IAS first attempt winners habits: ಈ ಅಭ್ಯಾಸಗಳು ನಿಮ್ಮಲ್ಲಿದರೆ ನೀವು ಐಎಎಸ್‌ ಅಧಿಕಾರಿ ಆಗೋದು ಖಚಿತ

ಯುಪಿಎಸ್‌ಸಿ ಐಎಎಸ್‌ ಪರೀಕ್ಷೆಯನ್ನು ಪಾಸ್ ಮಾಡೋದು ಸುಲಭದ ಮಾತಲ್ಲ. ಏಕೆಂದರೆ ಈ ಪರೀಕ್ಷೆಗೆ ಅಭ್ಯರ್ಥಿಗಳು ತುಂಬಾನೆ ಶ್ರಮವಹಿಸಿ ಅಧ್ಯಯನ ಮಾಡಬೇಕಿರುತ್ತೆ. ಅಲ್ಲದೆ ಅಧ್ಯಯನ ಮಾಡಿದವರೆಲ್ಲರೂ ಪಾಸ್ ಆಗೋಕೆ ಸಾಧ್ಯವಿಲ್ಲ ಕಾರಣ ಹಲವಾರಿವೆ. ಆದರೆ ಇವತ್ತು ನಾವು ಹೇಳೋಕೆ ಹೊರಟಿರುವುದೇನೆಂದರೆ ನೀವು ಐಎಎಸ್ ಪರೀಕ್ಷೆಯನ್ನು ಪಾಸ್ ಮಾಡ್ಬೋದು ಅದ್ಹೇಗೆ ಅಂತೀರಾ ಮುಂದೆ ಓದಿ.

ಐಎಎಸ್‌ ಪರೀಕ್ಷೆ ಪಾಸ್ ಮಾಡೋಕೆ ಶ್ರಮವಹಿಸಿ ಅಧ್ಯಯನ ಮಾಡಬೇಕು. ಆದರೆ ಅದಷ್ಟೇ ಅಲ್ಲ ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ನೀವು ಐಎಎಸ್‌ ಪಾಸ್ ಮಾಡೋದು ಖಚಿತ. ಹಾಗಿದ್ರೆ ಯಾವೆಲ್ಲಾ ಅಭ್ಯಾಸಗಳು ಅಂತೀರಾ? ಈ ಬಗೆಗೆ ಕರಿಯರ್ ಇಂಡಿಯಾ ಇವತ್ತು ನಿಮಗೆ ಸಲಹೆಯನ್ನು ನೀಡುತ್ತಾ ಇದೆ.

ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ನೀವು ಐಎಎಸ್  ಪರೀಕ್ಷೆ ಪಾಸ್ ಆಗ್ತೀರಾ

ಟೈಂ ಮ್ಯಾನೇಜ್ಮೆಂಟ್:

ಟೈಂ ಮ್ಯಾನೇಜ್ಮೆಂಟ್:

ಸಮಯ ಅನ್ನವುದು ಎಲ್ಲರಿಗೂ ಮುಖ್ಯ. ಅದರಲ್ಲೂ ವಿದ್ಯಾರ್ಥಿಗಳಿಗೂ ಕೂಡ ಈ ಸಮಯ ಅನ್ನೋದು ಪ್ರಮುಖವಾದುದು. ಆದರೆ ಐಎಎಸ್ ಆಗಬೇಕೆಂಬ ಕನಸುವುಳ್ಳವರಿಗೆ ಸಮಯ ಅನ್ನೋದು ವಜ್ರದಂತೆ, ಏಕೆಂದರೆ ಸಮಯಕ್ಕೆ ಅಷ್ಟು ಪ್ರಾಮುಖ್ಯತೆ ಇದೆ. ಪ್ರತಿ ದಿನವೂ ಅಧ್ಯಯನಕ್ಕಾಗಿ ಸಮಯವನ್ನು ನೀಡಬೇಕು. ಈ ಬಗೆಗೆ ನೀವು ಅರಿತಿದ್ದಲ್ಲಿ ನೀವು ಪರೀಕ್ಷೆಯನ್ನು ಸುಲಭವಾಗಿ ಎದುರಿಸುತ್ತೀರಿ.

 

ಸ್ಪಷ್ಟತೆ:

ಸ್ಪಷ್ಟತೆ:

ನಿಮಗೆ ನೀವು ತೆಗೆದುಕೊಳ್ಳುವ ಪ್ರತಿ ನಿರ್ಧಾರದಲ್ಲೂ ಸ್ಪಷ್ಟತೆ ಇರಬೇಕು. ಅಲ್ವಾ ಹಾಗೆಯೇ ನೀವು ಮಾಡುವ ಅಧ್ಯಯನದಲ್ಲಿ ಕೂಡ ಪ್ರತಿ ವಿಷಯಗಳಲ್ಲೂ ಸ್ಪಷ್ಟತೆ ಅನ್ನುವುದು ಇರಲೇಬೇಕು. ನಿಮ್ಮ ಅಧ್ಯಯನದಲ್ಲಿ ನೀವು ಓದುವ ವಿಷಯಗಳ ಬಗೆಗೆ ಸ್ಪಷ್ಟ ಮಾಹಿತಿಯನ್ನು ತಿಳಿಯುವ ಹಂಬಲವನ್ನು ಹೊಂದಿರಬೇಕು.

 

ಕೇಳಿಸಿಕೊಳ್ಳುವ ಅಭ್ಯಾಸ:
 

ಕೇಳಿಸಿಕೊಳ್ಳುವ ಅಭ್ಯಾಸ:

ನೀವು ಕೇಳಿಸಿಕೊಳ್ಳುವ ಅಭ್ಯಾಸವನ್ನು ಹೊಂದಿದ್ದರೆ ಉತ್ತಮ. ಯಾರೇ ಯಾವುದೇ ಉತ್ತಮ ವಿಚಾರಗಳನ್ನು ಮಾತನಾಡುವಾಗ ನೀವು ಗಮನದಿಂದ ಕೇಳಿಸಿಕೊಳ್ಳುವ ಅಭ್ಯಾಸವನ್ನು ಹೊಂದಿರಬೇಕು. ಏಕೆಂದರೆ ಉತ್ತಮ ಕೇಳುಗ ಉತ್ತಮ ಚಿಂತನೆಗಳನ್ನು ಮಾಡುತ್ತಾನೆ ಎನ್ನುವ ಮಾತಿದೆ. ಅಲ್ಲದೇ ಒಬ್ಬ ಒಳ್ಳೆಯ ಕೇಳುಗ ಉತ್ತಮ ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ಆಡಳಿತಗಾರನಾಗುವ ಸಾಮರ್ಥ್ಯವನ್ನು ಹೊಂದಿರುತ್ತಾನೆ.

 

ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವುದು:

ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವುದು:

ಐಎಎಸ್ ಆಗಬೇಕೆಂದಿರುವವರಿಗೆ ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವ ಅಭ್ಯಾಸವನ್ನು ಹೊಂದಿರುವುದು ಅಗತ್ಯ. ಗಮನಕ್ಕೆ ಬಂದ ಯಾವುದೇ ವಿಷಯಗಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರವನ್ನು ಹುಡುಕುವ ಜಾಣ್ಮೆಯನ್ನು ಹೊಂದಿರುವವ ಅಧಿಕಾರಿಯಾಗಲು ಸೂಕ್ತ. ಹಾಗೆಯೇ ಅಧ್ಯಯನದಲ್ಲಿ ಯಾವುದೇ ವಿಷಯದ ಬಗೆಗೆ ಸಂಶಯ ಮೂಡಿದಾಗ ಅದನ್ನು ಪರಿಹರಿಸಿಕೊಂಡು ಅಧ್ಯಯನ ಮಾಡಲು ಪ್ರಾರಂಭಿಸಿ

 

ದಿನಪತ್ರಿಕೆಗಳನ್ನು ಓದಿ:

ದಿನಪತ್ರಿಕೆಗಳನ್ನು ಓದಿ:

ಯುಪಿಎಸ್‌ಸಿ ಪರೀಕ್ಷೆಗಳನ್ನು ಫೇಸ್ ಮಾಡೋಕೆ ಇರೋ ಮೊದಲ ಅಸ್ತ್ರ ಅಂದರೆ ಅದು ದಿನಪತ್ರಿಕೆಗಳನ್ನು ಓದುವುದು. ಏಕೆಂದರೆ ಈ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಪ್ರಚಲಿತ ವಿದ್ಯಮಾನಗಳ ಕುರಿತಾದ ಪ್ರಶ್ನೆಗಳನ್ನು ಕೇಳಲಾಗುವುದು ಹಾಗಾಗಿ ಅಭ್ಯರ್ಥಿಗಳು ಈ ಬಗೆಗೆ ಹೆಚ್ಚು ಗಮನವಹಿಸುವುದು ಒಳಿತು. ಈ ಅಭ್ಯಾಸವನ್ನು ಅಭ್ಯರ್ಥಿಗಳು ಪದವಿ ವಿದ್ಯಾಭ್ಯಾಸ ಹಂತದಲ್ಲಿಂದಲೇ ರೂಢಿಸಿಕೊಳ್ಳುವುದು ಒಳಿತು.

 

ಗುಡ್ ಲೈಫ್‌ಸ್ಟೈಲ್ ಇರಬೇಕು:

ಗುಡ್ ಲೈಫ್‌ಸ್ಟೈಲ್ ಇರಬೇಕು:

ಐಎಎಸ್‌ ಪರೀಕ್ಷೆಗಳಿಗೆ ಅಧ್ಯಯನ ಎಂದಾಕ್ಷಣ ಕೋಣೆಯೊಳಗೆ ಕುಳಿತು ಸದಾ ಓದುವುದಲ್ಲ, ಓದುವುದಕ್ಕೂ ಗುಡ್ ಲೈಫ್‌ಸ್ಟೈಲ್ ಇರಬೇಕು. ಉತ್ತಮ ಆಹಾರ ಸೇವನೆ, ದೇಹದ ಆರೋಗ್ಯದ ಬಗೆಗೆ ಕಾಳಜಿ ಮತ್ತ ಮನಸ್ಸಿನ ಮುದ ನೀಡುವ ಚಟಿವಟಿಕೆಗಳನ್ನು ದಿನನಿತ್ಯ ರೂಢಿಯಲ್ಲಿರಿಸಿಕೊಂಡು ಅಧ್ಯಯನ ನಡೆಸಿದ್ದಲ್ಲಿ ಮಾತ್ರ ನಿಮ್ಮ ಅಧ್ಯಯನ ವರ್ಕ್ ಆಗತ್ತೆ.

 

ಉತ್ತಮ ಬರವಣಿಗೆ:

ಉತ್ತಮ ಬರವಣಿಗೆ:

ಯುಪಿಎಸ್‌ಸಿ ಪರೀಕ್ಷೆಗಳು ವಸ್ತುನಿಷ್ಠ ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಕೇವಲ ವಸ್ತುನಿಷ್ಠ ಪರೀಕ್ಷೆಗಳಿಗೆ ತಯಾರಿ ನಡೆಸಿದರೆ ಮಾತ್ರ ಸಾಲದು ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಪರೀಕ್ಷೆಯಲ್ಲಿ ನೀವು ಉತ್ತಮ ಬರೆವಣಿಗೆ ಮತ್ತು ಬರೆವಣಿಗೆಯೊಂದಿಗೆ ಸಮಯ ನಿರ್ವಹಣೆಯನ್ನು ಅರಿತಿದ್ದರೆ ಪರೀಕ್ಷೆ ಸುಲಭ.

 

 

ಪ್ರಮುಖ ವಿಷಯಗಳ ನೋಟ್ ಮಾಡಿ:

ಪ್ರಮುಖ ವಿಷಯಗಳ ನೋಟ್ ಮಾಡಿ:

ಉನ್ನತ ಅಧ್ಯಯನಗಳಲ್ಲಿ ಪುಟಗಟ್ಟಲೆ ಸದಾ ಓದುವುದು ಸರಿಯಲ್ಲ. ಬದಲಾಗಿ ಪ್ರಮುಖ ವಿಷಯಗಳನ್ನು ನೋಟ್ ಮಾಡುತ್ತಾ ಹೋಗಿ. ಇದರಿಂದ ಪರೀಕ್ಷಾ ಸಂದರ್ಭದಲ್ಲಿ ಹೆಚ್ಚು ಸಹಾಯವಾಗುವುದು ಹಾಗೂ ಸಮಯ ಉಳಿತಾಯದೊಂದಿಗೆ ಅಧ್ಯಯನ ಕೂಡ ಸುಲಭ ಎನಿಸುವುದು.

 

ಚರ್ಚೆ ನಡೆಸಿ:

ಚರ್ಚೆ ನಡೆಸಿ:

ಹಲವರಿಗೆ ಇರುವ ಭಯ ಏನೆಂದರೆ ಅಧ್ಯಯನದ ಬದಲು ಚರ್ಚೆ ನಡೆಸಿದರೆ ಓದಿದ್ದು ಮರೆತು ಹೋಗುವುದು ಎಂದು. ಆದರೆ ಅದು ತಪ್ಪು ಕಲ್ಪನೆ ಯಾವುದೇ ವಿಶಯಗಳನ್ನು ಚರ್ಚೆ ಮಾಡಿದಾಗ ಕಡಿಮೆ ಸಮಯದಲ್ಲಿಯೇ ಹೆಚ್ಚು ವಿಷಯವನ್ನು ತಿಳಿಯಬಹುದು. ಇದರಿಂದ ಸಂವಹನ ಕೌಶಲ್ಯ ಅಭಿವೃದ್ದಿ ಆಗುತ್ತೆ, ಲೀಡರ್‌ಶಿಪ್ ಮತ್ತು ಮಾತುಗಾರಿಗೆ ಕೂಡ ಅಭಿವೃದ್ಧಿ ಆಗುತ್ತೆ. ಇವೆಲ್ಲವೂ ಪ್ರಮುಖ ಪರೀಕ್ಷೆಗೆ ಹೆಚ್ಚು ಸಹಕಾರಿ ಆಗುತ್ತದೆ.

 

 

ಬದ್ಧತೆ ಮುಖ್ಯ:

ಬದ್ಧತೆ ಮುಖ್ಯ:

ಮೇಲೆ ತಿಳಿಸಿದಂತೆ ಐಎಎಸ್ ಪಾಸ್ ಮಾಡೋದು ಸುಲಭವಲ್ಲ ಅದಕ್ಕೆ ಬದ್ಧತೆ ಹೆಚ್ಚು ಅಗತ್ಯ. ಈ ಪರೀಕ್ಷೆಯನ್ನು ಸಲೀಸಾಗಿ ಫೇಸ್ ಮಾಡೋಕೆ ಆಗೊಲ್ಲ ಇಲ್ಲಿ ನಿಮ್ಮ ಬದ್ಧತೆ ಅಷ್ಟೇ ಮುಖ್ಯವಾಗಿರತ್ತೆ. ಅನೇಕರು ಎಷ್ಟೋ ಭಾರಿ ಫೇಲ್ ಆಗಿ ಪರೀಕ್ಷೆಯನ್ನು ಪಾಸ್ ಮಾಡಿದವರಿದ್ದಾರೆ. ಹಾಗಾಗಿ ಎಷ್ಟೇ ಸೋಲುಂಡರೂ ನಿಮಗಿರುವ ಹಠ, ಛಲ ಮತ್ತು ಗುರಿಯ ಮೇಲೆ ಈ ಪರೀಕ್ಷೆಯ ಯಶಸ್ಸು ನಿರ್ಧರಿತವಾಗಿರುತ್ತದೆ. ಹಾಗಾಗಿ ಯಾವುದೇ ಅಡ್ಡಿ ಆತಂಕಗಳು ಮತ್ತು ಸಮಸ್ಯೆಗಳು ಎದುರಾದರೂ ನಿಮ್ಮಲ್ಲಿ ಇದರೆಡೆಗೆ ಬದ್ಧತೆ ಇದ್ದಲ್ಲಿ ಯಾವುದೇ ಹಾನಿಗಳು ಆಗುವುದಿಲ್ಲ. ಇದಿಷ್ಟೂ ಅಭ್ಯಾಸಗಳು ನಿಮ್ಮಲ್ಲಿದ್ದರೆ ನಿಮ್ಮ ಪ್ರಯತ್ನದೊಂದಿಗೆ ಪರೀಕ್ಷೆಯನ್ನು ಪಾಸ್ ಮಾಡುವುದರೊಂದಿಗೆ ನಿಮ್ಮ ಗುರಿಯನ್ನು ತಲುಪುತ್ತೀರಿ.

 

For Quick Alerts
ALLOW NOTIFICATIONS  
For Daily Alerts

English summary
Here we mentioning some of the habits that help you to become IAS officer in first attempt
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X