ಖ್ಯಾತಿ... ಹಣ ಇವರೆಡು ಈ ಜಾಬ್ ನಿಂದ ಸುಲಭವಾಗಿ ಪಡೆಯಬಹುದು!

ಇದೀಗ ಭಾರತ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ಜನರ ಮುಂದೆ ತೆರೆಯಲ್ಪಡುತ್ತಿದೆ. ಹಾಗಾಗಿ ನಮಗೆ ಇದೀಗ ಕಾನೂನು ಪರಿಪಾಲಕರ ಅವಶ್ಯಕತೆ ಇದೆ.

By Kavya

ಸಮಾಜಕ್ಕೆ ಏನಾದ್ರೂ ಒಳಿತು ಮಾಡುವಂತದ್ದು, ಅದೇ ರೀತಿ ನಿಮಗೆ ತೃಪ್ತಿ ಸಿಗುವಂತದ್ದು, ಅಷ್ಟೇ ಅಲ್ಲ ಫೇಮ್ ಜತೆಗೆ ಹೆಚ್ಚು ಹಣ ಸಂಪಾದನೆ ಮಾಡುವಂತಹ ಕೆಲಸ ನಿಮ್ಮದಾಗಬೇಕೇ..? ಹಾಗಿದ್ರೆ ನೀವು ಕರಿಕೋಟ್ ಧರಿಸುವ ವಕೀಲರಾಗಿ. ಕೆರಿಯರ್ ಜಗತ್ತಿನಲ್ಲಿ ಅತೀವೇಗವಾಗಿ ಬೆಳಯುತ್ತಿರುವ ಪೀಲ್ಡ್ ಅಂದ್ರೆ ಅದು ವಕೀಲ ವೃತ್ತಿ.

ಖ್ಯಾತಿ, ಹಣ ಸುಲಭವಾಗಿ ಪಡೆಯಬಹುದಾದ ಜಾಬ್ ಇದು!

ವೃತ್ತಿ ಜೀವನದಲ್ಲಿ ನಾವು ಮಾಡುವಂತದ್ದು ತುಂಬಾ ಇದೆ. ಉದಾರೀಕರಣ, ಖಾಸಾಗೀಕರಣ ಹಾಗೂ ಜಾಗತೀಕರಣ ನಂತರ ಈ ಕ್ಚೇತ್ರದಲ್ಲಿ ಸಾಕಷ್ಟು ಸಾಮರ್ಥ್ಯವಿದೆ. ಇದೀಗ ಭಾರತ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ಜನರ ಮುಂದೆ ತೆರೆಯಲ್ಪಡುತ್ತಿದೆ. ಹಾಗಾಗಿ ನಮಗೆ ಇದೀಗ ಕಾನೂನು ಪರಿಪಾಲಕರ ಅವಶ್ಯಕತೆ ಇದೆ.

ಕಾನೂನು ವಿದ್ಯಾಭ್ಯಾಸದ ಬಳಿಕ 30 ಕ್ಷೇತ್ರಗಳಲ್ಲಿಯೂ ನೀವು ಎಕ್ಸಪರ್ಟ್ ಆಗಬಹುದು. ಅಡ್ವೋಕೇಟ್ ಆಗಿ ನೀವು ಕೆಲಸ ಪ್ರಾರಮಭಿಸಬಹುದು. ಇಷ್ಟೇ ಅಲ್ಲದೇ ಹಲವಾರು ಕಂಪನಿಗಳು ಕಾನೂನು ಆಫೀಸರ್ ಹುದ್ದೆಗೆ ನೇಮಕಾತಿ ಮಾಡುತ್ತದೆ. ಹಾಗೂ ಸಿವಿಲ್, ಕ್ರಿಮಿನಲ್, ಬ್ಯಾಂಕಿಂಗ್, ಇನ್ಸುರೆನ್ಸ್, ಅಡ್ವೋಕೇಟ್ ಆಫ್ ಇಂಟರ್ ನ್ಯಾಷನಲ್ ಲಾ, ಕಾರ್ಪೋರೇಟ್ ಲಾ, ಫ್ಯಾಮಿಲಿ ಲಾ, ಪ್ರಾಪರ್ಟಿ ಲಾ, ಲೇಬರ್ ಲಾ, ಹಾಗೂ ಕಂಪನಿ ಲಾ ಮುಂತಾದವುಗಳಿಗೆ ಇತ್ತೀಚೆಗೆ ಬಹು ಬೇಡಿಕೆ ಇದೆ. ಸ್ಟೇಟ್ ಜ್ಯುಡಿಶಿಯಲ್ ಸರ್ವೀಸ್ ಎಕ್ಸಾಂ ಕೂಡಾ ನೀವು ಪಾಸ್ ಮಾಡಬಹುದು.

ಖ್ಯಾತಿ, ಹಣ ಸುಲಭವಾಗಿ ಪಡೆಯಬಹುದಾದ ಜಾಬ್ ಇದು!

ಕಾನೂನು ವೃತ್ತಿಗೆ ವಿದ್ಯಾರ್ಹತೆ ಏನಿರಬೇಕು ಗೊತ್ತಾ?

ಪದವಿ ಮುಗಿಸಿದ ಬಳಿಕ ನೀವು ಲಾ ಕೋರ್ಸ್ ಮಾಡುವುದಾದ್ರೆ ಮೂರು ವರ್ಷದ ಕೋರ್ಸ್ ಅದೇ ರೀತಿ ದ್ವಿತೀಯ ಪಿಯುಸಿ ಬಳಿಕ ನಿವು ಲಾ ಕೋರ್ಸ್ ಮಾಡುವುದಾದ್ರೆ ೫ ವರ್ಷದ ಕೋರ್ಸ್ ಮಾಡಬೇಕು. ಈ ಕೋರ್ಸ್ ನಲ್ಲಿ ಪ್ರ್ಯಾಕ್ಟಿಕಲ್ ಹಾಗೂ ಥಿಯರಿ ಗೆ ಹೆಚ್ಚು ಗಮನ ಕೊಡಬೇಕು. ಎಲ್‌ಎಲ್‌ಬಿ ಗೆ ಅಡ್ಮಿಷನ್ ಆಗಬೇಕಾದ್ರೆ ವಿದ್ಯಾರ್ಥಿಗಳು ಕನಿಷ್ಟ ಅಂದ್ರೆ ಪಿಯುಸಿ ಪಾಸಾಗಿರಬೇಕು. 5 ವರ್ಷದ ಕೋರ್ಸ್ ನಂತರ ದಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಲಿಖಿತ ಪರೀಕ್ಷೆ ಮೂಲಕ ಅಡ್ಮಿಷನ್ ಮಾಡಿಕೊಳ್ಳುತ್ತದೆ.

ಈ ಕೋರ್ಸ್ ಮಾಡಲು ನಿಮಗೆ ಇಷ್ಟವಿಲ್ಲ ಎಂದಾದ್ರೆ, ಪದವಿ ಬಳಿಕ ಮೂರು ವರ್ಷದ ಕೋರ್ಸ್ ಗೆ ನೀವು ಅಡ್ಮಿಷನ್ ಮಾಡಿಕೊಳ್ಳಬಹುದು.

ಭಾರತದಲ್ಲಿ ಇರುವ ಪ್ರಮುಖ ಕಾನೂನು ಕಾಲೇಜುಗಳು:

  • ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು
  • ಗವರ್ನಮೆಂಟ್ ಕಾಲೇಜ್ ಆಫ್ ಲಾ, ಮುಂಬಯಿ
  • ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಆಂಡ್ ರಿಸರ್ಚ್ ಹೈದರಾಬಾದ್
  • ಸಿಂಬೋಸಿಸ್ ಸೊಸೈಟಿ ಲಾ ಕಾಲೇಜು, ಪುಣೆ
  • ಜವಹರ್ ಲಾಲ್ ನೆಹರೂ ಯೂನಿವರ್ಸಿಟಿ, ನವದೆಹಲಿ
  • ಫಾಕಲ್ಟಿ ಆಫ್ ಲಾ, ದೆಹಲಿ ಯೂನಿವರ್ಸಿಟಿ
  • ಫಾಕಲ್ಟಿ ಆಫ್ ಲಾ, ಎಮ್ ಯು ಅಲಿಘರ್

ಕಾನೂನು ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ವೃತ್ತಿ ವಕೀಲ ವೃತ್ತಿ. ಅಷ್ಟೇ ಸಮಾಜದಲ್ಲಿ ಘನತೆ ಹೊಂದಿರುವ ವೃತ್ತಿ ಕೂಡಾ ಆಗಿದೆ.

For Quick Alerts
ALLOW NOTIFICATIONS  
For Daily Alerts

English summary
Are you looking career option like can get fame and name. then you can select law profession. Now a Days law profession is the fastest growing field in the career world. Now Every Field needs legal expert
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X