ಸಕ್ಸಸ್ ಫುಲ್ ಪ್ರೆಸಂಟೇಶನ್ ... ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದ ಹೇಗೆ ?

ಸರಾಗವಾಗಿ ಹಾಗೂ ಸರಳವಾಗಿ ಪ್ರೆಸಂಟೇಶನ್ ನೀಡುವುದು ತುಂಬಾ ಕಷ್ಟಕರವಾದ ಕೆಲಸ. ಯಾಕೆಂದ್ರೆ ಅಲ್ಲಿ ನಿಮ್ಮ ಮುಂದೆ ಅದೆಷ್ಟೋ ಜನರು ಕುಳಿತು ನೇರವಾಗಿ ನಿಮ್ಮತ್ತಲೇ ನೋಡುತ್ತಾ ನಿಮ್ಮ ಮಾತುಗಳನ್ನೇ ಗಮನಿಸುತ್ತಾ ಇರುತ್ತಾರೆ.

By Kavya

ಸರಾಗವಾಗಿ ಹಾಗೂ ಸರಳವಾಗಿ ಪ್ರೆಸಂಟೇಶನ್ ನೀಡುವುದು ತುಂಬಾ ಕಷ್ಟಕರವಾದ ಕೆಲಸ. ಯಾಕೆಂದ್ರೆ ಅಲ್ಲಿ ನಿಮ್ಮ ಮುಂದೆ ಅದೆಷ್ಟೋ ಜನರು ಕುಳಿತು ನೇರವಾಗಿ ನಿಮ್ಮತ್ತಲೇ ನೋಡುತ್ತಾ ನಿಮ್ಮ ಮಾತುಗಳನ್ನೇ ಗಮನಿಸುತ್ತಾ ಇರುತ್ತಾರೆ. ನಿಜ ತಾನೇ?

ರಾತ್ರಿ ಇಡೀ ಕುಳಿತು, ಶಾರ್ಟ್ ನೋಟ್ಸ್ ಮಾಡಿಕೊಂಡು ಹಾಗೂ ಸ್ಲೈಡ್ ಎಲ್ಲಾ ತಯಾರು ಮಾಡಿಕೊಂಡು ಬೆಳಗ್ಗೆ ಪ್ರೆಸಂಟೇಶನ್ ಮಾಡುವಾಗ ಮಾತ್ರ ಎಲ್ಲವೂ ಮರೆತು ಬ್ಲ್ಯಾಂಕ್ ಆಗುವ ಸಂಭವವಿರುತ್ತದೆ. ಪ್ರೆಸಂಟೇಶನ್ ಗಿಂತ ಆಡಿಯನ್ಸ್ ಮುಂದೆ ನಿಮ್ಮನ್ನ ನೀವು ಹೇಗೆ ಪ್ರೆಸೆಂಟ್ ಮಾಡುತ್ತೀರಿ ಎಂಬುವುದು ಕೂಡಾ ಇಂಪೋರ್ಟೆಂಟ್.

ಸಕ್ಸಸ್ ಫುಲ್ ಪ್ರೆಸಂಟೇಶನ್ ... ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದ ಹೇಗೆ ?

ಯಾವುದೇ ಭಯವಿಲ್ಲದೇ ಕೂಲ್ ಆಗಿ ಪ್ರೆಸಂಟೇಶನ್ ಹೇಗೆ ಹ್ಯಾಂಡಲ್ ಮಾಡುವುದು ಎಂದು ನಿಮಗೆ ಇದೀಗ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ. ಈ ಟಿಪ್ಸ್ ಫಾಲೋ ಮಾಡಿ ನೀವು ಕೂಡಾ ಪ್ರೆಸಂಟೇಶನ್ ಅಲ್ಲಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿಕೊಳ್ಳಿ.

ಕಾಂಫಿಡೆಂಟ್ ಆಗಿರಿ:

ಪ್ರೆಸಂಟೇಶನ್ ಪ್ರಾರಂಭಿಸೋ ಮುನ್ನ ನೀವು ಸೆಲ್ಫ್ ಕಾಂಫಿಡೆಂಟ್ ಆಗಿರುವುದು ಮುಖ್ಯ. ಹೌದು ಆಡಿಯನ್ಸ್ ಪ್ರೆಸಂಟೇಶನ್ ಗೂ ಮುನ್ನ ನಿಮ್ಮ ಕಾಂಪಿಡೆನ್ಸ್ ಲೆವಲ್ ಗಮನಿಸುತ್ತಾರೆ. ಮೊದಲಿಗೆ ಪ್ರಾರಂಭದಲ್ಲಿ ನಿಮ್ಮ ಬಗ್ಗೆ ಕೂಲ್ ಹಾಗೂ ಶಾಂತವಾಗಿ ಪರಿಚಯ ಮಾಡಿಕೊಳ್ಳಿ.

ಐ ಕಾಂಟೆಕ್ಟ್ ಅಗತ್ಯ:

ಪ್ರೆಸಂಟೇಶನ್ ನೀಡುವಾಗ ಐ ಕಾಂಟೆಕ್ಟ್ ಮಾಡುವುದು ನಿಜಕ್ಕೂ ಇಂಪೋರ್ಟೆಂಟ್. ಹಾಗಂತ ಬರೀ ಒಂದೇ ವ್ಯಕ್ತಿಯತ್ತ ನೀವು ಐ ಕಾಂಟೆಕ್ಟ್ ಮಾಡಬೇಡಿ. ಬದಲಿಗೆ ಅಲ್ಲಿ ಇರುವ ಎಲ್ಲರತ್ತನ್ನೂ ಕಣ್ಣು ಹಾಯಿಸಿ ಹಾಗೂ ನೀವಾಡುವ ಪ್ರತೀ ಮಾತಿನ ಮೇಲೂ ಕಾಂಫಿಡೆನ್ಸ್ ಇರಲಿ

ಏರು ಧ್ವನಿ ಇರಲಿ:

ಯಾವಾಗಲೂ ನಿಮ್ಮ ಮಾತಿನ ಘಾಟಿ ಏರು ಧ್ವನಿಯಲ್ಲಿ ಇರಲಿ. ಯಾಕೆಂದ್ರೆ ಅಲ್ಲಿ ತುಂಬಾ ಜನ ನಿಮ್ಮ ಮಾತು ಆಲಿಸುತ್ತಾ ಇರುತ್ತಾರೆ. ಹಾಗಾಗಿ ನೀವು ಮೆಲ್ಲಗೆ ಮಾತನಾಡಿದ್ರೆ ಅವರು ನಿಮ್ಮ ವಾಯ್ಸ್ ಕೇಳಲ್ಲ ಎಂದು ಮರು ಉತ್ತರ ನೀಡುವ ಸಂಭವವಿರುತ್ತದೆ. ಇದರಿಂದ ನೀವು ಅಂಕ ಕಳೆದುಕೊಳ್ಳುವ ಸಂಭವವಿರುತ್ತದೆ.

ನಿಧಾನವಾಗಿ ಇರಲಿ:

ಇನ್ನು ಪ್ರೆಸಂಟೇಶನ್ ವೇಳೆ ಅವಸರವಸರ ಮಾಡುವ ಅಗತ್ಯವಿರುವುದಿಲ್ಲ. ನೀವು ಪ್ರೆಸಂಟೇಶನನ್ನ ಅವಸರವಸರ ಮಾಡಿ ಮುಗಿಸಿದ್ರೆ ನೆಗಟೀವ್ ಅಂಕ ದೊರೆಯುವ ಸಂಭವವಿರುತ್ತದೆ. ಹಾಗಾಗಿ ನೀವು ನಿಧಾನವಾಗಿ ವಿವರಿಸಿ ಇದರಿಂದ ನಿಮ್ಮ ಪ್ರತಿಯೊಂದು ವಿಷಯವೂ ಕೂಡಾ ನಿಮ್ಮ ಪ್ರೊಫೆಸರ್ ಇಲ್ಲ ಬಾಸ್‌ ಗೆ ಕ್ಲಿಯರ್ ಆಗಿ ಅರ್ಥವಾಗುವುದು.

ಅನಗತ್ಯ ಪದ ಬಳಕೆ ಬೇಡ:

ನೀವು ಇತರರು ಪ್ರೆಸಂಟೇಶನ್ ನೀಡುವಾಗ ಗಮನಿಸಿರಬಹುದು. ಕೆಲವರು ಪ್ರೆಸಂಟೇಶನ್ ನೀಡುವಾಗ ಮತ್ತೆ ಮತ್ತೆ ಮ್ ಮ್ ಮ್ ಎಂದ ಪದ ಬಳಸುತ್ತಾರೆ. ನೀವು ಕೂಡಾ ಈ ಪದ ಬಳಸುವವರಾಗಿದ್ದರೆ ಇಂದೇ ಆ ಅಭ್ಯಾಸಬಿಟ್ಟು ಬಿಡಿ. ಯಾಕೆಂದ್ರೆ ಈ ಪದ ನೀವು ಹೆಚ್ಚು ಹೆಚ್ಚು ಬಳಸಿದ್ದಂತೆ ಕೇಳುಗರಿಗೆ ಇರಿಟೇಟ್ ಆಗುವ ಸಂಭವವಿರುತ್ತದೆ. ಹಾಗೂ ನೀವು ನರ್ವಸ್ ಆಗುತ್ತಾ ಇದ್ದೀರಾ ಎಂದು ಅವರು ಭಾವಿಸುತ್ತಾರೆ

More News  

For Quick Alerts
ALLOW NOTIFICATIONS  
For Daily Alerts

English summary
Hey You might think giving a presentation is a tough job because there are people starting at you and observing your every particular move. Sometimes we work so hard on completing the presentation slides but when the time comes to actually present it in front of the audience. there's just the blank feeling called fear
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+