ಲಾಸ್ಟ್ ಬೆಂಚರ್ಸ್... ನೀವು ಕೂಡಾ ವಿದ್ಯಾರ್ಥಿಯಾಗಿದ್ದಾಗ ಹೀಗೆಲ್ಲಾ ಮಾಡಿದ್ದೀರಾ?

By Kavya

ಕಾಲೇಜಿನಲ್ಲಿ ಹಿಂದಿನ ಬೆಂಚ್ ನಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಮಾತ್ರ ಸಖತ್ ಎಂಜಾಯ್ ಮಾಡುತ್ತಾರೆ. ಕಾಲೇಜಿನ ಅಷ್ಟು ದಿನಗಳು ಅವರ ಪಾಲಿಗೆ ಫನ್ನಿಯೆಸ್ಟ್ ದಿನವಾಗಿರುತ್ತದೆ.

ಲಾಸ್ಟ್ ಬೆಂಚರ್ಸ್... ನೀವು ಕೂಡಾ ವಿದ್ಯಾರ್ಥಿಯಾಗಿದ್ದಾಗ ಹೀಗೆಲ್ಲಾ ಮಾಡಿದ್ದೀರಾ?

 

ಇನ್ನು ಬ್ಯಾಂಕ್ ಬೆಂಚರ್ಸ್ ಕ್ಲಾಸ್‌ನ ಬ್ಯಾಕ್ ಬೋನ್ ತರಹ. ಅವರಿದ್ದರೆ ಕ್ಲಾಸ್‌ಗೆ ಒಂದು ಕಳೆ. ವರ್ಷವಿಡೀ ಕ್ಲಾಸ್ ಟೀಚರ್ಸ್ ಗಳ ಕಾಲೆಳೆಯುವ ಈ ವಿದ್ಯಾರ್ಥಿಗಳು ವರ್ಷದ ಕೊನೆಯಲ್ಲಿ ಅದೇ ಶಿಕ್ಷಕರು ಈ ವಿದ್ಯಾರ್ಥಿಗಳನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ ಕೂಡಾ. ಬನ್ನಿ ಹಿಂದಿನ ಬೆಂಚಿನ ಸೀಟುಗಳ ವಿದ್ಯಾರ್ಥಿಗಳು ಏನೆಲ್ಲಾ ಮಜಾ ಮಾಡುತ್ತಾರೆ ಎಂದು ಇಂದು ಕೆರಿಯರ್ ಇಂಡಿಯಾ ನಿಮಗೆ ತಿಳಿಸುತ್ತದೆ.

ಕಾಲೇಜು ಲೈಫ್ ನಲ್ಲಿ ನೀವು ಮಾಡಲೇ ಬೇಕಾದ ಕ್ರೇಜಿ ಆಕ್ಟಿವಿಟೀಸ್!

ಲಾಸ್ಟ್ ಬೆಂಚ್ ವಿದ್ಯಾರ್ಥಿಗಳ ತುಂಟಾಟ:

ಕಾರ್ಟೂನ್ ಕಲಾವಿದರು:

ಹೌದು ವಿದ್ಯಾರ್ಥಿಗಳು ಯಾವಾಗ ಲಾಸ್ಟ್ ಬೆಂಚ್ ನಲ್ಲಿ ಕುಳಿತುಕೊಳ್ಳುತ್ತಾರೋ ಅಂದಿನಿಂದ ಅವರಲ್ಲಿ ಕಾರ್ಟೂನ್ ಕಲಾವಿದ ಕೂಡಾ ಬೆಳೆಯುತ್ತಾನೆ. ಕ್ಲಾಸ್ ಪ್ರಾರಂಭವಾದ್ರೆ ಸಾಕು ತಮ್ಮ ನೋಟ್ ಬುಕ್ ಇಲ್ಲ ಡೆಸ್ಕ್ ಮೇಲೆ ವಿದ್ಯಾರ್ಥಿಗಳು ತಮ್ಮ ಕಲೆಯನ್ನ ಕೆತ್ತಲು ಪ್ರಾರಂಭಿಸುತ್ತಾರೆ. ಇನ್ನು ಹೆಚ್ಚಾಗಿ ವಿದ್ಯಾರ್ಥಿಗಳು ಬಿಡಿಸುವ ಕಾರ್ಟೂನ್ ಅವರ ಪ್ರೊಫೆಸರ್ ಗಳಿಗೆ ಸಂಬಂಧಿಸಿರುತ್ತದೆ.

ಶಾಲೆ ವರ್ಸಸ್ ಕಾಲೇಜು... ಯಾವುದು ಬೆಸ್ಟ್!

ಹಾಡು ಹಾಡುವುದು:

ಇನ್ನು ಪ್ರೊಫೆಸರ್ ಗಳನ್ನ ಟಾರ್ಗೇಟ್ ಮಾಡಿ, ಅವರ ಮೇಲೆ ಕವಿತೆ, ಹಾಡು ಕೂಡಾ ಬರೆಯುತ್ತಾರೆ ಲಾಸ್ಟ್ ಬೆಂಚ್ ವಿದ್ಯಾರ್ಥಿಗಳು. ಸಿನಿಮಾದ ಹಾಡನ್ನೇ ತೆಗೆದುಕೊಂಡು ಆ ಹಾಡನ್ನ ತಮ್ಮ ಪ್ರೊಫೆಸರ್ ಗೆ ಹೋಲುವಂತೆ ಮತ್ತೆ ತಿದ್ದಿ ಕೆಟ್ಟದಾಗಿ ರಚಿಸುತ್ತಾರೆ. ಯಾವಾಗ ಆ ಶಿಕ್ಷಕರು ಕ್ಲಾಸ್‌ಗೆ ಗೈರಾಗಿರುತ್ತಾರೆ ಅಂದು ಈ ಹಾಡನ್ನ ಗಟ್ಟಿಯಾಗಿ ಹಾಡಿ ಎಲ್ಲರನ್ನ ರಂಜಿಸುತ್ತಾರೆ ಲಾಸ್ಟ್ ಬೆಂಚರ್ಸ್.

ಗ್ಯಾಂಗ್ ಕಟ್ಟಿಕೊಂಡೇ ಇರುತ್ತಾರೆ:

ಹಲ್ಲಿನ ಮಧ್ಯೆ ಗ್ಯಾಪ್... ನಿಮ್ಮ ಕೆರಿಯರ್ ಲೈಫ್ ಗೆ ಇದು ಲಕ್‌ ಅಥವಾ ಬ್ಯಾಡ್?

 

ಹೌದು ಲಾಸ್ಟ್ ಬೆಂಚ್ ವಿದ್ಯಾರ್ಥಿಗಳು ಯಾವಾಗಲೂ ಜತೆಯಾಗಿ ಗ್ಯಾಂಗ್ ಕಟ್ಟಿಕೊಂಡೇ ಇರುತ್ತಾರೆ. ಹಾಗಾಗಿ ಏನಾದ್ರೂ ತಪ್ಪು ಮಾಡಿದಾಗ ಇಡೀ ಗ್ಯಾಂಗ್ ಗೆ ಕ್ಲಾಸ್‌ನಿಂದ ಹೊರಗೆ ಹಾಕಲಾಗುತ್ತದೆ ವಿನಃ ಕೇವಲ ಒಬ್ಬ ವಿದ್ಯಾರ್ಥಿಯನ್ನಲ್ಲ. ಹಾಗಾಗಿ ಶಾಲೆಯಲ್ಲಿ ಕೊಟ್ಟ ಶಿಕ್ಷೆಯಲ್ಲೂ ಸಖತ್ ಎಂಜಾಯ್ ಮಾಡುತ್ತಾರೆ ಲಾಸ್ಟ್ ಬೆಂಚರ್ಸ್

ಪಠ್ಯಪುಸ್ತಕ:

ಲಾಸ್ಟ್ ಬೆಂಚರ್ಸ್ ಕ್ಲಾಸ್‌ಗೆ ಹಾಜರಾಗುತ್ತಾರೆ ವಿನ್ಹಾ ಪುಸ್ತಕ ತರಲು ಸದಾ ಮರೆಯುತ್ತಾರೆ. ಹಾಜರಾತಿಗಾಗಿ ಕ್ಲಾಸ್ ಗೆ ಹಾಜರಾಗುವ ಈ ವಿದ್ಯಾರ್ಥಿಗಳು ಪುಸಕ್ತ ತರದೇ ಕ್ಲಾಸ್ ನಲ್ಲಿ ಏನಾದ್ರೂ ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸಲು ಪರದಾಡುತ್ತಾರೆ.ಅಷ್ಟೇ ಅಲ್ಲ ಶಿಕ್ಷಕರ ಕಣ್ಣು ತಪ್ಪಿಸಲು ಸಂಬಂಧವಿಲ್ಲ ಪಠ್ಯಪುಸ್ತಕವನ್ನ ತಮ್ಮ ಮುಂದೆ ತೆರೆದಿಟ್ಟುಕೊಂಡಿರುತ್ತಾರೆ.

ಎಸ್ಕೇಪ್ ಆಗಲು ಪ್ರಯತ್ನ:

ಹೌದು ಲಾಸ್ಟ್ ಬೆಂಚರ್ಸ್ ಕ್ಲಾಸ್ ಗೆ ಹಾಜರಾದ್ರೂ ಶಿಕ್ಷಕರಿಂದ ತಮ್ಮ ಮುಖವನ್ನ ಆದಷ್ಟು ಮುಚ್ಚಿಡಲು ಯತ್ನಿಸುತ್ತಾರೆ. ಮುಂದಿನ ವಿದ್ಯಾರ್ಥಿಯ ಹಿಂದೆ ಆದಷ್ಟು ಕಷ್ಟಪಟ್ಟು ತಲೆಮರೆಸಿಕೊಂಡು ಕುಳಿತಿರುತ್ತಾರೆ. ಅಷ್ಟೇ ಅಲ್ಲ ಅಪ್ಪಿ ತಪ್ಪಿಯೂ ಯಾವುದೇ ಡೌಟ್ ಇದ್ರೂ ಕೂಡಾ ಶಿಕ್ಷಕರಿಗೆ ಕೇಳುವುದಿಲ್ಲ. ಆದ್ರೂ ಶಿಕ್ಷಕರಿಗೆ ಅವರೇ ಟಾರ್ಗೆಟ್ ಆಗುತ್ತಾರೆ.

ಸಿನಿಮಾ ಹಾಸ್ಟೆಲ್ ಥರಹ ಇರುತ್ತಾ ರಿಯಲ್ ಹಾಸ್ಟೆಲ್!

For Quick Alerts
ALLOW NOTIFICATIONS  
For Daily Alerts

English summary
Remember how Ted Mosby’s dating endeavours in the 20s made for good entertainment and life lesson for his children, so to us? Drawing cue from our own lives, we hover and grow up around the anecdotes from our fathers’ childhood and college lives too, and tallying them with our own backbenching accomplishments, we end up finding them akin to each other
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more