕೊಳ್ಳಿ.ಓದಬೇಕು ಎಂದು ಓದಿದ್ರೆ ಯಾವುದೇ ಪ್ರಯೋಜನವಿಲ್ಲ. ಹಾಗೆ ಓದಿದ್ರೆ ಕಲಿತದ್ದೂ ಯಾವುದೂ ಕೂಡಾ ನೆನಪಲ್ಲಿ ಉಳಿಯುದಿಲ್ಲ. ಆದ್ರೆ ಕ್ಲಾಸ್‌ನಲ್ಲಿ ನೀನು ಗಮನವಿಟ್ಟು ಪಾಠ ಕೇಳಿದ್ರೆ ಅದು ಎಕ್ಸಾಂ ಟೈಂನಲ್ಲಿ ನಿಮಗೆ ಸಹಾಯಕ್ಕೆ ಬರುತ್ತದೆ.
ಪ್ರತಿ ನಿತ್ಯ ಓದಿ :
ಪರೀಕ್ಷೆಗೆ ಎಷ್ಟು ಓದಿದ್ರೂ ಸಾಕಾಗುವುದಿಲ್ಲ. ಹಾಗಾಗಿ ಪ್ರತಿ ನಿತ್ಯ ಓದುದು ಅಗತ್ಯ. ಇನ್ನು ಕೆಲವರು ಬರೀ ಎಕ್ಸಾಂ ಹಿಂದಿನ ದಿನ ಮಾತ್ರ ಓದುತ್ತಾರೆ. ಇದರಿಂದ ಓದಿರುವುದು ಪರೀಕ್ಷೆ ವೇಳೆ ಯಾವುದು ಕೂಡಾ ನೆನಪಲ್ಲಿ ಉಳಿಯುದಿಲ್ಲ. ಹಾಗಾಗಿ ಪ್ರತೀ ದಿನ ಓದಿದ್ರೆ ಹೆಚ್ಚಿನ ಅಂಕ ಸ್ಕೋರ್ ಮಾಡಬಹುದು.
ಬರವಣಿಗೆ ಕೂಡಾ ಇಂಪೋರ್ಟೆಂಟ್:
ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಅವಸರವಸರವಾಗಿ ಬರೆಯುದರಿಂದ ಉತ್ತರ ಪತ್ರಿಕೆ ತುಂಬಾ ಚಿತ್ತು, ಗಲೀಜು ಮಾಡಿರುತ್ತಾರೆ. ಹಾಗೂ ಅಕ್ಷರ ಕೂಡಾ ಕಾಗೆ ಕಾಲಿನಂತೆ ಬರೆದಿರುತ್ತಾರೆ. ಇದರಿಂದ ಉತ್ತರ ಪತ್ರಿಕೆ ನೋಡಲು ಅಸಹ್ಯಕರವಾಗುವುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಅಂಕ ಕಳೆದುಕೊಳ್ಳುತ್ತಾರೆ. ಹಾಗಾಗಿ ಹೆಚ್ಚು ಅಂಕ ಸ್ಕೋರ್ ಮಾಡಬೇಕು ಎಂದಾದ್ರೆ ವಿದ್ಯಾರ್ಥಿಗಳು ಬರವಣಿಗೆಯತ್ತನೂ ಗಮನ ಕೊಡಬೇಕು
ಪರೀಕ್ಷೆ ವೇಳೆ ಭಯಪಡಬೇಡಿ:
ಪರೀಕ್ಷೆ ವೇಳೆ ಕೂಲ್ ಆಗಿರಿ ಹಾಗೂ ನಿಮ್ಮ ಮೇಲೆ ನೀವು ನಂಬಿಕೆ ಇಟ್ಟುಕೊಳ್ಳಿ. ನಿಮಗೆ ಎಲ್ಲಾ ತಿಳಿದಿದೆ ಎಂದು ಮೊದಲು ನೀವು ನಿರ್ಧಾರ ಮಾಡಿಕೊಳ್ಳಿ. ಇನ್ನು ಪರೀಕ್ಷೆ ವೇಳೆ ಕೂಡಾ ಪಾಸಿಟೀವ್ ಆಗಿ ಇರಿ. ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಹಾಲ್‌ಗೆ ಎಂಟ್ರಿ ಆಗುತ್ತಿದ್ದಂತೆಯೇ ಭಯಗೊಳ್ಳುತ್ತಾರೆ. ಇದರಿಂದ ಅವರ ಮೈಂಡ್ ಎಲ್ಲಾ ಬ್ಲ್ಯಾಂಕ್ ಬ್ಲ್ಯಾಂಕ್ ಆಗುತ್ತದೆ. ಕಲಿತ್ತದ್ದೂ ಕೂಡಾ ನೆನಪಿನಲ್ಲಿ ಉಳಿಯೋದಿಲ್ಲ. ಇನ್ನೂ ಪರೀಕ್ಷೆಗೆ 2 ಗಂಟೆ ಬಾಕಿ ಇರುವಾಗಲೇ ಪುಸ್ತಕ ಮುಚ್ಚಿಡಿ. ಹಾಗೂ ರಿಲಾಕ್ಸ್ ಆಗಿ ಓದಿರುವುದನ್ನ ನೆನಪಿಸಿಕೊಳ್ಳಿ.
ಮೊದಲ ಪೇಜ್‌ನಲ್ಲಿ ತಪ್ಪು ಬೇಡ:
ಹೆಚ್ಚಿನ ವಿದ್ಯಾರ್ಥಿಗಳು ಟೆನ್ಶನ್ ನಿಂದ ಬರೆಯಲು ಪ್ರಾರಂಭಿಸಿದ ಕೂಡಲೇ ತಪ್ಪುಗಳನ್ನ ಮಾಡಲು ಪ್ರಾರಂಭಿಸುತ್ತಾರೆ. ಹಾಗಾಗಿ ಆದಷ್ಟು ಮೊದಲ ಪೇಜ್‌ನಲ್ಲಿ ಯಾವುದೇ ತಪ್ಪುಗಳನ್ನ ಮಾಡಬೇಡಿ. ಇದರಿಂದ ಪ್ರಶ್ನಾಪತ್ರಿಕೆ ತಿದ್ದುವವರಿಗೆ ನಿಮ್ಮ ಮೇಲೆ ಕೆಟ್ಟ ಅಭಿಪ್ರಾಯ ಮೂಡುತ್ತದೆ.


Click it and Unblock the Notifications











