ಫ್ರೆಂಡ್‌ಶಿಪ್ ಡೇ... ಯಾವೆಲ್ಲಾ ಗಿಫ್ಟ್ ನೀಡಿ ಸ್ನೇಹಿತರಿಗೆ ಸ್ಪೇಶಲ್ ಫೀಲ್ ಮಾಡಿಸಬಹುದು!

ಪ್ರತಿಯೊಬ್ಬರ ಲೈಫ್ ನಲ್ಲೂ ಸ್ನೇಹಿತರು ಇನ್ನುವ ಸ್ಪೇಶಲ್ ವ್ಯಕ್ತಿಗಳು ಇರುತ್ತಾರೆ. ಇವರು ಸಂತೋಷ, ಖುಷಿ ಹಾಗೂ ದುಖಃಕ್ಕೆ ಸದಾ ಹೆಗಲು ಕೊಡುವ ಸ್ನೇಹಿತರಾಗಿರುತ್ತಾರೆ. ನಮ್ಮದೇಶದಲ್ಲಿ ಹಲವಾರು ಆಚರಣೆಗಳನ್ನ ಖುಷಿ ಖುಷಿಯಾಗಿ ಆಚರಿಸುವಾಗ ಇನ್ನು ಫ್ರೆಂಡ್‌ಶಿಪ್ ಡೇ ಅಂದ್ರೆ ಸುಮ್ಮನೇ ಇರುತ್ತೇವಾ...?

ಫ್ರೆಂಡ್‌ಶಿಪ್ ಡೇ... ಯಾವೆಲ್ಲಾ ಗಿಫ್ಟ್ ನೀಡಿ ಸ್ನೇಹಿತರಿಗೆ ಸ್ಪೇಶಲ್ ಫೀಲ್ ಮಾಡಿಸಬಹುದು!

 

ಆಫೀಸ್‌ನಲ್ಲಿ ಟಾರ್ಚರ್, ಕೊಂಕು ಮಾತು............ ಅಂತಹವರಿಗೆ ನಿಮ್ಮ ರಿಪ್ಲೈ ಹೀಗಿರಲಿ!

ಶಾಲಾ ಕಾಲೇಜಿನಿಂದ ಹಿಡಿದು ವರ್ಕ್ ಪ್ಲೇಸ್ ಗಳಲ್ಲಿಯೂ ನಮಗೆ ಹಲವಾರು ಸ್ನೇಹಿತರು ಇರುತ್ತಾರೆ. ಇವರಲ್ಲಿ ಕೆಲವರು ಬೆಸ್ಟ್ ಫ್ರೆಂಡ್ಸ್ ಆದ್ರೆ ಮತ್ತೆ ಕೆಲವರು ಗುಡ್ ಫ್ರೆಂಡ್, ಜಸ್ಟ್ ಫ್ರೆಂಡ್, ಕ್ಲೋಸ್ ಫ್ರೆಂಡ್ ಹೀಗೆ ಹೇಳುತ್ತಾ ಹೋದ್ರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೀಗ ಮತ್ತೆ ಫ್ರೆಂಡ್ ಶಿಪ್ ಡೇ ಬಂದಿದೆ. ಫ್ರೆಂಡ್ಸ್ ಗೆ ಯಾವೆಲ್ಲಾ ಗಿಫ್ಟ್ ನೀಡಬೇಕು ಎಂದು ನೀವು ಚಿಂತಿಸಿ ಚಿಂತಿಸಿ ಸುಸ್ತಾಗಿದ್ದೀರಾ.. ಹಾಗಿದ್ರೆ ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ

ಫ್ರೆಂಡ್‌ಶಿಪ್ ಡೇ ಗೆ ನೀಡಬಹುದಾದ ಬೆಸ್ಟ ಗಿಫ್ಟ್ ಗಳು!

ಕಾಫಿ ಕಪ್:

ಈ 5 ಕೆಲಸಗಳು ಸಿಕ್ಕಾಪಟ್ಟೆ ಮಜಾ ಕೊಡುವ ಕೆಲಸಗಳು... ತಿಳ್ಕೊಂಡ್ರೆ ಶಾಕ್ ಆಗ್ತೀರಾ!

ನಿಮ್ಮ ಬೆಸ್ಟ್ ಫ್ರೆಂಡ್‌ಗೆ ಫ್ರೆಂಡ್‌ಶಿಪ್ ಡೇ ದಿನ ಕಾಫಿ ಮಗ್ ನೀಡಿ ವಿಶ್ ಮಾಡಿ. ಕಾಫಿ ಮಗ್ ಒಂದು ಟ್ರೆಂಡಿ ಬೆಸ್ಟ್ ಫ್ರೆಂಡ್ ಗಿಫ್ಟ್ ಆಗಿದೆ. ಹಾಗಾಗಿ ಕಾಫಿ ಮಗ್ ಬೆಸ್ಟ್ ಆಯ್ಕೆ.

ಮೆಮೋರಿ ಪುಸ್ತಕ:

ಇನ್ನು ಈ ಗಿಫ್ಟ್ ನೀಡಿದ್ರೆ ನಿಮ್ಮ ಫ್ರೆಂಡ್ ಖುಷಿ ಪಡುವುದರಲ್ಲಿ ಯಾವುದೆ ಡೌಟ್ ಇರಲ್ಲ. ನೀವು ನಿಮ್ಮ ಫ್ರೆಂಡ್ ಜತೆ ಕಳೆದ ಮರೆಯಲಾಗದ ಕ್ಷಣಗಳನ್ನ ಒಂದು ಪುಸ್ತಕದಲ್ಲಿ ಬರೆದು, ಜತೆಗೆ ನಿಮ್ಮ ಹಿಂದಿನ ಫೋಟೋಗಳನ್ನ ಕೂಡಾ ಅಂಟಿಸಿ ಜತೆಗೆ ಒಂದಿಷ್ಟು ಸಂದೇಶ ಬರೆದು ನೀವು ಅವರಿಗೆ ಗಿಫ್ಟ್ ಆಗಿ ನೀಡಬಹುದು. ಇದು ನಿಜಕ್ಕೂ ಯೂನಿಕ್ ಐಡಿಯಾ ಎನಿಸಿಕೊಳ್ಳುತ್ತದೆ.

 

ಫ್ರೆಂಡ್‌ಶಿಪ್ ಡೇ ಕಾರ್ಡ್:

ಈ ಕಾಲೇಜುಗಳು ತಮ್ಮ ಕ್ಯಾಂಪಸ್‍ನಿಂದಲೇ ಸಖತ್ ಫೇಮಸ್

ನಿಮ್ಮ ಸ್ನೇಹಿತರಿಗೆ ಮಾರುಕಟ್ಟೆಯಲ್ಲಿ ಸಿಗುವ ಕಾರ್ಡ್ ಗಳಿಂತ ಹ್ಯಾಂಡ್ ಮೇಡ್ ಕಾರ್ಡ್ ನೀಡಿ. ಹೌದು ಹಾರ್ಟ್ ಟಚಿಂಗ್ ಸಂದೇಶ ಬರೆದು, ನೀವೇ ಕೈಯಾರೆ ಒಂದು ಫ್ರೆಂಡ್‌ಶಿಪ್ ಕಾರ್ಡ್ ತಯಾರಿಸಿ ನಿಮ್ಮ ಸ್ನೇಹಿತರಿಗೆ ನೀಡಿ. ನಿಮ್ಮ ರೆಡಿ ಮೇಡ್ ಕಾರ್ಡ್ ಗಿಂತ ಈ ಕಾರ್ಡ್ ಗೆ ಹೆಚ್ಚು ಖುಷಿ ಪಡುತ್ತಾರೆ ನೋಡಿ ನಿಮ್ಮ ಸ್ನೇಹಿತರು.

ಚಾಕಲೇಟ್:

ಇನ್ನೂ ಬೆಸ್ಟ್ ಫ್ರೆಂಡ್ಸ್, ಗುಡ್ ಫ್ರೆಂಡ್, ಜಸ್ಟ್ ಫ್ರೆಂಡ್, ಕ್ಲೋಸ್ ಫ್ರೆಂಡ್ ಯಾವುದೇ ಗ್ರೂಫ್ ನ ಸ್ನೇಹಿತರಾದ್ರೂ ಅವರಿಗೆ ಚಾಕಲೇಟ್ ನೀಡುವುದು ಬೆಸ್ಟ್ ಗಿಫ್ಟ್. ಇನ್ನು ನಿಮ್ಮ ಸ್ನೇಹಿತರಿ ಚಾಕಲೇಟ್ ಅಂದ್ರೆ ತುಂಬಾ ಇಷ್ಟವಿದ್ರೆ ಮತ್ತೆ ಬೇರೇನೂ ಯೋಚಿಸಬೇಡಿ. ಅವರಿಗೆ ಚಾಕಲೇಟ್ ಬೆಸ್ಟ್ ಗಿಫ್ಟ್ ಅದುವೇ ನೀಡಿ.

ಹಳದಿ ಹೂವು:

ಹೌದು ಕೆಂಪು ಹೂವು ಹೇಗೆ ಪ್ರೇಮದ ಸಂಕೇತವೋ ಅದೇ ರೀತಿ ಹಳದಿ ಹೂವು ಸ್ನೇಹದ ಸಂಕೇತ. ನಿಮ್ಮ ಸ್ನೇಹಿತರಿಗೆ ಅಂದು ಹಳದಿ ಬಣ್ಣದ ಗುಲಾಬಿ, ಲಿಲ್ಲಿ ಸೇರಿದಂತೆ ಯಾವುದೇ ಹೂವು ಆದ್ರೂ ಸರಿ ಗಿಫ್ಟ್ ಆಗಿ ನೀಡಿ. ಆದ್ರೆ ಹಳದಿ ಬಣ್ಣದ್ದೇ ಆಗಿರಬೇಕು. ನಿಮ್ಮ ಈ ಗಿಫ್ಟ್ ನಿಜವಾಗಲೂ ನಿಮ್ಮ ಸ್ನೇಹಿತರಿಗೆ ತುಂಬಾ ಸಪ್ರೈಸ್ ಆಗಿರುವುದು

ಡಿಲಿಶಿಯಸ್ ಕೇಕ್:

ನಿಮ್ಮ ಸ್ನೇಹಿತರು ಕೇಕ್ ಹಾಲಿಕ್ ಆಗಿದ್ದರೆ ಅವರಿಗೆ ನೀವು ರುಚಿಕರವಾದ ಪೇಸ್ಟ್ರಿ ಇಲ್ಲ ಕೇಕ್ ಗಳನ್ನ ನೀಡಬಹುದು. ಕೇಕ್ ಮೇಲೆ ಸಪ್ರೈಸ್ ಸಂದೇಶ ಬರೆದು ಅವರಿಗೆ ಯಾರ ಕೈಯಲ್ಲಾದ್ರೂ ಕೊಟ್ಟು ಕಳುಹಿಸಿ ಸಪ್ರೈಸ್ ನೀಡಿ.

ಮೊದಲ ಜಾಬ್ ನಲ್ಲಿ ಫ್ರೆಶರ್ಸ್ ಫೇಸ್ ಮಾಡುವ ಸಮಸ್ಯೆಗಳು!

ಸುಗಂಧ ದ್ರವ್ಯ:

ಸುಗಂಧ ದ್ರವ್ಯ ಬೆಸ್ಟ್ ಗಿಫ್ಟ್ ಗಳಲ್ಲಿ ಒಂದಾಗಿದೆ. ಯಾರೂ ನಿಮಗೆ ಹೃದಯಕ್ಕೆ ಹತ್ತಿರವಾದ ಸ್ನೇಹಿತರು ಇದ್ದಾರೋ ಅವರಿಗೆ ಉತ್ತಮ ಕ್ವಾಲಿಟಿಯ ಸುಗಂಧ ದ್ರವ್ಯ ಗಿಫ್ಟ್ ಆಗಿ ನೀಡಿ. ಈ ಗಿಫ್ಟ್ ಬರೀ ಫ್ರೆಂಡ್‌ ಶಿಪ್ ಮಾತ್ರವಲ್ಲ ಮದುವೆ, ಬರ್ತ್ ಡೇ ಸೇರಿದಂತೆ ಇನ್ನಿತ್ತರ ಸೆಲಬ್ರೇಶನ್ ಗೂ ಗಿಫ್ಟ್ ಆಗಿ ನೀಡಬಹುದು.

ಫ್ರೆಂಡ್‌ಶಿಪ್ ಡೇ ಗಿಫ್ಟ್... ನಿಮ್ಮ ಈ ತಪ್ಪಿನಿಂದ ನಿಮ್ಮ ಸ್ನೇಹಿತರ ಫೀಲಿಂಗ್ ಗೆ ಹರ್ಟ್ ಆಗಬಹುದು!

ಇಷ್ಟೇ ಅಲ್ಲದೇ ಟಾಯ್ಸ್, ಫ್ರೆಂಡ್‌ ಶಿಪ್ ಬ್ಯಾಂಡ್ ಹಾಗು ಟಾಯ್ಸ್ ಗಳನ್ನ ಕೂಡಾ ಫ್ರೆಂಡ್‌ಶಿಪ್‌ ಡೇ ಗೆ ಬೆಸ್ಟ್ ಗಿಫ್ಟ್ ಆಗಿ ನೀಡಬಹುದು.

For Quick Alerts
ALLOW NOTIFICATIONS  
For Daily Alerts

English summary
Friendship is something all of us look forward. Having a companion with whom one can share their thoughts and express their true self is important. We as humans make friends at almost every age of our life. It doesn't matter if we are 7, 17 or 70. At any age, we like to spend some quality time with people that we like.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X