ಇಂಗ್ಲಿಷ್ ಬಳಕೆ ಶಾಲಾ, ಕಾಲೇಜು ಮತ್ತು ವೃತ್ತಿ ಬದುಕಿಗೂ ಅತ್ಯವಶ್ಯಕ. ಹಾಗಾಗಿ ಇಂದಿನ ಯುಗದಲ್ಲಿ ಇಂಗ್ಲೀಷ್ ಶಬ್ದಕೋಶವು ವಿಸ್ತಾರವಾಗಿದೆ. ಅಲ್ಲದೆ ನಾವು ನೀವೆಲ್ಲಾ ತಿಳಿದಿರುವುದು ಮತ್ತು ತಿಳಿಯಬೇಕಿರುವುದು ಸಾಕಷ್ಟಿದೆ.

ದೈನಂದಿನ ಬದುಕಿನಲ್ಲಿ ನಡೆಯುವ ಸಾಮಾಜಿಕ ಸಭೆ ಸಮಾರಂಭಗಳಲ್ಲಿಯೂ ಭಾಷೆ ತನ್ನದೇ ಆದ ಪ್ರಭಾವ ಮತ್ತು ಪ್ರಾಬಲ್ಯವನ್ನು ಹೊಂದಿದೆ. ನೀವು ನಿಮ್ಮ ಅನಿಸಿಕೆ ಮತ್ತು ಮಾತುಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದು ಭಾಷೆಯ ಮೂಲಕವೇ ಎಂಬುದು ನಿಮಗೆಲ್ಲಾ ತಿಳಿದಿದೆ. IELTS, PTE, TOFEL ಮತ್ತು ಇತರ ನಾಗರಿಕ ಸೇವೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಶಬ್ದಕೋಶವು ಅತ್ಯಗತ್ಯ. ಇದು ಸಾಮಾನ್ಯ ಅರಿವು ಮತ್ತು ಭಾಷೆಯ ವ್ಯಾಪ್ತಿಯಲ್ಲಿ ಕಂಡುಬರುತ್ತದೆ.

ಸಾಮಾಜಿಕ ಮಾಧ್ಯಮ ಕ್ರಾಂತಿಯ ನಡುವೆ ಜನಪ್ರಿಯ ಸಂಸ್ಕೃತಿಯಲ್ಲಿ ಭಾಷೆ ತನ್ನ ಔಪಚಾರಿಕ ಸಾರವನ್ನು ಕಳೆದುಕೊಂಡಿದೆ ಎಂಬುದು ಸ್ಪಷ್ಟವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಜನರು ಶಾಲೆ ಅಥವಾ ಕಾಲೇಜಿನಲ್ಲಿ ಕಲಿತದಕ್ಕಿಂತ ಹೆಚ್ಚಿನದಾಗಿ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಕಲಿಯುವ ಪದಗಳನ್ನು ಹೆಚ್ಚು ಬಳಸುತ್ತಾರೆ.

ಈ ಬರಹದ ಪ್ರಮುಖ ವಿಷಯವೆಂದರೆ ಶಾಲಾ ಕಾಲೇಜು ಹಂತಗಳಲ್ಲಿ ಇಂಗ್ಲಿಷ್ ಶಬ್ದಕೋಶದಲ್ಲಿ ಮರೆತುಹೋದ ಕೆಲವು ಪದಗಳ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗಿದೆ. ಅವುಗಳಲ್ಲಿ ಅರ್ಧದಷ್ಟು ಹಾಸಿಗೆ ವಿಷಯಕ್ಕೆ ಸಂಬಂಧಿಸಿದಿರುವುದರಿಂದ ಆಸಕ್ತಿದಾಯಕವಾಗಿದೆ ಏಕೆಂದರೆ ಕೋವಿಡ್-19 ಸಂದರ್ಭದಲ್ಲಿ ಅನೇಕರಿಗೆ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು ಹಾಗಾಗಿ ಅವರಿಗೆ ಹೆಚ್ಚು ಕಾಲ ಮನೆಯಲ್ಲೇ ಕುಳಿತು ಕೆಲಸ ಮಾಡುವುದರ ಜೊತೆಗೆ ವಿಶ್ರಾಂತಿ ತೆಗೆದುಕೊಳ್ಳಲು ಅನುಕೂಲಕರವಾಗಿತ್ತು. ಬನ್ನಿ ಶಾಲಾ ಕಾಲೇಜು ಹಂತಗಳಲ್ಲಿ ಪುಸ್ತಕಗಳಿಂದ ಕಲಿಯಬೇಕಾದ ಮತ್ತು ಮರೆತುಹೋದ ಕೆಲವು ಪದಗಳ ಪರಿಚಯ ಜೊತೆಗೆ ಅದರ ಅರ್ಥವನ್ನು ಇಲ್ಲಿ ನೀಡಿದ್ದೇವೆ ಓದಿ ತಿಳಿಯಿರಿ.
Dysania - ಹಾಸಿಗೆಯಿಂದ ಹೊರಬರಲು ಮಾನಸಿಕ ಅಸಮರ್ಥತೆ
Slugabed - ತಡವಾಗಿ ಹಾಸಿಗೆಯಲ್ಲಿ ಉಳಿಯುವ ಸೋಮಾರಿ ವ್ಯಕ್ತಿ.
Uhtceare - ಬೆಳಗಾಗುವ ಮೊದಲು ಆತಂಕದಿಂದ ಎಚ್ಚರವಾಗಿರುವುದು.
Perendinate - ನಾಳೆಯ ಮರುದಿನದವರೆಗೆ ಮುಂದೂಡಲು; ಒಂದು ದಿನ ಮುಂದೂಡಲು.
Philogrobilized - ಮೂರ್ಖತನ ಅಥವಾ ಹ್ಯಾಂಗೊವರ್
Librocubularist - ಹಾಸಿಗೆಯಲ್ಲಿ ಪುಸ್ತಕಗಳನ್ನು ಓದುವ ವ್ಯಕ್ತಿಯ ಹೆಸರು.
Mullock - ಕಸ, ನಿರಾಕರಿಸು
Guttle - ದುರಾಸೆಯಿಂದ ಮತ್ತು ಗದ್ದಲದಿಂದ ತಿನ್ನಲು ಅಥವಾ ಕುಡಿಯಲು.
Barbigerous - ಗಡ್ಡವನ್ನು ಹೊಂದಿರುವುದು
Twattling - ಕ್ಷುಲ್ಲಕ ಅಥವಾ ಮೂರ್ಖ ರೀತಿಯಲ್ಲಿ ಮಾತನಾಡಿ.
Frobly - mobly - ಚೆನ್ನಾಗಿಲ್ಲ ಅಥವಾ ಅಸ್ವಸ್ಥವಾಗಿಲ್ಲ
Peg puff - ವಯಸ್ಸಾದವರ ನಡತೆ ಹೊಂದಿರುವ ಯುವತಿ


Click it and Unblock the Notifications











