ಈ 5 ಅಂಶ ನೆನಪಿಟ್ಟುಕೊಂಡು ಆ ಮೇಲೆ ಜಾಬ್ ಹುಡುಕಿ... ಕೆಲಸ ಗ್ಯಾರಂಟಿ !

ಜಾಬ್ ಹುಡುಕೋ ಮುನ್ನ ಕೆಲವೊಂದು ಪ್ರಮುಖ ಅಂಶಗಳನ್ನ ಗಮನದಲ್ಲಿಟ್ಟುಕೊಳ್ಳುವುದು ಉತ್ತಮ. ಕಾಲೇಜು ಲೈಫ್ ಮುಗಿದು ಕೆರಿಯರ್ ಲೈಫ್ ಪ್ರಾರಂಭವಾದ್ರೆ ಅಲ್ಲಿ ಏನೋ ಒಂದು ರೀತಿಯ ನರ್ವಸ್, ಭಯ ಎಂಬುವುದು ಇರುತ್ತದೆ

By Kavya

ಎಜ್ಯುಕೇಶನ್ ಮುಗಿದ ಕೂಡಲೇ ಆಕೆ ಇಲ್ಲ ಆತ ಮಾಡುವ ಮೊದಲ ಕೆಲಸವೆಂದ್ರೆ ಜಾಬ್ ಹುಡುಕಾಟ. ಇನ್ನು ಜಾಬ್ ಸಿಗುವುದು ಕೂಡಾ ಅಷ್ಟು ಸುಲಭದ ಮಾತಲ್ಲ. ಇತ್ತೀಚೆಗಂತೂ ಕೆಲವೊಂದು ಕಾಲೇಜುಗಳು ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡುತ್ತದೆ. ಇನ್ನೂ ಕೆಲವು ವಿದ್ಯಾರ್ಥಿಗಳು ತಮ್ಮ ಪಾಡಿಗೇ ತಾವೇ ಜಾಬ್ ಹುಡುಕಿಕೊಳ್ಳುತ್ತಾರೆ. ಪರೀಕ್ಷೆ ಬರೆದು, ಸಂದರ್ಶನ ಎದುರಿಸಿ ಜಾಬ್ ಪಡೆಯುವ ಮುನ್ನ ನೀವು ಕೆಲವೊಂದು ಅಂಶಗಳನ್ನ ಗಮನದಲ್ಲಿಟ್ಟು ಕೊಳ್ಳಬೇಕು. ಆ ಅಂಶಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಕಾಂಫಿಡೆಂಟ್ ಆಗಿರಿ:

ಕಾಂಫಿಡೆಂಟ್ ಆಗಿರಿ:

ಅದೆಷ್ಟೋ ವಿದ್ಯಾರ್ಥಿಗಳು ಬೋರ್ಡ್ ಎಕ್ಸಾಂ ಹಾಗೂ ಕಾಂಪಿಟೇಟಿವ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುತ್ತಾರೆ. ಆದ್ರೆ ಇಂಟರ್ವ್ಯೂ ಮಾತ್ರ ಸಕ್ಸಸ್ ಫುಲ್ ಆಗಿ ಮಾಡಲುವಲ್ಲಿ ವಿಫಲರಾಗುತ್ತಾರೆ. ಇದಕ್ಕೆ ಪ್ರಮುಖ ಕಾರಣ ಕಾಂಫಿಡೆನ್ಸ್. ಸಂದರ್ಶನ ಮಾಡುವವರು ನೀವು ಅವರ ಮುಂದೆ ಯಾವ ರೀತಿ ಕಾಂಫಿಡೆಂಟ್ ಆಗಿರುತ್ತೀರಿ ಎಂದು ಮೊದಲು ಚೆಕ್ ಮಾಡುತ್ತಾರೆ. ನೀವು ಕಾಂಫಿಡೆಂಟ್ ಆಗಿರದೇ ಇದ್ದರೆ ನಿಜವಾಗಿಯೂ ಅವರು ನಿಮ್ಮನ್ನ ಅರ್ಧಕ್ಕೆ ಬಿಟ್ಟು ಬಿಡುತ್ತಾರೆ. ಹಾಗಾಗಿ ಸಂದರ್ಶನದ ಟೈಂನಲ್ಲಿ ನೀವು ನರ್ವಸ್ ಆಗಬೇಡಿ. ಯಾಕೆಂದ್ರೆ ಒಂದು ಹುದ್ದೆಗೆ ಅದೆಷ್ಟೋ ಮಂದಿ ಅರ್ಜಿ ಹಾಕಿರುತ್ತಾರೆ. ಹಾಗಾಗಿ ನೀವು ಕಾಂಫಿಡೆಂಟ್ ನಿಂದ ಇರುವುದು ಮುಖ್ಯ

ನೀವು ಏನು ಮಾಡಬೇಕು ಎಂಬುವುದು ಮೊದಲು ತಿಳಿದುಕೊಳ್ಳಿ:

ನೀವು ಏನು ಮಾಡಬೇಕು ಎಂಬುವುದು ಮೊದಲು ತಿಳಿದುಕೊಳ್ಳಿ:

ವಿವಿಧ ವಿಭಾಗಗಳಲ್ಲಿ ಜಾಬ್ ಗೆ ಅಪ್ಲೈ ಮಾಡುತ್ತಾರೆ. ಅದು ನೀವು ಮಾಡುವುದು ತಪ್ಪು. ಮೊದಲಿಗೆ ಯಾವ ಸೆಕ್ಟರ್ ಅಲ್ಲಿ ನೀವು ಯಾವುದೇ ಸಮಸ್ಯೆ ಇಲ್ಲದೇ ಕೂಲ್ ಆಗಿ ಜಾಬ್ ಮಾಡಬಹುದು ಎಂಬುವುದು ತಿಳಿದುಕೊಳ್ಳಿ. ನೀವು ಒಬ್ಬರೆ ಕಂಫರ್ಟ್ ಆಗಿ ಯಾವ ಕ್ಷೇತ್ರದಲ್ಲಿ ದುಡಿಯಬಹುದು ಎಂದು ನೋಟ್ ಮಾಡಿಕೊಂಡು ಜಾಬ್ ಗೆ ಅಪ್ಲೈ ಮಾಡಿ

ಅವಕಾಶಗಳಿಗಾಗಿ ಮುಂದೆ ನೋಡುತ್ತಾ ಇರಿ:

ಅವಕಾಶಗಳಿಗಾಗಿ ಮುಂದೆ ನೋಡುತ್ತಾ ಇರಿ:

ವಿದ್ಯಾರ್ಥಿಗಳು ಮಾಡುವ ಮೊದಲ ತಪ್ಪು ಅಂದ್ರೆ ಉದ್ಯೋಗ ಹುಡುಕುವಾಗ ಕೆಲವೇ ಕೆಲವು ಮೂಲಗಳನ್ನ ಅವಲಂಭಿಸಿರುವುದು. ಅದು ತಪ್ಪು, ಕಾಲೇಜು ಕೆಲವೊಂದು ಉದ್ಯೋಗವಕಾಶ ನೀಡಬಹುದು. ಹಾಗಂತ ಅದನ್ನೇ ನಂಬಿಕೊಂಡು ಕುಳಿತುಕೊಳ್ಳುವುದಲ್ಲ. ನೀವು ಇತರರ ಮೂಲಗಳಿಂದಲೂ ಉದ್ಯೋಗವಕಾಶಕ್ಕೆ ಎದುರು ನೋಡಬೇಕು. ಸ್ನೇಹಿತರ ಜತೆ ಮಾತನಾಡಿ. ಆನ್‌ಲೈನ್‌ಗಳಲ್ಲಿ ಜಾಬ್ ಬಗ್ಗೆ ನೋಟಿಫಿಕೇಶನ್ ಬರುತ್ತಿರುತ್ತೆ ಅದನ್ನ ಆಗಾಗ ಚೆಕ್ ಮಾಡಿಕೊಳ್ಳಿ.

ಪರ್ಸನಾಲಿಟಿ ಬಗ್ಗೆ ಗಮನವಿರಲಿ:

ಪರ್ಸನಾಲಿಟಿ ಬಗ್ಗೆ ಗಮನವಿರಲಿ:

ಇತ್ತೀಚಿಗಿನ ದಿನಗಳಲ್ಲಿ ಪ್ರತಿಯೊಂದು ಜಾಬ್ ಕೂಡಾ ಕಾಂಪಿಟೇಶನ್ ಮೇಲೆ ನಡೆಯುತ್ತೆ. ಹಾಗಾಗಿ ಇಲ್ಲಿ ನಿಮ್ಮ ವಿದ್ಯೆ ಜತೆ ಪರ್ಸನಾಲಿಟಿ ಕೂಡಾ ಮುಖ್ಯ. ಕಂಪನಿಗಳಲ್ಲಿ ಸಂದರ್ಶನಕಾರರು ಇಂಟರ್ವ್ಯೂ ವೇಳೆ ನಿಮ್ಮ ಅಂಕದ ಜತೆ ಫೇಸ್‌ ಹಾಗೂ ಫಿಟ್ ನೆಸ್ ಗೂ ಪ್ರಾಮುಖ್ಯತೆ ನೀಡುತ್ತಾರೆ. ನೀವು ಏನು ಮಾಡಬೇಕು ಅಂದ್ರೆ ಕಾಲೇಜು ಮುಗಿದ ತಕ್ಷಣ ಜಾಬ್ ಗೆ ಅಪ್ಲೈ ಮಾಡುವ ಮುನ್ನ ನಿಮ್ಮ ಪರ್ಸನಾಲಿಟಿ ಕಡೆ ಕೂಡಾ ಗಮನ ಕೊಡಿ. ಚೆನ್ನಾಗಿ ತಿಂದು, ಸ್ವಲ್ಪ ವರ್ಕೌಟ್ ಮಾಡಿ ಕಟ್ಟು ಮಸ್ತಾಗಿ ದೇಹವನ್ನ ರೂಪಿಸಿಕೊಳ್ಳಿ. ಇದರಿಂದ ಜಾಬ್ ಕೂಡಾ ಬೇಗನೆ ಸಿಗುತ್ತೆ ಡೌಟೇ ಇಲ್ಲ.

ಇಂಟರ್ವ್ಯೂ ಬಗ್ಗೆ ತಿಳಿದುಕೊಂಡಿರಿ:

ಇಂಟರ್ವ್ಯೂ ಬಗ್ಗೆ ತಿಳಿದುಕೊಂಡಿರಿ:

ಇಂಟರ್ವ್ಯೂ ಗೆ ಹೇಗೆ ತಯಾರಾಗ ಬೇಕೆಂದು ನಿಮಗೆ ಕಾಲೇಜು ಕೆಲವೊಂದು ಗೈಡ್ ಲೈನ್ ನೀಡಿರಬಹುದು. ಆದ್ರೆ ಅಷ್ಟನ್ನೇ ನಂಬಿಕೊಂಡು ಇಂಟರ್ವ್ಯೂ ಗೆ ಹೋಗಬೇಡಿ. ಬದಲಿಗೆ ಇಂಟರ್ವ್ಯೂ ಹೇಗೆ ಪಾಸ್ ಮಾಡುವುದು ಎಂಬ ಅನೇಕ ಟಿಪ್ಸ್ ಗಳ ಬಗ್ಗೆ ತಿಳಿದುಕೊಂಡು ಹೋಗಿ. ಅಷ್ಟೇ ಅಲ್ಲ ಸೀನಿಯರ್ಸ್, ಹಾಗೂ ಇನ್ನಿತ್ತರ ಸ್ನೇಹಿತರ ಜತೆ ಈ ಬಗ್ಗೆ ಚರ್ಚಿಸಿ ಬಳಿಕ ತಯಾರಾರಗಿ ಸಂದರ್ಶನ ಫೇಸ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Hunting a Job its not a easy work. lot of collages can provide a job for students. So keep in my mind these things when you hunting the job.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+