ಶಾಲೆಯಲ್ಲಿ ಇಷ್ಟವಿಲ್ಲದಿದ್ದರೂ ರೂಢಿಸಿಕೊಂಡ ಹವ್ಯಾಸ... ಭವಿಷ್ಯತ್ ನಲ್ಲಿ ನೆರವಾಗುತ್ತಾ?

ನಮ್ಮ ಜೀವನದ 14 ವರ್ಷವನ್ನ ನಾವು ಶಾಲೆಯಲ್ಲೇ ಕಳೆದಿರುತ್ತೇವೆ. ನರ್ಸರಿಯಿಂದ ಹಿಡಿದು ೧೨ನೇ ತರಗತಿಯ ವರೆಗೆ ಶಾಲಾ ಜೀವನವನ್ನ ಅನುಭವಿಸಿರುತ್ತೇವೆ. ಬಳಿಕ ನಾವೆಲ್ಲ ಹೋಗುತ್ತೇವೆ ನಾವೇನು ಮಾಡುತ್ತೇವೆ ಅನ್ನೋದು ಮುಖ್ಯವಲ್ಲ ಬದಲಿಗೆ ಶಾಲಾ ದಿನಗಳಲ್ಲಿ ನಾವು ಕಲಿತದ್ದು ಯಾವುದಾದ್ರೂ ನಮ್ಮ ಫ್ಯೂಚರ್ ಗೆ ಉಪಯೋಗವಾಗಿದ ಎಂಬುವುದು ಮುಖ್ಯ.

ಶಾಲೆಯಲ್ಲಿ ಇಷ್ಟವಿಲ್ಲದಿದ್ದರೂ ರೂಢಿಸಿಕೊಂಡ ಹವ್ಯಾಸ... ಭವಿಷ್ಯತ್ ನಲ್ಲಿ ನೆರವಾಗುತ್ತಾ?

 

ಇಲ್ಲಿ ನಾವು ಗಣಿತ, ವಿಜ್ಞಾನ ಸೇರಿದಂತೆ ಯಾವುದೇ ಸಬ್‌ಜೆಕ್ಟ್ ಬಗ್ಗೆ ಕೇಳುತ್ತಿಲ್ಲ. ಆದ್ರೆ ಶಾಲೆಗೆ ಹೋಗದೇ ಜೀವನ ಪಾಠ ಕಲಿಯುವುದು ತುಂಬಾ ಕಷ್ಟ.

ವಿದೇಶಿ ವಿದ್ಯಾರ್ಥಿಗಳಿಗೆ ಫ್ರೀ ಎಜ್ಯುಕೇಶನ್ ನೀಡುವ ಟಾಪ್ 5 ರಾಷ್ಟ್ರಗಳು!

ಶಾಲಾ ದಿನಗಳಲ್ಲಿ ನೀವು ಕಲಿರ ಯಾವ ವಿಚಾರ ನಿಮಗೆ ಭವಿಷ್ಯದಲ್ಲಿ ಸಹಾಯಕ್ಕೆ ಬಂದಿರುತ್ತೆ ಎಂಬುವುದು ಇಲ್ಲಿದೆ ಓದಿ.

ನಿದ್ರೆ:

ಹೌದು ಶಾಲಾ ದಿನಗಳಲ್ಲಿ ಯಾವಾಗ ಪರೀಕ್ಷೆ ಆರಂಭ ಎಂದು ತಿಳಿಯುತ್ತೋ ಬಳಿಕ ನಿದ್ರೆ ಮಾಯವಾಗುತ್ತೆ. ಪರೀಕ್ಷೆ ಮುಗಿಯುವ ವರೆಗೂ ನಮಗೆ ಚೆನ್ನಾಗಿ ನಿದ್ರೆ ಮಾಡಲು ಮನಸು ಬರುವುದಿಲ್ಲ. ಈ ಅಭ್ಯಾಸವೇ ನಮಗೆ ಭವಿಷ್ಯದಲ್ಲಿ ಕೂಡಾ ಸಹಾಯಕ್ಕೆ ಬರುವುದು. ನೀವು ನಿಜವಾದ ಜಗತ್ತಿಗೆ ಎಂಟ್ರಿ ಆಗುತ್ತಿದ್ದಂತೆ, ಅದೆಷ್ಟೋ ಟಾಸ್ಕ್ ಗಳು ನಿಮ್ಮ ಮುಂದೆ ಎದುರಾಗಲಿವೆ. ಆಗ ಮತ್ತೆ ನೀವು ನಿದ್ರೆಗೆಟ್ಟು ಆ ಸಮಸ್ಯೆಗಳನ್ನ ಬಗೆಹರಿಸಿ, ಜಯದ ನಗೆಬೀರುವಿರಿ.

ಬೆಳಗ್ಗೆ 6 ಗಂಟೆಗೆ ಎಚ್ಚರ:

ಶಾಲಾ ದಿನಗಳಲ್ಲಿ ಬೆಳಗ್ಗೆ 6 ಗಂಟೆಗೆ ಏಳುವಂತೆ ನಿಮ್ಮ ಮನೆಯವರು ಅಭ್ಯಾಸ ರೂಢಿಸಿರುತ್ತಾರೆ. ಚಳಿಗಾಲದಲ್ಲೂ 6 ಗಂಟೆಗೆ ಎದ್ದೇಳೋ ನೋವು ನಿಮಗೆ ಈಗಾಗಲೇ ತಿಳಿದಿರುತ್ತದೆ. ಆದ್ರೆ ಈ ರೀತಿ ಅಭ್ಯಾಸ ರೂಢಿಸಿಕೊಂಡಿರುವುದುರಿಂದ ಮುಂದೊಂದು ದಿನ ನೀವು ವೃತ್ತಿ ಜೀವನಕ್ಕೆ ಕಾಲಿಡುವ ಟೈಂನಲ್ಲಿ ನಿಮಗೆ ರೋಬೋಟ್ ಥರಹ ದುಡಿಯುವ ಪ್ರಸಂಗ ಎದುರಾದಾಗ ಈ ಅಭ್ಯಾಸ ನಿಮಗೆ ಸಹಾಯಕ್ಕೆ ಬರುತ್ತದೆ.

ಲಾಸ್ಟ್ ಬೆಂಚರ್ಸ್... ನೀವು ಕೂಡಾ ವಿದ್ಯಾರ್ಥಿಯಾಗಿದ್ದಾಗ ಹೀಗೆಲ್ಲಾ ಮಾಡಿದ್ದೀರಾ?

ಮಲ್ಟಿ ಟಾಸ್ಕಿಂಗ್:

ನಮಗೆಲ್ಲಾ ತಿಳಿದಿದೆ ನಮ್ಮ ಶಾಲಾ ಜೀವನ ಫುಲ್ ಮಲ್ಟಿ ಟಾಸ್ಕಿಂಗ್ ನಿಂದಲೇ ತುಂಬಿತ್ತು ಎಂದು. ಎಜ್ಯುಕೇಶನ್, ಸ್ಪೋರ್ಟ್, ಕಲ್ಚರ್ ಆಕ್ಟಿವಿಟೀಸ್, ಪ್ರಾಜೆಕ್ಟ್ ವರ್ಕ್ ಹೀಗೆ ಅದೆಷ್ಟೋ ಮಲ್ಟಿ ಟಾಸ್ಕ್ ಗಳನ್ನ ಒಂದೇ ಸಮಯಕ್ಕೆ ಮಾಡಿ ಮುಗಿಸಬೇಕಿತ್ತು. ಆದ್ರೆ ಅಂದು ಶಾಲೆಯಲ್ಲಿ ಹೀಗೆಲ್ಲಾ ಮಾಡಿದ್ದರಿಂದ ಇಂದು ವೃತ್ತಿಯಲ್ಲಿಯೂ ಅದೆಷ್ಟೋ ಕೆಲಸಗಳನ್ನ ಜತೆ ಜತೆಯಾಗಿ ಸಕ್ಸಸ್ ಫುಲ್ ಆಗಿ ಮಾಡಿ ಮುಗಿಸಬಹುದು.

 

ಸ್ನೇಹಿತರು:

ಶಾಲೆ ಇಲ್ಲದೇ ಇದ್ದಿದ್ದರೆ ನಾವು ಹೇಗೆ ಸ್ನೇಹಿತರನ್ನ ಮಾಡಿಕೊಳ್ಳುತ್ತಿದ್ದೆವು ನೀವೇ ಹೇಳಿ. ಇದೊಂದು ವಿಚಾರ ತುಂಬಾ ಪ್ರಮುಖ. ನಾವು ಹೋದಲೆಲ್ಲಾ ಸ್ನೇಹಿತರನ್ನ ಮಾಡದೇ ಇದ್ದರೆ ಜೀವನದಲ್ಲಿ ಬರುವ ಅದೆಷ್ಟೋ ಸಚಾಲುಗಳನ್ನ ಎದುರಿಸುವುದು ತುಂಬಾ ಕಷ್ಟ.

ಶಾಲೆ ವರ್ಸಸ್ ಕಾಲೇಜು... ಯಾವುದು ಬೆಸ್ಟ್!

ಬೈಗುಳ:

ಮನೆಯಿರಲಿ, ಶಾಲೆಯಿರಲಿ ಏನಾದ್ರೂ ತುಂಟಾಟ ಮಾಡುವುದು ಮಕ್ಕಳ ಲಕ್ಷಣ. ಇನ್ನು ತಾವು ಮಾಡುವ ತಪ್ಪು ಚಿಕ್ಕದಿರಬಹುದು ಇಲ್ಲ ದೊಡ್ಡದಿರಬಹುದು ಆದ್ರೆ ಆ ತಪ್ಪಿಗೆ ಮಕ್ಕಳು ಸಖತ್ ಬೈಗುಳ ಕೂಡಾ ತಿಂತಾರೆ. ತಪ್ಪು ಮಾಡಿದಾಗ ಅಂತಹ ವಿದ್ಯಾರ್ಥಿಗೆ ಇಡೀ ಕ್ಲಾಸ್ ಮಕ್ಕಳ ಮುಂದೆ ನಿಲ್ಲಿಸಿ ಶಿಕ್ಷಕರು ಬೈಯುದು ಕಾಮನ್. ಆದ್ರೆ ಇದರಿಂದ ಮುಂದೆ ವೃತ್ತಿ ಜೀವನದಲ್ಲಿ ನೀವು ಬಾಸ್ ನಿಂದ ಬೈಗುಳ ಎದುರಿಸಿದಾಗ ಟೆನ್ಶನ್ ಆಗದೇ ಕೂಲ್ ಆಗಿ ಹ್ಯಾಂಡಲ್ ಮಾಡುತ್ತೀರಿ ನೆನಪಿಟ್ಟುಕೊಳ್ಳಿ.

ಉದ್ಯೋಗಕ್ಕೆ ಸಂಬಂಧಪಟ್ಟ ಸಮಸ್ಯೆಗೆ ವಾಸ್ತು ಸಲಹೆ !

For Quick Alerts
ALLOW NOTIFICATIONS  
For Daily Alerts

English summary
I am not talking about the academic lessons of math and science, but the life lessons that one just cannot learn without going to school. those are the life lessons that you understand when you face different things in school that prepares you for future.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X